ಆಂದೋಲನ ಪುರವಣಿ

ಹೊಸ ಪುಸ್ತಕ: ಕಾಡು ಹುಡುಗನ ಹಾಡು ಪಾಡು; ಅನುಭವ ಕಥನ

ಸ್ವಾಮಿ ಪೊನ್ನಾಚಿ
ಕನ್ನಡದ ಪ್ರತಿಭಾವಂತ ಕಥೆಗಾರ ಸ್ವಾಮಿ ಪೊನ್ನಾಚಿ ಯವರು ಬಹುತೇಕವಾಗಿ ‘ಆಂದೋಲನ’ಕ್ಕೆ ಬರೆದ ಪತ್ರಿಕಾ ಬರಹಗಳ ಸಂಕಲನ ‘ಕಾಡು ಹುಡುಗನ ಹಾಡು ಪಾಡು’ ಇಂದು (ಮಾ.3) ಬೆಳಿಗ್ಗೆ ಚಾಮರಾಜ ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಬೆಳಿಗ್ಗೆ ಒಂಬತ್ತೂವರೆಗೆ ಬಿಡುಗಡೆಯಾಗಲಿದೆ.

ಈ ಸಂಕಲನದ ಬರಹಗಳು ಸಣ್ಣಕತೆ, ಲಲಿತ ಪ್ರಬಂಧಗಳ ಸೃಜನಶೀಲತೆ, ಸ್ವಾರಸ್ಯ, ರಂಜಕತೆ, ಪತ್ರಿಕಾ ಬರಹಗಳ ಖಚಿತತೆ, ಸಂಕ್ಷಿಪ್ತತೆ, ಸಂಶೋಧಕನ ಅಧ್ಯಯನಶೀಲತೆ ಸಾಮಾಜಿಕ ಕಳಕಳಿ ಈ ಎಲ್ಲವನ್ನೂ ಒಳಗೊಂಡಿವೆ. ಇಲ್ಲಿಯ ಬರಹಗಳು ರಂಜನೀಯತೆಯ ಆಚೆಗೂ ತಮ್ಮ ಕೈ ಚಾಚುತ್ತವೆ.

ಸ್ವಾಮಿಯವರು ಬರಹಗಳಲ್ಲಿ ಪ್ರಕರಣಗಳ ಮತ್ತೊಂದು ಮಾನವೀಯ ಮುಖ ಬಿಚ್ಚಿಡುತ್ತಾರೆ. ಈ ಸಂಕಲನದಲ್ಲಿ ಹುತಾತ್ಮರಾದಶಕೀಲ್ ಅಹಮದ್ ಅವರ ಬಗ್ಗೆ ಬರಹ ಇದೆ. ಶಕೀಲ್ ಅಹಮದ್ ಅವರ ಕೆಲಸ ಸಾಧನೆ ತ್ಯಾಗ ಎಲ್ಲ ದಾಖಲೆಗಳಲ್ಲಿ ಸಿಕ್ಕೀತು. ಆದರೆ ಸ್ವಾಮಿ, ಶಕೀಲ್ ಅಹಮದ್ ಅವರ ವ್ಯಕ್ತಿಚಿತ್ರ ಬಿಡಿಸಿರುವ ಪರಿಯೇ ಬೇರೆ. ಒಬ್ಬಕತೆಗಾರ ಮಾತ್ರ ಹೀಗೆ ಬಿಡಿಸಬಲ್ಲ. ಪೊನ್ನಾಚಿ ಚೆಂಗಡಿ ಸುತ್ತಮುತ್ತಲ ಪ್ರದೇಶಕ್ಕೆ ತಮ್ಮ ಯೌವನದ ದಿವಸ
ಗಳಲ್ಲಿ ಕನಸು ಹೊತ್ತು ಬಂದ ಸಾಕೇತ್ ರಾಜನ್ ಅವರ ವಿವರ ಇದೆ. ಇವು ಎಪ್ಪತ್ತರ ದಶಕದಲ್ಲಿನ ಮಹಾ ರಾಜ ಕಾಲೇಜು, ಗಂಗೋತ್ರಿಯ ಸಮಾಜವಾದಿ, ಮಾರ್ಕ್ಸಿಸ್ಟ್ ಹೋರಾಟಗಳ ಜಲಕ್ ನೀಡುತ್ತವೆ.

ಜೊತೆಗೆ ಸೋಲಿಗರ ಬದುಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಬದಲಾವಣೆಗಳು ತಂದ ಸ್ಥಿತ್ಯಂತರ ಗಳು, ಅವರನ್ನು ಎಲ್ಲಿಯೂ ಸಲ್ಲದ ಮನುಷ್ಯರನ್ನಾಗಿ ಸಿದ ಬಗೆ ವಿವರಗಳು ಇವೆ. ಈ ಲೇಖನಗಳ ಸಂಕಲನ ಕನ್ನಡದ ಒಂದು ವಿಶಿಷ್ಟವಾದ ಮತ್ತು ಅನನ್ಯವಾದ ಲೇಖನಗಳ ಸಂಕಲನವಾಗುವುದರಲ್ಲಿ ಸಂಶಯ ಇಲ್ಲ.

(ಚಾ.ನಗರದ ಕೆ. ವೆಂಕಟರಾಜು ಅವರ ಮುನ್ನುಡಿಯ ಕೆಲವು ಸಾಲುಗಳು)

andolana

Recent Posts

ಪೊಲೀಸರ ಮೇಲೆ ಹಲ್ಲೆ: 20 ಜನರ ವಿರುದ್ಧ ಕೇಸ್‌ ದಾಖಲು

ನವದೆಹಲಿ: ಮುಖ್ಯ ಚುನಾವಾಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಿನ್ನೆ ಬೃಹತ್‌ ಪ್ರತಿಭಟನೆಗೆ ಕರೆ ನೀಡಿತ್ತು. ಈ…

9 hours ago

ದೇವಿ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ: ಸಿಎಂ ಡಿಕೆಶಿ

ಮೈಸೂರು:  ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ದೇವಿಯ ಕೃಪೆ…

11 hours ago

ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ: ಗವಿಸಿದ್ದೇಶ್ವರ ಶ್ರೀ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿನಮ್ರ ಮಾತುಗಳನ್ನಾಡಿದ್ದಾರೆ. “ದಸರಾ…

11 hours ago

ಮನಸೆಳೆವ ಫಲ ಪುಷ್ಪ ಪ್ರದರ್ಶನ

ಪ್ರಕೃತಿಯೊಂದಿಗೆ ನಂಟನ್ನು ನೆನಪಿಸುವ ಒಂದು ಸುಂದರ ಪಯಣ. 15 ಎಕರೆ ವಿಸ್ತೀರ್ಣ, 70 ಸಸ್ಯಶಾಸ್ತ್ರೀಯ ಜಾತಿಯ 327ಕ್ಕೂ ಹೆಚ್ಚಿನ ವೈವಿಧ್ಯಮಯ…

11 hours ago

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 416ನೇ ನಾಡಹಬ್ಬ ದಸರಾ…

13 hours ago

ಓದುಗರ ಪತ್ರ: ಬಳಸಿದ ಅಡುಗೆ ಎಣ್ಣೆ: ಯೋಜನೆ ಪ್ರಶಂಸನೀಯ

ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…

14 hours ago