ಕೀರ್ತಿ
ಊರ ಹಬ್ಬಕ್ಕೆಂದು ಗೆಳತಿಯರೆಲ್ಲ ಒಟ್ಟು ಸೇರಿದ್ದರು. ಪರಸ್ಪರ ನಡೆಯುತ್ತಿದ್ದ ಮಾತುಕತೆಗಳು ಜೋರಾಗಿಯೇ ಇದ್ದವು. ಒಬ್ಬಳು ಮಾತಿನ ಮಧ್ಯೆ ಈಜು ಕಲಿಯುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಳು. ತಕ್ಷಣವೇ ಪಕ್ಕದಲ್ಲಿದ್ದವಳು ‘ನೀನು ನಡೆದ್ರೆ ಭೂಮಿ ಅಲ್ಲಾಡುತ್ತೆ. ಇನ್ನು ಈಜಿದ್ರೆ ಸ್ವಿಮ್ಮಿಂಗ್ ಫೂಲ್ ನೀರಷ್ಟೂ ಖಾಲಿಯಾಗಲ್ವೇನೆ!’ ಎಂದಿದ್ದಳು. ನೆರೆದಿದ್ದವರೆಲ್ಲ ನಕ್ಕಿದ್ದರು.
‘ಹೇ ದಪ್ಪ ಆಗಿದ್ದೀಯಲ್ಲೇ!’, ‘ಇದೇನೇ ಸಣಕ್ಲಿ’, ‘ನಿನ್ನ ಮುಖ ಕರಿಯಮ್ಮನ ಥರ ಆಗಿದೆ ಕಣೆ’ ಈ ರೀತಿಯ ಸಂಭಾಷಣೆಗಳನ್ನು ನಿತ್ಯ ಬದುಕಿನಲ್ಲಿ ಗಮನಿಸುತ್ತಿರಬಹುದು. ತಿಳಿದೋ ತಿಳಿಯದೆಯೋ ಎದುರಿದ್ದವರ ದೇಹ, ಬಣ್ಣ, ಆಕಾರ, ಗಾತ್ರಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇರುತ್ತೇವೆ. ದುರಂತವೆಂದರೆ, ಇತ್ತೀಚಿನ ದಿನಗಳಲ್ಲಿ ಬಾಡಿ ಶೇಮಿಂಗ್ ಎನ್ನುವುದು ಸಹಜ ಮತ್ತು ಸಾಮಾನ್ಯ ವಿಷಯವಾಗಿ ಹೋಗಿದೆ.
ಒಬ್ಬ ಹುಡುಗಿಯ ಊಟ, ತಿಂಡಿ ಬಿಡಿಸುವುದಕ್ಕೆ ದಪ್ಪವಾಗಿದ್ದೀಯಾ ಎಂಬ ಒಂದೇ ಮಾತು ಸಾಕು. ತೆಳ್ಳಗಿನ ಹುಡುಗಿಯರನ್ನು ಕಂಡಾಗೆಲ್ಲ ನಾನೂ ಹೀಗಿರಬೇಕಿತ್ತು ಎನ್ನುತ್ತಾ ಆಕೆಯಲ್ಲಿ ತನ್ನ ದೇಹದ ಕುರಿತು ಅಸಡ್ಡೆ ಭಾವ ಮೂಡುವುದು. ಸಿನಿ ಜಗತ್ತಿನಲ್ಲಂತೂ ಝೀರೋ ಸೈಜ್ ಕನಸನ್ನು ಪೋಷಿಸುವವರೇ ಹೆಚ್ಚು. ಈಗಿನ ಟ್ರೆಂಡ್ ಭಾಷೆಯಲ್ಲಿ ಹೇಳುವುದಿದ್ದರೆ, ‘ಎ-ಫೋರ್’ ಗಾತ್ರದಲ್ಲಿರಬೇಕು. ಅಂದರೆ ಹೆಣ್ಣಿನ ಸೊಂಟದ ಸುತ್ತಳತೆ ಎ-ಫೋರ್ ಕಾಗದದ ಅಗಲದಷ್ಟಿರಬೇಕು. ಬರುವ ಜಾಹೀರಾತುಗಳೂ ಹೀಗೇ ಇರುತ್ತವೆ. ಈ ಗ್ರೀನ್ ಟೀ ಕುಡಿಯಿರಿ ಸಣ್ಣ ಆಗಿ ಅಂತಲೋ, ಬೆನ್ನಿಗಂಟುವ ಹೊಟ್ಟೆಗಾಗಿ ಇದನ್ನು ತಿನ್ನಿ ಎನ್ನುವುದಕ್ಕೆಲ್ಲ ನಟಿಯರೇ ರೂಪದರ್ಶಿಗಳಾಗುತ್ತಾರೆ.
