ಆಂದೋಲನ ಪುರವಣಿ

ಮುತ್ತಿನ ಹಾರದ ಹಾಗಿದ್ದ ನನ್ನ ಅಜ್ಜಿ

ಲೇಖಕರು: ಸೌಮ್ಯ ಕೋರಿ
ಅಜ್ಜಿ ಎಂದಾಕ್ಷಣ ಮುಖದಲ್ಲಿ ಮಂದಹಾಸ. ನಾನು ನನ್ನ ತಂದೆ ತಾಯಿ ಜೊತೆಗಿನ ಒಡನಾಟಕ್ಕಿಂತ ಅಜ್ಜಿಯ ಜೊತೆ ಹೆಚ್ಚು ಸಮಯ ಕಳೆದೆ. ನಾನು ಮೊದಲನೆಯ ಮೊಮ್ಮಗಳಾಗಿದ್ದರಿಂದ ಮನೆಯಲ್ಲಿ ಎಲ್ಲರ ಪ್ರೀತಿ ಹೆಚ್ಚು. ಹಾಗಾಗಿ ನಾನು ಮೊದಲ ಮೊಮ್ಮಗಳಿಗಿಂತ ಹೆಚ್ಚಾಗಿ ಕೊನೆಯ ಮಗಳಾಗಿ ಅಜ್ಜಿಯ ಜೊತೆ ಬೆಳೆದೆ. ರಜೆ ಬಂದೊಡನೆ ಅಜ್ಜಿಯ ಮನೆಗೆ ಹೋಗಬೇಕೆಂಬ ಹಠ ನನ್ನದು.

ನನ್ನಜ್ಜಿ ಶಾಲೆಗೆ ಹೋಗಿರಲಿಲ್ಲ. ಆದರೆ ಓದುವುದನ್ನು ಕಲಿತಿದ್ದಳು. ಹಾಗಾಗಿ ತನ್ನ ಕೆಲಸ ಮುಗಿದ ಬಳಿಕ ಮಧ್ಯಾಹ್ನದ ಊಟದ ನಂತರ ಪೇಪರ್ ಓದುತ್ತಿದ್ದಳು. ಬಹುಶಃ ಅವರ ಓದಿನ ಗೀಳು ನನಗೂ ಬಂದಿರಬಹುದು. ಹಳೆಯ ಕಾಲದವರಾಗಿದ್ದರೂ ಹೊಸತನವನ್ನು ತನ್ನದಾಗಿಸಿಕೊಂಡಿದ್ದರು. ಹೆಚ್ಚು ಸಮಯ ಅವರೊಂದಿಗೆ ಕಳೆದಿದ್ದರಿಂದ ನನ್ನ ಜ್ಞಾನದ ಅರ್ಧ ಪಾಲು ಅವರದ್ದೇ.

ಮಾರುಕಟ್ಟೆಯಲ್ಲಿ ಹೇಗೆ ತರಕಾರಿ ಆರಿಸಬೇಕು, ಹೇಗೆ ಅಡುಗೆ ಮಾಡಬೇಕು ಎಂಬುದರ ಜತೆಗೆ ಹೇಗೆ ಎಲ್ಲರ ಜೊತೆ ಒಟ್ಟಿಗೆ ಇರಬೇಕು ಎನ್ನುವ ಗುಣವನ್ನು ಅವರಿಂದ ಕಲಿತೆ. ಅಜ್ಜಿ ಎಲ್ಲರನ್ನೂ ಒಟ್ಟಿಗೆ ಕೂಡಿಸಿದ ಮುತ್ತಿನ ಹಾರದ ದಾರವಾಗಿದ್ದರು. ಅವರಿಗೆ ಎಲ್ಲರೂ ಬೇಕು ಶುಭ ಸಮಾರಂಭಗಳಿಗೆ ಎಲ್ಲರನ್ನೂ ಕರೆದು ಎಲ್ಲರನ್ನೂ ಆತಿಥ್ಯಗೊಳಿಸುತ್ತಿದ್ದ ರೀತಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು.

