ಮಹಿಳೆ ಸಬಲೆ

ಹೆಣ್ಣು ಮಕ್ಕಳ ದಿನ ಸಾರ್ಥಕವಾಗುವುದು ಹೇಗೆ?

ಎಂ.ಜೆ.ಇಂದುಮತಿ

ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್ಚುತ್ತಿರುವ ಸೈಬರ್ ಕ್ರೈಮ್ ವಿಷಯವಾಗಿ ಅನೇಕ ತಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಪಾಸ್ ವರ್ಡ್, ಓಟಿಪಿ ಹೇಳಿದರೆ ಮಾತ್ರ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ದುಡ್ಡು ಹೋಗುತ್ತದೆ ಎಂಬ ಕಾಲ ಈಗಿಲ್ಲ. ಎಷ್ಟು ಅಸ್ಟೇಟ್ ಆಗಿದೆ ಎಂದರೆ, ಅಂತಹ ಅನಾಮಿಕ ವ್ಯಕ್ತಿಗಳಿಂದ ಒಂದು ಫೋನ್ ಕರೆಯನ್ನು ಸ್ವೀಕರಿಸಿದರೂ ಸಾಕು, ನಮ್ಮ ಇತಿಹಾಸವೇ ಅವರ ಕಂಪ್ಯೂಟರ್ ಪರದೆಯ ಮೇಲೆ ಬಂದಿರುತ್ತದೆ. ಅದರಲ್ಲಿ ತೀರಾ ಖಾಸಗಿ ವಿಚಾರಗಳೂ ಸೇರುತ್ತವೆ ಎಂಬುದನ್ನು ಗಮನಿಸಬೇಕು.

ಇಂತಹ ಜಾಲಗಳ ಬಗ್ಗೆ ಅರಿವಿರದ ಹೆಣ್ಣು ಮಗಳೊಬ್ಬಳು ಕರೆ ಸ್ವೀಕರಿಸಿದ ಅರೆಕ್ಷಣದಲ್ಲಿ, ಅವಳ ಮೊಬೈಲ್‌ಗೆ ದುಡ್ಡಿಗಾಗಿ ಬೇಡಿಕೆ, ಸಾಮಾಜಿಕ ಜಾಲತಾಣದಲ್ಲಿದ್ದ ಆಕೆಯ ಚಿತ್ರವನ್ನು ಕೃತಕ ಬುದ್ದಿಮತ್ತೆಯ ಸಹಾಯದಿಂದ ದುರ್ಬಳಕೆ ಮಾಡಿಕೊಳ್ಳುವುದು ಅಥವಾ ನಗ್ನಗೊಳಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಯಲ್ಲಿ ಇದರ ಪಾಲು ಸಾಕಷ್ಟಿವೆ.

ವಿಶ್ವ ಹೆಣ್ಣು ಮಕ್ಕಳ ದಿನವನ್ನು ಅಕ್ಟೋಬರ್ 11ರಂದು ಜಾಗತಿಕ ಮಟ್ಟದಲ್ಲಿ ಆಚರಿಸಿದ್ದೇವೆ. ಮಾರ್ಚ್ 8ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಮಹಿಳಾ ದಿನ, ವಿಶ್ವ ಹೆಣ್ಣು ಮಕ್ಕಳ ದಿನಗಳೆಲ್ಲ ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳನ್ನು ಸಶಕ್ತಗೊಳಿಸುವ ಸಲುವಾಗಿಯೇ ಇರುವಂತಹದ್ದು.

ಈ ವರ್ಷದ ಆಚರಣೆಯಲ್ಲಿ ‘ಡಿಜಿಟಲ್ ಜನರೇಶನ್’ ಅಂದರೆ ತಂತ್ರಜ್ಞಾನದ ತಲೆಮಾರಿನ ಕುರಿತು ಘೋಷವಾಕ್ಯ ರೂಪಿಸಿದೆ. ಹುಡುಗಿಯರು ಅಂತರ್ಜಾಲದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಜಾಗತಿಕವಾಗಿ ಚರ್ಚಿಸುವುದಕ್ಕೆಂದೇ ವೇದಿಕೆಯನ್ನು ಒದಗಿಸುತ್ತಿದೆ. ಇಂಟರ್‌ನೆಟ್ ಸೌಲಭ್ಯ ಪಡೆದಿರುವವರ ಅಷ್ಟೂ ಸಂಖ್ಯೆಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 2.2 ಶತಕೋಟಿ ಜನರು ಹೆಣ್ಣು ಮಕ್ಕಳಾಗಿದ್ದಾರೆ.

