ಹಾಡು ಪಾಡು

ಮೊಬೈಲಾಸುರನನ್ನು ವಧಿಸುವ ದೇವತೆ ಎಲ್ಲಿರುವಳೋ

-ಸದಾನಂದ ಆರ್

‘‘ಬರದ ಛಾಯೆಯ ನಡುವೆ ೨೦೨೩ರ ದಸರಾ ಅಂತ್ಯ’’ ಅನ್ನೋ ಸುದ್ದಿ ಓದುತ್ತಿದ್ದವನನ್ನು ‘‘ಓ…..ದಸರಾದಲ್ಲಿ ರಾವಣಾಸುರನನ್ನೂ ಸುಡುತ್ತಾರೆ. ದೆಹಲಿ ಎಷ್ಟು ದೊಡ್ಡ ಬೊಂಬೆ ನಿರ್ಮಿಸಿದ್ದಾರೆ ನೋಡಿಲ್ಲ’’ ಕರೆದು ಇಂಗ್ಲಿಷ್ ಪತ್ರಿಕೆಯಲ್ಲಿದ್ದ ಚಿತ್ರವನ್ನು ತೋರಿಸಿದಳು ಮಗಳು. ‘‘ಹೌದು. ದಸರಾದಲ್ಲಿ ರಾವಣಾಸುರನ ದಹನ ಮಾಡುವ ಸಂಪ್ರದಾಯವೂ ಇದೆ’’ ಎಂದೆ. ಮತ್ತೇನು ಪ್ರಶ್ನೆ ಕೇಳದೆ ಸುಮ್ಮನಾದಳು. ನಾನು ಪತ್ರಿಕೆಯಿಂದ ತಲೆಯೆತ್ತಿ ನೋಡಿದರೆ ಅವಳಾಗಲೇ ತನ್ನ ಮೊಬೈಲ್‌ನಲ್ಲಿ ಬಿಜಿಯಾಗಿದ್ದಳು. ಅವಳ ಕೈಯಲ್ಲಿದ್ದ ಮೊಬೈಲ್ ನೋಡುತ್ತಿದ್ದಂತೆ ಮೊಬೈಲ್ ಫೋನಿನ ಚಟ ನಮ್ಮ ಕಾಲದ ಪ್ಯಾಂಡಮಿಕ್ ಅನ್ನುವ ವರದಿಯನ್ನು ಓದಿದ ನೆನಪಾಯಿತು. ಕೋವಿಡ್‌ನ ನಂತರ ಎಲ್ಲರಿಗೂ ಪ್ಯಾಂಡಮಿಕ್ ಅನ್ನೋ ಪದ ಪರಿಚಿತ ? ದೇಶಗಳ ಮಿತಿಯನ್ನು ದಾಟುವ ಸರ್ವವ್ಯಾಪಿಯಾದ ರೋಗ. ಪಿಯು ಹಂತದಲ್ಲಿ ಪಾಠ ಮಾಡುವ ಮೇಷ್ಟ್ರಾಗಿ ಮೊಬೈಲ್‌ನ ಹಾವಳಿಯ ಪ್ರಮಾಣವನ್ನು ಕಣ್ಣಾರೆ ಕಂಡಿರುವ ನನಗೆ ಮೊಬೈಲ್ ಚಟ ಪ್ಯಾಂಡಮಿಕ್ ಅನ್ನೋದನ್ನು ಒಪ್ಪುವುದು ಕಷ್ಟವೆನಿಲಿಲ್ಲ. ಜೊತೆಗೆ ನಮ್ಮನ್ನು ಕಾಡುತ್ತಿರುವ ರಕ್ಕಸ ಈ ಮೊಬೈಲಾಸುರ!

