ಆಂದೋಲನ ಪುರವಣಿ

ಕೊಡಗಿನ ಬಟರ್‌ಫ್ರೂಟ್‌ಗೆ ಸಖತ್ ಡಿಮ್ಯಾಂಡ್ !

ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ

ಈಗೀಗ ಅತಿ ಹೆಚ್ಚು ಬೇಡಿಕೆ ಕಂಡುಕೊಂಡಿರುವ ಅವಕಾಡೋ ಅಥವಾ ಬೆಣ್ಣೆಹಣ್ಣು ರೈತರ ಮುಂದೆ ಹೊಸ ಸಾಧ್ಯತೆ ತೆರೆದಿಟ್ಟಿರುವುದು ಸತ್ಯ. ಅತ್ಯಧಿಕ ಪೋಷಕಾಂಶಗಳು, ಸಕ್ಕರೆ ಕಾಯಿಲೆ ಇರುವವರಿಗೆ ಉತ್ತಮ ಎನ್ನಿಸಿಕೊಂಡಿರುವ ಬೆಣ್ಣೆಹಣ್ಣು ಕೃಷಿಯಿಂದ ರೈತರ ಬಾಳಲ್ಲೂ ಸಿಹಿ ತುಂಬಲಿದೆ.
ಮೆಕ್ಸಿಕೋ ಮತ್ತು ಮಧ್ಯ ಅಮೆರಿಕಾಕ್ಕೆ ಸೇರಿದ ಅವಕಾಡೋವನ್ನು ೧೯ನೇ ಶತವಾನದಲ್ಲೇ ಕ್ರೈಸ್ತ ಮಿಷನರಿಗಳು ಭಾರತಕ್ಕೆ ಪರಿಚಯಿಸಿದವು. ಪ್ರಸ್ತುತ ೮೦ಕ್ಕೂ ಹೆಚ್ಚು ದೇಶಗಳಲ್ಲಿ ಒಟ್ಟು ೭.೨೬ ಲಕ್ಷ ಹೆಕ್ಟೇರು ಪ್ರದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತಿದೆ. ವಿಶ್ವದ ಒಟ್ಟು ಉತ್ಪಾದನೆುಂಲ್ಲಿ ಶೇ. ೧೧.೧ರಷ್ಟು ಏಷ್ಯಾ ಖಂಡದಲ್ಲಿ ಬೆಳೆಯಲಾಗುತ್ತಿದೆ. ಈಗೀಗ ಭಾರತದಲ್ಲಿ ಇದರ ಕೃಷಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ಕಾಫಿ ತೋಟಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾದ ಬೆಣ್ಣೆಹಣ್ಣನ್ನು ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೆಡಲಾಗಿದೆ. ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಅವಕಾಡೊ ತಳಿ ಅಭಿವೃದ್ಧಿ ಹಾಗೂ ತರಬೇತಿ ಕಾರ್ಯಾಗಾರವೂ ನಡೆಯುತ್ತಿರುವುದರಿಂದ ಹೆಚ್ಚಿನ ಕೃಷಿಕರಿಗೆ ಅನುಕೂಲವಾಗುತ್ತಿದೆ.

ಬೆಣ್ಣೆಹಣ್ಣಿನ ಬೇಸಾಯ ಕ್ರಮಗಳು

* ಬೀಜಗಳ ಮೂಲಕ ಸಸಿ ಬೆಳೆಸಬಹುದಾದರೂ ಉತ್ತಮ ಗಿಡಗಳ ಕಾಂಡಗಳನ್ನು ಕಸಿಮಾಡಿ ಸಸಿ ಬೆಳೆಸುವುದು ಉತ್ತಮ ವಿಧಾನ

* ಸೀಳುಕಸಿ, ಪ್ಯಾಚ್ ಬಡ್ಡಿಂಗ್ ಮತ್ತು ಎಪಿಕೋ ಟೈಲ್‌ಗ್ರಾಫ್ಟಿಂಗ್ ವಿಧಾನಗಳಿಂದಲೂ ಸಸಿ ಪೋಷಣೆ

* ಬೆಣ್ಣೆಹಣ್ಣು ೧೫೦ ಪ್ರಬೇಧಗಳನ್ನು ಒಳಗೊಂಡಿದ್ದು, ವೆಸ್ಟ್‌ಇಂಡಿಸ್ ಪ್ರಬೇಧ, ಮೆಕ್ಸಿಕನ್ ಪ್ರಬೇಧ, ಗ್ವಾಟೆಮಲನ್ ಪ್ರಬೇಧ ಮುಖ್ಯವಾದವು.

* ಕರ್ನಾಟಕದಲ್ಲಿ ಅರ್ಕಾಸುಪ್ರೀಮ್ ತಳಿಯ ಪ್ರಮಾಣ ಹೆಚ್ಚಿದೆ. ಇದನ್ನುಕೊಡಗು ಜಿಲ್ಲೆುಂ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಬಿಡುಗಡೆ ವಾಡಲಾಗಿದೆ.


