-ಸಿ.ಎಂ. ಸುಗಂಧರಾಜು
ಅಲ್ಲಿ ಸಾಲು ಸಾಲಾಗಿ ನಿಂತ ಮತದಾರರು, ಭರ್ಜರಿ ಪ್ರಚಾರ ಮಾಡಿ ಕುತೂಹಲದಿಂದ ಕಾದು ಕುಳಿತ ಅಭ್ಯರ್ಥಿಗಳು, ತಮ್ಮ ಕರ್ತವ್ಯವನ್ನು ಮಾಡಿದ ಚುನಾವಣಾ ಅಧಿಕಾರಿಗಳು, ಅರೇ.. ಈಗ ಇದ್ಯಾವ ಚುನಾವಣೆ ಅಂತೀರಾ? ಹೌದು.. ಇಂತಹ ದೃಶ್ಯ ಕಂಡು ಬಂದಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಮತದಾನದ ಮಹತ್ವವನ್ನು ಪ್ರಾೋಂಗಿಕವಾಗಿ ತಿಳಿಸಲು ಶಿಕ್ಷಣ ಇಲಾಖೆ ಶಾಲಾ ಸಂಸತ್ತು ಎಂಬ ವಿನೂತನ ಕಾರ್ಯಕ್ರಮವನ್ನು ಆೋಂಜನೆ ಮಾಡಿದೆ. ಅದರಂತೆ ಶಾಲೆಯಲ್ಲಿ ಚುನಾವಣೆ ನಡೆದು, ಮಕ್ಕಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
ಎಲ್ಲವೂ ವಾಸ್ತವಕ್ಕೆ ಹತ್ತಿರ
೨೦೨೨- ೨೩ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ಎಂಪಿ, ಎಂಎಲ್‌ಎ ಚುನಾವಣಾ ಮಾದರಿಯಲ್ಲಿ ನಡೆಸಲಾಗಿದ್ದು, ಮಕ್ಕಳಿಗೆ ಶಾಲೆಯ ವತಿಯಿಂದ ಗುರುತಿನ ಚೀಟಿಯನ್ನು ನೀಡಲಾಗಿತ್ತು. ಮೊಬೈಲ್ ಇವಿಎಂ ಮೂಲಕವೇ ಮತದಾನದ ಪ್ರಕ್ರಿೆುಂ ನಡೆಯಿತು. ಇದಕ್ಕೂ ಮುನ್ನ ಚುನಾವಣೆಯಲ್ಲಿ ಸ್ಪರ್ಧಿಸಲು ಮಕ್ಕಳು ಮುಖ್ಯ ಚುನಾವಣಾ ಅಧಿಕಾರಿ, ಪ್ರಾಂಶುಪಾಲರಾದ ಮಮತಾ ಅವರಿಗೆ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಸಲ್ಲಿಕೆಯಾದ ೪೭ ನಾಮಪತ್ರಿಕೆಯಲ್ಲಿ ೧೧ ನಾಮಪತ್ರಗಳು ತಿರಸ್ಕೃತಗೊಂಡವು. ೩೬ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದುಕೊಂಡರು. ಮತದಾನ ಮಾಡಿದ ವಿದ್ಯಾರ್ಥಿಗಳ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗಿದ್ದು, ಶಾಲೆಯಲ್ಲಿದ್ದ ಒಟ್ಟು ೧೩೫ ಮಕ್ಕಳಲ್ಲಿ ೧೨೧ ಮಕ್ಕಳು ಮತದಾನ ಮಾಡುವ ಮೂಲಕ ಶೇ.೯೦ ರಷ್ಟು ಮತದಾನವಾಯಿತು. ಒಟ್ಟಾರೆ ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಕಾರ್ಯ ಮಾಡಲಾಗಿದ್ದು, ಒಟ್ಟು ೩೭ ಅಭ್ಯರ್ಥಿಗಳ ಪೈಕಿ ೨೦ ಮಂದಿ ಬಹುಮತದಿಂದ ಶಾಲಾ ಸಂಸತ್ತಿಗೆ ಆ್ಂಕೆುಯಾದರು.
ಕ್ಯಾಬಿನೆಟ್ ರಚನೆ
ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ೧೦ನೇ ತರಗತಿಯ ವಿದ್ಯಾರ್ಥಿ ನಿತಿನ್ ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ ಪೂಜಾ ಆ್ಂಕೆುಯಾದರು. ಬಳಿಕ ಸಚಿವ ಸಂಪುಟ ರಚನೆ ಮಾಡಿ ವಿದ್ಯಾರ್ಥಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ನಮ್ಮ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಾೋಂಗಿಕವಾಗಿ ಶಾಲಾ ಸಂಸತ್ತು ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಎಂಪಿ, ಎಂಎಲ್‌ಎ ಚುನಾವಣೆಯ ಮಾದರಿಯಲ್ಲಿ ಚುನಾವಣೆ ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸಲಾಗುತ್ತಿದೆ.
– ಮಮತಾ, ಪ್ರಾಂಶುಪಾಲರು, ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರ್ಜಿ, ವಿರಾಜಪೇಟೆ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…