ದೇವಿ ಮಹಾತ್ಮೆಯನ್ನು ಓದುತ್ತಾ ಅದಕ್ಕೆ ಸಂಬಂಧಪಟ್ಟ ಕಥೆ ಪುರಾಣಗಳನ್ನೆಲ್ಲಾ ಕಲೆ ಹಾಕುತ್ತಾ ವ್ಯಾಖ್ಯಾನಿಸುತ್ತ ಇದ್ದೆ. ಪ್ರತಿಯೊಂದು ಕಥೆಯಲ್ಲೂ ದೇವಿಯ ವ್ಯಕ್ತಿತ್ವ ವಿಸ್ಮಯಕಾರಕ. ಅವಳ ನಡವಳಿಕೆ ಮಾತು ನಗೆ ಕೋಪ ಕರುಣೆ ಪ್ರೀತಿ ಎಲ್ಲವೂ ಅನಿರೀಕ್ಷಿತ ಮತ್ತು ಆಶ್ಚರ್ಯಜನಕ. ದೇವಿಯನ್ನು ಕೇವಲ ಹೆಣ್ಣು ಅಂದುಕೊಳ್ಳಿ ಅಥವಾ ಜಗನ್ಮಾತೆ ಜಗದ್ರಕ್ಷಿಣಿ ಅಂದುಕೊಳ್ಳಿ ಅವಳನ್ನು ಕುರಿತ ಎಲ್ಲವೂ ಅತಿಶಯ. ಹೀಗೇ ಚಿಂತಿಸುತ್ತಾ ವಿಚಿತ್ರ ಮನಸ್ಥಿತಿಗೆ ಒಳಪಟ್ಟಾಗ ಒಂದು ಬೇರೆೆುೀಂ ಪ್ರಪಂಚ ಒಳಹೊಕ್ಕ ಹಾಗಾಯಿತು. ಸರಸರನೆ ಕವನದ ಸಾಲುಗಳು ಜಲಬುಗ್ಗೆಯ ಹಾಗೆ ತನ್ನಿಂತಾನೇ ಹೊಮ್ಮತೊಡಗಿದವು.
ಆದರೆ ಅಲ್ಲಿ ಎಂದಿನಂತೆ ಅಥವಾ ಎಲ್ಲರೂ ಬರೆಯುವ ಹಾಗೆ ಸ್ತೋತ್ರವಾಗಿರಲಿಲ್ಲ ಅವು: ಅವಳನ್ನು ಇವತ್ತಿಗೆ ಕರೆತಂದು ಎದುರಿಗೆ ಕೂರಿಸಿಕೊಂಡು ಮಾತನಾಡಿದ ಹಾಗೆ. ಒಂದು ಕಡೆ ದೇವಿಯ ಬಗ್ಗೆ ವರ್ಣಿಸುವಾಗ ಹೇಳುತ್ತಾರೆ ‘‘ಸ್ತ್ರೋತ್ರ ಮಾತ್ರೇಣ ಸಿದ್ಧ್ಯತಿ’’ ಅವಳು. ಅಂದರೆ ಕೇವಲ ಸ್ತ್ರೋತ್ರ ಮಾಡಿದರೆ ಸಾಕು, ಅವಳು ಸಿದ್ಧಿಯಾಗುತ್ತಾಳೆ. ಇನ್ನೊಂದರ್ಥ ಸ್ತೋತ್ರ ಮಾಡುವುದರಿಂದ ಮಾತ್ರವೇ ಅವಳು ಸಿದ್ಧಿಯಾಗುವುದು.
ಸ್ತೋತ್ರವೆಂದರೆ? ಅವಳನ್ನು ವರ್ಣಿಸಿ ಸ್ತುತಿಸುವುದು ತಾನೇ? ಅಥವಾ ಅಷ್ಟೆಯೇ?!
ಅವಳ ಕಥೆಯನ್ನು ಪದೇಪದೇ ಕೇಳಿಸಿಕೊಳ್ಳುವುದು ಅಥವಾ ಓದುವುದು. ಜೊತೆಗೆ ಧ್ಯಾನ, ಜಪ. ಸರಳವಾಗಿ ಪೂಜೆ.
ಸಪ್ತಶತೀ ಪಾರಾಯಣ. ಜೊತೆಗೆ ಸೂಕ್ತಗಳು – ಶ್ರೀ ಸೂಕ್ತ, ದುರ್ಗಾ ಸೂಕ್ತ, ವಾಕ್ ಸೂಕ್ತ. ಇಷ್ಟು ಹೇಳಿ ಮಂಗಳಾರತಿ ಮಾಡಿದರೆ ಒಲಿಯುತ್ತಾಳೆ. ಹೌದೇ?