ಬಹಳ ಹಿಂದೆ ವೈದ್ಯಕೀಯ ಕ್ಷೇತ್ರ ಪ್ರಗತಿ ಸಾಧಿಸುವುದಕ್ಕೆ ಮೊದಲು, ಇಂತಹ ದೊಡ್ಡ ರೋಗಗಳು ಬಂದರೆ ಅದಕ್ಕೊಂದು ದೇವರ ಹೆಸರು ನೀಡಿ, ಪೂಜಿಸಿ, ಬಲಿ ನೀಡಿ ತಮ್ಮನ್ನು ರಕ್ಷಿಸಿಕೊಳ್ಳುವ ಕೆಲಸವನ್ನು ಜನ ಮಾಡುತ್ತಿದ್ದರು. ಇದರ ಕುರಿತು ಅನೇಕ ಜನಪದ ಕಥೆಗಳು ಮತ್ತು ಪುರಾಣ ಕಥೆಗಳು ಇದ್ದಾವೆ. ಹಾಗೆ ನೋಡಿದರೆ, ದುಷ್ಟ ಶಕ್ತಿ ಮತ್ತು ದೈವಿ ಶಕ್ತಿಗಳ ನಡುವಿನ ಕದನವೇ ಈ ಕಥೆಗಳ ಹೂರಣ. ನವರಾತ್ರಿಯಲಿ ಪೂಜಿತರಾಗುವ ದುರ್ಗೆಯರಿರಲಿ, ಮೈಸೂರಿನ ಚಾಮುಂಡಿ ಮಾತೆಯಿರಲಿ, ದಹನವಾಗುವ ರಾವಣಾಸುರನಿರಲಿ-ಈ ಎಲ್ಲಾ ಕಥೆಗಳಲ್ಲೂ ದೈವೀ ಶಕ್ತಿ ಅಂತಿಮವಾಗಿ ಜಯಗಳಿಸುತ್ತದೆ. ಹೀಗೆ ದುಷ್ಟ ಶಕ್ತಿಯಿಂದ ಪೀಡಿತನಾಗಿದ್ದ ಮಾನವ ತನ್ನನ್ನು ರಕ್ಷಿಸಿದ ದೈವೀ ಶಕ್ತಿಯನ್ನು ಸ್ತುತಿಸಿ ಪೂಜಿಸುವ ಘಳಿಗೆಯೇ ದಸರಾ ? ನವರಾತ್ರಿ ಹಬ್ಬಗಳಾಗುತ್ತವೆ. ಜನರ ಜಾತ್ರೆಗಳಾಗುತ್ತವೆ.

‘‘ಅಯ್ಯೋ ಬಿಡಿ. ಎಂತಹ ದುಷ್ಟ ಶಕ್ತಿ ಅವತರಿಸಿದರೂ, ದೇವರಿದ್ದಾನೆ. ದೈವೀ ಶಕ್ತಿಯ ಮುಂದೆ ಯಾರ ಆಟವೂ ಸಾಗದು ಅಂದಿರಾ?’’ ಕಲಿಯುಗದ ರಕ್ಕಸನಾದ ಮೊಬೈಲಾಸುರನ ಮಾಯಾಜಾಲದಲ್ಲಿರುವವರಿಗೆ ‘‘ಅದುವೇ ನಮ್ಮನೆ ದೇವರು’’ ಎಂದಾಗಿದೆ. ‘‘ನಾಶ ಪಡಿಸು’’ ದೇವರೇ ಎನ್ನುವ ಮಾತಿರಲಿ, ‘‘ನಮ್ಮನ್ನು ಕಾಪಾಡು’’ ಎಂದು ಅಸಲಿ ದೇವರಿಗೆ ಮೊರೆಯಿಡುವ ವಿವೇಚನೆಯೇ ಇಲ್ಲವಾಗಿದೆ.
ಪುರಾಣ ಕಥೆಗಳಲ್ಲಿ ನಾವು ನೋಡುವಂತೆ, ಮೊಬೈಲಾಸುರ ವರವಾಗಿಯೇ ಮಾನವರ ಬದುಕಿನಲ್ಲಿ ಜಾಗಪಡೆದುಕೊಂಡಿದ್ದು. ಮನೆಯಿಂದ ಹೊರಬರದ ಸ್ಥಿತಿಯಲ್ಲಿ ಆಪ್ತರೊಂದಿಗೆ ಮಾತನಾಡಲು, ವೈದ್ಯರ ಪರೀಕ್ಷೆಗೆ ಒಳಪಡಲು, ಮಕ್ಕಳಿಗೆ ಪಾಠ ಕಲಿಸಲು ಮೊಬೈಲ್ ಆ ದೇವರೇ ನೀಡಿದ ವಿಶೇಷ ಅವಕಾಶವಾಗಿತ್ತು.