ನಾವು ಯಾರ ಜೊತೆ ಅತಿ ಹೆಚ್ಚು ಸಮಯವನ್ನು ಕಳೆಯುತ್ತೇವೆಯೋ ಅವರ ಗುಣಗಳನ್ನು ನಾವೂ ಕಲಿಯುತ್ತೇವೆ ಅನ್ನುವುದು ಬಹಳ ಮುಖ್ಯವಾಗುತ್ತದೆ. ನನ್ನ ಜೀವನದಲ್ಲಿ ಎಷ್ಟೋ ಬಾರಿ ಕುಗ್ಗಿದಾಗ ನನಗೆ ಧೈರ್ಯ ಹೇಳುತ್ತಿದ್ದವರು ನನ್ನ ಅಜ್ಜಿ. ಎಷ್ಟೋ ಬಾರಿ ಆಕೆ ಈಗಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನನ್ನ ಜೊತೆ ಮಾತನಾಡುತ್ತಿದ್ದರು. ಅದು ಆಕೆಗೆ ಹೊಸತನ್ನ ಅಳವಡಿಸಿಕೊಳ್ಳಬೇಕು ಅನ್ನುವ ಆಸಕ್ತಿಯನ್ನು ತೋರಿಸುತ್ತಿತ್ತು. ಸಂಪ್ರದಾಯಸ್ಥರ ಮನೆಯಲ್ಲಿ ಇದ್ದರೂ ಆಕೆ ನನಗೆ ಹೊಸ ಮಾರ್ಡನ್ ಜಗತ್ತಿಗೆ ತೆರೆದುಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದರು. ಎಲ್ಲ ವಿದ್ಯೆಗಳನ್ನು ಕಲಿ ಎಂದು ಧೈರ್ಯದಿಂದ ಮುನ್ನುಗ್ಗಲು ಪ್ರೋತ್ಸಾಹಿಸುತ್ತಿದ್ದರು. ರಜಾ ಮುಗಿದು ಶಾಲೆಯತ್ತ ಮರಳುವಾಗ ಅಜ್ಜಿ ಮಾಡಿದ ತಿನಿಸುಗಳನ್ನು ತರುತ್ತಿದ್ದೆವು.

ಅಂತಹ ರುಚಿ ಈಗ ಸಿಕ್ಕುತ್ತಾ ಹೇಳಿ? ಪ್ರತಿಯೊಂದು ಹಬ್ಬ ಹರಿದಿನಗಳ ಬಗ್ಗೆ ನಮಗೆ ಹೇಳಿಕೊಡುತ್ತಿದ್ದರು. ಏಕೆ ಈ ಹಬ್ಬ ಮಾಡಬೇಕು? ಏಕೆ ಈ ವಸ್ತುವನ್ನೇ ಬಳಸಬೇಕು? ಎಂಬುದರ ಬಗ್ಗೆ ಇಂಚಿಂಚೂ ಹೇಳುತ್ತಿದ್ದಳು. ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಅಲ್ಲಿ ಅಜ್ಜಿಯ ಸಲಹೆ ಅತ್ಯಗತ್ಯ.

ನಾನು ಅಡುಗೆ ಮಾಡುವ ಪ್ರೀತಿಯನ್ನು ಬೆಳೆಸಿಕೊಂಡಿದ್ದು ನನ್ನ ಅಜ್ಜಿಯಿಂದ. ಆಕೆ ಹೇಳುತ್ತಿದ್ದಳು, ಅವರಿಗೆ ಇಷ್ಟವಾಗುವ ಅಡುಗೆಯನ್ನು ಮಾಡಿಕೊಳ್ಳುವ ಉಡುಗೊರೆಗಿಂತ ಬೇರೆ ಉಡುಗೊರೆ ಇಲ್ಲ ಎಂದು. ಹಾಗಾಗಿ ನನಗೂ ನನ್ನ ಪ್ರೀತಿಯನ್ನು ವ್ಯಕ್ತಪಡಿಸಬೇಕು ಅಂದರೆ ಅಡುಗೆಯ ಮೂಲಕ ನಾನು ವ್ಯಕ್ತಪಡಿಸುತ್ತೇನೆ. ಅಜ್ಜಿ ಜ್ಞಾನ ಭಂಡಾರ, ತಾನು ಓದದಿದ್ದರೂ ಎಲ್ಲ ತಿಳಿವಳಿಕೆಗಳನ್ನು ನಮಗೆ ಕೊಟ್ಟಂತಹ ವ್ಯಕ್ತಿ. ಜೀವನದ ಬುಟ್ಟಿಯಲಿ ಬಹುಪಾಲು ಸಿಹಿ ತಿನಿಸು ನನ್ನ ಅಜ್ಜಿ. ಎಲ್ಲವನ್ನ ಮೊಮ್ಮಕ್ಕಳಿಗೆ ಹೇಳದೆ ಕೊಡಿಸುತ್ತಿದ್ದ ಮಾಯಗಾರನ ಕೋಲು ನನ್ನ ಅಜ್ಜಿ.

sowmyakoti88@gmail.com

andolana

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

1 hour ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

2 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

12 hours ago