ಮಹಿಳೆ ಸಬಲೆ

ಬಸಳೆ ಸೊಪ್ಪಿನಿಂದ ಬಲುತರದ ಖಾದ್ಯಗಳು

ರಮ್ಯ ಅರವಿಂದ್

ಬಸಳೆ ಸೊಪ್ಪು ಬಳ್ಳಿಯ ರೂಪದಲ್ಲಿ ಬೆಳೆಯುವ ಒಂದು ಸೊಗಸಾದ ಸೊಪ್ಪು. ಭಾರತದ ಎಲ್ಲ ಭಾಗಗಳಲ್ಲಿಯೂ ಈ ಸೊಪ್ಪು ಕಾಣಸಿಗುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಬೆಳೆಯಬಹುದಾಗಿದ್ದು, ವಿಶೇಷವಾದ ಪೌಷ್ಟಿಕಾಂಶಯುಕ್ತ ಈ ಸೊಪ್ಪನ್ನು ಬೇಸಿಗೆಯ ಸಂದರ್ಭದಲ್ಲಿ ಬಳಸುವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ಈ ಸೊಪ್ಪು ಮಕ್ಕಳಲ್ಲಿನ ರಕ್ತಹೀನತೆಯ ಸಮಸ್ಯೆಯ ನಿವಾರಣೆಗೆ ಪರಿಣಾಮಕಾರಿಯಾಗಿದೆ. ಈ ಸೊಪ್ಪನ್ನು ವಾರಕ್ಕೊಮ್ಮೆಯಾದರೂ ಅಡುಗೆಯಲ್ಲಿ ಬಳಸಿದರೆ ದೇಹದ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ಈ ಸೊಪ್ಪಿನಿಂದ ಸರಳವಾಗಿ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಅವು ಯಾವುವು ತಿಳಿಯೋಣ ಬನ್ನಿ.

ಬಸಳೆ ಸೊಪ್ಪಿನ ದೋಸೆ: ಬಸಳೆ ಸೊಪ್ಪಿನಿಂದ ದೋಸೆ ತಯಾರಿಸಿದರೆ ಅದು ತಿಳಿ ಹಸಿರು ಬಣ್ಣದಿಂದ ಆಕರ್ಷಿತವಾಗಿ ಕಾಣುತ್ತದೆ. ಈ ದೋಸೆಯನ್ನು ತಯಾರಿಸಲು ಮೊದಲಿಗೆ ಒಂದು ಕಪ್ ಅಕ್ಕಿಯನ್ನು ನಾಲ್ಕು ಗಂಟೆಗಳ ಕಾಲ ನೆನೆಸಬೇಕು. ನಂತರ ನೆನೆಸಿದ ಅಕ್ಕಿಗೆ ಒಂದು ಕಪ್ ಬಸಳೆ ಎಲೆಗಳು, ಅರ್ಧ ಚಮಚ ಜೀರಿಗೆ, ಒಂದು ಇಂಚು ಶುಂಠಿ, ನಾಲ್ಕರಿಂದ ಐದು ಮೆಣಸಿನಕಾಯಿ, ಅರ್ಧ ಕಪ್ ತೆಂಗಿನಕಾಯಿ ತುರಿ ಸೇರಿಸಿ ಒಂದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿಕೊಳ್ಳಬೇಕು. ರುಬ್ಬಿದ ತಕ್ಷಣವೇ ದೋಸೆಯನ್ನು ತಯಾರಿಸಿಕೊಳ್ಳಬಹುದು.

ಬಸಳೆ ಸೊಪ್ಪಿನ ಬಜ್ಜಿ: ಬಜ್ಜಿ ಎಲ್ಲರಿಗೂ ಪ್ರಿಯವಾದ ಖಾದ್ಯ. ಬಜ್ಜಿಯನ್ನು ಬಸಳೆ ಸೊಪ್ಪಿನಿಂದ ತಯಾರಿಸಿದರೆ ಮತ್ತಷ್ಟು ರುಚಿಕರ ಮತ್ತು ಆರೋಗ್ಯಕರ. ಇದನ್ನು ತಯಾರಿಸಲು ಎರಡು ಕಪ್ ಕಡಲೆ ಹಿಟ್ಟು, ಎರಡು ಚಮಚ ಅಕ್ಕಿ ಹಿಟ್ಟು, ಅಗತ್ಯಕ್ಕೆ ತಕ್ಕಷ್ಟು ಬಸಳೆ ಸೊಪ್ಪಿನ ಎಲೆಗಳು, ಎರಡು ಚಮಚ ಅಚ್ಚಕಾರದ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಒಂದು ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಸೇರಿಸುತ್ತಾ ಮಂದ ಹದಕ್ಕೆ ಬರುವಂತೆ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಬಸಳೆ ಎಲೆಗಳನ್ನು ಕಲಸಿದ ಹಿಟ್ಟಿನ ಮಿಶ್ರಣದೊಳಗೆ ಮುಳುಗಿಸಿ ಕಾದ ಎಣ್ಣೆಗೆ ನಿಧಾನವಾಗಿ ಒಂದರ ನಂತರ ಒಂದನ್ನು ಹಾಕುತ್ತಾ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಬಿಸಿ ಬಿಸಿಯಾದ ಬಸಳೆ ಬಜ್ಜಿ ಸವಿಯಲು ಸಿದ್ಧವಾಗುತ್ತದೆ.