ಕೋವಿಡ್ ಮಾರಿ ಹೋಯಿತು. ಶಾಲೆಗಳು ತೆರೆದವು. ಆದರೆ ತರಗತಿಯ ಕಪ್ಪು/ಹಸಿರು ಹಲಗೆ ಮಕ್ಕಳಿಗೆ ಸಪ್ಪೆಯಾಯಿತು. ಆಕರ್ಷಕ ಚಿತ್ರಗಳನ್ನು ಉಣಬಡಿಸುವ ಮೊಬೈಲ್ ಸ್ಕ್ರೀನ್‌ನಲ್ಲಿ ಅವರು ಲೀನವಾಗ ಬಯಸಿದರು. ಮೇಷ್ಟ್ರು ಹಠಕ್ಕೆ ಬಿದ್ದರು. ಮೊಬೈಲ್‌ನ್ನು ಮುಟ್ಟುಗೋಲು ಹಾಕಿಕೊಂಡರು. ಮಾಯಾವಿಯ ಪೂರ್ಣ ಹಿಡಿತದಲ್ಲಿದ್ದ ಮಕ್ಕಳೇನು ಕಡಿಮೆಯೇ? ಅವರು ಹಠ ಹಿಡಿದರು. ಮೊಬೈಲ್ ಕೊಡದಿದ್ದರೆ, ಸಾಯುವೇ ಎಂದು ಬೆದರಿಸಿದರು. ಕೆಲವರು ಸತ್ತರು ಕೂಡ. ಮೇಷ್ಟ್ರಿಗೆ ಬಿಟ್ಟರೆ ಕಲಿಕೆಯಿಲ್ಲ-ಬಿಡಿದಿದ್ದರೆ ಮಕ್ಕಳ ಜೀವವಿಲ್ಲ ಅನ್ನೋ ಸ್ಥಿತಿ ಬಂತು. ಕೊನೆಗೆ ಪೋಷಕರು ಉಳಿಯಲಿ ಜೀವ ಅನ್ನೋ ನಿರ್ಧಾರಕ್ಕೂ ಬಂದರು. ಇಂದಲ್ಲ ನಾಳೆ ಎಲ್ಲವೂ ಸರಿಯಾಗಬಹುದೆಂಬೋ ಆಸೆ ಪೋಷಕರದ್ದು.
ಮುಂದೊಂದು ದಿನ ಎಲ್ಲವೂ ಸರಿ ಹೋಗುವುದೇ? ಖಂಡಿತ ಇಲ್ಲ. ಮೊಬೈಲಾಸುರನ ಬತ್ತಳಿಕೆಯಲ್ಲಿ ಹಲವು ಬಾಣಗಳಿವೆ. ಈ ಬತ್ತಳಿಕಯೂ ಮಹಾಭಾರತದ ಅಕ್ಷಯಪಾತ್ರೆಯಂತೆ. ಅಪರಿಮಿತ. ಡಿಜಿಟಲ್ ಅಮೃತವನ್ನು ಅನುದಿನವು ಹೀರುವ ಮೊಬೈಲಾಸುರನಿಗೆ ಸಾವು ಎನ್ನುವುದೇ ಇಲ್ಲ.

ಕಲಿಗಾಲದ ಅಸುರನಾದ ಮೊಬೈಲಾಸುರ ಎಲ್ಲರಲ್ಲೂ ಇರುವ ಪಶುತ್ವವನ್ನು ಉದ್ದೀಪನಗೊಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾನೆ. ಮಾನವ ಸಾವಾಜಿಕ ಜೀವಿಯಾಗಿ ವಿಕಸನಗೊಂಡಾಗ ಅವನಲ್ಲಿದ್ದ ಪಶು ಸ್ವಭಾವ ಹಿನ್ನೆಲೆಗೆ ಸರಿದಿತ್ತು. ಕಳೆದ ನೂರು ವರ್ಷಗಳಿಂದ ಔಪಚಾರಿಕ ಶಿಕ್ಷಣದ ಮೂಲಕ ಮಾನವನನ್ನು ಮತ್ತಷ್ಟು ಸಂಘಜೀವಿಯಾಗಿಸುವ ಸಂಘಟಿತ ಪ್ರಯತ್ನ ನಿರಂತರ ಸಾಗಿತ್ತು. ಇದೆಲ್ಲವನ್ನೂ ಕೇವಲ ಐದಾರು ವರ್ಷಗಳಲ್ಲಿ ಮೊಬೈಲಾಸುರ ಮುರಿಯುವಲ್ಲಿ ಗೆಲವು ಸಾಧಿಸಿದ್ದಾನೆ. ಮಾನವರೀಗ ಜಾತಿ, ಧರ್ಮ, ಭಾಷೆ ಮುಂತಾದುವಗಳ ಹೆಸರಲ್ಲಿ ತಮ್ಮಲ್ಲಿರುವ ಮೃಗತ್ವವನ್ನು ಜಾಲತಾಣಗಳಲ್ಲಿ ರಾಚುತ್ತಿದ್ದಾರೆ. ಮಾನವ ತಾನೇ ದಾನವನಾಗುವ ಹಾದಿಯಲ್ಲಿದ್ದಾನೆ!

