ಮಹಿಳೆ ಸಬಲೆ

ಹೆಣ್ಣಿನ ದೇಹದ ಭ್ರಮೆಗಳ ಕುರಿತ ನಾಟಕ ‘ಮಾಂಸ್

ಚಿತ್ರಾ ವೆಂಕಟರಾಜು
‘ಮಾಂಸ್’ ಎಂದರೆ ಹಿಂದಿಯಲ್ಲಿ ಮಾಂಸ, ವಿಜ್ಞಾನದಲ್ಲಿ ದ್ರವ್ಯರಾಶಿ, ಇಂಗ್ಲಿಷ್ ನಲ್ಲಿ ಸಮೂಹ, ಜ್ಯೋತಿ ಡೋಗ್ರಾ ಅವರು ತಾವೇ ಬರೆದು ರಂಗಕ್ಕೆ ತಂದಿರುವ ಇತ್ತೀಚಿನ ಏಕವ್ಯಕ್ತಿ ರಂಗ ಪ್ರಯೋಗ ಹೆಣ್ಣಿನ ದೇಹದ ನೆಲೆಯಲ್ಲಿ ಎಲ್ಲವನ್ನು ವಿಶ್ಲೇಷಿಸುತ್ತದೆ.

ರೂಪದರ್ಶಿಯೊಬ್ಬಳು ತನ್ನ ದೇಹವನ್ನು ನೋಡಿಕೊಳ್ಳುತ್ತಾಳೆ. ಬೊಜ್ಜಿನಿಂದ ಮುಂದೆ ಬಂದಿರುವ ಹೊಟ್ಟೆ, ನೇತಾಡುವ ತೋಳಿನ ಮಾಂಸಗಳನ್ನು ನೋಡಿ ಅವಳ ಮನಸ್ಸು ಅಸ್ತವ್ಯಸ್ತವಾಗುತ್ತದೆ. ದಪ್ಪವಾಗಿರುವ ತನ್ನ ದೇಹವನ್ನು, ಅವಳು ತೊಟ್ಟಿರುವ ಬಿಗಿ ಬಟ್ಟೆಯನ್ನು ನೋಡಿ ಜನ ಸಮೂಹ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳುವುದಕ್ಕೆ ನಿನಗೆ ನಾಚಿಕೆಯಾಗುವುದಿಲ್ಲವೇ’ ಎಂದಂತೆ ಕನಸಿನಲ್ಲಿ ಭಾಸವಾಗುತ್ತದೆ. ಹೆಣ್ಣಿನ ದೇಹ ಮತ್ತು ಅದಕ್ಕೆ ಅಂಟಿಕೊಂಡಿರುವ ‘ನಾಚಿಕೆ’ಯ ಕಲ್ಪನೆಯನ್ನು ನಾಟಕ ಎಳೆಎಳೆಯಾಗಿ ಬಿಡಿಸುತ್ತದೆ.

ಹದಿನಾರು ವರ್ಷದ ಹುಡುಗಿ ಒಬ್ಬಳು ವೆನಿಲ್ಲಾ ಸುಗಂಧದ ಶ್ಯಾಂಪೂವಿನಿಂದ ತಲೆ ಸ್ನಾನ ಮಾಡಿ, ಕೂದಲು ಒಣಗಿಸಿಕೊಳ್ಳಲು ಬಿಸಿಲಲ್ಲಿ ಕುಳಿತಿರುತ್ತಾಳೆ. ಬಿಲ್ಡಿಂಗ್‌ನ ಎಲ್ಲರೂ ಅವಳನ್ನು ಮಾತನಾಡಿಸುತ್ತಾರೆ. ಸುಂದರ ವಾಗಿರುವುದು ಎಲ್ಲರನ್ನು ಸೆಳೆಯುತ್ತದೆ. ಎಲ್ಲರೂ ಅದರ ಸಮೀಪ ಇರಲು ಬಯಸುತ್ತಾರೆ. 50ರ ಸಮೀಪದ ರಂಗನಟಿಯೊಬ್ಬಳು ತಾನು ದಪ್ಪ ಆಗಬಹುದೆಂಬ ಆತಂಕದಿಂದ ತಿಂಡಿ-ಊಟವನ್ನೇ ಮಾಡದೆ ಬೆಳಿಗ್ಗೆಯಿಂದ ಕಹಿ ಕಾಫಿಯನ್ನು ಕುಡಿಯುತ್ತಾಳೆ. ಪ್ರದರ್ಶನದ ನಂತರ ಊಟದ ಸಮಯದಲ್ಲಿ, ಎಲ್ಲವನ್ನು ತಿನ್ನಬೇಕೆನಿಸಿದರೂ ಅದೆಲ್ಲವನ್ನು ಲೆಕ್ಕಿಸದೆ ಮತ್ತೆ ಕಹಿ ಕಾಫಿಯನ್ನು ಕುಡಿಯುತ್ತಾಳೆ.

