ಬಹುತೇಕ ಎಲ್ಲಾ ಮಕ್ಕಳಂತೆ ನನ್ನ ಮಗನಿಗೂ ಸಣ್ಣವನಿದ್ದಾಗ ರಾತ್ರಿ ಮಲಗುವ ಮುನ್ನ ಒಂದು ಕತೆ ಹೇಳಲೇಬೇಕಿತ್ತು. ಅತ್ಯಂತ ಬೋರಿಂಗ್ ಎನಿಸುವ ಈ ದಿನಚರಿಯನ್ನು, ಬೇರೆ ದಾರಿಯಿಲ್ಲದೆ ಒಂದೆರಡು ವರ್ಷ ನಡೆಸಿಕೊಂಡು ಬಂದರೂ, ಅವನು ಕೊಂಚ ದೊಡ್ಡವನಾದ ಕೂಡಲೇ ದಿನಕ್ಕೊಂದು ಹೊಸ ಕತೆ ಪೂರೈಸಲಾಗದೆ ನಂಗೆ ಕತೆ ಗೊತ್ತಿಲ ್ನುವ ಮಂತ್ರ ಪಠಿಸತೊಡಗಿದೆ. ‘‘ನೀನೇ ಕತೆ ಬರೀತೀಯಲ್ಲ ಹೇಗೂ, ಅದೇ ಹೇಳು’’ ಅನ್ನುವ ಬೇಡಿಕೆ ಇಡತೊಡಗಿದ. ‘‘ನಾನು ಬರೆೋಂ ಕತೆ ನಿಂಗೆ ಅರ್ಥ ಆಗಲ್ಲ’’ ಅನ್ನತೊಡಗಿದೆ. ದಿನಾ ಇದೇ ಸಬೂಬು ಕೇಳಿ ರೋಸಿ ಹೋದ ಅವನು ಒಂದು ರಾತ್ರಿ ‘‘ಅಷ್ಟೊಂದು ಕತೆ ಬರೀತೀಯಾ, ನನ್ನ ಕತೆಗೆ ಬಹುಮಾನ ಬಂತು ಅಂತ ಬೇರೇ ಹೇಳ್ತೀಯ. ಅದರಲ್ಲಿ ಒಂದೂ ನಂಗೆ ಹೇಳೋಕೆ ಆಗಲ್ಲ ಅಂದ ಮೇಲೆ, ನೀನು ಏನು ಕತೆ ಬರೆದು ಏನು ಪ್ರೋಂಜನ ಹೋಗು’’ ಅಂದ.
ಅವತ್ತು ರಾತ್ರಿ ಅವನ ಮಾತು ಬಹಳ ಕಾಡಿ ಮರುದಿನ ಮಕ್ಕಳ ಕತೆ ಬರಿೋಂದಕ್ಕೆ ಯತ್ನಿಸಿ, ಸಾಧ್ಯವಾಗದೆ ಸುಮ್ಮನಾಗಿದ್ದೆ. ಮುಂದೆ ದೊಡ್ಡವನಾದ ಮೇಲೆ ನನ್ನ ಕತೆ ಓದುತ್ತಾನೆ ಅಂದುಕೊಂಡು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದೆ. ಆದರೆ, ನನ್ನ ಮಕ್ಕಳು ಮುಂದೆ ನನ್ನ ಕತೆಗಳನ್ನು ಓದುತ್ತಾರೆಂಬುದು ಆಗ ನನಗೆ ಸಮಾಧಾನ ಕೊಡುವ ಬದಲು ಹೆಚ್ಚು ತಳಮಳವನ್ನೇ ಉಂಟುಮಾಡಿತ್ತು. ಸುಮಾರು ಎಂಟು ವರ್ಷಗಳ ಹಿಂದೆ ನಾನು ಕತೆ ಬರೆಯಲು ಮತ್ತು ಅದು ಪ್ರಕಟವಾಗಲು ಶುರುವಾದಾಗ ನನಗೆ ಖುಷಿಯಾಗುವುದರ ಜೊತೆ ಜೊತೆಗೆ, ಕತೆಗಳನ್ನು ಜನ ಓದುತ್ತಾರಲ್ಲ ಎಂಬ ಆತಂಕ ಕಾಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅಪ್ಪ, ಅಮ್ಮ ನನ್ನ ಕತೆಗಳನ್ನು ಓದುತ್ತಾರೆ ಎಂಬುದು ದೊಡ್ಡ ಹಿಂಜರಿಕೆಗೆ ಕಾರಣವಾಗಿತ್ತು. ಈ ಆತಂಕ ಕೊಂಚಮಟ್ಟಿಗೆ ನನ್ನ ಕತೆಗಳನ್ನು ಓದುಗರು ಹೇಗೆ ಸ್ವೀಕರಿಸುತ್ತಾರೆ ಎಂಬುದಕ್ಕೆ ಸಂಬಂಧಪಟ್ಟಿದ್ದಿರಬಹುದಾದರೋ, ಬಹುಮಟ್ಟಿಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲದ ಓದುಗರು ನನ್ನ ಕತೆಯ ಜೊತೆಗೆ ನನ್ನನ್ನು ಯಾವ ರೀತಿ ಜೋಡಿಸಬಹುದು, ನನ್ನನ್ನು ಹೇಗೆ ‘ಜಡ್ಜ್’ ಮಾಡಬಹುದು ಎಂಬುದಕ್ಕೆ ಸಂಬಂಧಪಟ್ಟದ್ದಾಗಿತ್ತು. ಹಾಗೆ, ನೋಡಿದರೆ ನನ್ನ ಕತೆಗಳಾವುವೂ ತೀರಾ ವೈಯಕ್ತಿಕವಲ್ಲ. ಆದರೂ, ಮೊದ ಮೊದಲಿಗೆ ಕಾಡುತ್ತಿದ್ದ ಈ ತಳಮಳ ನಾನು ಕತೆಗಳನ್ನು ಬರೆಯುವ ರೀತಿಯನ್ನೂ ಮತ್ತು ನನ್ನ ವಿಷಯದ ಆ್ಂಕೆುಯನ್ನು ಪ್ರಭಾವಿಸುತ್ತಿದ್ದವು ಎಂಬುದು ಸುಳ್ಳಲ್ಲ.
