-ಸೌಮ್ಯ ಕೋಠಿ, ಮೈಸೂರು
‘ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ’ ಎಂಬ ನಾಣ್ಣುಡಿಯನ್ನು ಸದಾ ನೆನಪಿಸಿಕೊಳ್ಳುವ ಸಮಾಜ,
ಹೆಣ್ಣಿಲ್ಲದ ಮನೆ, ಬೀಜವನ್ನು ಬಿತ್ತದೆ ಬೇಸಾಯ ಮಾಡುವ ಕೃಷಿ ಭೂಮಿಯ ಹಾಗೆ ಎಂಬುದನ್ನು ಮರೆತು ಬಿಡುತ್ತದೆ.
ಮಾರ್ಚ್ 8ನೇ ತಾರೀಕು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿ, ಮಹಿಳೆಯರು ಎಲ್ಲ ರಂಗಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು, ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಜೀವಿಸಬೇಕು, ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕು ಎಂಬೆಲ್ಲ ವಿಚಾರಗಳ ಕುರಿತು ಚರ್ಚಿಸಲಾಗಿದೆ.
ಕುಟುಂಬ , ಸಮಾಜ, ತಾವು ಕೆಲಸ ಮಾಡುವ ಸ್ಥಳಗಳಲ್ಲಿ ನಿರಂತರವಾಗಿ ಒಂದಿಲ್ಲೊಂದು ಶೋಷಣೆಯನ್ನು
ಅನುಭವಿಸುವ ಮಹಿಳೆಯರ ಸಬಲೀಕರಣ ಕೇವಲ ವೇದಿಕೆ ಭಾಷಣಗಳಲ್ಲಿವೆಯೇ ವಿನಾ ಕಾರ್ಯರೂಪಕ್ಕೆ ಬಂದು ಹೆಚ್ಚಿನ ಮಹಿಳೆಯರು ಸಬಲರಾಗಿದ್ದು ಕಡಿಮೆ. ಇಷ್ಟಿದ್ದರೂ ತಮ್ಮ ಮೇಲಿನ ಶೋಷಣೆಗಳನ್ನು ಸಹಿಸಿಕೊಂಡು ಮಹಿಳೆಯರು ಪುರುಷರಿಗಿಂತ ಮಾನಸಿಕವಾಗಿಯೂ, ದೈಹಿಕವಾಗಿಯೂ ಸದೃಢರಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೀಗೆ ಒಂದು ಪುಸ್ತಕವನ್ನು ಓದುವಾಗ ಓದಿದ ಒಂದು ಸನ್ನಿವೇಶ ನೆನಪಾಗುತ್ತದೆ. ಒಂದು ಹೆಣ್ಣು ಬೆಳಿಗ್ಗೆ ಎದ್ದು ಅಡುಗೆ ಮಾಡುವಾಗ ಆ ಅಗ್ಗಿಷ್ಟಿಕೆಯ ಕೆಂಡವನ್ನು ಹತ್ತಿಸುವಾಗ ಹೊಸ ಹೊಸ ಆಸೆಗಳನ್ನು ಹುಟ್ಟುಹಾಕಿ, ಅಡುಗೆ ಮಾಡುವಾಗ ಆ ಬೆಂಕಿಯ ಉರಿ ಉರಿಯುವ ಹಾಗೆ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುತ್ತಾಳೆ. ಆದರೆ ಅಡುಗೆ ಮಾಡಿ ಮುಗಿದ ನಂತರ ಆ ಅಗ್ಗಿಷ್ಟಿಕೆಯನ್ನು ಆರಿಸಿದ ಹಾಗೆಯೇ ತನ್ನೆಲ್ಲ ಆಸೆಗಳನ್ನು ಆರಿಸಿ ಮಲಗುತ್ತಾಳೆ.
ಕುಟುಂಬಕ್ಕಾಗಿ ತನ್ನೆಲ್ಲ ಆಸೆಗಳನ್ನು ಸುಟ್ಟು, ತನ್ನ ಸಂಸಾರಕ್ಕಾಗಿ ದುಡಿಯುವ ಹೆಣ್ಣು ಮಕ್ಕಳು ತಮ್ಮ ಬದುಕಿನುದ್ದಕ್ಕೂ ತಮ್ಮೆಲ್ಲ ಕನಸುಗಳನ್ನು ಬೆಂಕಿಯಲ್ಲಿ ಸುಟ್ಟು ನಾಲ್ಕು ಗೋಡೆಗಳ ಮಧ್ಯೆಯೇ ಜೀವನ ಸಾಗಿಸಿಬಿಡುತ್ತಾರೆ. ಇಂತಹವರ ಬಗ್ಗೆ ಸಮಾಜ ಎಂದಾದರೂ ಚಿಂತಿಸಿದೆಯೇ? ಮಹಿಳಾ ಸಬಲೀಕರಣಕ್ಕಾಗಿ ಯೋಜನೆಗಳನ್ನು ರೂಪಿಸಿದ್ದಾರೆಯೇ? ಇಂದು ವೇದಿಕೆಗಳ ಮೇಲೆ ಮಹಿಳೆಯರ ಬದುಕು ಸುಧಾರಣೆಯಾಗಿದೆ.
