‘ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ನಾಣ್ಣುಡಿಯೇ ಇದೆ. ಆದರೆ, ಬದಲಾದ ಜೀವನಶೈಲಿಯಿಂದಾಗಿ ಗಂಡ-ಹೆಂಡತಿ ಇಬ್ಬರೂ ಹೊರಗೆ ದುಡಿಯಲು ಹೋಗಿ ಸಂಪಾದನೆ ಮಾಡುವುದರಿಂದಾಗಿ ಸಣ್ಣ ಪುಟ್ಟ ವಿಷಯಗಳಿಗೂ ನಿನಗಿಂತ ನಾನೇನು ಕಮ್ಮಿ ಎಂಬ ಇಗೋ(ಉಜಟ) ಬೆಳೆಸಿಕೊಂಡ ಪರಿಣಾಮ ಹಾಲು-ಜೇನಿನಂತಹ ಸಂಬಂಧ ಹಾಳಾಗಿ, ಕೋರ್ಟ್-ಕಚೇರಿ ಅಲೆದು ಕಡೆಗೊಂದು ದಿನ ಗಂಡ-ಹೆಂಡತಿ ಬೇರೆ ಬೇರೆಯೂ ಆಗಿ ಮಕ್ಕಳು ಪರಿತಪಿಸುವ ಸ್ಥಿತಿಗೆ ದೂಡುತ್ತಿರುವ ಸಂಗತಿಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಹೀಗಾಗದಿರಲು ದಂಪತಿಯ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ ಇರುವಂತೆ ಪ್ರತಿಯೊಬ್ಬರ ಜೀವನದಲ್ಲೂ ಒಂದಿಷ್ಟು ಜಗಳಗಳು ಇದ್ದೇ ಇರುತ್ತವೆ. ಇವೆಲ್ಲವೂ ಸಾಮಾನ್ಯ ಅಭ್ಯಾಸಗಳು. ಆದರೆ ಕೆಲವು ತಪ್ಪು ಅಭ್ಯಾಸಗಳು ನಿಧಾನವಾಗಿ ಸಂಬಂಧವನ್ನು ದುರ್ಬಲಗೊಳಿಸಬಹುದು.
ಪ್ರೀತಿ-ಪ್ರೇಮದ ಸಂಬಂಧವಾಗಿರಬಹುದು, ಅಥವಾ ದಾಂಪತ್ಯ ಜೀವನವಾಗಿರಬಹುದು, ಇವುಗಳು ನಿಂತಿರುವುದೇ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳ ಮೇಲೆ. ಹೀಗೆ ಸಂಬಂಧಗಳಲ್ಲಿ ನಂಬಿಕೆ ಮತ್ತು ಗೌರವ ಎನ್ನುವುದು ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ತಿಳಿದೋ- ತಿಳಿಯದೆಯೋ ಕೆಲವೊಂದು ತಪ್ಪುಗಳು ಘಟಿಸಿಬಿಡುತ್ತವೆ. ಆಗ ಹೆಣ್ಣಾಗಲಿ- ಗಂಡಾಗಲಿ ಹೋಗಲಿ ಬಿಡು, ನಡೆಯುವ ಕಾಲು ಎಡವದೆ ಕುಳಿತಾಗ ಎಡವುತ್ತದೆಯೇ ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡಾಗ ಇಲ್ಲವೇ ತಪ್ಪು ಮಾಡಿದವರಿಗೆ ಸಮಾಧಾನದಿಂದ ಬುದ್ಧಿ ಹೇಳಿದಾಗ ಜಗಳ ವಿಪರೀತಕ್ಕೆ ಹೋಗಿ ಸಂಬಂಧ ಹಾಳಾಗುವುದು ತಪ್ಪುತ್ತದೆ.
ಈ ರೀತಿ ಗಂಡ-ಹೆಂಡಿರ ನಡುವೆ ಪರಸ್ಪರ ಹೊಂದಾಣಿಕೆ ಮನೋಭಾವನೆ ಇಲ್ಲವಾದಲ್ಲಿ ಹಾಲು-ಜೇನಿನಂತಹ ಸಂಬಂಧವನ್ನು ಹಾಳು ಮಾಡಲು ಸಣ್ಣಪುಟ್ಟ ವಿಷಯಗಳೇ ಸಾಕು.
ಸಂಗಾತಿಯನ್ನು ಲಘುವಾಗಿ ಕಾಣಬೇಡಿ: ಸಂಬಂಧದಲ್ಲಿ ಗಂಡ ಅಥವಾ ಹೆಂಡತಿ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಪರಸ್ಪರ ಪ್ರಶಂಸೆ ವ್ಯಕ್ತಪಡಿಸುವುದು ಮುಖ್ಯ. ನೀವು ನಿಮ್ಮ ಸಂಗಾತಿಯ ಪ್ರಯತ್ನಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದಾಗ ಅಥವಾ ಯಾವಾಗಲೂ ಅವರನ್ನು ಲಘುವಾಗಿ ಕಾಣತೊಡಗಿದಾಗ ಖಂಡಿತವಾಗಿಯೂ ಸಂಬಂಧದಲ್ಲಿ ಕಂದಕವನ್ನು ಸೃಷ್ಟಿಸುತ್ತದೆ.
