ಎಂ.ಕೆ. ನಂದಿನಿ,
ಟೆಲಿಕಾಂ ಕಾಲೋನಿ, ಮೈಸೂರು
ಮನೆಯ ಬೀರುವನ್ನು ಶುಚಿಗೊಳಿಸುವಾಗ ಸಿಕ್ಕ ಶುಭಾಷಯ ಪತ್ರವೊಂದು ಮನಸ್ಸಲ್ಲಿ ಎಷ್ಟೆಲ್ಲಾ ಭಾವಗಳನ್ನು ಹುಟ್ಟಿಹಾಕಿತು. ಹಳೆಯ ನೆನಪುಗಳನ್ನು ಕೆದಕಿತು. ಅಂದು-ಇಂದುಗಳನ್ನು ಎದುರಾಬದುರ ಇಟ್ಟು ತುಲನೆ ಮಾಡುವಂತೆ ಮಾಡಿತು. ಅದೊಂದು ಶುಭಾಷಯ ಪತ್ರಕ್ಕೆ ಅಷ್ಟು ತಾಕತ್ತಿತ್ತು.
ಹೌದು, ೧೯೯೯ನೇ ವರ್ಷ ಅಂದರೆ ೧೯ನೇ ಶತಮಾನದ ಕಡೆ, ಇಪ್ಪತ್ತನೇ ಶತಮಾನದ ಹೊಸ್ತಿಲು. ಅದಕ್ಕೆ ಶುಭ ಕೋರಲು ನನ್ನ ಮೂರನೇ ಸಹೋದರಿಗೆ ಅವಳ ಗೆಳತಿ ನೀಡಿದ್ದ ಗ್ರೀಟಿಂಗ್ ಕಾರ್ಡ್ ಅದಾಗಿತ್ತು. ಬರೋಬ್ಬರಿ ೨೩ ವರ್ಷಗಳ ಹಿಂದಿನ ನೆನಪು.
ಪತ್ರ ನನ್ನ ಸಹೋದರಿಯದ್ದೇ ಆಗಿದ್ದರೂ ಅದೇ ರೀತಿಯ ಪತ್ರಗಳು ನನಗೂ ಬಂದಿದ್ದವು, ನಾನೂ ಬರೆದಿದ್ದೆ. ಬಹುಶ ನಮ್ಮ ತಲೆಮಾರಿನ ಎಲ್ಲರೂ ಇದೊಂದು ಚೆಂದದ ಅನುಭವವನ್ನು ಕಟ್ಟಿಕೊಂಡಿರುತ್ತಾರೆ. ಅವುಗಳು ಹೊರಗೆ ಬಂದು ಮೆಲುಕು ಹಾಕುವಂತೆ ಆಗಲು ಈ ರೀತಿಯ ಕಾರಣಗಳು ಸಿಗಬೇಕು ಅಷ್ಟೆ.
ಆಗೆಲ್ಲಾ ಹೊಸ ವರ್ಷ ಬಂತೆಂದರೆ ಶುಭಾಷಯ ಪತ್ರಗಳನ್ನು ಕೊಳ್ಳುವುದೇ ಕೆಲಸ. ಅತ್ಯಾಪ್ತರು, ಆಪ್ತರು, ಸಾಮಾನ್ಯ ಸ್ನೇಹಿತರೆಂದು ಗುರುತು ಮಾಡಿಕೊಂಡು ಬಗೆ ಬಗೆಯ ಬೆಲೆಯ ಕಾರ್ಡ್‌ಗಳನ್ನು ಕೊಂಡು ಅದರಲ್ಲಿ ಕವಿತೆಗಳನ್ನು ಬರೆದು ಕಳಿಸುವ ಖುಷಿಯೇ ಬೇರೆ. ಬರೆಯುವಾಗ ಮನಸ್ಸಲ್ಲಿ ಮೂಡುತ್ತಿದ್ದ ಭಾವ, ಪತ್ರದ ಜೊತೆಗೆ ಸೇರಿಸಿ ಕಳಿಸುತ್ತಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು.
ಬರೆದು ಮುಗಿಸಿದ ಮೇಲೆ ಸ್ಟಾಂಪ್ ಅಂಟಿಸಿ ಅಂಚೆ ಪೆಟ್ಟಿಗೆಗೆ ಹಾಕಿ ಬಂದ ಮೇಲೆ ಏನೋ ಒಂದು ರೀತಿಯ ಸಂತಸ ಮನಸ್ಸಿಗೆ. ಅದಾದ ಮೇಲೂ ಪತ್ರ ಅವರ ವಿಳಾಸಕ್ಕೆ ಸರಿಯಾಗಿ ತಲುಪಿದೆಯೇ? ಇಲ್ಲವೇ? ಎನ್ನುವ ಆತಂಕ ಮತ್ತೊಂದೆಡೆ.
ಶುಭಾಷಯ ಪತ್ರದಲ್ಲಿ ಬರೆಯುವಾಗ ಭಾವ ಲೋಕದಲ್ಲಿ ವಿಹರಿಸಿದಂತಾಗುತ್ತಿತ್ತು. ಗೆಳೆತನ ಗಟ್ಟಿಯಾಗುತ್ತಿದೆ ಎನ್ನುವ ಭಾವ ವ್ಯಕ್ತವಾಗುತ್ತಿತ್ತು. ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮೆಸೇಜ್‌ಗಳನ್ನು ದಬ್ಬಿ ಶುಭಾಷಯ ಹೇಳುವುದು ಜಾಲ್ತಿಗೆ ಬಂದಿದೆ. ಇಂದಿನವರಿಗೆ ಇದು ಇಷ್ಟವಾಗಿರಬಹುದು. ಅಥವಾ ಈಗಲೂ ಹಲವರು ಕಾರ್ಡ್‌ನಲ್ಲಿ ಬರೆದು ಶುಭಾಷಯ ಹಂಚಿಕೊಳ್ಳುತ್ತಿರಬಹುದು. ಆದರೆ ಇವೆಲ್ಲವೂ ಬದುಕಿನ ಘಟ್ಟದ ಸುಮಧುರ ಭಾವಗಳು. ಬದುಕಿನಲ್ಲಿ ಎಲ್ಲರ ಬುತ್ತಿಯಲ್ಲೂ ಇರಲೇಬೇಕಾದ ಸುಂದರ ತವಕಗಳು.
ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…
ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…
ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…
ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…
ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…
ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…