ಆಕೆ ಅಬಲೆಯಲ್ಲ; ಸಬಲೆ, ಆರ್ಥಿಕವಾಗಿ ಸದೃಢಳಾಗಿ ಜೀವನ ಸಾಗಿಸಬಲ್ಲಳು ಎಂದೆಲ್ಲ ಭಾಷಣಗಳನ್ನು ಮಾಡಿದರೂ, ಸರ್ಕಾರ ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ನೀಡಿದರೂ ವಾಸ್ತವವಾಗಿ ಭಾರತದಲ್ಲಿ ಶೇ.50ಕ್ಕೂ ಹೆಚ್ಚು ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆಯೇ ತಮ್ಮ ಇಡೀ ಜೀವನವನ್ನು ಕಳೆಯುತ್ತಿದ್ದಾರೆ ಎಂಬುದು ವಾಸ್ತವ ಸಂಗತಿ. ಮಹಿಳೆಗೆ ಸ್ವಾತಂತ್ರ್ಯದ ಅವಶ್ಯಕತೆ ಇದೆ ನಿಜ. ಆ ಸ್ವತಂತ್ರತೆಯನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳದೆ, ಸದುಪಯೋಗಪಡಿಸಿಕೊಂಡು ಸಾಧನೆಯ ಹಾದಿ ಹಿಡಿಯಬೇಕು. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎನ್ನುವ ಮಾತಿನಂತೆ ಎಲ್ಲಿ ಸ್ತ್ರೀಯರನ್ನು ಪೂಜನೀಯವಾಗಿ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರಂತೆ. ಇಲ್ಲಿ ದೇವತೆಗಳು ಎಂದರೆ ನಮ್ಮಲ್ಲಿರುವ ಸದ್ಗುಣಗಳು. ನಮ್ಮಲ್ಲಿರುವ ದುರ್ಗುಣಗಳೇ ರಾಕ್ಷಸರು. ಹಾಗಾಗಿ ಸ್ತ್ರೀಯರನ್ನು ಗೌರವಭಾವದಿಂದ ನೋಡಿದಾಗ ನಮ್ಮಲ್ಲಿರುವ ಸದ್ಗುಣಗಳು ಹೊರಬರುತ್ತವೆ. ಸಮಾಜ ಮಹಿಳೆಯರ ಪರ ಮಾತನಾಡುವುದರ ಜತೆಗೆ ಆಕೆಗೆ ವಿವಿಧ ರಂಗಗಳಲ್ಲಿಯೂ ಸಮಾನ ಅವಕಾಶ ನೀಡಬೇಕು.
ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕು. ಮಹಿಳೆಯರು ಆರ್ಥಿಕವಾಗಿ
ಸಬಲರಾದರೆ ಮಾತ್ರ ಅವರೂ ಸಾಧನೆ ಮಾಡಲು ಸಾಧ್ಯ. ಪ್ರತಿ ವರ್ಷ ಮಹಿಳಾ ದಿನಾಚರಣೆ ಮಾಡಿ, ಮಹಿಳೆಯರ ಮೇಲಿನ ಶೋಷಣೆ ನಿಲ್ಲಬೇಕು ಎಂದು ಭಾಷಣ ಮಾಡಿದರೆ ಸಾಲದು ಮಹಿಳಾ ಶೋಷಣೆಯ ವಿರುದ್ಧ ಕಠಿಣ ಕಾನೂನುಗಳನ್ನು ರೂಪಿಸಬೇಕು. ಆಗಷ್ಟೇ ಪುರಷರಷ್ಟೇ ಮಹಿಳೆಯರೂ ಸಬಲರಾಗಿ ಬದುಕಲು ಸಾಧ್ಯ.
ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿ ಮತ್ತು ಪುತ್ರಿಯೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಅಂತಹ ಕಾರಣ…
ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ಪರೀಕ್ಷಾರ್ಥಿ ಜನಿವಾರ ತೆಗೆಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ತನೆ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ.…
ಮಂಡ್ಯ (Mandya) ನಗರದ ಪಿಇಎಸ್(PES) ಕಾನೂನು ಕಾಲೇಜಿನ ರಸ್ತೆಯ ಸಮೀಪ ಇರುವ ಮನೆಗಳಿಗೆ ಮಂಡ್ಯ ನಗರಸಭೆಯಿಂದ ಶುದ್ಧ ಕುಡಿಯುವ ನೀರು…
ರಾಜ್ಯ ಸರ್ಕಾರ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಷೇಧಿಸಿದರೆ ಪ್ಲಾಸ್ಟಿಕ್ನಿಂದ ಉಂಟಾಗುವ ಸಮಸ್ಯೆ ಗಳೇ ಇರುವುದಿಲ್ಲ. ಆದರೆ ಪ್ಲಾಸ್ಟಿಕ್ ತಯಾರಿಕಾ ಕೈಗಾರಿಕೆಗಳನ್ನು ತೆರೆಯಲು…
ಪ್ರೊ.ಆರ್.ಎಂ.ಚಿಂತಾಮಣಿ ದೇಶಾದ್ಯಂತ ಸುಡುವ ಬೇಸಿಗೆಯ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ. ಆಗಾಗ ಬೀಸುವ ಬಿಸಿಗಾಳಿಯ ಹೊಡೆತ ಬೇರೆ, ಕೆಲವು ಕಡೆ…
ಎಚ್.ಡಿ.ಕೋಟೆ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಬಳಿ…