ಹಾಡು ಪಾಡು

ಪೈಜಾಮ ಶಬ್ಧಕ್ಕೆ ಇಜಾರ್ ಎನ್ನುತ್ತೇವೆ ಸಾವಿರಕ್ಕೆ ಹಜಾರ್ ಎನ್ನುತ್ತೇವೆ

ವಿಜಯಪುರದ ಕನ್ನಡವು ಉರ್ದು ಮತ್ತು ಮರಾಠಿ ಭಾಷೆಗಳ ಜೊತೆಗೆ ಬೆಳೆದಿದೆ. ಮರಾಠಿ ಜೊತೆಗೆ ಸಂಸ್ಕ ತ ಶಬ್ದಗಳು, ಉರ್ದು ಜೊತೆಗೆ ಪಾರ್ಸಿ, ಅರಬಿ ಶಬ್ದಗಳು ಕನ್ನಡದ ಮೇಲೆ ಪ್ರಭಾವ ಬೀರಿವೆ. 

೧೮೧೮ರಲ್ಲಿ ಪುಣೆಯ ಪೇಶ್ವೆಗಳು ಬ್ರಿಟಿಷರಿಗೆ ಸೋತ ನಂತರ, ಅವರ ಯುಗ ಮುಗಿದು ವಿಜಯಪುರ, ಧಾರವಾಡ, ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆಗಳು ಈಸ್ಟ್ ಇಂಡಿಯಾ ಕಂಪೆನಿಗೆ ಸೇರಿದ ಬಾಂಬೆ ಪ್ರೆಸಿಡೆನ್ಸಿಯ ಭಾಗವಾದವು. ಪೇಶ್ವೆ ಕಾಲದಲ್ಲಿ ‘ದಕ್ಷಿಣ ಮರಾಠಾ ಜಿಲ್ಲೆಗಳು’ ಎಂದು ಕರೆಯಿಸಿಕೊಳ್ಳುತ್ತಿದ್ದ ಇವು ನಂತರ ‘ಬಾಂಬೆ ಕರ್ನಾಟಕ ಎಂದು ಕರೆಯಿಸಿಕೊಂಡವು. ಕರ್ನಾಟಕ ಏಕೀಕರಣವಾಗುವವರೆಗೆ ಬಾಂಬೆ ಕರ್ನಾಟಕದ ಭಾಗವಾದ ವಿಜಯಪುರವು ಮಹಾರಾಷ್ಟ್ರಕ್ಕೆ ಸೇರಿತ್ತು. ಮರಾಠಿಯಲ್ಲಿ ‘ಪಾವನ್ಯಾರು’ ಅಂದರೆ ಬೀಗರು ಎಂದು ಅರ್ಥ. (ಈ ಶಬ್ದದಲ್ಲಿ ‘ನ್ಯಾ’ ಅಕ್ಷರವನ್ನು ‘ನ್ಯಾಯ’ ಎಂದು ಹೇಳುವಾಗ ಉಚ್ಚರಿಸುವ ರೀತಿಯಲ್ಲಿ ಉಚ್ಚರಿಸಬೇಕು. ಮರಾಠಿಯಲ್ಲಿ ಬಕ್ರಿ (ಭಾಕರ್) ಎಂದರೆ ರೊಟ್ಟಿ. ನಾವು ಈ ಶಬ್ದವನ್ನು ಧಾರಾಳವಾಗಿ ಬಳಸುತ್ತವೆ. ಟೈಮ್ ಎಷ್ಟು ಎಂದು ಕೇಳಿದರೆ ಹನ್ನೆರಡುವರಿಗೆ ‘ಸಾಡೇ ಬಾರಾ’ ಎಂದು ಹೇಳುತ್ತೇವೆ ಈ ಚದ್ದರ್‌ಗೆ ಎಷ್ಟು ಕೊಟ್ಟಿ ಎಂದು ಕೇಳಿದರೆ ದೋನ್ಸೆಮ (೨೦೦) ಎನ್ನುತ್ತೇವೆ. ಕರವಸ್ತ್ರಕ್ಕೆ ‘ರುಮಾಲ’ ಎಂದೂ ಕರೆಯುತ್ತೇವೆ. ಹೊಟ್ಟೆ ಕೆಟ್ಟರೆ ಕೋಷ್ಟಕ್ ಸರಿ ಇಲ್ಲ ಎನ್ನುತ್ತೇವೆ. ಬೇಗ ಬಾ ಎನ್ನುವುದಕ್ಕೆ ಜಲ್ದಿ ಬಾ ಎನ್ನುತ್ತೇವೆ. ಲಫಂಗನಿಗೆ ‘ಚಾರಸೌ ಬೀಸ್’ (೪೨೦) ಎಂದು ಹೇಳುತ್ತೇವೆ. ನಿರುಪಯುಕ್ತ ವ್ಯಕ್ತಿಗೆ ‘ಬೇಕಾರ್’ ಎನ್ನುತ್ತೇವೆ. ಹಕನಾಕ ಶಬ್ದ ಡೇಂಜರ್ ಅರ್ಥ ಕೊಡುತ್ತದೆ. ಉಡಾಳನಿಗೆ ಚಾಪ್ಟರ್ ಎಂದು ಕರೆಯುತ್ತಾರೆ. ಕೃತಘ್ನನಾಗಿ ಇರುವಾತನಿಗೆ ‘ನಮಕ್ ಹರಾಮ್’ ಎನ್ನುತ್ತಾರೆ. ಟೇಲರ್ ಹೊಲಿದುಕೊಡುವ ಬನಿಯನ್‌ಗೆ ಛಾಟಿ ಎನ್ನುತ್ತೇವೆ. ಪೈಜಾಮ ಶಬ್ದಕ್ಕೆ ಇಜಾರ್ ಎನ್ನುತ್ತೇವೆ. ಸಾವಿರಕ್ಕೆ ಹಜಾರ್ ಎನ್ನುತ್ತೇವೆ. ಹಿಂದಿನ ದಶಕಗಳಲ್ಲಿ ವಿಜಯಪುರದಲ್ಲಿ ಹೆಚ್ಚಾಗಿ ಎಲ್ಲ ಸಮಾಜದವರು ಇಜಾರ್, ಶರ್ಟ್ ಮತ್ತು ಗಾಂಧಿ ಟೋಪಿ ಹಾಕಿಕೊಳ್ಳುತ್ತಿದ್ದರು. ‘ಇಜಾಪುರದಾಗ ಇಜಾರದವು  ಹಜಾರ್ ಮಂದಿ’ ಎಂದು ಹೇಳುವುದು ರೂಢಿಯಾಗಿತ್ತು. ವಿಜಯಪುರ ನಮಗೆ ಹೊಸ ಪದ. ನಾನು ಸಣ್ಣವನಿದ್ದಾಗ ಹಣದ ಚಲಾವಣೆ ಬಹಳ ಕಡಿಮೆ ಇತ್ತು. ಬಾರ್ಟರ್ ಸಿಸ್ಟಂ ಸಹಜವಾಗಿತ್ತು. ಒಂದು ಗ್ಲಾಸ್ ಜೋಳಕ್ಕೆ ಒಂದು ಗ್ಲಾಸ್ ಮಜ್ಜಿಗೆ ಸಿಗುತ್ತಿತ್ತು. ರೈತರ ಮಕ್ಕಳು ಮನೆಯಿಂದ ಕಿರಾಣಿ ಅಂಗಡಿಗೆ ಹತ್ತಿ ತಂದು ಅಷ್ಟೇ ತೂಕದ ಕರದಂಟು ಒಯ್ಯುತ್ತಿದ್ದರು. ಕೊಲಿಕಾರರಿಗೆ ಜೋಳ, ಗೋಧಿ ಮುಂತಾದ ಆಹಾರಧಾನ್ಯ ಕೊಡುತ್ತಿದ್ದರು. ಹೀಗಾಗಿ ಹಳ್ಳಿಯ ಜನರಿಗೆ ನೂರರ ಒಳಗಿನ ಅಂಕಿಗಳನ್ನು ಹೇಳಲು ಬರುತ್ತಿರಲಿಲ್ಲ. ಅವರು ೬೦ ರೂಪಾಯಿವರೆಗೆ ಕಷ್ಟಪಟ್ಟು ಹೇಳುತ್ತಿದ್ದರು. ೭೦ ರೂಪಾಯಿ ಹೇಳುವಾಗ ಮೂರಿಪ್ಪತ್ತರದ ಹತ್ತು ಎನ್ನುತ್ತಿದ್ದರು. ಮೂರು ಇಪ್ಪತ್ತು ಸೇರಿದರೆ ಅರವತ್ತು, ಅದಕ್ಕೆ ಹತ್ತು ಸೇರಿಸಿದರೆ ೭೦. ಹೀಗಿತ್ತು ನಮ್ಮ ಲೆಕ್ಕ. ಹಣೇಬರಹಕ್ಕೆ ನಸೀಬ ಎನ್ನುತ್ತಿದ್ದರು. ಕೋರ್ಟಿನಲ್ಲಿ ಪಟ್ಟೇವಾಲ ಕಕ್ಷಿದಾರರನ್ನು ಕೂಗುವಾಗ ಅವರ ಹೆಸರು ಹೇಳಿ ‘ಹಾಜರ ಹೈ’ ಎಂದು ಹೇಳುತ್ತಿದ್ದ. ನೋಟ್ ಬುಕ್‌ಗೆ ವಹೀ, ಔಷಧೋಪಚಾರಕ್ಕೆ ಇಲಾಜ್, ಗರಡಿ ಮನೆಗೆ ತಾಲೀಮ ಖೋಲಿ, ಮಲ ವಿಸರ್ಜನೆಗೆ ಸಂಡಾಸ್, ಬೇಸರಕ್ಕೆ ಬೇಜಾರ್, ಬಳಲಿಕೆಗೆ ಪರೇಶಾನ್, ಅಪ್‌ಸೆಂಟ್‌ಗೆ ಗೈರುಹಾಜರಿ, ಸೊಕ್ಕು ಮಾಡ್ತಾನ ಎಂದು ಹೇಳಲು ಮಸ್ತಿ ಮಾಡ್ತಾನ, ಬರೀ ಮಾತನಾಡುವವನಿಗೆ ಬಾತೇಖಾನಿ, ಕೆಲಸಕ್ಕೆ ಬಾರದವನಿಗೆ ಬಾತಕ್ ಬಾರದವ. ಕೆಲಸ ಮಾಡಿ ಉಣ್ಣು ಎನ್ನಲು ದಗದಾ ಮಾಡಿ ತಿನ್ನು, ಹೆಂಡತಿ ದುಡಿದದ್ದನ್ನು ತಿನ್ನುವನಿಗೆ ಬಾಡಖೌ, ಮಾತಿನಲ್ಲಿ ಮರಳು ಮಾಡುವವನು ಪಟಾಯಿಸುವವ ಇತ್ಯಾದಿ ರೂಢಿಯಲ್ಲಿರುವ ಪದಗಳು. ತಾಲ್ಲೂಕ, ಜಿಲ್ಲಾ, ತಹಶೀಲ್ದಾರ, ಶಿರಸ್ತೇದಾರ, ಅಮಲದಾರ, ಫೌಜದಾರ, ವಕೀಲ, ಬಂದೋಬಸ್ತ್, ಇಸಾಬ್(ಲೆಕ್ಕ) ಮಾಡು, ತರ್ಜುಮೆ (ಭಾಷಾಂತರ), ಸಾಡೇಸಾತಿ (ದರಿದ್ರ-ಏಳೂವರೆ) ತೀಸ್‌ಮಾರ್ಕ್ (ಮೂರ್ಖ) ಹೀಗೆ ಶಬ್ದಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

