ಆಂದೋಲನ ಪುರವಣಿ

ಮೈಸೂರಿನಲ್ಲಿ ಟ್ರೇಡ್ ಲೈಸೆನ್ಸ್ ನವೀಕರಿಸುವುದು ಇನ್ನು ಸುಲಭ

ಆನ್‌ಲೈನ್‌ನಲ್ಲಿಯೇ ಸೇವೆ ನೀಡಲು ಮುಂದಾದ ಮಹಾನಗರಪಾಲಿಕೆ

ವ್ಯಾಪಾರ-ವ್ಯವಹಾರ ಮಾಡುವವರಿಗೆ ಉದ್ದಿಮೆ ರಹದಾರಿ (ಟ್ರೇಡ್ ಲೈಸೆನ್ಸ್) ಕಡ್ಡಾಯ. ಆದರೆ ಇದನ್ನು ಹೊಂದಿದ ಮೇಲೆ ಕಾಲ ಕಾಲಕ್ಕೆ ನವೀಕರಣ ಮಾಡಿಕೊಳ್ಳಲು ಪಾಲಿಕೆ, ಸ್ಥಳೀಯ ಸಂಸ್ಥೆಗಳ ಬಾಗಿಲು ತಟ್ಟಬೇಕಿತ್ತು. ಆದರೆ ಮೈಸೂರು ಮಹಾನಗರ ಪಾಲಿಗೆ ನೂತನ ಹೆಜ್ಜೆ ಇಟ್ಟಿದ್ದು, ಇದು ವ್ಯಾಪಾರ ಸ್ನೇಹಿ ನಡೆಯಾಗಿದೆ.

ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಮೊನ್ನೆ ಮೊನ್ನೆ ನಡೆದ ಸಭೆಯಲ್ಲಿ ಆನ್‌ಲೈನ್‌ನಲ್ಲಿಯೇ ಟ್ರೇಡ್ ಲೈಸೆನ್ಸ್ ನವೀಕರಣ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಇನ್ನು ಮುಂದೆ ವ್ಯಾಪಾರಿಗಳು ಆನ್‌ಲೈನ್‌ನಲ್ಲಿಯೇ ನಿಗದಿತ ಶುಲ್ಕ ಪಾವತಿ ಮಾಡಿ ತಮ್ಮ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬಹುದಾಗಿದೆ.

ನವೀಕರಣ ಪ್ರಕ್ರಿಯೆ ಹೇಗೆ?

https://mysurucitycorporation.co.in/

  • ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಆನ್‌ಲೈನ್ ಸೇವೆಗಳನ್ನು ಆಯ್ಕೆ ಮಾಡಬೇಕು.
  • ಉದ್ದಿಮೆ ರಹದಾರಿ ಆನ್‌ಲೈನ್ ಸೇವೆ ಆಯ್ಕೆ ಮಾಡುವುದು
  • ಉದ್ದಿಮೆ ಪರವಾನಗಿ ಗುರುತಿನ ಸಂಖ್ಯೆಯನ್ನು ನಮೂದಿಸುವುದು.
  • ಪರದೆಯ ಮೇಲೆ ಕಾಣುವ ಸರ್ಜ್ ಮತ್ತು ವೀವ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಶುಲ್ಕ ಪಾವತಿ ಆಯ್ಕೆ ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಆಗ ಇಮೇಲ್ ಐಡಿ, ದೂರವಾಣಿ ಸಂಖ್ಯೆ ನಮೂದಿಸುವುದು.
  • ಶುಲ್ಕ ಪಾವತಿ ವಿಧಾನ ಆಯ್ಕೆ ಮಾಡುವುದು (ನೆಟ್ ಬ್ಯಾಂಕಿಂಗ್, ಯುಪಿಐ) ನಂತರ ಶುಲ್ಕ ಪಾವತಿ ಮಾಡುವುದು.
  • ನಂತರ ಬರುವ ಡೌನ್‌ಲೋಡ್ ಪ್ರಮಾಣ ಪತ್ರದ ಮೇಲೆ ಕ್ಲಿಕ್ಕಿಸಿ ನಿಮ್ಮ ಉದ್ಯಮದ ನವೀಕರಣ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು.

