ಗಿರಿದರ್ಶಿನಿ ಬಡಾವಣೆಯ ಮನೆಯಲ್ಲಿ ನವರಾತ್ರಿ ವೈಭವ
ಜೆ.ಜೆ.ಹೇಮಂತ್ ಕುಮಾರ್
ಮೈಸೂರು: ಗೊಂಬೆ ಹೇಳುತೈತೆ… ಎಂದು ಶುರುವಾಗುವ ಸಿನಿಮಾವೊಂದರ ಈ ಹಾಡು ಜನತೆಗೆ ಸಂದೇಶ ವನ್ನೂ ನೀಡಿದೆ. ದಸರಾ ಹಬ್ಬದ ನವರಾತ್ರಿ ಪ್ರಯುಕ್ತ ಮನೆಯೊಂದರಲ್ಲಿ ಪ್ರದರ್ಶನಕ್ಕಿಟ್ಟಿರುವ ಹಲವಾರು ಗೊಂಬೆ ಗಳು, ಪುರಾಣ, ಇತಿಹಾಸ, ಸಂಪ್ರದಾಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಅನೇಕ ಕಥೆಗಳನ್ನು ಹೇಳುತ್ತಿವೆ. ಕೇಳುಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂಬುದು ರೂವಾರಿಗಳ ಆಶಯವಾಗಿದೆ.
ನಗರದ ಗಿರಿದರ್ಶಿನಿ ಬಡಾವಣೆಯ ನಿವಾಸಿಯಾದ ಗೀತಾ ಶ್ರೀಹರಿಯವರು ತಮ್ಮ ಮನೆಯನ್ನೇ ಗೊಂಬೆ ಮನೆಯಾಗಿ ಪರಿವರ್ತಿಸಿದ್ದಾರೆ. ವರ್ಷ ಪೂರ್ತಿ ಮನೆಯಾಗಿರುವ ಈಮನೆನವರಾತ್ರಿಯಲ್ಲಿ ಗೊಂಬೆ ಮನೆಯಾಗಿ ಕಂಗೊಳಿಸುತ್ತದೆ.
ಗೀತಾ ಅವರು ಪ್ರತಿ ವರ್ಷ ಸಮಾಜಕ್ಕೆ ಗೊಂಬೆಗಳ ಮೂಲಕ ಒಂದು ಸಂದೇಶವನ್ನು ನೀಡುತ್ತಾರೆ. ಈ ಬಾರಿ ಚಾಮರಾಜನಗರ ಜಿಲ್ಲೆ ಹನೂರು ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯ ಸಂಪತ್ತಿನ ಸಂರಕ್ಷಣೆಯನ್ನು ಕುರಿತು ವೈವಿಧ್ಯಮಯ ಗೊಂಬೆಗಳ ಮೂಲಕ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಮನೆಯ ಒಳಗೆ ಕಾಲಿಡುತ್ತಿದ್ದಂತೆ ಹಾಲ್ ನಲ್ಲಿ ಶಿವನ ಕೈಲಾಸದ ದೃಶ್ಯ ಗಮನ ಸೆಳೆಯುತ್ತದೆ. ಇನ್ನೂ ಮುನ್ನಡೆದರೆ ಜಂಬೂಸವಾರಿ ಮೆರವಣಿಗೆಯ ಪಡಿಯಚ್ಚನ್ನು ಗೊಂಬೆಗಳನ್ನು ಬಳಸಿ ತಯಾರಿಸಲಾಗಿದೆ. ಜಂಬೂಸವಾರಿಯಲ್ಲಿ ಕಾಣಸಿಗುವ ವಿವಿಧ ಕಲಾ ತಂಡಗಳು, ಸ್ತಬ್ಧಚಿತ್ರಗಳು, ಕುದುರೆ, ಆನೆ ಇವೆಲ್ಲವನ್ನೂ ಇಲ್ಲಿ ಕಾಣಬಹುದಾಗಿದೆ. ನೈರ್ಮಲ್ಯ ಗ್ರಾಮ ಹೇಗಿರಬೇಕು, ಬೃಂದಾವನ ಮದುವೆಯ ಪರಿಕಲ್ಪನೆ, ಪಟ್ಟದ ಬೊಂಬೆಗಳು, ಮೆಟ್ಟಿಲ ಗೊಂಬೆಗಳು ಕಾಣಸಿಗುತ್ತವೆ.