ಬಸಳೆ ಸೊಪ್ಪಿನ ದಾಲ್ :  ಬಸಳೆ ಸೊಪ್ಪಿನ ದಾಲ್ ಫ್ರೈಅನ್ನು ತಯಾರಿಸಲು ಮೊದಲಿಗೆ ಒಂದು ಕುಕ್ಕರ್ ಪ್ಯಾನ್‌ನಲ್ಲಿ ಕಾಲು ಕಪ್ ತೊಗರಿಬೇಳೆ, ಕಾಲು ಕಪ್ ಹೆಸರುಬೇಳೆ, ಐದು ಹಸಿಮೆಣಸಿನಕಾಯಿ (ಉದ್ದವಾಗಿ ಸೀಳಿದ) ಸಣ್ಣಗೆ ಹಚ್ಚಿದ ಬಸಳೆ ಸೊಪ್ಪು, ಒಂದು ಚಿಟಿಕೆ ಅರಿಶಿನ, ಕಾಲು ಚಮಚ ಅಡುಗೆ ಎಣ್ಣೆ, ಒಂದೂವರೆ ಲೋಟದಷ್ಟು ನೀರನ್ನು ಸೇರಿಸಿ ೧೫ ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು (ಅಂದರೆ ಕುಕ್ಕರ್ ಮೂರು ಕೂಗು ಬರುವವರೆಗೂ) ಕುಕ್ಕರ್ ಆರಿದ ನಂತರ ಮಿಶ್ರಣವನ್ನು ಒಂದು ಸೌಟಿನ ಸಹಾಯದಿಂದ ಕಲಸಿಕೊಳ್ಳಬೇಕು. ಈಗ ಒಂದು ಬಾಣಲೆಯಲ್ಲಿ ನಾಲ್ಕು ಚಮಚ ಅಡುಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಕಾಲು ಚಮಚ ಸಾಸಿವೆ, ಕಾಲು ಚಮಚ ಜೀರಿಗೆ, ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಒಣ ಮೆಣಸಿನಕಾಯಿ, ಸಣ್ಣಗೆ ಹಚ್ಚಿದ್ದ ಈರುಳ್ಳಿ, ಒಂದು ಟೊಮೇಟೊ ಎಲ್ಲವನ್ನು ಬಾಡಿಸುತ್ತಾ ಕುಕ್ಕರಿನಲ್ಲಿರುವ ಮಿಶ್ರಣವನ್ನು ಸೇರಿಸಿ ಒಂದು ಸೌಟಿನಿಂದ ಕಲೆಸುತ್ತಾ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಹೀಗೆ ಮಾಡಿದ ರುಚಿಕರ ದಾಲ್ ಫ್ರೈ ಸವಿಯಲು ಸಿದ್ಧವಾಗುತ್ತದೆ.