ಆನ್‌ಲೈನ್ ಸೇವೆಯಿಂದ ಆಗುವ ಅನುಕೂಲಗಳು

  • ಉದ್ದಿಮೆದಾರರು ಸ್ಥಳದಲ್ಲಿಯೇ ಕುಳಿತು ಉದ್ದಿಮೆ ರಹದಾರಿ ನವೀಕರಣ ಮಾಡಿಕೊಳ್ಳಬಹುದು.
  • ಮಧ್ಯವರ್ತಿಗಳ ಸಹಾಯವಿಲ್ಲದೇ ಸರಳ ವಿಧಾನದ ಮೂಲಕ ನವೀಕರಣ ಸಾಧ್ಯ.
  • ಇದು ಕಾಗದ ರಹಿತ ವ್ಯವಸ್ಥೆಯಾಗಿದ್ದು, ಪರಿಸರ ಸ್ನೇಹಿ.
  • ಇ-ತಂತ್ರಾಂಶ ವ್ಯವಸ್ಥೆಯಿಂದ ವ್ಯವಹಾರದಲ್ಲಿ ಪಾರದರ್ಶಕತೆ.
  • ಇದರಿಂದ ಉದ್ದಿಮೆದಾರರ ಸಮಯ ಉಳಿತಾಯ, ಅಲೆದಾಟವೂ ತಪ್ಪುತ್ತದೆ.
  • ಡಿಜಿಟಲ್ ಸಹಿ ಇರುವ ಪ್ರಮಾಣ ಪತ್ರವನ್ನು ಆನ್‌ಲೈನ್‌ನಲ್ಲಿಯೇ ಪಡೆಯಬಹುದು.
  • ಒಮ್ಮೆ ಆನ್‌ಲೈನ್ ನವೀಕರಣ ಆದ ಮೇಲೆ ಎಸ್‌ಎಂಎಸ್ ಮೂಲಕವೇ ಮುಂದಿನ ನವೀಕರಣ, ಶುಲ್ಕ ಪಾವತಿ ಬಗ್ಗೆ ಮಾಹಿತಿ ದೊರೆಯುತ್ತದೆ.
  • ಇದರಿಂದ ಪಾಲಿಗೆ ಅಧಿಕಾರಿಗಳಿಗೂ ಸಮಯ ಉಳಿತಾಯ, ಆದಾಯ ಸೋರಿಕೆಯೂ ತಪ್ಪಲಿದೆ.

ಮೈಸೂರಿನಲ್ಲಿ ವ್ಯಾಪಾರಸ್ಥರಿಗೆ ಟ್ರೇಡ್ ಲೈಸೆನ್ಸ್ ಪಡೆಯಲು ಇದ್ದ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ. ಇನ್ನೂ ಮುಂದೆ ವ್ಯಾಪಾರಸ್ಥರು, ಪಾಲಿಕೆ ಕಚೇರಿಗೆ ಬರದೇ ತಾವಿರುವ ಸ್ಥಳದಲ್ಲಿಯೇ ತಮ್ಮ ಟ್ರೇಡ್ ಲೈಸೆನ್ಸ್ ಸಂಖ್ಯೆ ನಮೂದಿಸಿ, ತೆರಿಗೆ ಪಾವತಿಸಬಹುದು. ಪಾವತಿಯ ರಸೀದಿಯ ಪ್ರಿಂಟ್ ಕೂಡ ಪಡೆಯಬಹುದಾಗಿದೆ. -ಶಿವಕುವಾರ್, ಮಹಾಪೌರರು, ಮೈಸೂರು ಮಹಾನಗರಪಾಲಿಕೆ

andolana

Recent Posts

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆದಿಚುಂಚನಗಿರಿ : ಬಿಗಿ ಪೊಲೀಸ್‌ ಭದ್ರತೆ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…

7 hours ago

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

8 hours ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

9 hours ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

9 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

10 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

10 hours ago