ವನಿತೆ-ಮಮತೆ

ಕಾಡಿನ ಮಂದಿಯ ನೆರವಿಗೆ ನಿಂತ ಇನ್ನರ್ ವ್ಹೀಲ್

ಮೈಸೂರು ಜಿಲ್ಲೆಯ ಆದಿವಾಸಿ, ಬುಡಕಟ್ಟು ಸಮುದಾಯಕ್ಕೆ ಸಹಾಯ ; ಇನ್ನರ್ ವ್ಹೀಲ್‌ ಕಾರ್ಯಕ್ಕೆ ಮೆಚ್ಚುಗೆ

ಸಮಾಜದ ಎಲ್ಲ ವರ್ಗಗಳ ಬಗೆಗೂ ಗಮನಹರಿಸಿ, ಅವರ ಕಷ್ಟಕ್ಕೆ ಸ್ಪಂದಿಸುವುದು, ಅವರ ಜೀವನಕ್ಕೆ ದಾರಿ ಮಾಡಿಕೊಡುವುದು ಇನ್ನರ್ ವ್ಹೀಲ್  ಕ್ಲಬ್‌ನ ವಿಶೇಷತೆ. ಸದಾ ಸಕ್ರಿಯವಾಗಿರುವ ಸಂಸ್ಥೆ, ಸಂಸ್ಥೆಯ ಮಹಿಳೆಯರು ಮೈಸೂರು ಜಿಲ್ಲೆಯಲ್ಲಿ ಇರುವ ಆದಿವಾಸಿ ಬುಡಕಟ್ಟು ಸಮುದಾಯದ ನೆರವಿಗೆ ಸದಾ ನಿಲ್ಲುತ್ತಾ ಬಂದಿದೆ. ಅವರಿಗೆ ವಿವಿಧ ಯೋಜನೆಗಳಡಿಯಲ್ಲಿ ಸಹಾಯ ಹಸ್ತ ಚಾಚಿದೆ.

ಸೌಮ್ಯ ಹೆಗ್ಗಡಹಳ್ಳಿ

ಇನ್ನರ್ ವ್ಹೀಲ್ ಕ್ಲಬ್ ಸಾಕಷ್ಟು ವರ್ಷಗಳಿಂದ ಮೈಸೂರು ಸುತ್ತಮುತ್ತಲಿನ ಆದಿವಾಸಿ, ಬುಡಕಟ್ಟು ಜನಾಂಗದ ಕಾಲೋನಿಗಳಲ್ಲಿ ವಾಸಿಸುವ ಜನರಿಗೆ ತನ್ನದೇ ಆದ ಸೇವೆ ನೀಡುತ್ತಾ ಬಂದಿದೆ. ಪ್ರಮುಖವಾಗಿ ಕಟ್ಟೆ ಮಳಲವಾಡಿ, ಸೋನಹಳ್ಳಿ  ಬಳ್ಳೆ ಹಾಡಿ, ಸೋಲಿಗರ ಕಾಲೋನಿ, ಡೊಂಗ್ರಿ ಗರಾಸಿಯ  ಕಾಲೋನಿ, ವೀರನಹೊಸಹಳ್ಳಿ, ಧರ್ಮಪುರ ಸೇರಿ ಮೈಸೂರು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇವರ ಸೇವಾ ಕಾರ್ಯ ನಿರಂತರವಾಗಿ ಸಾಗುತ್ತಿದೆ.

ಇಲ್ಲಿನ ಹಾಡಿಗಳಲ್ಲಿ ವಾಸಿಸುವ ಮಾವುತರಿಗೆ ಅವರ ಮಕ್ಕಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು  ಒದಗಿಸುತ್ತಾ ಬಂದಿದೆ. ಪ್ರಮುಖವಾಗಿ ಸೌರ ದೀಪಗಳು, ಬಟ್ಟೆ, ಪಾತ್ರೆ, ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ, ಪೀಠೋಪಕರಣಗಳು, ಪುಸ್ತಕಗಳು ಸೇರಿದಂತೆ ಶೈಕ್ಷಣಿಕವಾಗಿ ಅಗತ್ಯವಿರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ.‌

 

 