ಇಳಿ ವಯಸ್ಸಿನ ಮಹಿಳೆಯ ಗಲ್ಲದ ಮೇಲಿರುವ ಕೂದಲನ್ನು ನೋಡಿ ಆರು ವರ್ಷದ ಮಗುವೊಂದು ‘ನೀನು ಜಕ್ಕಿಣಿಯೇ ? ಜಕ್ಕಿಣಿಯರಿಗೆ ಮಾತ್ರ ಗಲ್ಲದಲ್ಲಿ ಕೂದಲುಗಳು ಇರುವುದು’ ಎಂದು ಕೇಳುತ್ತದೆ.

ಸಮಾಜದಲ್ಲಿ ಹೆಣ್ಣು ತನ್ನ ದೇಹದ ಬಗ್ಗೆ ತಾನೇ ಕಟ್ಟಿಕೊಂಡಿ ರುವ, ಸಮಾಜ ಯುಗಗಳಿಂದಲೂ ಕಟ್ಟಿಕೊಟ್ಟಿರುವ ಕಲ್ಪನೆ ಯನ್ನು ಈ ನಾಟಕದ ಬೇರೆ ಬೇರೆ ವಯಸ್ಸಿನ, ಸಾಮಾಜಿಕ ಹಿನ್ನೆಲೆಯ ಮಹಿಳೆಯರ ಮೂಲಕ ನಟಿ ಕಟ್ಟಿಕೊಡಲಾಗಿದೆ.
ಸಮಾಜದ ದೃಷ್ಟಿಯಲ್ಲಿ ತನ್ನ ದೇಹವನ್ನು ‘ಸುಂದರ’ ವಾಗಿಟ್ಟುಕೊಳ್ಳಲು ಮಹಿಳೆಯರು ಪಡುವ ಪ್ರಯಾಸ, ಮನಸ್ಸಿನಲ್ಲಿರುವ ಅಸಹನೆ, ಇಂದಿನ ಕಾಲದ ಹೆಚ್ಚಿನ ಮಹಿಳೆಯರ ಕತೆ, ಅದರ ಹಿಂದಿನ ಮಾನಸಿಕತೆಯನ್ನು ಈ ಪ್ರಯೋಗ ಮುಂದಿಡುತ್ತದೆ.

ಉಬ್ಬಿದ ಹೊಟ್ಟೆಗಳನ್ನು, ದಪ್ಪ ತೊಡೆಗಳನ್ನು ಸಣ್ಣದಾಗಿಸಲು ‘ಯೋಗ’ ಮಾಡಲು ಸೂಚಿಸುವ ಮಹಿಳೆಯ ಮಾವ, ಯೋಗ ಮಾಡಲಾಗದಿದ್ದರೆ ಹೊಟ್ಟೆಯ ಮಾಂಸವನ್ನು ತೆಗೆದು ಅದನ್ನು ನಿತಂಬಗಳಿಗೆ ಜೋಡಿಸುವ, ಜೋತುಬಿದ್ದ ಮೊಲೆಗಳನ್ನು ನೆಟ್ಟಗೆ ಮಾಡಲು ಇರುವ ಹಲವಾರು ವೈದ್ಯಕೀಯ ತಂತ್ರಜ್ಞಾನಗಳ ಬಗ್ಗೆ ಗೆಳತಿಯೊಬ್ಬಳು ತಿಳಿಸುತ್ತಾಳೆ. ಅದಕ್ಕೆ ತಗಲುವ ಲಕ್ಷಾಂತರ ರೂಪಾಯಿಗಳ ಬಗ್ಗೆಯೂ ಹೇಳುತ್ತಾಳೆ.