ಮನೆಯ ನೆಲಮಾಳಿಗೆಯಲ್ಲಿಯೂ ಇವರು ಗೊಂಬೆಗಳನ್ನು ಕೂರಿಸುತ್ತಾರೆ. ಅಲ್ಲಿ ಮಲೆ ಮಹದೇಶ್ವರ ಬೆಟ್ಟದ ಸಣ್ಣ ಸೆಟ್ ಅನ್ನು ಹಾಕಿದ್ದು, ಮಹದೇಶ್ವರ ಸ್ವಾಮಿ ಮೂರ್ತಿ, ಹಸಿರಿನಿಂದ ಕೂಡಿದ ದಟ್ಟವಾದ ಕಾಡು, ಆ ಕಾಡಿನಲ್ಲಿ ವಾಸಿಸುವ ಹಲವಾರು ಪ್ರಾಣಿಗಳನ್ನು ಕಾಣ ಬಹುದಾಗಿದೆ. ಈ ಬಾರಿ ಮಹದೇಶ್ವರ ಬೆಟ್ಟದ ಸಣ್ಣ ಸೆಟ್ ಹಾಕಲು ಕಾರಣ ಅಲ್ಲಿರುವ ಅರಣ್ಯ ಪ್ರದೇಶ ಈಗ ಹೇಗಿದೆಯೋ ಹಾಗೆ ಇರಲಿ, ಇತರ ಅರಣ್ಯ ಪ್ರದೇಶಗಳಂತೆ ಅಲ್ಲಿಯೂ ರೆಸಾರ್ಟ್ಗಳನ್ನು ನಿರ್ಮಿಸಿ ನಾಶ ಮಾಡುವುದು ಬೇಡ ಎಂಬ ಸಂದೇಶ ನೀಡುವುದಾಗಿದೆ ಎನ್ನುತ್ತಾರೆ ಗೀತಾ ಅವರು. ಕೇವಲ ಮಹದೇಶ್ವರ ಸೆಟ್ ಮಾತ್ರ ವಲ್ಲದೇ ಲೇಪಾಕ್ಷಿ ದೇವಾಲ ಯದ ಚಿತ್ರಣ ಮತ್ತು ನವ ದುರ್ಗೆಯರ ಚಿತ್ತಾರಗಳನ್ನೂ ಕಾಣ ಬಹುದಾಗಿದೆ. ಈ ಕಲಾಕೃತಿಗಳು ಮನಸ್ಸಿಗೆ ಮುದನೀಡುತ್ತವೆ.
ಶತಮಾನದ ಗೊಂಬೆಗಳ ವಿಶೇಷ:
ಸುಮಾರು 15 ವರ್ಷಗಳಿಂದ ಪ್ರತಿವರ್ಷವೂ ಒಂದೊಂದು ವಿಭಿನ್ನ ಪ್ರಕಾರದಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದೇವೆ. ಇವರಿಗೆ ದಸರಾ ಬೊಂಬೆಗಳನ್ನು ಪೂಜಿಸುವ ಆಚರಣೆ ಪೂರ್ವಜರ ಬಳುವಳಿ. ನಮ್ಮ ಬಳಿ ಐವತ್ತು ವರ್ಷಗಳು ಹಳೆಯ ಪಟ್ಟದ ಗೊಂಬೆಗಳು ಹಾಗೂ ನೂರು ವರ್ಷದ ಹಳೆಯ ಜಂಬೂಸವಾರಿ ಗೊಂಬೆ ಇವೆ ಎಂದು ಗೀತಾ ಹೇಳುತ್ತಾರೆ.
ಮೈಸೂರಿನಿಂದ ಕೇವಲ 5 ಕಿ.ಮೀ. ದೂರ:
ಮನೆಯಲ್ಲಿ ಗೊಂಬೆಗಳನ್ನು ಕೂರಿಸುವ ನಮಗೆ, ದಸರಾ ಹೆಚ್ಚಿನ ಹರ್ಷ ತಂದುಕೊಡುತ್ತದೆ. ನಮ್ಮ ಮನೆ ಮೈಸೂರಿನಿಂದ ಕೇವಲ ಐದು ಕಿಲೋಮೀಟರ್ ಅಷ್ಟೆ. ಆದ್ದರಿಂದ ಸಾರ್ವಜನಿಕರು ಬಂದು ಗೊಂಬೆಗಳನ್ನು ನೋಡಿ ಖುಷಿಪಟ್ಟರೆ ನಮಗೆ ಸಂತೋಷ.
