ಮಹಿಳೆ ಸಬಲೆ

ಭೀಮ’ದ ಪೊಲೀಸ್ ಮೈಸೂರಿನ ಪ್ರಿಯಾ

 ಪ್ರಶಾಂತ್ ಎಸ್.

‘ಆಂದೋಲನ’ದೊಂದಿಗೆ ಸಿನಿಮಾಪಯಣದ ಅನುಭವ ಹಂಚಿಕೊಂಡ ಪ್ರಿಯಾ

‘ಸಲಗ’ ಚಿತ್ರದ ಯಶಸ್ಸಿನ ಬಳಿಕ ವಿಭಿನ್ನ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು, ನಟ ದುನಿಯಾ ವಿಜಯ್ ನಿರ್ದೇಶನ ಮಾಡಿದ ಚಿತ್ರ ‘ಭೀಮ’. ಯುವ ಸಮೂಹ ಹೇಗೆ ಡ್ರಗ್ಸ್ ಜಾಲಕ್ಕೆ ಸಿಲುಕಿ ನರಳುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಚಿತ್ರದ ಹಲವು ಪಾತ್ರಗಳು ಪ್ರೇಕ್ಷಕರ ಮನ ಗೆದ್ದಿವೆ. ಗಿಲಿಗಿಲಿ ಚಂದ್ರು, ಗಿರಿಜಾ, ಬ್ಲಾ ಕ್ ಡ್ರಾಗನ್, ಆಯಶ್ ಮೆಲೋ, ಶುಂಠಿ… ಹೀಗೆ ಹೊಸ ಹೊಸ ಪಾತ್ರಗಳನ್ನು, ನಟರನ್ನು ವಿಜಯ್ ಈ ಚಿತ್ರದಲ್ಲಿ ಪರಿಚಯಿಸಿದ್ದಾರೆ. ಇವುಗಳ ಪೈಕಿ ಹೆಚ್ಚು ಗಮನ ಸೆಳೆದಿದ್ದು, ರಂಗಭೂಮಿ ಕಲಾವಿದೆ ಪ್ರಿಯಾರವರು ಜೀವತುಂಬಿದ ಖಡಕ್ ಪೊಲೀಸ್ ಆಫೀಸರ್ ಪಾತ್ರ.

ಪ್ರಿಯಾ ಮೈಸೂರಿನವರು. ಮೂಲತಃ ರಂಗಭೂಮಿ ಕಲಾವಿದೆ. ೨೦೦೮ರಿಂದ ರಂಗಭೂಮಿ ಪಯಣ ಆರಂಭಿಸಿದ ಪ್ರಿಯಾ, ಮೈಸೂರಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಮಂಡ್ಯ ರಮೇಶ್‌ರವರ ಗರಡಿಯಲ್ಲಿ ‘ನಟನ’ದಲ್ಲಿ ರಂಗತರಬೇತಿ ಪಡೆದರು. ಬಳಿಕ ೨೦೧೫ರಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ ಪ್ರಿಯಾ ಸಿನಿಮಾಗಳಲ್ಲಿ ನಟಿಸತೊಡಗಿದರು.

ಚಿಕ್ಕಂದಿನಿಂದಲೂ ಚಿತ್ರಕಲೆ, ನೃತ್ಯ, ಕಥೆ ಹೇಳುವುದರಲ್ಲಿ ಆಸಕ್ತಿ ಹೊಂದಿದ್ದ ಪ್ರಿಯಾರನ್ನು ಅವರ ತಾಯಿ ‘ನಟನ’ ಆಯೋಜಿಸುತ್ತಿದ್ದ ‘ರಜಾಮಜಾ’ ಬೇಸಿಗೆ ಶಿಬಿರಕ್ಕೆ ಸೇರಿಸಿದರು. ನಂತರ ಸ್ವಯಂ ಸೇವಕಿಯಾಗಿ ‘ನಟನ’ ಸೇರಿದ ಬಳಿಕ ಅಲ್ಲಿ ನಡೆಯುತ್ತಿದ್ದ ನಾಟಕಗಳು ಅವರ ಮೇಲೆ ಹೆಚ್ಚಿನ ಪರಿಣಾಮ ಬೀರಿದವು. ತಮ್ಮೊಳಗೂ ನಟನಾ ಸಾಮರ್ಥ್ಯವಿದೆ. ಉತ್ತಮ ತರಬೇತಿ ಸಿಕ್ಕರೆ ತಾವೂ ಒಬ್ಬ ಅದ್ಭುತ ನಟಿಯಾಗಬಹುದು ಎಂಬುದನ್ನು ಅರಿತ ಪ್ರಿಯಾ ತಮ್ಮಲ್ಲಿದ್ದ ನಟನೆಯ ಕನಸನ್ನು ಮಂಡ್ಯ ರಮೇಶ್ ರವರ ಜೊತೆ ಹಂಚಿಕೊಂಡರು. ಬಳಿಕ ಅವರ ಬಳಿ ತರಬೇತಿ ಪಡೆದು ಕಲಾವಿದೆಯಾಗಿ ಹೊರಹೊಮ್ಮಿದರು.