ಇಂತಹ ನಿದರ್ಶನಗಳನ್ನು ನಾವು ರಂಗದ ಮೇಲೆ ಅಷ್ಟೇ ನೋಡಬೇಕಾಗಿಲ್ಲ. ದಿನನಿತ್ಯ ನಮ್ಮ ಮೊಬೈಲ್‌ ಗೆ ಬರುವ ಜಾಹೀರಾತುಗಳು, ಪ್ಲಾಸ್ಟಿಕ್ ಸರ್ಜರಿಗಳ ಮಾಡಿಸಿಕೊಂಡ ನಟ-ನಟಿಯರಲ್ಲೂ ಕಾಣಬಹುದು.

ಸೌಂದರ್ಯದ ಕಲ್ಪನೆಯನ್ನೇ ಭ್ರಮೆಯಾಗಿಸಿ, ಬಂಡವಾಳ ಮಾಡಿಕೊಳ್ಳುತ್ತಿ ರುವ ಟ್ರೇಟೆಂಟ್ಗಳು, ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಲೈಕ್ಸ್ ತಂದುಕೊಟ್ಟ
ಆತ್ಮವಿಶ್ವಾಸ ಮನೋರೋಗವಾಗಿ ಬದಲಾಗುತ್ತಿರುವ ಬಗ್ಗೆ ಈ ನಾಟಕ ಮಾತನಾಡುತ್ತದೆ.

ರಂಗಭೂಮಿ ‘ನಟಟಿ’ಯ ಮಾಧ್ಯಮ ಎಂದು ಎಷ್ಟೇ ಹೇಳಿದರೂ, ಅದನ್ನು ಸಾಬೀತುಪಡಿಸುವ ಪ್ರಯೋಗಗಳು ವಿರಳ. ಈ ಪ್ರಯೋಗದಲ್ಲಿ ನಾಟಕ ಹೇಳುವ ವಿಷಯ ಎಷ್ಟು ಮುಖ್ಯವಾಗಿದೆಯೇ ಅದನ್ನು ನಟಿಯಾಗಿ ಹೇಳಿರುವ ರೀತಿ ಅಷ್ಟೇ ಅನನ್ಯವಾಗಿದೆ.

ಅಭಿನಯದ ಮೂಲಕವೇ ಎಲ್ಲ ಮಹಿಳಾ ಪಾತ್ರಗಳನ್ನೂ ಪ್ರೇಕ್ಷಕರಿಗೆ ಕಾಣಿಸುವುದು ಸುಲಭದ ಮಾತಲ್ಲ. ಅದನ್ನು ಅತ್ಯಂತ ಸಮರ್ಥವಾಗಿ ಜ್ಯೋತಿ ಡೋಗ್ರಾ ವಹಿಸಿದ್ದಾರೆ. 16 ವರ್ಷದ ಹುಡುಗಿ, ರೂಪದರ್ಶಿ, ಕೆಮಿಸ್ಟಿ ಪ್ರೊಫೆಸರ್, 50ರ ಪ್ರಾಯದ ಮಹಿಳೆ, ವಿವಾಹಿತೆ, ರಂಗನಟಿ ಹೀಗೆ ಬೇರೆ ಬೇರೆ ಪಾತ್ರಗಳನ್ನು ಅಭಿನಯಿಸುವಾಗ ಪಾತ್ರಕ್ಕೆ ತಕ್ಕ ಆಂಗಿಕ, ಧ್ವನಿಯ ಏರಿಳಿತಗಳು, ಭಾವಸ್ಥಿತಿ ಅದನ್ನು ನಟಿಯ ದೃಷ್ಟಿಕೋನದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ವಿಧಾನ ಎಲ್ಲವೂ ಪಾತ್ರವನ್ನು ವಿಸ್ತರಿಸುವಂತಿದ್ದು ಅವರ ನಟನೆಯು ಮೆಚ್ಚುವಂತಹದ್ದು.
ಇಡೀ ನಾಟಕ ಮಾತನಾಡುವುದು, ಇಂದಿನ ತೋರಿಕೆಯ ಸಮಾಜ’ದ ವಿಕೃತಿಯ ಕುರಿತು. ಆದರೂ ಅದನ್ನು ಹಾಸ್ಯದ ಲೇಪದಲ್ಲಿ ಹೇಳಿರುವುದರಿಂದ ಪ್ರೇಕ್ಷಕರ ಮನಸನ್ನು ಅದು ಮತ್ತಷ್ಟು ಕಲಕುತ್ತದೆ. ನಟನೆಯೇ ಜೀವಾಳವಾಗಿರುವ ಅಪರೂಪದ ಪ್ರಯೋಗಗಳಲ್ಲಿ ಜ್ಯೋತಿ ಡೋಗ್ರಾ ಅವರ ‘ಮಾಂಗ್’ ಪ್ರಯೋಗವೂ ಒಂದು. 2019ರಲ್ಲಿ ಪ್ರಕ್ರಿಯೆ ಪ್ರಾರಂಭವಾದ ಈ ಪ್ರಯೋಗ ರಂಗಕ್ಕೆ ಬರಲು 4 ವರ್ಷಗಳು ಹಿಡಿಯಿತು. ಆ ನಾಲ್ಕು ವರ್ಷಗಳ ಸಂಶೋಧನೆ ಮತ್ತು ತಯಾರಿ ಪ್ರಯೋಗದಲ್ಲಿ ಎದ್ದು ಕಾಣುವಂತಿತ್ತು.