‘‘ಏನು ಕೊಟ್ಟರೆ ಒಲಿದಾಳು ತಾಯೀ? ಎಲ್ಲಕ್ಕಿಂತ ಶ್ರೇಷ್ಠ ಕಾಣಿಕೆ ಯಾವುದು ಅರ್ಚಕರೇ?’’
‘‘ತಾಯಿ ರಕ್ತ ಕೇಳುತ್ತಾಳೆ ತಾಯೀ
ಕೊಟ್ಟರೆ ಕೊಡಿ ಮರಿ,
ಇಲ್ಲವೇ ಎರಡು ಕೋಳಿ’’
ಇಲ್ಲಿಗೇ ನಿಂತುಹೋಯಿತು ಕವನ. ನಾವು ತಿನ್ನುವರಲ್ಲವಲ್ಲಾ? ಹೇಗೆ ಕೊಡುವುದು ಮರಿ, ಕೋಳಿ? ಹಾಗಾದರೆ ದೇವಿಯನ್ನು ಒಲಿಸಿಕೊಳ್ಳುವ ಮಾರ್ಗ ಯಾವುದು? ಸ್ತೋತ್ರ ಮಾತ್ರೇಣ ಸಿದ್ಧತ್ಯೃತಿ? ಅಷ್ಟರಲ್ಲಿ ಅರ್ಚಕರು ಹೇಳಿದರು
‘‘ಹಾಗಾದರೆ ಎರಡು ತೆಂಗಿನ ಕಾಯಿ!’’
ಫಳಾರನೆ ಮಿಂಚಿತು ಗರ್ಭಗುಡಿಯಲ್ಲಿ
ಅವಳ ಮೂಗುತಿಯೋ ನಕ್ಕದ್ದಕ್ಕೆ ಕಂಡ ಹಲ್ಲಿನ ಕಾಂತಿಯೋ?
ಹೂಹಣ್ಣು ಕಾಯಿಗೆ ಜೀವವಿಲ್ಲವೋ?
ಒಂದು ಹೂವೊಳಗೆ ಒಂದು ತೋಟ
ಒಂದು ಹಣ್ಣೊಳಗೆ ಒಂದು ಕಾಡು
ಕಾೆುಂಂದರೆ ಅದು ಕಲ್ಪವೃಕ್ಷ.’’
ಅಲ್ಲವೇ ಮತ್ತೆ? ಅಷ್ಟರಲ್ಲಿ ದೇವಿ ಕೇಳಿದಳು ‘‘ಮರಿಯ ಕೊಚ್ಚಲಾರದವಳು ಕಾಯಿ ಚಚ್ಚುವೆಯಾ? ಅಲ್ಲಿ ಚಿಲ್ಲನೆ ಚಿಮ್ಮಿದರೆ ಇಲ್ಲಿ ಟೊಳ್ಳನೆ ಸಿಡಿಯುತ್ತದೆ’’
ಆದರೆ ನನ್ನ ಹೂಹಣ್ಣು ಕಾಯಿಯ ಅರ್ಪಣೆಯ ಸಮಯಾಚಾರದ ಹಂಗು ಇನ್ನೂ ಬಿಟ್ಟಿಲ್ಲ ನನ್ನನ್ನು. ನಾನೂ ವಾದ ಮಾಡಿದೆ
‘‘ಇದು ಬರಿಯ ತಣ್ಣಗಿನ ನೀರು ತಾಯಿ
ಅದರಂತೆ ಕೆಂಪು ಬಿಸಿ ರಕ್ತವಲ್ಲ’’
ಅಹಹಾ ಎಂಥಾ ವಾದ ಹೂಡಿದೆ ನಾನು, ಸೋತೇ ಬಿಡಬೇಕು ದೇವಿ ಅಂತ ನನ್ನ ಭ್ರಮೆ. ಆದರೆ ಜ್ವಾಲಾಮುಖಿ ಅಮ್ಮನವರ ಸನ್ನಿಧಿಯಲ್ಲಿ ಗೆಲುವು ಬುದ್ಧಿಗೋ ಭಕ್ತಿಗೋ?
‘‘ಇದು ಇದರ ರಕ್ತ! ಜೀವ ಸೃಷ್ಟಿಯ ದ್ರವ್ಯ’’ ಅಂತ ಮೊದಲ ಪೆಟ್ಟು ಕೊಟ್ಟಳು ತಾಯಿ.
ಮತ್ತೆ ಇನ್ನಷ್ಟು ಸ್ಪಷ್ಟೀಕರಣ ಬೇರೆ!
ವರ್ಣದ ಹಂಗಿಲ್ಲ ಇದಕ್ಕೆ. ಗರ್ಭಕೋಶದ ಹಾಗೆ
ಕೂಡಿಟ್ಟು ಕಾಪಾಡಿ ಕುಡಿ ಮೊಳೆಯುವಾಗ
ಜತನದಲ್ಲಿ ಹೊರಕಳಿಸುವುದು ಚಿಗುರು.
ಮರಿಯ ಕೊರಳನುಳಿಸಿ ಬೀಗಬೇಕಿಲ್ಲ
ಇದೇ ಭ್ರೂಣ ಹತ್ಯೆ!’’
ಇನ್ನು ನನ್ನ ಬುದ್ಧಿ ಮತ್ತು ಮನಸ್ಸು ಎರಡೂ ಅಲ್ಲಿಗೇ ಸ್ತಬ್ಧವಾಯಿತು. ಕವನವೂ ಇಲ್ಲ ಮಣ್ಣಂಗಟ್ಟಿಯೂ ಇಲ್ಲ.
ಎದ್ದು ದೇವಸ್ಥಾನದ ಪ್ರಕಾರದ ಪ್ರದಕ್ಷಿಣೆ ಮಾಡಿದೆ. ಹೊರಗೆ ತಮಟೆ ಬಡಿಯಲು ಶುರುವಾಗಿತ್ತು. ಜಡಜಣುಕ್ಕು..ನಕ್ಕು ನಕ್ಕು…
ಕಾಲು, ತಲೆ ತನ್ನಿಂತಾನೇ ಕುಣಿಯತೊಡಗಿದವು. ಒಳಗಿನ ಗೊಂದಲಗಳಿಗೆಲ್ಲ ತೆರೆ ಬಿತ್ತು.
ಜೋರಾಗಿ ಕೂಗಿದೆ
‘‘ತಪ್ಪಾಯಿತು ತಾಯೀ, ಎಲ್ಲ ನಿನ್ನದೇ ಮಾೆುಂ
ಏ …ತನ್ನಿರೋ ಮರಿಯ, ಬಡಿಯಿರಿ ತಮಟೆ
ತಾಯಿ ರಕ್ತ ಕೇಳುತ್ತಾಳೆ ತಣಿಸಿ ತಣಿಸಿ
ಈಗದು ಬಿಸಿ ರಕ್ತವಲ್ಲ
ಬರಿಯ ತಣ್ಣನೆಯ ನೀರು.’’
ಹೀಗೇ ಒಂದೊಂದಾಗಿ ದೇವಿ ಕಳಚಿದಳು ಮಾೆುಂಯ ಮುಸುಕು. ಸರಸರನೆ ಹೊರಹರಿಯಿತು ಜ್ವಾಲಾಮುಖಿ ಅಮ್ಮನವರ ಸರಣಿ ಕವನಗಳು. ‘‘ಮಹಾಲಿಂಗ – ಮಹಾ ಕಾಳಿ’’, ‘‘ಅತಿರತಿ’’ ‘‘ಕೇಶಾಕರ್ಷಣ ವಿಹ್ವಲಾಂ’’, ‘‘ಮಾತೇ ಮೃತ್ಯು’’, ‘‘ಶಾಪ ಮರುಶಾಪ’’ ಇತ್ಯಾದಿ ಪುಂಖಾನುಪುಂಖ! ಉರಿಮಾರಿ ಅವಳು. ಬೆಂಕಿ, ಚಾಮುಂಡಿ. ಅವಳ ಬಗ್ಗೆ ಕವನ ಬರೆದರೆ ಮೈೆುಂಲ್ಲಾ ಬೆವರು! ಕೈ ನಡುಕ. ಚಿತ್ತಚಂಚಲ. ದೇವಿಯ ಬಗ್ಗೆ ಕವನ ಬರೆಯುವುದು ನನ್ನ ಪ್ರಯತ್ನ ಅಲ್ಲವೇ ಅಲ್ಲ. ಬರೆಸಿಕೊಳ್ಳುವವಳು ಅವಳೇ. ಪೂಜಿಸಿಕೊಳ್ಳುವವಳೂ ಅವಳೇ.
ದೇವಿಯ ಸಿರಿಮುಡಿಗೆ ಕೈಹಾಕಿದವರಿಗಾದ ದುರ್ಗತಿಯ ಬಗ್ಗೆ ನೂರೆಂಟು ಕಥೆ.
ಅವಳ ಅಡಿಗೆರಗಿದರೆ ನಿರಾಯಾಸ ಕಾವ್ಯ ಧಾರೆ!
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…