ಬಸಳೆ ಸೊಪ್ಪಿನ ಚಟ್ನಿ:  ಎರಡು ಹಿಡಿಯಷ್ಟು ಬಸಳೆ ಸೊಪ್ಪನ್ನು ನುಣ್ಣಗೆ ಹಚ್ಚಿಕೊಂಡು ಒಂದು ಪಾತ್ರೆಯಲ್ಲಿ ಎರಡು ಚಮಚ ಅಡುಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಉರಿದುಕೊಳ್ಳಬೇಕು. ನಂತರ ಒಂದು ಮಿಕ್ಸಿ ಪಾತ್ರೆಯಲ್ಲಿ ಅರ್ಧ ಇಂಚು ಶುಂಠಿ, ೪ ಹಸಿ ಮೆಣಸಿನಕಾಯಿ, ಎರಡು ಎಸಳು ಬೆಳ್ಳುಳ್ಳಿ, ಕಾಲು ಚಮಚ ಜೀರಿಗೆ, ಸ್ವಲ್ಪ ಹುಣಸೆಹಣ್ಣು, ಕಾಲು ಕಪ್ಪಿನಷ್ಟು ಕಾಯಿತುರಿ ಹಾಗೂ ಬಸಳೆ ಸೊಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಗ್ಗರಣೆ ಹಾಕಿದ ಸಾಸುವೆ, ಕರಿಬೇವವನ್ನು, ಈಗಾಗಲೇ ರುಬ್ಬಿಕೊಂಡ ಮಿಶ್ರಣಕ್ಕೆ ಬೆರೆಸಬೇಕು. ಹೀಗೆ ಮಾಡಿದರೆ ಬಸಳೆ ಸೊಪ್ಪಿನ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

ಹೀಗೆ ಬಸಳೆ ಸೊಪ್ಪಿನಿಂದ ಆಹಾರವನ್ನುತಯಾರಿಸಿಕೊಂಡು ಸೇವಿಸಿದರೆ, ಇದು ಸವಿಯಲು ಇರುತ್ತದೆ. ಆರೋಗ್ಯಕ್ಕೆ ಹೆಚ್ಚು ಅನುಕೂಲವಾಗಿಯೂ ಇರುತ್ತದೆ.

ಆಂದೋಲನ ಡೆಸ್ಕ್

Recent Posts

ಹನೂರು: ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ: ಜಿಲ್ಲಾಧಿಕಾರಿ ಶ್ರೀರೂಪ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ…

6 mins ago

ಓದುಗರ ಪತ್ರ: ಯುದ್ಧ-ಬುದ್ಧ

ಯುದ್ಧ-ಬುದ್ಧ ಜಗತ್ತಿನ ತುಂಬಾ ಬರೀ ಯುದ್ಧ ಆದರೆ ನಮ್ಮ ಭಾರತ ಸುಖ ಶಾಂತಿ ಸಮೃದ್ಧಿಗೆ ಬದ್ಧ ಇದು ಶತಸಿದ್ಧ ಏಕೆಂದರೆ…

23 mins ago

ಓದುಗರ ಪತ್ರ: ಸಾರಿಗೆ ಬಸ್‌ನಲ್ಲಿ ಕುಡಿಯುವ ನೀರು ವ್ಯವಸ್ಥೆ!

ಮೈಸೂರು ಜಿಲ್ಲೆಯ ತಿ. ನರಸೀಪುರದಿಂದ ಬನ್ನೂರು ಮಾರ್ಗವಾಗಿ ಮಂಡ್ಯಕ್ಕೆ ತೆರಳುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕ ಹಾಗೂ…

28 mins ago

ಓದುಗರ ಪತ್ರ: ಲಿಂಗಾಂಬುಧಿ ಕೆರೆ ಏರಿ ಬೀದಿ ದೀಪ ಸರಿಪಡಿಸಿ

ಮೈಸೂರು ನಗರದ ಲಿಂಗಾಂಬುಧಿ ಕೆರೆ ಏರಿಯ ರಸ್ತೆಯು, ಶ್ರೀ ರಾಂಪುರ ಬಡಾವಣೆ, ಪ್ರೀತಿ ಬಡಾವಣೆಯಿಂದ ಲಿಂಗಾಂಬುಧೀ ಪಾಳ್ಯ, ಅರ್.ಟಿ.ನಗರ ದಟ್ಟಗಳ್ಳಿ ೩ ನೇ…

30 mins ago

ಓದುಗರ ಪತ್ರ: ಕಿಸಾನ್ ಸಮಾನ್ ಸರ್ವರ್ ಸಮಸ್ಯೆ ನಿವಾರಿಸಿ

ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮತ್ತು ಸೆಂಟ್ರಲ್ ಐಡಿ ಪಡೆಯಲು ರೈತರು ಎದುರಿಸುತ್ತಿರುವ ತಾಂತ್ರಿಕ ತೊಂದರೆ ದಿನೇ ದಿನೇ ಹೆಚ್ಚಾಗುತ್ತಿದೆ.…

32 mins ago

ಓದುಗರ ಪತ್ರ: ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಿ

ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಬಸ್ ನಿಲ್ದಾಣದಿಂದ ಸಂಜೆ ೭ರ ನಂತರ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಾಕಷ್ಟು ಬಸ್ ಸೌಲಭ್ಯವಿಲ್ಲದೆ…

35 mins ago