ಆಂದೋಲನ ಪುರವಣಿ

ಡಿಜಿಟಲ್ ಹಾದಿಯಲ್ಲಿ ಗ್ರಂಥಾಲಯ ಸಂಚಾರ

ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ; ಮೊಬೈಲ್, ಕಂಪ್ಯೂಟರ್‌ನಲ್ಲಿಯೇ ಓದುವ ವೇದಿಕೆ

ಜಯಶಂಕರ್ ಬದನಗುಪ್ಪೆ

ಗ್ರಂಥಾಲಯಗಳ ಸ್ವರೂಪ ಬದಲಾಗುತ್ತಿದೆ. ಡಿಜಿಟಲ್ ಜಗತ್ತಿನೊಂದಿಗೆ ತೆರೆದುಕೊಳ್ಳುತ್ತಿರುವ ರಾಜ್ಯದ ಗ್ರಂಥಾಲಯಗಳು ಇಂದು ಹೆಚ್ಚಿನವರಿಗೆ ಅನುಕೂಲ ಮಾಡಿಕೊಡುತ್ತಿವೆ. ಓದುಗರು ನಾಲ್ಕು ಗೋಡೆಗಳ ನಡುವೆ ಕುಳಿತು ಓದಬೇಕಾದ ಚೌಕಟ್ಟಿನಿಂದ ಬಿಡಿಸಿಕೊಂಡು ಕಂಪ್ಯೂಟರ್, ಮೊಬೈಲ್‌ಗಳಲ್ಲಿಯೇ ಪುಸ್ತಕ ಓದುವ ಅವಕಾಶ ಡಿಜಿಟಲ್ ದುನಿಯಾದಲ್ಲಿ ಸಿಕ್ಕಿದೆ. ಇದನ್ನು ವಿದ್ಯಾರ್ಥಿಗಳು, ಓದುಗರು ಸರಿಯಾಗಿ ಬಳಕೆ ಮಾಡಿಕೊಂಡರೆ ಗ್ರಂಥಾಲಯ ಇಲಾಖೆಯ ಕಾರ್ಯ ಸಾರ್ಥಕವಾದೀತು.

ಭಾರತದ ಗ್ರಂಥಾಲಯ ಇತಿಹಾಸ ಬಹಳ ದೊಡ್ಡದು. ಗ್ರಂಥಾಲಯ ಪಿತಾಮಹ ಎನಿಸಿದ ಡಾ.ಎಸ್.ಆರ್.ರಂಗನಾಥನ್ ೧೯೬೫ ರಲ್ಲಿ ಗ್ರಂಥಾಲಯ ಕಾಯ್ದೆ ಜಾರಿಗೆ ತರಲು ಶ್ರಮಿಸಿದರು. ನಂತರ ದೇಶದ ಎಲ್ಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಅಸ್ತಿತ್ವಕ್ಕೆ ಬಂದವು. ಜವಹರ್ ಲಾಲ್ ನೆಹರು ನ್ಯಾಶನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾವನ್ನು ಹುಟ್ಟು ಹಾಕಿ ಗ್ರಂಥಾಯಲ ಕ್ಷೇತ್ರದ ಪ್ರಗತಿಯ ವೇಗ ಹೆಚ್ಚಿಸಿದರು. ಇದೇ ಕಾರಣಕ್ಕಾಗಿ ಅವರ ಜನ್ಮದಿನವಾದ ನ.೧೪ ರಿಂದ ೨೦ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಿಕೊಂಡು ಬರಲಾಗುತ್ತಿದೆ.

ಗ್ರಂಥಾಲಯದಲ್ಲಿ ಸದಸ್ಯತ್ವ ಆಂದೋಲನ, ಪುಸ್ತಕ ಪ್ರದರ್ಶನ, ವಿವಿಧ ಸ್ಪರ್ಧೆ ಏರ್ಪಡಿಸುವುದು, ಲೇಖಕರನ್ನು ಆಹ್ವಾನಿಸಿ ಸಂವಾದ ಏರ್ಪಡಿಸುವುದು, ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ಸಾರ್ವಜನಿಕರನ್ನು ಓದಿನ ಕಡೆಗೆ ಆಕರ್ಷಿಸುವುದು ಈ ಸಪ್ತಾಹದ ಪ್ರಮುಖ ಉದ್ದೇಶ.

