ಆಂದೋಲನ ಪುರವಣಿ

ವನಿತೆ ಮಮತೆ : ಹಕ್ಕಿಯ ಬೆನ್ನುಬಿದ್ದರೆ ದೂರ ದೂರವೆನಿಸದು

ಅಪರಿಮಿತ ಉತ್ಸಾಹಕ್ಕೆ ಲೀಲಾ ಅಪ್ಪಾಜಿ ಅವರನ್ನು ಆರಾಮವಾಗಿ ಉದಾಹರಿಸಬಹುದು. ನಿವೃತ್ತಿಯ ಜೀವನವನ್ನು ತಮ್ಮಿಷ್ಟದ ಫೋಟೋಗ್ರಫಿ ಪ್ರಪಂಚಕ್ಕೆ ಮೀಸಲಿಟ್ಟು ಕಾಡು, ಮೇಡು, ಬೆಟ್ಟ, ಬಯಲುಗಳನ್ನು ಹತ್ತಿಳಿದು ಹಕ್ಕಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಮಂಡ್ಯ ನೆಲದ ಸಾಧಕಿ ಲೀಲಾ ಅಪ್ಪಾಜಿ ಇಲ್ಲಿ ತಮ್ಮ ಬದುಕು ಮತ್ತು ಹಕ್ಕಿ ಛಾಯಾಗ್ರಹಣದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿಕೊಂಡಿದ್ದಾರೆ.

 

ಮೂವತ್ತೆ ದು ವರ್ಷ ಕನ್ನಡ ಉಪನ್ಯಾಸಕಿಯಾಗಿ, ನಂತರ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡಿ ನಿವೃತ್ತಿಯ ನಂತರ ಹಕ್ಕಿ ಛಾಯಾಗ್ರಹಣದ ಕ್ಷೇತ್ರಕ್ಕೆ ಬಂದೆ. ಕ್ಯಾಮೆರಾದ ಒಡನಾಟ ಆ ಮೊದಲೇ ಇದ್ದರೂ ಸೀಮಿತ ಉದ್ದೇಶಕ್ಕಾಗಿ ಬಳಕೆಯಾಗುತ್ತಿತ್ತು. ನನ್ನ ಸಂಶೋಧನಾ ಅಧ್ಯಯನ ಹಾಗೂ ಪ್ರಿನ್ಸಿಪಾಲ್ ಆದ ಬಳಿಕ ಎಲ್ಲ ಕಾರ್ಯಕ್ರಮಗಳಿಗೆ ಕ್ಯಾಮೆರಾ ಬಳಸುತ್ತಿದ್ದೆ. ಸಾಹಿತ್ಯದ ಪಾಠ ಮಾಡುವಾಗ ಅದರಲ್ಲೂ ತೇಜಸ್ವಿ ಕುರಿತು ಹೇಳುವಾಗ ಕ್ಯಾಮರಾ ಬಗ್ಗೆ ವಿಶೇಷ ಸೆಳೆತ ಇದ್ದೇ ಇತ್ತು. ಅದರಲ್ಲೂ ಅವರ ಛಾಯಾಗ್ರಹಣ ಹಾಗೂ ಪ್ರೋಂಗಗಳ ಬಗ್ಗೆ ಕುತೂಹಲ ಇತ್ತು. ಕೆಲಸದ ಜವಾಬ್ದಾರಿಯ ಒತ್ತಡ ಕಳೆದ ಬಳಿಕ ಅದುವರೆಗೂ ಹೆಚ್ಚು ಕೆಲಸ ಮಾಡದಿದ್ದ ಕ್ಷೇತ್ರದ ಆ್ಂಕೆುಯಾಗಿ ಹಕ್ಕಿ ಛಾಯಾಗ್ರಹಣ ಆರಿಸಿಕೊಂಡೆ. ಪಕ್ಷಿ ಜೊತೆಗೆ ಪರಿಸರವೂ ಎಷ್ಟು ಮಹತ್ವದ್ದೆಂಬುದೂ ಅರಿವಾಯಿತು. ಹಕ್ಕಿಗಳ ವೈವಿಧ್ಯತೆ ಬಣ್ಣ, ಕೊಕ್ಕು ಮತ್ತೊಂದು ಆಕರ್ಷಕ.