ಸ್ವಂತ ದುಡಿಮೆಗೂ ಅವಕಾಶ

ಇನ್ನರ್  ವ್ಹೀಲ್ ಕ್ಲಬ್ ಸಹಾಯ ಮಾಡಿ ಸುಮ್ಮನಾಗುವುದಿಲ್ಲ. ಅದಕ್ಕೆ ಬದಲಾಗಿ ಇಲ್ಲಿನ ನಿವಾಸಿಗಳಿಗೆ ಹೊಲಿಗೆ ತರಬೇತಿ, ವಿವಿಧ ಶಿಬಿರಗಳ ಆಯೋಜನೆ ಮಾಡಿ ಅವರ ಆದಾಯದ ಮೂಲ, ಅರಿವಿನ ಮಟ್ಟ ಹೆಚ್ಚಳವಾಗುವಂತೆ ನೋಡಿಕೊಳ್ಳುತ್ತಿದೆ. ನಿರಂತರವಾಗಿ ಜನರಿಗೆ ಜಾಗೃತಿ ಶಿಬಿರಗಳು, ದಂತ ಮತ್ತು ಇತರ ವೈದ್ಯಕೀಯ ಶಿಬಿರಗಳು, ಮಹಿಳೆಯರಿಗೆ ಹೊಲಿಗೆ ತರಬೇತಿ,  ಹೊಲಿಗೆಯ ಯಂತ್ರಗಳನ್ನು ನೀಡುತ್ತಾ ಬಂದಿದೆ.

ಇಲ್ಲಿನ ಸರ್ಕಾರಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗಿದ್ದು, ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ಪರಿಕರಣಗಳನ್ನು ಪೂರೈಕೆ ಮಾಡಲಾಗಿದೆ.

ಎಚ್.ಡಿ. ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯಲ್ಲಿ ಆನೆಗಳ ದಾಳಿಯಿಂದಾಗಿ ಮನೆಗಳ ಚಾವಣಿಗೆ ಹಾನಿಯಾಗಿತ್ತು. ಈ ವೇಳೆ ಅವರ ನೆರವಿಗೆ ಮುಂದಾದ ಇನ್ನರ್ ವ್ಹೀಲ್ ಸಂಸ್ಥೆ ತಕ್ಷಣವೇ ಹಾನಿಗೀಡಾದ ಎಲ್ಲ ಮನೆಗಳ ಚಾವಣಿ ದುರಸ್ತಿಪಡಿಸಿತ್ತು. ಇದು ಇವರ ಸೇವಾ ಬದ್ಧತೆ ಎಂದರೆ ತಪ್ಪಾಗದು.

ವೇಗವಾಗಿ ಬೆಳೆಯುತ್ತಿರುವ ಇಂದಿನ ಸಮಾಜದಲ್ಲಿ ಮುಖ್ಯ ವಾಹಿನಿಯಿಂದ ದೂರ ಉಳಿದಿರುವ ಒಂದು ಸಮುದಾಯ ಇದೆ ಎನ್ನುವುದೇ ಅಚ್ಚರಿ ತರುತ್ತದೆ. ಇನ್ನರ್ ವ್ಹೀಲ್  ಕ್ಲಬ್ ಆಫ್ ಮೈಸೂರ್ ಸೆಂಟ್ರಲ್ ಸಂಸ್ಥೆಯ ಹಲವಾರು ವರ್ಷಗಳಿಂದ ಈ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕಾಡಿನ ಅಂಚುಗಳಲ್ಲಿ ಅನೇಕ ಸವಲತ್ತುಗಳಿಂದ ವಂಚಿತರಾಗಿರುವ ಈ ಜನರ ಬದುಕು ಹಸನಾಗಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ನಮ್ಮ ಸಂಸ್ಥೆಯ  ಟೊಂಕ ಕಟ್ಟಿ ನಿಂತಿದೆ.

 

– ನಿವೇದಿತಾ ಬಾಲಾಜಿ, ಸದಸ್ಯರು   ಕ್ಲಬ್

ನಾನು ಪರಿಸರ ಪ್ರೇಮಿ. ನಾನು ಮತ್ತು ನನ್ನ ಕುಟುಂಬದವರು ಹಲವಾರು ಬಾರಿ ಕಾಡಿಗೆ ಹೋಗಿದ್ದೇವೆ. ಅಲ್ಲಿನ ಆದಿವಾಸಿ ಹಾಗೂ ಬುಡಕಟ್ಟು ಜನರನ್ನು ಮಾತನಾಡಿಸಿದ್ದೇವೆ. ಅವರ ಮುಗ್ಧತೆ, ಸರಳತೆ ಇಷ್ಟವಾಗುತ್ತದೆ. ಇಂತಹ ಜನರಿಗಾಗಿ ಏನಾದರೂ ಮಾಡಬೇಕು ಎಂದುಕೊಂಡು ಟುಗೆದರ್ ಇಸ್ ಬೆಟರ್ ದೆನ್ ಡೂಯಿಂಗ್ ಅಲೋನ್ ಎನ್ನುವಂತೆ ನಮ್ಮ ಕ್ಲಬ್ ಸದಸ್ಯರ ಸಹಕಾರದಿಂದ ಸೇವಾಕಾರ್ಯ ಮಾಡುತ್ತಿದ್ದೇವೆ. ಇದರಿಂದ ನಮಗೆಲ್ಲ ಒಂದು ರೀತಿಯ ತೃಪ್ತಿ ಹಾಗೂ ಖುಷಿ ಇದೆ.