ಇ ಸಾರ್ವಜನಿಕ ಗ್ರಂಥಾಯಲವೆಂಬ ಹೊಸ ಭರವಸೆ

ಗ್ರಂಥಾಯಲಗಳಿಗೆ ಸ್ವಂತ ಕಟ್ಟಡಗಳಿಲ್ಲ, ಮೂಲ ಸೌಕರ್ಯಗಳಿಲ್ಲ, ಓದಲು ಒಳ್ಳೆಯ ವ್ಯವಸ್ಥೆ ಇಲ್ಲ, ಪುಸ್ತಕಗಳಿಲ್ಲ ಎಂಬಿತ್ಯಾದಿ ಇಲ್ಲಗಳ ನಡುವೆ ಇ ಸಾರ್ವಜನಿಕ ಗ್ರಂಥಾಯಲ ಹೊಸ ಭರವಸೆಯಂತೆ ಗೋಚರವಾಗುತ್ತಿದೆ. ಇಂದಿನ ಯುವ ಜನತೆಯನ್ನು ಕೇಂದ್ರವಾಗಿಸಿಕೊಂಡು ಗ್ರಂಥಾಯಲ ಇಲಾಖೆ ಡಿಜಿಟಲ್ ಲೈಬ್ರರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಸುಮಾರು ೧೦ ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಈಗಾಗಲೇ ಡಿಜಿಟಲ್ ವೇದಿಕೆಗೆ ತರಲಾಗಿದೆ. ಇದರಿಂದ ವಿದ್ಯಾರ್ಥಿಗಳು, ಯುವ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಆಗುತ್ತಿದೆ.

ಮೈಸೂರಿನಲ್ಲಿ ಹೊಸ ಅಧ್ಯಾಯ

ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ೩೩ ಗ್ರಂಥಾಲಯಗಳಿವೆ. ಒಂದು ಸಂಚಾರಿ ಗ್ರಂಥಾಲಯವಿದೆ. ಜೆ.ಪಿ. ನಗರದಲ್ಲಿ ಇ-ಗ್ರಂಥಾಲಯವಿದೆ. ಅಕ್ಯಾಡೆಮಿಕ್ ಶಿಕ್ಷಣ, ಸಾಹಿತ್ಯ, ಸಾಮಾನ್ಯ ಜ್ಞಾನ, ಉನ್ನತ ಶಿಕ್ಷಣ, ಇಂಜಿನಿಯರಿಂಗ್, ವೈದ್ಯ ಶಿಕ್ಷಣ, ಜೆಇಇ, ಸಿಇಟಿ, ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬೆಲೆಬಾಳುವ ಪುಸ್ತಕಗಳು, ಸಂಪನ್ಮೂಲಗಳು ಈಗ ಗ್ರಂಥಾಲಯಗಳಲ್ಲಿ ಲಭ್ಯವಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಹೊಸ ಆಶಾಕಿರಣವಾಗಿ ಗ್ರಂಥಾಲಯಗಳು ರೂಪುಗೊಳ್ಳುತ್ತಿವೆ.

ಡಿಜಿಟಲ್ ಸ್ಪರ್ಶ

ಪುಸ್ತಕಗಳು, ನಿಯತಕಾಲಿಕೆಗಳು, ವಿಡಿಯೋಗಳು ಹೀಗೆ ಹಲವು ಬಗೆಯ ಆಕರಗಳು ಡಿಜಿಟಲ್ ಲೈಬ್ರರಿ ವೇದಿಕೆಯಲ್ಲಿ ಲಭ್ಯವಾಗುತ್ತಿದ್ದು, ಆಸಕ್ತರು ಗ್ರಂಥಾಲಯ ಇಲಾಖೆಯ ವೆಬ್‌ಸೈಟ್‌ಗೆ ಮೊಬೈಲ್ ನಂಬರ್ ನೀಡಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ನಂತರ ಎಲ್ಲಿಯೇ ಇದ್ದರೂ ಲಾಗಿನ್ ಆಗಿ ಇ-ಗ್ರಂಥಾಯಲದ ಸದುಪಯೋಗ ಪಡೆದುಕೊಳ್ಳಬಹುದು. ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಸಂಪರ್ಕ ಇಲ್ಲವಾದರೆ ನೇರವಾಗಿ ಗ್ರಂಥಾಲಯಗಳಿಗೆ ಹೋಗಿ ಅಲ್ಲಿ ಇರುವ ಕಂಪ್ಯೂಟರ್‌ಗಳ ಮೂಲಕ ಸಂಪರ್ಕ ಸಾಧಿಸಿ ಓದಬಹುದು.

