ಬೆಳಗಿನ ಖಾಲಿತನ ಸರಿಸಿಟ್ಟ ಮನೆಯಂಗಳ ಬೈಗಿನಲ್ಲಿ ಗಾಳಿಪಟ ತಾಂರಿಗಾಗಿ ಮಕ್ಕಳ ದಂಡಿನ ಗೌಜಿನಲ್ಲಿರುತ್ತಿತ್ತು. ಪತ್ರಿಕೆ ಹರಿದು, ಅನ್ನ ನುರಿದು ಅಂಟಾಗಿಸಿ, ಹಿಡಿಕಡ್ಡಿಗಳನ್ನು ಅಲ್ಲಲ್ಲಿ ಒತ್ತಿಟ್ಟು, ಸ್ಕೆಚ್ ಪೆನ್‌ನಲ್ಲಿ ಎರಡು ಕಣ್ಣರಳಿಸಿ, ಉದ್ದಕ್ಕೆ ಬಾಲ ಜೋತು ಬಿಟ್ಟ ಗಾಳಿಪಟ ಹಕ್ಕಿಗಳಲ್ಲೇ ವಿಶೇಷ ಅಂತೆನಿಸುತ್ತಿತ್ತು. ಮಾರನೇ ದಿನ ಆಗಸವನ್ನೇ ಕೊಂಡುಕೊಂಡಷ್ಟು ಗತ್ತಿನಿಂದ ಹಾರುವುದೇನು! ಅದನ್ನು ಕಂಡದ್ದೇ ನಾನು ಮತ್ತು ನನ್ನ ಅಕ್ಕ ಸೇರಿ ಹುಮ್ಮಸ್ಸಿನಲ್ಲಿಯೇ ಗಾಳಿಪಟ ತಯಾರು ಮಾಡಿಬಿಟ್ಟೆವು. ಹಾರುವುದು ಹೋಗಲಿ, ಈ ಗಾಳಿಪಟ ಏಳುವುದೂ ಇಲ್ಲ. ಮತ್ತೆ ತಿಳಿದದ್ದು, ಗಾಳಿಪಟ ಹಾರುವುದಕ್ಕೆ ಹಗುರಾಗುವ ಅರ್ಹತೆಯಿರಬೇಕು ಎಂದು. ಮುಂದಿನ ಪ್ರಯತ್ನ ನಮ್ಮದು; ಸಹಕಾರ ಎದುರು ಮನೆಯವರದ್ದು. ಆದರೂ ನಾವೇ ಕೂತು ಮಾಡಿಸಿಕೊಂಡ ಕಾರಣಕ್ಕೆ ನಮ್ಮ ಹೆಸರಿಟ್ಟು ದಾರ ಕಟ್ಟಿ ಹಾರಿಸಿದ್ದೆವು. ಹಗುರಾಗಿ ಮೇಲಕ್ಕೆ ಥೇಟ್ ಹಕ್ಕಿಯಾಗಿ ಹಾರಾಡಿದ್ದ ಗಾಳಿಪಟವನ್ನು ಕಾಣುವಾಗ ಬೀಸಿದ್ದ ಚಪ್ಪಾಳೆ, ಖುಷಿಯಲ್ಲವು ಎಂಟು ಸಾಲಿನ ಪುಟ್ಟ ಕವಿತೆಯಾಗಿತ್ತು.
ಹಾಸ್ಟೆಲ್‌ನ ಏಕತಾನತೆಯ ಬದುಕಿನಲ್ಲಿ ಮನೆಯವರ ಫೋನ್‌ಗಾಗಿ ಕಾಯುವುದು ಕೂಡ ಸೇರಿಹೋಗಿತ್ತು. ಮನೆಯಿಂದ ಮತ್ತೆ ಹಾಸ್ಟೆಲ್ ಸೇರಿದ ದಿನ ವಿಪರೀತ ವೈರಾಗ್ಯ ತಾಳಿದ ಕವಿತೆ, ರುಚಿಗಟ್ಟಾದ ಅಡುಗೆಯು ಕವಿತೆ, ಬೆಳಗಿನ ಸೂರ್ಯೋದಯ ಮತ್ತು ರಾತ್ರಿಯ ಚಂದ್ರನ ಕುರಿತು ಹೀಗೆ ಹಲವು ಕವಿತೆಗಳನ್ನು ಸುಮ್ಮನೆ ಬರೆಯುತ್ತಿದ್ದೆನಷ್ಟೆ. ಅಡುಗೆ ಕವಿತೆ ಎಷ್ಟು ಯಶಸ್ವಿಯಾಯಿತೆಂದರೆ, ಕೇಳಿದ ತಕ್ಷಣವೆ ಮೆಸ್ ಆಂಟಿಯರೆಲ್ಲ ಮನೆಗೆ ಫೋನ್ ಮಾಡಿಕೊಡುತ್ತಿದ್ದರು. ಕವಿತೆಯ ಪ್ರೋಂಜನವೆಂದು ಈಗ ನಕ್ಕು ಸುಮ್ಮನಾಗುವುದು.
(ಲೇಖಕಿ ಮಾನಸಗಂಗೋತ್ರಿಯಲ್ಲಿ ಇದೀಗ ತಾನೇ ಕನ್ನಡ ಎಂ.ಎ. ವ್ಯಾಸಂಗ ಮುಗಿಸಿದ್ದಾರೆ)
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್ ವೇವ್ ಎಚ್ಚರಿಕೆ…
ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…
ನವದೆಹಲಿ: ಇದೇ ಏಪ್ರಿಲ್.15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…
ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…
ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…
ಮಂಡ್ಯ: ಮುಂಬರುವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನುಕೂಲವಾಗುವಂತೆ ಯಾವುದೇ ಅಡಚಣೆಯಿಲ್ಲದೇ ವಿವಿಧ ಬೆಳೆಗಳಿಗೆ ಅವಶ್ಯಕವಾದ ರಸಗೊಬ್ಬರಗಳನ್ನು ನಿಯಮಾನುಸಾರ…