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಅಕ್ಟೋಬರ್ 11ನೇ ತಾರೀಖನ್ನು ಹೆಣ್ಣು ಮಕ್ಕಳನ್ನು ಗೌರವಿಸುವ ದಿನವೆಂದು ಘೋಷಿಸಿತು. 1995ರಲ್ಲಿ ಬೀಜಿಂಗ್‌ನಲ್ಲಿ ನಡೆದ ಮಹಿಳೆಯರ ಬಗೆಗಿನ ವಿಶ್ವ ಸಮ್ಮೇಳನದಲ್ಲಿ ಬೀಜಿಂಗ್ ಘೋಷಣೆ ಮೂಲಕ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳಿಗೆ ಕರೆ ನೀಡಲಾಯಿತು. ಇದು ಜಾಗತಿಕ ಮಟ್ಟದಲ್ಲಿ ಪ್ರಪಂಚದಾದ್ಯಂತ ಹದಿಹರೆಯದ ಹುಡುಗಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಗುರುತಿಸಿದ ಮೊದಲ ನೀಲ ನಕ್ಷೆಯಾಗಿದೆ.

ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ಪ್ಲಾನ್‌ ಇಂಟರ್‌ನ್ಯಾಷನಲ್‌ನ ಅಭಿಯಾನವು ‘ನಾನು ಹುಡುಗಿಯಾಗಿರುವುದರಿಂದ’ ಎಂಬುದರಿಂದ ಪ್ರಾರಂಭವಾಯಿತು. ಪ್ಲಾನ್ ಇಂಟರ್‌ನ್ಯಾಷನಲ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಇದು ವಿಶ್ವದಾದ್ಯಂತ ಸುಮಾರು 70 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳನ್ನು ಪೋಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ಸಾಮಾನ್ಯ ಸಭೆಯು ಅಕ್ಟೋಬರ್ 11, 2012ರಂದು ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನದ ಉದ್ಘಾಟನಾ ದಿನವೆಂದು ಗುರುತಿಸುವ ನಿರ್ಣಯವನ್ನು ಯಶಸ್ವಿಯಾಗಿ ಅಂಗೀಕರಿಸಿತು. ಇದು ನಿರ್ದಿಷ್ಟವಾಗಿ ಬಾಲ್ಯ ವಿವಾಹಗಳ ಗಂಭೀರ ಸಮಸ್ಯೆಯ ಸುತ್ತ ಕೇಂದ್ರೀಕೃತವಾಗಿತ್ತು. ಬಾಲ್ಯ ವಿವಾಹವನ್ನು ಕೊನೆಗಾಣಿಸುವುದು ಅಂದಿನ ಉದ್ಘಾಟನಾ ವಿಷಯವಾಗಿತ್ತು. ಪ್ರತಿ ವರ್ಷವೂ ಹೆಣ್ಣು ಮಕ್ಕಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಈ ದಿನವನ್ನು ವಿಶಿಷ್ಟ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ.

ಕಾನೂನು ವ್ಯವಸ್ಥೆ ಇದ್ದರೂ ನಿತ್ಯವೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲಿವೆ. ಹೆಣ್ಣುಮಕ್ಕಳನ್ನು ಕಟ್ಟಿ ಹಾಕುವ ಅಥವಾ ಅವರ ಮೇಲೆ ಇನ್ನಷ್ಟು ನಿಯಂತ್ರಣ ಸಾಧಿಸುವ ಬದಲು, ಅತ್ಯಾಚಾರಿಗಳಿಗೆ ಕಾನೂನಿನ ಮೂಲಕ ಕಠಿಣ ಶಿಕ್ಷೆ ವಿಧಿಸಬೇಕು. ಹಾಗಾದಾಗ ಮಾತ್ರ ಅತ್ಯಾಚಾರ, ಹೆಣ್ಣಿನ ಮೇಲೆ ಶೋಷಣೆ ನಡೆಸುವುದಕ್ಕೆ ಹೆದರುತ್ತಾರೆ. ಕಾನೂನನ್ನು ಬಲಗೊಳಿಸುವುದೊಂದೇ ಪರಿಹಾರ ಎನಿಸುತ್ತದೆ.

ಸಬಲೀಕರಣ ಪದವನ್ನು ಎಲ್ಲೆಡೆ ಬಳಸಿ ಸವಕಲಾಗಿ ಸಿದ್ದೇವೆ. ಆದರೆ, ಹೆಣ್ಣು ಮಕ್ಕಳನ್ನು ಸಬಲೀಕರಣ ಗೊಳಿಸಲು ಮಾತ್ರ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಹೆಣ್ಣು ಮಕ್ಕಳಿಗೆ ಸಮಾನವಾದ ಅವಕಾಶಗಳನ್ನು ನೀಡಿದಾಗ ಅವರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಬಹುದು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಬಹುದು. (ಲೇಖಕರು ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ).

 

ಆಂದೋಲನ ಡೆಸ್ಕ್

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

46 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

1 hour ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago