ಆಂದೋಲನ ಪುರವಣಿ

ಹಾಡು ಪಾಡು: ಜೋರು ಸದ್ದಿನ ಗೌಜಲಕ್ಕಿ

ಭಾರತದ ಪಾರಂಪರಿಕ ಬೇಟೆ ಪಕ್ಷಿಗಳಲ್ಲಿ ಪ್ರಮುಖವಾದ ಗೌಜಿಗ, ದುಂಡು ಕೋಳಿ ಹಾಗಿರುವ ನೆಲದ ಮೇಲೆ ವಾಸಿಸುವ ಪಕ್ಷಿ. ಬೂದುಗಂದು ಬಣ್ಣದ ಇದು ಮಣ್ಣಿನಲ್ಲಿ ಬೆರೆತಾಗ ಗುರುತಿಸಲು ಅಸಾಧ್ಯ, ತನ್ನ ಗೌಜು -ಗದ್ದಲಕ್ಕೆ ಹೆಸರುವಾಸಿಯಾದ ಇದರ ಸದ್ದೇ ಇದರ ಇರವನ್ನು ತೋರಿಸುವುದು.
ಭಾರತದ ಉಪಖಂಡ ಹಾಗೂ ಇರಾನ್ ದೇಶದ ಮೂಲ ನಿವಾಸಿಯಾದ ಗೌಜಿಗ ಬಯಲಿನಲ್ಲಿ, ಕೃಷಿ ಭೂಮಿ, ಕುರುಚಲು ಪ್ರದೇಶದಲ್ಲಿ ಧಾರಾಳವಾಗಿ ಕಾಣಿಸಿಕೊಳ್ಳುತ್ತದೆ. ಆದರೆ, ದಟ್ಟ ಕಾಡುಗಳಲ್ಲಿ ನೆಲೆಸುವುದಿಲ್ಲ. ಇದು ಚಿಕ್ಕ ಗುಂಪುಗಳಲ್ಲಿ ಬಾಳ್ವೆ ನಡೆಸುತ್ತಾ ಅಪಾಯ ಕಂಡೊಡನೆ ಕಾ..ತೀ..ತರ್…ತೀ..ತರ್… ಎಂದು ಕೀರಲು ಧ್ವನಿಯಲ್ಲಿ ಗಲಾಟೆ ಮಾಡುತ್ತಾ ಹುಯಿಲೆಬ್ಬಿಸುವುದು. ಹಾಗಾಗಿ, ಉತ್ತರ ಭಾರತದಲ್ಲಿ ಇದನ್ನು ತೀತರ್ ಎಂಬ ಹೆಸರಿನಿಂದ ಕರೆಯುತ್ತಾರೆ. ಕೋಳಿ ಕಾಳಗದಂತೆ ತೀತರ್‌ಗಳನ್ನೂ ಸಹ ಪಂದ್ಯದಲ್ಲಿ ಬಳಸಿಕೊಳ್ಳುವುದರಿಂದ, ಇದು ಜನರ ಮನದಲ್ಲಿ ನೆಲೆಸಿರುವ ಪ್ರಿಯ ಹಕ್ಕಿ.
ಬೂದು ಗೌಜಿಗ ಅಥವಾ ಬೂದು ಕವುಜುಗ, ಗ್ರೇ ಫ್ರಾಂಕೋಲಿನ್, ಗ್ರೇ ಪಾರ್ಟ್ರಿಡ್ಜ್ ಎಂದು ಹಲವು ಹೆಸರಿನಿಂದ ಕರೆಯಿಸಿಕೊಳ್ಳುವ ತಿಳಿ ಬೂದುಗಂದು ಬಣ್ಣದ, ಗಾಢ ಹಳದಿ ಮೊಂಡು ಬಾಲದ, ಕರಿಯ ದಪ್ಪ ಕೊಕ್ಕಿನ ಈ ಪಕ್ಷಿಯ ಮೈ ಮೇಲೆ ಕಪ್ಪು ಅಡ್ಡಡ್ಡ ಗೀರುಗಳಿವೆ. ಇದರ ತಿಳಿ ಹಳದಿ ಮುಖದಲ್ಲಿ ದ್ರಾಕ್ಷಿಯಂತೆ ಹೊಳೆಯುವ ಕಪ್ಪು ಕಣ್ಣು, ಎದ್ದು ಕಾಣುವ ಗಾಢ ಹಳದಿಗಂದು ಬಣ್ಣದ ಹುಬ್ಬು, ಗಂಟಲು, ಕುತ್ತಿಗೆ-ಎದೆ ಬೇರ್ಪಡಿಸುವಂತೆ ತೋರುವ ಕಪ್ಪು ಗುರುತು ಎಲ್ಲವೂ ಹಕ್ಕಿಯನ್ನು ವಿಶೇಷವಾಗಿಸಿವೆ. ಇದರ ಕೆಳಮೈ ತಿಳಿ ಬೂದುಗಂದು ವರ್ಣಕ್ಕಿದ್ದು, ಕುತ್ತಿಗೆಯಿಂದ ಹೊಟ್ಟೆಯವರೆಗೆ ಕಾಣುವ ಕಪ್ಪು ಅಡ್ಡ ಪಟ್ಟಿ ಹಕ್ಕಿಯನ್ನು ಪರಿಸರದಲ್ಲಿ ಮರೆಮಾಚಿಸಲು ಸಹಾಯ ಮಾಡುತ್ತದೆ. ಗೌಜುಗ ನೆಲದ ಹಕ್ಕಿಯಾದ್ದರಿಂದ ಬಲವಾದ ಕಾಲುಗಳು, ಗಡುಸಾದ ಕಾಲ್ಬೆರಳುಗಳು ವೇಗದ ಓಟಕ್ಕೆ ನೆರವಾದರೆ ಕಾಲಿನ ಬಿರುಸು ಉಗುರುಗಳು ಆಹಾರವನ್ನು ನೆಲದಿಂದ ಕೆದಕಿ, ಕ್ರಿಮಿ-ಕೀಟಗಳನ್ನು ಹುಡುಕಲು ಅನುವು ಮಾಡುವುದು. ಬಲು ನಾಚಿಕೆ ಸ್ವಭಾವದ ಗೌಜುಗ, ಅಪಾಯ ಕಂಡೊಡನೆ ಜೋರಾಗಿ ಪಟಪಟನೆ ರೆಕ್ಕೆ ಬಡಿಯುತ್ತಾ ಓಡುತ್ತಾ ಹಾರಿದರೂ ತುಂಬಾ ದೂರ ಹಾರಲಾರದು. ಕಾರಣ, ಇದರ ಪುಟ್ಟ ಗುಂಡನೆಯ ರೆಕ್ಕೆಗಳು. ಹಾಗಿದ್ದೂ, ಇದರ ಪ್ರಬಲವಾದ ಎದೆಯ ಮಾಂಸಖಂಡಗಳು ತ್ವರಿತ ವೇಗದ ಹಾರಾಟಕ್ಕೆ ಸಹಾಯ ಮಾಡಿವೆೆ. ಆದ್ದರಿಂದ ಗೌಜುಗ ಕೊಂಚ ಜಾಗರೂಕಾಗಿ ಓಡಾಡುತ್ತಾ, ಗಾಬರಿಯಾದಾಗ ಹಾರುವುದಕ್ಕಿಂತ ಓಡಿ ಅವಿತುಕೊಳ್ಳುವುದುಂಟು. ನೆಲದಲ್ಲಿ ಓಡಾಡುವಾಗ ಮಣ್ಣಿನಲ್ಲಿ ಸಿಗುವ ಬೀಜ, ಕಾಳು, ಹುಳ, ಕ್ರಿಮಿ-ಕೀಟ ಮುಖ್ಯವಾಗಿ ಗೆದ್ದಲು, ಜೀರುಂಡೆೆುೀಂ ಇದರ ಆಹಾರ, ಕೆಲವೊಮ್ಮೆ ಚಿಕ್ಕ ಹಾವುಗಳನ್ನು ಕೂಡ ಸವಿಯುವುದು.