 

– ಆಶಾ ದಿವ್ಯೇಶ್, ಮಾಜಿ ಅಧ್ಯಕ್ಷರು, ಇನ್ನರ್‌ ವ್ಹೀಲ್ಸ್ 

ನಮ್ಮ ಸಂಸ್ಥೆಯು ಯಾವಾಗಲೂ  ಸಮಾಜದ ಹಿಂದುಳಿದ ಮತ್ತು ನಿರ್ಲ್ಯಕ್ಷ್ಯಕ್ಕೆ ಒಳಗಾದ   ಸಮುದಾಯಕ್ಕೆ ಸಹಾಯ ಮಾಡುತ್ತಾ ಬಂದಿದೆ. ಆದಿವಾಸಿಗಳು ಪ್ರಕೃತಿ ಪ್ರಿಯರು. ಇದರ ಜೊತೆಗೆ ಅವರಿಗೆ ಕಾಡಿನ ಕುರಿತು ಕಾಡಿನ ಉತ್ಪನ್ನಗಳ ಬಗ್ಗೆ ಬಹಳಷ್ಟು ಮಾಹಿತಿಗಳು ಇರುತ್ತವೆ. ದುರ್ಬಲ ಸ್ಥಿತಿಯಲ್ಲಿ ಇರುವ ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಹಾಯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನರ್ ವ್ಹೀಲ್ಸ್  ಸಂಸ್ಥೆಯ ಅವರ ಅಗತ್ಯತೆಗಳನ್ನು ಗುರುತಿಸಿ ಹಲವು ವರ್ಷಗಳಿಂದ ಆದಿವಾಸಿಗಳ ಉನ್ನತಿಗಾಗಿ ಶ್ರಮಿಸುತ್ತಾ ಬಂದಿದೆ.

– ಸುಮಿತಾ ಜೈನ್, ಸದಸ್ಯೆ, ಇನ್ನರ್ ವ್ಹೀಲ್ಸ್

andolana

Recent Posts

ಪಂಜಾಬ್ ವಿರುದ್ಧ ಗೆದ್ದು ಬೀಗಿದ ಹೈದರಾಬಾದ್

ಹೈದರಾಬಾದ್‌: ಅಭಿಷೇಕ್‌ ಶರ್ಮಾ ಅವರ ಅಮೋಘ ಶತಕ, ಟ್ರಾವಿಸ್‌ ಹೆಡ್‌ ಅವರ ಅರ್ಧಶತಕದ ಬಲದಿಂದಾಗಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 245…

4 hours ago

ಮೈಸೂರು| ಕಾರಿನ ಟೈರ್‌ ಸಿಡಿದು ಮತ್ತೊಂದು ಕಾರಿಗೆ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಮೈಸೂರು: ಕಾರಿನ ಟೈರ್ ಸಿಡಿದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೇಟಗಳ್ಳಿಯ ಆರ್‌ಬಿಐ…

4 hours ago

ಈ ವರ್ಷದಿಂದ ದಸರಾ ಕ್ರೀಡಾಕೂಟದಲ್ಲೂ ಕಂಬಳ ಆಯೋಜನೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಮಂಗಳೂರು: ಈ ವರ್ಷದಿಂದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕ್ರೀಡಾಕೂಟದಲ್ಲೂ ಕಂಬಳವನ್ನು ಸೇರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಘೋಷಣೆ…

5 hours ago

ಜನರ ಆರ್ಥಿಕ ಸಾಮಾಜಿಕ ಸ್ಥಿತಿಗತಿ ಅರಿಯಲು ಜಾತಿಗಣತಿ ಅಗತ್ಯ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಜನರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಅರಿಯಲು ಜಾತಿಗಣತಿ ಅಗತ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನ…

5 hours ago

ಕೇಂದ್ರದ ತಪ್ಪು ನೀತಿಗಳಿಂದಲೇ ಬೆಲೆ ಏರಿಕೆಯಾಗಿದೆ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆ ಹೆಚ್ಚಿದ್ದು, ಬಿಜೆಪಿಯವರಿಗೆ ನಮ್ಮನ್ನು  ಪ್ರಶ್ನಿಸುವ ನೈತಿಕತೆ ಇಲ್ಲ…

6 hours ago

ವ್ಯಕ್ತಿಯೋರ್ವ ಮಲೆಮಹದೇಶ್ವರ ಸ್ವಾಮಿ ದೇವಾಲಯ ಏರಿ ಆತ್ಮಹತ್ಯೆಗೆ ಯತ್ನ

ಹನೂರು:  ತಾಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳವಾದ‌ ಮಲೆಮಹದೇಶ್ವರ ಬೆಟ್ಟದ‌ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಪುರದ ಮೇಲೆ ಏರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ…

6 hours ago