ಓದುಗರ ಸಂಖ್ಯೆಯಲ್ಲಿ ಹೆಚ್ಚಳ

ದಿನವೊಂದಕ್ಕೆ ಮೈಸೂರು ನಗರದ ವಿವಿಧ ಗ್ರಂಥಾಲಯಗಳಿಗೆ ಸರಾಸರಿ ೯ ರಿಂದ ೧೦ ಸಾವಿರ ಓದುಗರು ಭೇಟಿ ನೀಡುತ್ತಿದ್ದಾರೆ. ಹಿರಿಯ ನಾಗರಿಕರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ಮಹಿಳೆಯರು, ಮಕ್ಕಳು ಇದರಲ್ಲಿ ಸೇರಿದ್ದಾರೆ. ಇದೀಗ ಡಿಜಿಟಲ್ ಲೈಬ್ರರಿಯ ಬಗ್ಗೆ ಹೆಚ್ಚಿನವರಿಗೆ ತಿಳಿಯುತ್ತಿದ್ದು, ಇಲ್ಲಿಗೆ ಭೇಟಿ ನೀಡಿ ಓದುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಪೀಪಲ್ಸ್ ಪಾರ್ಕ್ ಆಕರ್ಷಣೆ

ಮೈಸೂರು ನಗರದಲ್ಲಿರುವ ಗ್ರಂಥಾಲಯಗಳ ಪೈಕಿ ಪೀಪಲ್ಸ್ ಪಾರ್ಕ್‌ನಲ್ಲಿರುವ ಕೇಂದ್ರ ಗ್ರಂಥಾಲಯ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರತಿದಿನ ಸರಾಸರಿ ಒಂದು ಸಾವಿರ ಓದುಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಹಿರಿಯ ನಾಗರಿಕರ ವಿಭಾಗ, ವಿಶೇಷ ಚೇತನರ ವಿಭಾಗ, ಮಕ್ಕಳ ವಿಭಾಗ, ಸ್ವರ್ಧಾತ್ಮಕ ಪರೀಕ್ಷಾ ವಿಭಾಗ, ಬ್ರೈಲ್ ಲೈಬ್ರರಿ, ಕಂಪ್ಯೂಟರ್ ಲ್ಯಾಬ್, ಪುಸ್ತಕ ಸಂಗ್ರಹಣಾ ವಿಭಾಗ, ಪರಾಮರ್ಶನ ವಿಭಾಗ, ದಿನಪತ್ರಿಕೆ ಮತ್ತು ನಿಯತಕಾಲಿಕೆ ವಿಭಾಗಗಳಿವೆ. ಸರ್ವರ್ ಕೊಠಡಿ, ಸ್ಟೋರ್ಸ್‌, ದಾಖಲೆಗಳ ಕೊಠಡಿ, ಹಳೆ ಪತ್ರಿಕೆಗಳ ಸಂಗ್ರಹಣಾ ವಿಭಾಗಗಳಿದ್ದು, ಇಲ್ಲಿನ ವಾತಾವರಣ ಓದುಗಾಸಕ್ತರಿಗೆ ಪೂರಕವಾಗಿದೆ.

ಪೀಪಲ್ಸ್ ಪಾರ್ಕ್ ಗ್ರಂಥಾಲಯ ಕಟ್ಟಡದ ಸುತ್ತ ಗ್ರೀನ್ ಲೈಬ್ರರಿ (ಹಸಿರು ಗ್ರಂಥಾಲಯ) ವ್ಯವಸ್ಥೆ ರೂಪಿಸಿ, ತೆರೆದ ವಾತಾವರಣದಲ್ಲಿ ಓದುವಿಕೆಗೆ ಅನುಕೂಲ ಮಾಡಿಕೊಡಲಾಗುವುದು. ಗ್ರಂಥಾಲಯದಿಂದಲೇ ಟ್ಯಾಬ್ ಮತ್ತು ಉಚಿತ ವೈಫೈ ಒದಗಿಸಲು ಯೋಜಿಸಲಾಗಿದೆ. ಟ್ಯಾಬ್ ಬಳಸಿ ಗಾರ್ಡನ್‌ನಲ್ಲಿ ಓದಲು ಅವಕಾಶ ಕಲ್ಪಿಸುವುದು, ಹೊಸದಾಗಿ ೧೦೦ ಕಂಪ್ಯೂಟರ್ ಒದಗಿಸಲು ಚಿಂತನೆ ನಡೆಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುಮೋದನೆ ದೊರೆತ ನಂತರ ಮುಂದಿನ ವರ್ಷದೊಳಗೆ ಎಲ್ಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. -ಬಿ. ಮಂಜುನಾಥ್, ಉಪನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು

