ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮುಗಿಯುತ್ತಿದ್ದಂತೆ ಪ್ರತಿ ಹಂತಗಳಲ್ಲಿಯೂ ಮುಂದೇನು? ಎನ್ನುವ ಪ್ರಶ್ನೆ ಕಾಡುತ್ತದೆ. ಇದರಲ್ಲಿ ಪೋಷಕರದ್ದೂ ಹೆಚ್ಚಿನ ಪಾಲಿರುತ್ತದೆ. ಈಗ ಇರುವ ಆಯ್ಕೆಗಳು, ಹೊಸ ಬಗೆಯ ಕೋರ್ಸ್‌ಗಳಿಂದ ಗೊಂದಲ ಹೆಚ್ಚಾದರೂ ಅದಕ್ಕೆ ತಕ್ಕಂತೆ ಅವಕಾಶ ವೈವಿಧ್ಯ ಇದೆ ಎನ್ನುವುದು ಸಂತೋಷ.
ಇದೀಗ ಮೈಸೂರು ವಿವಿ ಬಿಎಸ್‌ಡಬ್ಲ್ಯು (ಬ್ಯಾಚುಲರ್ ಆಫ್ ಸೋಷಿಯಲ್ ವರ್ಕ್) ಎಂಬ ಹೊಸ ಕೋರ್ಸ್‌ಅನ್ನು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಆರಂಭಿಸಿದ್ದು, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮೈಸೂರಿನ ಸೆಂಟ್ ಫಿಲೋಮಿನಾ ಹಾಗೂ ಕೆ.ಆರ್.ಪೇಟೆ ಸರ್ಕಾರಿ ಕಾಲೇಜುಗಳಲ್ಲಿ ಈ ಕೋರ್ಸ್ ಆರಂಭವಾಗಿದೆ. ಇದೀಗ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿ ಕೋರ್ಸ್ ಆರಂಭವಾಗಿದ್ದು, 16 ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ಸಮಾಜ ಕಾರ್ಯ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ. ಎಚ್.ಪಿ.ಜ್ಯೋತಿ ಅವರು.
ಕೋರ್ಸ್ ವಿಶೇಷತೆಗಳು
* ಬಿಎಸ್‌ಡಬ್ಲ್ಯು ಸಮಗ್ರ ಕೌಶಲಾಧಾರಿತ ಕೋರ್ಸ್
* ಪಿಯುಸಿ ನಂತರ ಕೋರ್ಸ್‌ಗೆ ಪ್ರವೇಶ ಪಡೆಯಲು ಅವಕಾಶ
* 4 ವರ್ಷಗಳ ಕೋರ್ಸ್, ಸಮಾಜ ಕಾರ್ಯ ಬಗ್ಗೆ ಅಧ್ಯಯನ
* ಒಂದು ವರ್ಷ ಕೋರ್ಸ್ ಮುಗಿಸಿದರೆ ಸರ್ಟಿಫಿಕೇಟ್
* ಎರಡು ವರ್ಷ ಪೂರ್ಣಗೊಳಿಸಿದರೆ ಡಿಪ್ಲೊಮಾ ಇನ್ ಸೋಷಿಯಲ್ ಸ್ಟಡೀಸ್
* ಮೂರು ವರ್ಷ ಪೂರ್ಣಗೊಳಿಸಿದರೆ ಪದವಿ ಸರ್ಟಿಫಿಕೇಟ್
* 4 ವರ್ಷದ ಕೋರ್ಸ್ ಪೂರ್ಣಗೊಳಿಸಿದರೆ ಬಿಎಸ್‌ಡಬ್ಲ್ಯು ಆನರ್ಸ್
* ಕೋರ್ಸ್ ನಂತರ ಎನ್‌ಇಟಿ, ಕೆ-ಸೆಟ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ
* ಕೋರ್ಸ್ ಮುಗಿಸಿ ಪಿಎಚ್.ಡಿ ಮಾಡಲು ಅವಕಾಶ
ಉದ್ಯೋಗಾವಕಾಶಗಳು
* ಬಿಎಸ್‌ಡಬ್ಲ್ಯು ಮಾಡಿದರೆ ಎನ್‌ಜಿಒ ಗಳಲ್ಲಿ ಕೆಲಸ
* ಸಮುದಾಯ ಸಂಘಟಕ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನಲ್ಲೂ ಅವಕಾಶ
* ಸ್ವಯಂ ಎನ್‌ಜಿಒ, ಕೈಗಾರಿಕೆಗಳಲ್ಲಿ ವೆಲ್ಫೇರ್ ಆಫೀಸರ್ ಆಗಬಹುದು.
* ಆಸ್ಪತ್ರೆಗಳಲ್ಲಿ, ಕಾರ್ಪೋರೇಟ್ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ
* ಕಾರ್ಮಿಕ, ಕೈಗಾರಿಕಾ ಇಲಾಖೆಗಳಲ್ಲಿ ವಿವಿಧ ಹುದ್ದೆಗಳು
* ಪದವಿ ಮುಗಿಸಿ ಪಡೆಯಬಹುದಾದ ಎಲ್ಲ ಹುದ್ದೆಗಳಲ್ಲೂ ಅವಕಾಶ
ಅರ್ಜಿ ಸಲ್ಲಿಕೆಗೆ ಇನ್ನೂ ಇದೆ ಅವಕಾಶ
ಪಿಯುಸಿ ಉತ್ತೀರ್ಣರಾಗಿರುವವರು ಸಮಗ್ರ ವಿಶ್ವ ವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಸೆ. 15 ಕಡೆಯ ದಿನ. ಹೆಚ್ಚಿನ ಮಾಹಿತಿಗಾಗಿ ದೂ. ಸಂ. 9480363407, 85488004509.
ಶುಲ್ಕ: ಒಟ್ಟು 50 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದ್ದು, 35ಮಂದಿ ಮೆರಿಟ್ ಕೋಟಾದಲ್ಲಿ, 15ಮಂದಿ ಹಣಕಾಸು ಕೋಟಾದಲ್ಲಿ ಪ್ರವೇಶ ಪಡೆಯಬಹುದು. ಮೆರಿಟ್ ಕೋಟಾದಡಿ 15 ಸಾವಿರ ರೂ, ಹಣಕಾಸು ಕೋಟಾದಡಿ 30ಸಾವಿರ ರೂ. ಪ್ರವೇಶ ಶುಲ್ಕ ಇರಲಿದೆ.
ಬಿಎಸ್‌ಡಬ್ಲ್ಯು ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳಿವೆ. ಇದು ವೃತ್ತಿ ಆಧಾರಿತ ಕೋರ್ಸ್ ಆಗಿರುವುದರಿಂದ ಹೆಚ್ಚಿನ ಬೇಡಿಕೆಯೂ ಇದೆ. ಕೊಡಗಿನ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳೂ ಸೇರಿ ಈಗಾಗಲೇ ಒಟ್ಟು ೨೦ ಮಂದಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದಾರೆ. – ಡಾ. ಎಚ್.ಪಿ.ಜ್ಯೋತಿ, ಮುಖ್ಯಸ್ಥರು, ಸಮಾಜ ಕಾರ್ಯ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…