ಚೆಟ್ಟಳ್ಳಿಯಲ್ಲಿ ತಳಿ ಅಭಿವೃದ್ಧಿ
ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಚೆಟ್ಟಳಿುಂ ಕೇಂದ್ರೀಯ ತೋಟ ಗಾರಿಕಾ ಕೇಂದ್ರದಲ್ಲಿ ಅವಕಾಡೋ ತಳಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬೆಣ್ಣೆಹಣ್ಣು ರೈತರಿಗೆ ಹೊಸ ಸಾಧ್ಯತೆ ತೆರೆದಿಟ್ಟಿದ್ದು, ಈ ಬಾರಿ ಒಂದು ಲಕ್ಷಗಿಡಗಳ ಬೇಡಿಕೆ ಬಂದಿದೆ ಎನ್ನುತ್ತಾರೆ ಚೆಟ್ಟಳ್ಳಿ ಕೇಂದ್ರದ ಉಪನಿರ್ದೇಶಕ ಡಾ. ಎಸ್ ರಾಜೇಂದ್ರನ್.


ಕೊಡಗಿನ ಬಟರ್‌ಫ್ರೂಟ್ ತಳಿಗೆ ಬೇಡಿಕೆ
ದಶಕಗಳಿಂದಲೂ ಕೊಡಗಿನ ವಾತಾವರಣಕ್ಕೆ ಸೂಕ್ತವಾದ ನಾಟಿ ತಳಿಗಳ ಬೆಳೆಯಲಾಗುತ್ತಿದ್ದು, ಇವುಗಳಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಕಳೆದ ಐದಾರು ವರ್ಷಗಳಿಂದ ಬಟರ್ ಫ್ರೂಟ್‌ಗೆ ಬೇಡಿಕೆ ಹೆಚ್ಚಿದಂತೆ ಕೊಡಗಿನ ಬಟರ್‌ಫ್ರೂಟ್ ತಳಿಗೆ ಬೇಡಿಕೆ ಹೆಚ್ಚತೊಡಗಿದೆ. ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಚಾಮರಾಜನಗರ, ಚಿಕ್ಕಮಂಗಳೂರು, ಮೈಸೂರು ಸೇರಿ ಇನ್ನು ಹಲವೆಡೆ ಕೊಡಗಿನ ಬಟರ್‌ಫ್ರೂಟ್ ತಳಿಗಳು ವಾರಾಟ ವಾಗುತಿವೆ ಎನ್ನುತ್ತಾರೆ ರಾಜೇಂದ್ರನ್.

andolanait

Recent Posts

ಕೊಲೆ ಪ್ರಕರಣ | ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ಶಾಸಕ ವಿನಯ್‌ ಕುಲಕರ್ಣಿ

ಬೆಂಗಳೂರು : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್…

34 mins ago

ಅಪರಿಚಿತ ವ್ಯಕ್ತಿಯ ಕೊಲೆ ಜಾಡು ಪತ್ತೆ!

ಮೈಸೂರು : ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮದ್ಯ ಸೇವಿಸಿ ಬಂದು ಕಿರುಕುಳ…

48 mins ago

ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಕಾಡಾನೆ ದಾಳಿ

ರಾಮನಗರ : ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಸಂಗಮ ಅರಣ್ಯ ಪ್ರದೇಶದ ಮೇಕೆದಾಟು…

2 hours ago

ಕೊಡಗು | ಜಿಲ್ಲೆಯಲ್ಲಿ 2-3 ಸಾವಿರ ಅನಧಿಕೃತ ಹೋಂಸ್ಟೇ!

ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ಒತ್ತಾಯ ; ವಿದೇಶಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಕ್ರಮಕ್ಕೆ ಆಗ್ರಹ  ನವೀನ್…

2 hours ago

ಕೋಟೆ | ರೆಸಾರ್ಟ್‌, ಹೋಂ ಸ್ಟೇಗಳ ಮೇಲೆ ಹೆಚ್ಚಿನ ನಿಗಾ

ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿರುವ ಕುರಿತು ಪರಿಶೀಲಿಸುತ್ತಿರುವ ಅಧಿಕಾರಿಗಳು ಎಚ್.ಡಿ.ಕೋಟೆ : ಕಬಿನಿ ಜಲಾಶಯದ ಹಿನ್ನೀರು ಮತ್ತು ನಾಗರಹೊಳೆ, ಬಂಡೀಪುರ…

2 hours ago

ಆಂದೋಲನ ದಿನಪತ್ರಿಕೆಯ ಗಾಂಧಿ ಅಭಿಯಾನ | ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ಅಸ್ಪೃಶ್ಯರನ್ನು ಅವರ ನೋವುಗಳಿಂದ ಮುಕ್ತಗೊಳಿಸಲು ಶ್ರಮಿಸಿದ ಮಹಾತ್ಮ ಯಾವುದೇ ಸಮಸ್ಯೆಗೆ ಆಯುಧಗಳು ಮಾತ್ರ ಉತ್ತರವಲ್ಲ ಎಂದು ಮಹಾತ್ಮ ಗಾಂಧಿ ಯಾವಾಗಲೂ…

3 hours ago