ಹಕ್ಕಿ ಕಲಿಸಿದ ಮೌನ
ಮಾತುಗಾರಿಕೆಯ ಉಪನ್ಯಾಸಕಿಯಾಗಿ, ಭಾಷಣಕಾರ್ತಿಯಾಗಿ ಕಾಲ ಕಳೆದಿದ್ದ ನನಗೆ ಹಕ್ಕಿ ಮೌನ ಕಲಿಸಿದೆ, ಏಕಾಗ್ರತೆ ತಂದಿದೆ, ಹೊಸ ಉತ್ಸಾಹ ತುಂಬಿದೆ. ದೈಹಿಕ ನೋವು ಆಯಾಸಗಳನ್ನು ಮರೆಸಿ ಉತ್ಸಾಹ ತುಂಬಿಸಿದೆ. ಅಲ್ಲಿಯ ತನಕ ನಾ ಕಾಣದೇ ಇದ್ದ ಹೊಸತೊಂದು ಲೋಕಕ್ಕೆ ಕರೆದೊಯ್ದಿದೆ. ಬೇರೆ ಎಲ್ಲ ಫೋಟೋಗ್ರಾಫಿಗಳಿಗಿಂತ ಹಕ್ಕಿ ಫೋಟೋಗ್ರಾಫಿಯಲ್ಲಿ ತೇಜಸ್ವಿ ಹೇಳಿದಂತೆ ಯಾವುದೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಹಿಡಿಯಷ್ಟಿರುವ ಹಕ್ಕಿ ಅನಂತದಷ್ಟು ತಾಳ್ಮೆ ಕಲಿಸುತ್ತದೆ. ಹಕ್ಕಿಯ ಚಲನವಲನಗಳ ಅರಿವು, ಆಹಾರಾಭ್ಯಾಸ, ಬ್ರೀಡಿಂಗ್ ಸೀಜನ್ ಇತ್ಯಾದಿಗಳ ಜ್ಞಾನ ಅತ್ಯವಶ್ಯ.

ಎಲ್ಲದರ ಹಿಂದೆ ಇದೆ ರೋಚಕ ಹಿನ್ನೆಲೆ
ನಿಸದು. ಭಾರತದ ಬಹುತೇಕ ರಾಜ್ಯಗಳಲ್ಲಿ ಅಡ್ಡಾಡುವಾಗ ಆ ಪ್ರದೇಶದ ವಿಶಿಷ್ಟ ಹಕ್ಕಿಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ. ಕಾಡು, ಕಡಲು, ಹಿಮಾಲಯ… ಹೀಗೆ ಎಲ್ಲೆಲ್ಲೂ ಹೊಸ ಹೊಸ ಅನುಭವಗಳು ಸಾಕಷ್ಟಾಗಿವೆ. ಪ್ರತಿ ಹಕ್ಕಿಯ ಹುಡುಕಾಟದ ಹಿಂದೆ ರೋಚಕ ಹಿನ್ನೆಲೆ,ಅಲೆತ ಇದ್ದೇ ಇದೆ. ಉಸಿರುಗಟ್ಟಿದ ಅನುಭವಗಳಾದರೂ ಬಯಸಿದ ಹಕ್ಕಿ ಸಿಕ್ಕಿದಾಗ ಸಂಭ್ರಮವೂ ಮುಗಿಲು ಮುಟ್ಟಿರುತ್ತದೆ.

ಹಕ್ಕಿ ಫೋಟೋಗ್ರಾಫಿ ಒಂದು ಧ್ಯಾನ. ತನ್ಮಯತೆ, ತಾಳ್ಮೆ ಇದ್ದರೆ ನೀವು ಬಯಸಿದ ಚಿತ್ರ ತೆಗೆಯಲು ಸಾಧ್ಯವಾಗಬಹುದು. ಕ್ಯಾಮೆರಾ ಸಲಕರಣೆಗಳು ಎಷ್ಟು ಅಗತ್ಯವೋ ಅಷ್ಟೆ ಅವನ್ನು ಸಮರ್ಪಕವಾಗಿ ಸಾಂದರ್ಭಿಕವಾಗಿ ಬಳಸುವ ತಿಳಿವಳಿಕೆಯೂ ಅತ್ಯಗತ್ಯ.

andolana

Recent Posts

ವಿಭಿನ್ನ ಓದಿಗೆ ಆಹ್ವಾನಿಸುವುದೇ ಉತ್ತಮ ಸಾಹಿತ್ಯ

`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…

5 mins ago

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

10 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

11 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

11 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

12 hours ago