ಉಚಿತ ನೋಂದಣಿ

ಸಾರ್ವಜನಿಕ ಗ್ರಂಥಾಲಯ ಇಲಾಖೆ ವೆಬ್‌ಸೈಟ್ ಡಿಡಿಡಿ.ಚ್ಟ್ಞಠಿಜಿಜಜಿಠಿಚ್ಝಟ್ಠಚ್ಝಿಜ್ಚ್ಝಿಜಿಚ್ಟಿಚ್ಟ.ಟ್ಟಜ ಗೆ ಭೇಟಿ ನೀಡಿ ಉಚಿತವಾಗಿ ನೋಂದಣಿ ಮಾಡಿಕೊಂಡು ಪುಸ್ತಕ ಓದುವ ಅವಕಾಶ ಇದೆ. ನಿಮ್ಮ ಮೊಬೈಲ್ ನಂಬರ್ ನೀಡಿ, ಪಾಸ್‌ವರ್ಡ್ ಸೆಟ್ ಮಾಡಿಕೊಂಡು ಸದಸ್ಯತ್ವ ಪಡೆದುಕೊಳ್ಳಬಹುದು. ನಂತರ ಎಲ್ಲಿಯೇ ಇದ್ದರೂ ಲಾಗಿನ್ ಆಗಿ ಪುಸ್ತಕ ಓದಬಹುದು.

andolana

Recent Posts

TESLA | ಶೀಘ್ರದಲ್ಲೇ ಬೆಂಗಳೂರಿಗೆ ಟೆಸ್ಲಾ ಶೋ ರೂಂ!

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಶೋ ರೂಂ ತೆರೆಯುದಾಗಿ ವಿದ್ಯುತ್ ಚಾಲಿತ ಕಾರು ತಯಾರಿಕಾ ಕಂಪನಿ ʼಟೆಸ್ಲಾʼ…

6 hours ago

ಚಲನಚಿತ್ರ ಪ್ರಮಾಣೀಕರಣದಲ್ಲಿ ಪಾರದರ್ಶಕತೆ ಇರಲಿ : ನಟ ಕಮಲ್ ಹಾಸನ್ ಸಲಹೆ

ಚೆನ್ನೈ : ತಮಿಳ್ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಅಭಿನಯದ ಜನ ನಾಯಗನ್ ಚಿತ್ರಕ್ಕೆ ಸಂಬಂಧಿಸಿದ…

7 hours ago

ಕುಕ್ಕರಹಳ್ಳಿ ಕೆರೆಯಲ್ಲಿ ಸ್ಚಚ್ಛತಾ ಅಭಿಯಾನ : 410 ಕೆ.ಜಿ ಕಸ ಸಂಗ್ರಹ

ಮೈಸೂರು : ಸ್ವಚ್ಛ ನಗರಿ ಮೈಸೂರಿನ ರಮಣೀಯ ಸ್ಥಳವಾದ ಕುಕ್ಕರಹಳ್ಳಿ ಕೆರೆಯ ಸ್ವಚ್ಛತೆಗಾಗಿ, ಸ್ವಚ್ಛ ಸರ್ವೇಕ್ಷಣ ಅಭಿಯಾನದ ಭಾಗವಾಗಿ ಮೈಸೂರು…

8 hours ago

ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ : ಎಚ್‌ಡಿಕೆ ಲೇವಡಿ

ಬೆಂಗಳೂರು : ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ…

8 hours ago

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ

ಬೆಂಗಳೂರು : ವಿದ್ಯಾರ್ಥಿ ಜೀವನದ ಅತಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ…

8 hours ago

ಸ್ಪಾಮ್‌ ಕರೆಗಳ ಕಾಟವೇ? TRAI DND ಅಥವಾ 1909ಗೆ ಕರೆಮಾಡಿ

ಮೈಸೂರು : ಸ್ಪಾಮ್ ಕರೆಗಳ ಮೂಲಕ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಫೋನಿನ ಕಾಲಿಂಗ್…

9 hours ago