ಆಂದೋಲನ ಡೆಸ್ಕ್

Recent Posts

ಮುಡಾ ಪ್ರಕರಣ | ಬಿಜೆಪಿ ಇಬ್ಬರು ಮಾಜಿ ಶಾಸಕರ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು

ಮೈಸೂರು: ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರದ 50;50ಅನುಪಾತದ ನಿವೇಶನ ಹಾಗೂ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ 14 ಬದಲಿ…

18 mins ago

ಫೆ.28ರಿಂದ ಮೂರು ದಿನ ಹಂಪಿ ಉತ್ಸವ

ಬೆಂಗಳೂರು: ವಿಶ್ವ ವಿಖ್ಯಾತ ಹಂಪಿ ಉತ್ಸವ ಫೆಬ್ರವರಿ 28 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ…

37 mins ago

ದುಬಾರಿಯಾದ ಸಾರಿಗೆ ಪ್ರಯಾಣ; ಟಿಕೆಟ್‌ ದರ ಶೇ.15 ಏರಿಕೆಗೆ ಸಂಪುಟ ಸಮ್ಮತಿ

ಬೆಂಗಳೂರು: ಕರ್ನಾಟಕ ಸಾರಿಗೆ ನಿಗಮಗಳ ಬಸ್‌ ಪ್ರಯಾಣ ಟಿಕೆಟ್‌ ದರವನ್ನು ಶೇ.15 ರಷ್ಟು ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ…

1 hour ago

ಕ್ಯಾಂಪಾ ನಿಧಿಗಾಗಿ ಕೇಂದ್ರಕ್ಕೆ ದ.ರಾಜ್ಯಗಳ ಅರಣ್ಯ ಸಚಿವರುಗಳ ನಿಯೋಗ: ಈಶ್ವರ ಖಂಡ್ರೆ

ದಕ್ಷಿಣ ರಾಜ್ಯಗಳ ಅರಣ್ಯ ಸಚಿವರಿಗೆ ಶೀಘ್ರವೇ ಪತ್ರ – ಈಶ್ವರ ಖಂಡ್ರೆ ಬೆಂಗಳೂರು: ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು…

2 hours ago

ಬಂಡೀಪುರ- ವಯನಾಡು ನಡುವೆ ಸಂಚಾರಕ್ಕೆ ತೊಡಕಿಲ್ಲ: ಈಶ್ವರ ಖಂಡ್ರೆ

ಬೆಂಗಳೂರು: ಕರ್ನಾಟಕ ಮತ್ತು ಕೇರಳ ನಡುವೆ ಬಂಡೀಪುರ ಮತ್ತು ವಯನಾಡು ನಡುವೆ ರಾತ್ರಿ ಸಂಚಾರ, ಪ್ರಸ್ತುತ ರಾತ್ರಿ 9ರವರೆಗೆ ಸಂಚಾರಕ್ಕೆ…

2 hours ago

ಗೃಹಲಕ್ಷ್ಮಿಬಿಟ್ಟು ಬಾಣಂತಿಯರ ಸಾವು ನಿಲ್ಲಿಸಿ: ಆರ್.ಅಶೋಕ

ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು  ಹೆಚ್ಚಗುತ್ತಲೆ ಇದೆ. ನೀವು ನೀಡುವ 2 ಸಾವಿರ ರೂ.  ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿ,…

2 hours ago