ಕಳೆದ ೧೪ ವರ್ಷಗಳಿಂದಲೂ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪ್ರಿಯಾ ‘ಭೀಮಾ’ ಚಿತ್ರಕ್ಕೂ ಮೊದಲು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’, ಚೇಸ್’ ಹಾಗೂ ಮಂಸೋರೆಯವರ ‘೧೯-೨೦-೨೧’, ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ‘ಒಂದಲ್ಲಾ ಎರಡಲ್ಲಾ’ ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ ‘ಲಕ್ಷಣ’ ಎಂಬ ಧಾರಾವಾಹಿ ಯಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ರಂಗಭೂಮಿಯ ಬಗ್ಗೆ ಅಪಾರ ಒಲವು ಹೊಂದಿರುವ ಪ್ರಿಯಾ, ರಂಗಭೂಮಿಯಲ್ಲಿ ಕಲಿಯಲು ಅವಕಾಶಗಳು ಹೆಚ್ಚಿವೆ. ಒಂದು ನಾಟಕವನ್ನು ಮತ್ತೆ ಮತ್ತೆ ಪ್ರದರ್ಶಿಸು ವುದರಿಂದ, ಒಂದು ಪ್ರದರ್ಶನದಿಂದ ಮತ್ತೊಂದು ಪ್ರದರ್ಶನಕ್ಕೆ ನಟನಾ ಕೌಶಲವನ್ನು ಸುಧಾರಿಸಿಕೊಳ್ಳಬಹುದು. ಸಿನಿಮಾ ಮತ್ತು ಕಿರುತೆರೆ ಎರಡೂ ವಿಭಿನ್ನ ಅನುಭವ ನೀಡುತ್ತವೆ.