ಇದನ್ನು ಓದಿ: ಹೋಲಿಕೆ ಎಂಬುದು ನಿಂದನೆ ಆಗದಿರಲಿ
ಸಮಯದ ಅಭಾವ: ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೊರಗೆ ಹೋಗುತ್ತಾರಾದರೂ ತನ್ನ ಕುಟುಂಬಕ್ಕಾಗಿ ದಿನದಲ್ಲಿ ಒಂದೆರಡು ಗಂಟೆ, ವಾರದಲ್ಲಿ ಒಂದು ದಿನ ಸಮಯಾವಕಾಶ ನೀಡಲಾರದಷ್ಟು ಒತ್ತಡಕ್ಕೆ ಸಿಲುಕಿದಾಗ ಕುಟುಂಬದಲ್ಲಿ ಪರಸ್ಪರ ಅಂತರಗಳು ಹೆಚ್ಚಾಗುತ್ತಾ ಹೋಗುತ್ತವೆ. ಇದಕ್ಕಾಗಿ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಸಂಬಂಧ ಹಳಸದೆ ಇನ್ನಷ್ಟು ಬಲಗೊಳ್ಳುತ್ತದೆ.
ಸಣ್ಣಪುಟ್ಟ ವಿಷಯಗಳಿಗೆ ಪದೇ ಪದೆ ಅನಗತ್ಯವಾಗಿ ಕಾಲುಕೆರೆದು ಜಗಳ ಆಡುವುದರಿಂದ ಸಂಬಂಧ ಖಂಡಿತಾ ಹಳಸುತ್ತದೆ. ಗಂಡ-ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸದಿದ್ದರೆ, ಆ ಸಂಬಂಧ ಎಂದಿಗೂ ಬಲವಾಗಿರಲು ಸಾಧ್ಯವಿಲ್ಲ. ನೀವು ಅವರ ಆಲೋಚನೆಗಳನ್ನು ಗೌರವಿಸದಿರುವ ಅಥವಾ ಇತರರ ಮುಂದೆ ಅವರನ್ನು ಕೀಳಾಗಿ ನೋಡುವ ಅಭ್ಯಾಸಗಳು ಸಂಗಾತಿಯ ಆತ್ಮವಿಶ್ವಾಸವನ್ನು ಘಾಸಿಗೊಳಿಸುತ್ತವೆ.
ಸಂಬಂಧದಲ್ಲಿ ಪ್ರೀತಿ, ವಿಶ್ವಾಸದ ಜತೆಗೆ ನಂಬಿಕೆಯೂ ಅತ್ಯಂತ ಮುಖ್ಯ. ಹೀಗಿರುವಾಗ ನೀವು ನಿಮ್ಮ ಸಂಗಾತಿಯನ್ನು ಅನುಮಾನಿಸಲು ಪ್ರಾರಂಭಿಸಿದರೆ, ಇಲ್ಲವೇ ನಿಮ್ಮ ಇಚ್ಛೆಗಳನ್ನು ಸಂಗಾತಿಯ ಮೇಲೆ ಹೇರಲು ಪ್ರಾರಂಭಿಸಿ ಅವರನ್ನು ನಿಯಂತ್ರಿಸಲು ಬಯಸಿದರೆ ಇದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಂಗಾತಿಯನ್ನು ಸದಾ ಟೀಕಿಸುವುದು, ಅವರ ಒಳ್ಳೆಯ ಗುಣಗಳನ್ನು ನಿರ್ಲಕ್ಷಿಸುವುದು, ಹೊರಗಿನವರ ಮುಂದೆ ಕಾಲೆಳೆಯುವ ಪ್ರವೃತ್ತಿ ಹೆಚ್ಚಾದಾಗ ಸಂಬಂಧದ ಮಾಧುರ್ಯ ಕೊನೆಗಾಣಬಹುದು ಎಚ್ಚರ.
ಮಾತುಕತೆಯ ಕೊರತೆ, ಮನೆಯಿಂದ ಹೊರಗಿದ್ದಾಗ ಕಚೇರಿ ಕೆಲಸದ ಒತ್ತಡ, ಮನೆಗೆ ಬಂದಾಗ ಮೊಬೈಲ್ ಇಲ್ಲವೇ ಟಿವಿಯಲ್ಲಿ ಮುಳುಗಿ ಹೋಗಿ ಗಂಡ-ಹೆಂಡತಿ ನಡುವೆ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಮಾತುಕತೆಗೆ ಕಡಿವಾಣ ಬಿದ್ದಾಗ, ನೀವು ನಿಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳದಿದ್ದರೆ ಅಥವಾ ನಿಮ್ಮ ಸಂಗಾತಿ ತನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದಾಗ ಇಬ್ಬರ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ.
ಜೊತೆಗೆ ಸಂಬಂಧದಲ್ಲಿ ಅಪನಂಬಿಕೆಗೂ ಇದು ಕಾರಣವಾಗಬಹುದು. ಅಲ್ಲದೇ ಹೊರಗಿನವರ ಮೇಲೆ ಆಕರ್ಷಣೆ ಹೆಚ್ಚಾಗಬಹುದು.
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…
ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…