ಗೌಜುಗದ ಗಂಡು ಹೆಣ್ಣು ಹಕ್ಕಿಗಳು ರೂಪದಲ್ಲಿ ಒಂದೇ ರೀತಿಯಾಗಿ ಕಂಡರೂ ಆಕಾರದಲ್ಲಿ ಗಂಡು ತುಸು ದೊಡ್ಡದು. ಗಂಡು ಹಕ್ಕಿಗೆ ಕಾಲಿನಲ್ಲಿ ಚೂಪಾದ ಮುಳ್ಳು ಕಂಡು ಬಂದರೆ ಇದು ಹೆಣ್ಣಿನಲ್ಲಿ ಇರುವುದಿಲ್ಲ. ಪ್ರಜನ ಕಾಲದಲ್ಲಿ ಗಂಡು ಹಕ್ಕಿ ತನ್ನ ಸಂಗಾತಿಯನ್ನು ಒಲಿಸಿಕೊಳ್ಳಲು ತಾರಕ ಸ್ವರದಲ್ಲಿ ಕೂಗುತ್ತದೆ. ಒಮ್ಮೊಮ್ಮೆ ಸಂಗಾತಿಗಳೆರಡೂ ಸೇರಿ ಯುಗಳ ಗೀತೆ ಹಾಡುವವು. ಏಪ್ರಿಲ್- ಸೆಪ್ಟೆಂಬರ್ ಕಾಲದಲ್ಲಿ ನೆಲದ ಮೇಲೆ, ಹುಲ್ಲಿನ ನಡುವೆ ಮಣ್ಣಿನ ಮೇಲೆ ಹುಲ್ಲಿನಿಂದ ಗೂಡು ಕಟ್ಟಿ ಅದರಲ್ಲಿ ೬-೮ ಕೆಂಪು ಚುಕ್ಕೆ ಇರುವ ನಸು ಹಳದಿ ಬಣ್ಣದ ಮೊಟ್ಟೆ ಇಡುತ್ತದೆ. ತಾಯಿ ಹಕ್ಕಿೆುೀಂ ಮೊಟ್ಟೆಗಳಿಗೆ ಶಾಖ ಕೊಟ್ಟರೆ ಮರಿಗಳ ಪೋಷಣೆಯನ್ನು ತಂದೆ-ತಾಯಿ ಹಕ್ಕಿಗಳೆರಡೂ ಸೇರಿ ನಿರ್ವಹಿಸುತ್ತವೆ.

ಪಂದ್ಯದಲ್ಲಿ ವೀರಾವೇಶದಿಂದ ಹೋರಾಡುವ ಗೌಜುಗ, ತನ್ನ ಒಡೆಯನ ಅತ್ಯಂತ ಸೌಮ್ಯ ಹಾಗೂ ನಂಬುಗೆಯ ಹಕ್ಕಿ. ಉತ್ತರ ಭಾರತದ ಜಾನಪದ ಕಥೆಯಲ್ಲಿ ಪಕ್ಷಿ ಬೇಟೆಗಾರ ಒಡೆಯನಿಗಾಗಿ ಜೋರಾಗಿ ಕೂಗು ಹಾಕಿ ತನ್ನ ಗೆಳೆಯರನ್ನೆಲ್ಲ ಮೋಸದಿಂದ ಒಟ್ಟುಮಾಡಿ ಅವನ ವ್ಯಾಪಾರಕ್ಕೆ ನೆರವಾಗಿದ್ದುದರಿಂದ ದ್ರೋಹಿ ಎಂಬ ಕುಖ್ಯಾತಿ ಪಟ್ಟ. ಈಗಲೂ ಮಧ್ಯ ಭಾರತದ ಪರ್ಧಿ ಜನಾಂಗದವರು ಗೌಜುಗ ಹಕ್ಕಿಯನ್ನು ಕರೆಯಲು ಬಳಸುವ ಪೀಪಿಯನ್ನು ಆಭರಣದಂತೆ ಕೊರಳ ಸುತ್ತ ಹಾಕಿಕೊಳ್ಳುವುದನ್ನು ನೋಡಬಹುದು.

andolana

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

11 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

12 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

12 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

12 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

12 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

13 hours ago