ಎಲ್ಲರೂ ಈಗ ಮೊಬೈಲಾಸುರನ ದಾಸರೇ. ಒಂದೆರಡು ಘಳಿಗೆ ಮೊಬೈಲ್ ಕಾಣದಿದ್ದರೆ ಇವರು ಬೆವರುತ್ತಾರೆ, ಬೆದರುತ್ತಾರೆ. ಮನೋ ವೈದ್ಯರು ಇದನ್ನು ಚಟ ಎನ್ನುತ್ತಾರೆ. ಇದೊಂದು ಸರ್ವವ್ಯಾಪಿಯಾಗಿರುವ ಚಟ ? ಚಟದ ಎಪಿಡಮಿಕ್ ಅನ್ನೋದು ಅವರ ನಿಲುವು. ಸತ್ಯವನ್ನು ಕಾಣುವ ಅರ್ಥವಾಡಿಕೊಳ್ಳುವ ಮಾನವರು ಬೇಕಷ್ಟೇ? ಮಾನವರೆಲ್ಲಾ ಮೊಬೈಲ್ ಹಿಡಿದು ಸೆಲ್ಛಿ ತೆಗೆದು, ಜಾಲತಾಣಗಳಲ್ಲಿ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ. ದೈವೀ ಶಕ್ತಿ ಮಾತೆಯರ ಅವತಾರದಲ್ಲಿ ದುಷ್ಟ ಶಕ್ತಿಯನ್ನು ನಾಶಪಡಿಸಿದ್ದನ್ನು ನವರಾತ್ರಿ ಎಂದೋ ದಸರವೆಂದೋ ವಿಜೃಂಭಣೆಯಿಂದ ಆಚರಿಸುವುದಷ್ಟೇ ಅಲ್ಲದೆ, ಆಚರಿಸಿದ್ದನ್ನು ವಾಟ್ಸ್‌ಅಪ್‌ನಲ್ಲಿ ಇನ್‌ಸ್ಟಾದಲ್ಲಿ ಇಲ್ಲವೇ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ವಾಡುವುದರಲ್ಲೇ ಮುಳುಗಿ ಹೋಗಿದೆ. ಈ ಮಾಯಾ ಲೋಕವನ್ನೇ ವಾಸ್ತವವೆಂದು ಗ್ರಹಿಸಿ ಸುಖವಾಗಿದ್ದಾರೆ. ಇವರನ್ನು ಬಂಧಿಸಿರುವ ಮಾಯಾ ಶಕ್ತಿಯಿಂದ ಬಿಡುಗಡೆಗೊಳಿಸುವವರು ಯಾರು?

andolanait

Recent Posts

ಆಕಸ್ಮಿಕ ಬೆಂಕಿ : ಒಕ್ಕಣೆ ಕಣದ ರಾಗಿ ಫಸಲು ನಾಸ

ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…

9 hours ago

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು ; ಸದನ ಕಲಾಪಗಳಿಂದ ದೂರ ಉಳಿದ ಸಿಎಂ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…

9 hours ago

ಶ್ರೀಕಂಠೇಶ್ವರ ದೇವಾಲಯದಲ್ಲಿ ಅಕ್ರಮ?; ತನಿಖೆ ಆರಂಭಿಸಿದ ಎಸಿ ತಂಡ

ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…

9 hours ago

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…

9 hours ago

ಧರ್ಮಸ್ಥಳ ಪ್ರಕರಣ : ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…

9 hours ago

ಕೈಗಾರಿಕೆ ಸ್ಥಾಪನೆಗೆ 500 ಎಕರೆ ಜಾಗ ಕೊಡುತ್ತೇನೆ : ಎಚ್‌ಡಿಕೆ ಯಾವ ಕೈಗಾರಿಕೆ ತರುತ್ತಾರೋ ತರಲಿ : ಶಾಸಕ ನರೇಂದ್ರಸ್ವಾಮಿ ಸವಾಲು

ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…

9 hours ago