ಇನ್ನು ತೆಳ್ಳಗಿದ್ದವರ ಕತೆಯೇನೂ ಭಿನ್ನವಲ್ಲ. ಕಾಯಿಲೆ ಬಂದಿರಬೇಕು ಎಂಬ ಅವರ ಗುಮಾನಿಯೇ ಆಕೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. ವೈದ್ಯರ ಬಳಿ ತೆರಳಿ ಅನಗತ್ಯ ಪರೀಕ್ಷೆಗಳನ್ನು ಮಾಡಿಸುವವರಿಗೇನೂ ಕೊರತೆಯಿಲ್ಲ. ಶಿಕ್ಷಕಿಯಾಗಬೇಕೆಂದರೆ, ಜ್ಞಾನಕ್ಕಿಂತ ಹೆಚ್ಚಾಗಿ ಭೌತಿಕವಾದ ಎತ್ತರ, ಗಾತ್ರವೇ ಮುಖ್ಯವಾಗುತ್ತದೆ. ಅಲ್ಲಲ್ಲಿ ಕೆಲವೊಂದಿಷ್ಟು ಜನ ‘ತೂಕ ಕಡಿಮೆ/ ತೂಕ ಹೆಚ್ಚು ಮಾಡಿಕೊಳ್ಳಬೇಕೆ? ಹಾಗಾದರೆ ನಮ್ಮನ್ನು ಸಂಪರ್ಕಿಸಿ’ ಎಂಬ ಕರಪತ್ರವನ್ನು ಹಂಚುತ್ತಲೇ ಇರುತ್ತಾರೆ. ಯೂಟ್ಯೂಬ್ ವಿಡಿಯೋಗಳಲ್ಲೂ ಈ ಬಗೆಯ ಮಾಹಿತಿ ಇದ್ದರೆ ವೀಕ್ಷಕರ ಸಂಖ್ಯೆ ಸಹಜವಾಗಿಯೆ ಏರಿಕೆ ಕಾಣುತ್ತಿರುತ್ತದೆ.
ಸಾಮಾಜಿಕ ಜಾಲತಾಣಗಳು ‘ಬಾಡಿ ಶೇಮಿಂಗ್’ಗೆ ವೇದಿಕೆಗಳಾಗಿವೆ. ನಟಿಯೊಬ್ಬಳ ಪೋಸ್ಟ್‌ಗೆ ಆಕೆಯ ದೇಹ ತೂಕವನ್ನು ಅಣಕಿಸುವ, ಶ್ಲಾಘಿಸುವ ಪ್ರತಿಕ್ರಿಯೆಗಳನ್ನು ಹೆಚ್ಚಾಗಿಯೇ ಕಾಣಬಹುದು. ನೈಜವಾಗಿ, ದೇಹದ ಗಾತ್ರ, ಬಣ್ಣಗಳನ್ನೆಲ್ಲ ಸಾರ್ವಜನಿಕ ವಸ್ತುವೆಂಬಂತೆ ಪರಿಗಣಿಸಿದ್ದಾರೆ.
ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಮಹಿಳೆಯರಲ್ಲಿ ಅನೋರೆಕ್ಸಿಯಾ ನರ್ವೋಸಾ ಎಂಬ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಜಿಡ್ಡಿನ ವಸ್ತುವನ್ನು ತಿಂದರೆ ಎಲ್ಲಿ ತೂಕ ಹೆಚ್ಚಾಗುವುದೋ ಎಂಬ ಭಯ, ಆಹಾರ ಸೇವನೆಯ ಬಗ್ಗೆ ವಿಪರೀತ ಲೆಕ್ಕಾಚಾರದಿಂದಾಗಿ ತಿನ್ನುವುದನ್ನು ಬಿಟ್ಟು, ಹಸಿವನ್ನು ಇಂಗಿಸಿಕೊಳ್ಳುವ ಒಂದು ಕಾಯಿಲೆ. ದೇಹದ ಗಾತ್ರದ ಬಗ್ಗೆ ಆಲೋಚಿಸಿದಷ್ಟೂ ಮಾನಸಿಕ ಖಿನ್ನರಾಗುತ್ತಾರೆ.
ನನ್ನನ್ನು, ನನ್ನ ದೇಹವನ್ನು ಪ್ರೀತಿಸುವೆ ಎಂಬುದಾಗಿರಬಹುದು ಅಥವಾ ಲೋಕತೃಪ್ತಿಗಲ್ಲ; ಆತ್ಮತೃಪ್ತಿಗಾಗಿ ಬದುಕುವೆ ಎಂಬ ಸರಳ ಭಾವವೊಂದು ಮೂಡಿದರೂ ಸಾಕು ಜೀವನ ಸುಂದರ.
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…