ಇದಕ್ಕೆ ಮುಖ್ಯ ಕಾರಣ ಕತೆಗಾರ್ತಿಯಾಗುವುದಕ್ಕೂ ಮೊದಲು ಓದುಗಳಾಗಿದ್ದ ನನಗೆ, ಒಂದು ಕೃತಿಯಲ್ಲಿ ಲೇಖಕರನ್ನು ಹುಡುಕುವ ಓದುಗರ ಅತೀ ಸಹಜವಾದ ಮತ್ತು ಸಾಮಾನ್ಯವಾದ ಪ್ರಕ್ರಿೆುಂಯ ಅರಿವಿರುವುದು. ಎಲ್ಲಾ ಕತೆ, ಕವಿತೆ, ಕೃತಿಗಳೂ ಯಾವುದೋ ಒಂದು ರೀತಿಯಲ್ಲಿ ಬರಹಗಾರನ ಬದುಕು, ಚಿಂತನೆ, ಭಾವನೆಗಳಿಂದ ಪ್ರಭಾವಿತವಾಗಿರುತ್ತದೆ ಎಂಬುದು ನಿಜವೇ. ಕೃತಿಯಲ್ಲಿ ಒಂದು ಪಾತ್ರವಾಗಿೆುೀಂ, ಘಟನೆಯಾಗಿೋಂ, ಮಾತಾಗಿೋಂ, ಭಾವವಾಗಿೋಂ ಅವನು ಅಥವಾ ಅವಳು ನುಸುಳಿರುತ್ತಾರೆ. ಆದರೆ, ಎಲ್ಲ ಕೃತಿಗಳನ್ನೂ ಅದು ಬರೆದವರ ಅತ್ಮ ಚರಿತ್ರೆೆುೀಂನೋ ಎಂಬಂತೆ ನೋಡುವ ಮಂದಿಯೂ ಸಾಕಷ್ಟಿದ್ದಾರೆ. ತಮಾಷೆೆುಂಂದರೆ, ನನ್ನ ಕತೆ, ಕವನಗಳಲ್ಲಿ ‘‘ನಾನು’’ ತುಂಬಾ ಕಡಿಮೆ ಇರುತ್ತೇನೆ ಎಂಬುದು ಅರಿವಾದಾಗ, ಮೋಸ ಹೋದವರಂತೆ ಸಿಟ್ಟುಗೊಂಡ ಕೆಲ ಓದುಗರನ್ನೂ ನಾನು ನೋಡಿದ್ದೇನೆ. ‘ನಮ್ಮ ಬರಹಗಳಲ್ಲಿರುವುದು ನಮ್ಮ ಬದುಕೇ’ ಎಂದು ಪರಿಭಾವಿಸುವ ಇಂತಹ ಓದುಗರಿಂದ ನಾನು ಗಮನಿಸಿದಂತೆ ಹೆಚ್ಚು ನಷ್ಟವಾಗಿರುವುದು ಮಹಿಳಾ ಸಾಹಿತಿಗಳಿಗೆ. ಇಂತಹ ಕಾರಣಗಳಿಂದಾಗಿೆುೀಂ ಯಾವುದೇ ಭಿಡೆ ಇಲ್ಲದೆ ಬರೆಯುವುದು ಹಲವರಿಗೆ ಸಾಧ್ಯವಾಗುವುದೇ ಇಲ್ಲ.
ನಾನೇನೋ ಈಗ ಈ ಹಂತ ದಾಟಿದ್ದರೂ ‘‘ಇದು ನಿಮ್ಮ ಅನುಭವವಾ?’’ ಎಂಬ ಪ್ರಶ್ನೆಗೆ ಹೆದರಿ, ಅದೆಷ್ಟು ಕತೆಗಳು, ಕವಿತೆಗಳು ಹುಟ್ಟದೇ ಸತ್ತು ಹೋಗಿವೆೋಂ ಎಂದು ಒಮ್ಮೊಮ್ಮೆ ೋಂಚಿಸುತ್ತಿರುತ್ತೇನೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…