ರಂಗಭೂಮಿಯಲ್ಲಿ ಕಲಿತ ಕೌಶಲವನ್ನು ಸಿನಿಮಾ ಮತ್ತು ಕಿರುತೆರೆಯಲ್ಲಿ ಪ್ರದರ್ಶಿಸಬೇಕು. ಇಲ್ಲಿ ಒಮ್ಮೆ ದಾಖಲಾದ ನಟನೆ ಶಾಶ್ವತವಾಗಿರುತ್ತದೆ. ಹಾಗಾಗಿ ನಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎನ್ನುವುದು ಪ್ರಿಯಾರ ಮಾತು. ‘ಭೀಮ’ ಪ್ರಿಯಾರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟ ಚಿತ್ರ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವುದರ ಕುರಿತು ಹೆಮ್ಮೆಪಡುವ ಅವರು, ‘ನನಗೆ ಚಿಕ್ಕಂದಿನಿಂದಲೂ ಪೊಲೀಸ್ ಆಗಬೇಕು ಎಂಬ ಬಯಕೆ ಇತ್ತು. ಆ ಆಸೆ ಸಿನಿಮಾ ಮೂಲಕ ಈಡೇರಿದೆ. ಖಡಕ್ ಪೊಲೀಸ್ ಇನ್‌ಸ್ಪೆಕ್ಟರ್ ಗಿರಿಜಾ ಪಾತ್ರದಲ್ಲಿ ನಟಿಸಿದ್ದು, ಬಹಳ ಸಂತೋಷ ತಂದಿದೆ. ಚಿತ್ರೀಕರಣ ಲೈವ್ ಲೊಕೇಷನ್‌ಗಳಲ್ಲಿ ಇರುತ್ತಿದ್ದ ಕಾರಣ ನಾನು ಮನೆಯಿಂದಲೇ ಪೊಲೀಸ್ ಯೂನಿಫಾರ್ಮ್ ಧರಿಸಿ ಹೊರಡುತ್ತಿದ್ದೆ. ಜನರ ನಡುವೆಯೇ, ಅವರಿಗೆ ಗೊತ್ತಾಗದಂತೆ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ. ಈ ವೇಳೆ ಅನೇಕರು ನನ್ನನ್ನು ಪೊಲೀಸ್ ಅಂದುಕೊಂಡು ಸಲ್ಯೂಟ್ ಮಾಡಿದ್ದೂ ಇದೆ. ಟ್ರಾಫಿಕ್ ಜಾಮ್ ಆದಾಗ ದಾರಿ ಮಾಡಿಕೊಟ್ಟಿದ್ದೂ ಇದೆ. ಹಾಗಂತ ನಾನೆಲ್ಲೂ ಅದನ್ನು ದುರುಪಯೋಗ ಮಾಡಿಕೊಂಡಿಲ್ಲ. ಖಾಕಿ ಸಮವಸ್ತ್ರದ ಶಕ್ತಿ ಏನು? ಎಂಬುದರ ಅರಿವು ಈ ಅನುಭವ ಗಳಿಂದಾಗಿದೆ ಎನ್ನುತ್ತಾರೆ ಪ್ರಿಯಾ.

ರಂಗಭೂಮಿಯಲ್ಲಿ ಏಕವ್ಯಕ್ತಿ ನಾಟಕದಲ್ಲಿ ಅಭಿನಯಿಸಬೇಕು ಎಂದುಕೊಂಡಿರುವ ಪ್ರಿಯಾ ಮಹಿಳಾ ಪ್ರಧಾನ ಕಥೆಯನ್ನು ಹುಡುಕುತ್ತಿದ್ದು, ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಬಿಡುವು ಮಾಡಿಕೊಂಡು ಮತ್ತೆ ರಂಗಭೂಮಿಯಲ್ಲಿ ನಟಿಸುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಡಿಕೆಶಿ

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಸದಾಶಿವನಗರದಲ್ಲಿರುವ ತಮ್ಮ…

60 mins ago

80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…

2 hours ago

ಓದುಗರ ಪತ್ರ: ಮಹಿಳಾ ಸಿಬ್ಬಂದಿ ಲಂಚದ ಮಸಿ ಅಂಟಿಸಿಕೊಳ್ಳದಂತೆ ಎಚ್ಚರ ವಹಿಸಬೇಕು

ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…

3 hours ago

ಓದುಗರ ಪತ್ರ: ಅಡಕೆ ಬೆಳೆಗಾರರ ಹಿತವೂ ಮುಖ್ಯವಲ್ಲವೇ?

ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…

3 hours ago

ಓದುಗರ ಪತ್ರ: ಈ ಬಾರಿಯ ದಸರಾ ಉದ್ಘಾಟನೆಗೆ ಹೆಚ್.ಡಿ.ದೇವೇಗೌಡರನ್ನು ಆಯ್ಕೆಮಾಡಲಿ

ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…

3 hours ago

ಮೈಸೂರು ಸ್ವಚ್ಛವಾಗಿಡಲು ಜನರಿಗೆ ಕೆಲ ಅಭ್ಯಾಸ ಅಗತ್ಯ

ಟಿ.ಕೆ.ಹರೀಶ್ ಮನೆ ಮುಂದಿನ ರಸ್ತೆಯ ಕಸ ವಿಲೇವಾರಿಗೆ ನಾಗರಿಕರು ಜಾಗೃತರಾಗಬೇಕು ಮೈಸೂರು ಎಂದರೆ ಕೇವಲ ಒಂದು ನಗರವಲ್ಲ. ಅದು ಕರ್ನಾಟಕದ…

3 hours ago