-ಗೀತಾ ಶ್ರೀಹರಿ
ಐದು ವರ್ಷಗಳಿಂದ ಗೊಂಬೆಗಳ ದರ್ಶನ:
ನವದುರ್ಗೆಯ ಗೊಂಬೆಗಳನ್ನು ಪ್ರತಿಷ್ಠಾಪಿಸಿರುವುದು, ಮೆಟ್ಟಿಲು ಗೊಂಬೆಗಳನ್ನು ಕೂರಿಸಿರುವುದು ಮತ್ತು ಗೊಂಬೆಗಳ ಜೋಡಣೆಗೆ ತಕ್ಕಂತೆ ಕತೆಯನ್ನು ಬರೆದು ವಿವರಿಸಿರುವುದು ತುಂಬ ಇಷ್ಟವಾಯಿತು. ನಾವು ಐದು ವರ್ಷಗಳಿಂದ ಗೊಂಬೆಗಳನ್ನು ವೀಕ್ಷಿಸಲು ಇಲ್ಲಿಗೆ ಬರುತ್ತಿದ್ದೇವೆ.
–ನವ್ಯಾ, ಮೈಸೂರು
ಪುರಾಣದ ಕತೆ ಅರ್ಥ ಮಾಡಿಸಲು ಸುಲಭ: ಪ್ರತಿ ವರ್ಷ ಒಂದೊಂದು ವಿಭಿನ್ನ ಪ್ರಕಾರದಲ್ಲಿ ಗೊಂಬೆಗಳನ್ನು ಕೂರಿಸುವುದರಿಂದ ಮಕ್ಕಳಿಗೆ ಎಲ್ಲ ಪುರಾಣದ ಕತೆಗಳನ್ನು ಅರ್ಥಮಾಡಿಸಲು ಸುಲಭವಾಗುತ್ತದೆ. ಕಳೆದೆರಡು ವರ್ಷಗಳಲ್ಲಿ ರಾಮ ಲಲ್ಲಾ ಸೇರಿದಂತೆ ವಿವಿಧ ರೀತಿ ಗೊಂಬೆಗಳನ್ನು ಅಲಂಕರಿಸಿದ್ದರು. ಈ ಬಾರಿ ಮಲೆ ಮಹದೇಶ್ವರ ವನ್ಯಧಾಮ ಸಂರಕ್ಷಣೆ ಮತ್ತು ನವದುರ್ಗೆಯರ ಗೊಂಬೆಗಳು ಅತ್ಯಾಕರ್ಷಕವಾಗಿವೆ.
-ಶಶಿಕಲಾ, ಮೈಸೂರು
ನವರಾತ್ರಿಗೆ 10 ದಿನಗಳು ಮುಂಚೆಯೇ ಪ್ರಕ್ರಿಯೆ ಆರಂಭ: ಗೀತಾ ಅವರು ನವರಾತ್ರಿಗೆ ಹತ್ತು ದಿನಗಳು ಬಾಕಿ ಇರುವಂತೆಯೇ ಗೊಂಬೆಗಳನ್ನು ಕೂರಿಸಲು ತಯಾರಿಯನ್ನು ಆರಂಭಿಸುತ್ತಾರೆ. ಮೊದಲಿಗೆ ಮನೆಯವರೆಲ್ಲರೂ ಯಾವ ರೀತಿಯಲ್ಲಿ ಗೊಂಬೆಗಳನ್ನು ಕೂರಿಸಬೇಕು? ಯಾವ ವಿನ್ಯಾಸದಲ್ಲಿ ಇರಬೇಕು ಎಂಬುದನ್ನು ಸಮಾಲೋಚಿಸಿ ಕೆಲಸ ಆರಂಭಿಸುತ್ತಾರೆ. ಗೀತಾರವರ ಈ ಪ್ರಯತ್ನಕ್ಕೆ ಕುಟುಂಬದವರ ಸಂಪೂರ್ಣ ಸಹಕಾರ ಇದೆ.
100 ವರ್ಷಗಳ ಹಿಂದಿನ ಗೊಂಬೆಗಳ ಪ್ರದರ್ಶನ
ಮಲೆ ಮಹದೇಶ್ವರಬೆಟ್ಟದ ವನ್ಯ ಸಂಪತ್ತು ಕುರಿತು ಜಾಗೃತಿ
ಗ್ರಾಮ ನೈರ್ಮಲ್ಯದ ಬಗ್ಗೆಯೂ ಅರಿವು
ನೋಡುಗರ ಮನಸ್ಸಿಗೆ ಮುದನೀಡುವ ಕಲಾಕೃತಿಗಳು
ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ…
ನವದೆಹಲಿ: ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…
ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹಮ್ಮದ್ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್ ಅಹಮ್ಮದ್ ಅವರು ಸಿಎಂ…
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…
ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…
ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…