– ರಂಜಾನ್ ದರ್ಗಾ,ಹಿರಿಯ ಪತ್ರಕರ್ತ ಮತ್ತು ಶರಣತತ್ವ ಪ್ರಚಾರಕ 

ಆಂದೋಲನ ಡೆಸ್ಕ್

Recent Posts

ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಭಕ್ತಸಾಗರ! ಕಿಲೋಮೀಟರ್‌ಗಟ್ಟಲೆ ಸರತಿ ಸಾಲು

ಹಾಸನ: ಹಾಸನದಲ್ಲಿ ಹಾಸನಾಂಬೆ ದರ್ಶನದ ಸಂಭ್ರಮ ಮುಂದುವರಿದಿದೆ. ದರ್ಶನದ ಮೂರನೇ ದಿನವಾದ ಇಂದು ತಾಯಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ…

37 mins ago

ದೆಹಲಿಯಲ್ಲಿ ಮಾಲಿನ್ಯಕ್ಕೆ ಕಡಿವಾಣ: ಶೇ.50 ಸಿಬ್ಬಂದಿಗೆ ಮನೆಯಿಂದಲೇ ಕೆಲಸ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.…

42 mins ago

ಕರ್ನಾಟಕಕ್ಕೆ ₹4,504 ಕೋಟಿ ಹೆಚ್ಚುವರಿ ತೆರಿಗೆ ಪಾಲು ಬಿಡುಗಡೆ!

ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಪಾಲಿನ ಕಂತನ್ನು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಹಂಚಿಕೆಯಾಗಿದೆ…

45 mins ago

ಎಲ್ಲೆಡೆ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ!

ಮೈಸೂರು: ಹಳದಿ–ಕೆಂಪಿನ ರಂಗು… ಕನ್ನಡದ ಕಂಪು… ಕರುನಾಡೆಲ್ಲ ರಾಜ್ಯೋತ್ಸವದ ಸಂಭ್ರಮ! ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ…

48 mins ago

ಧಾರವಾಡದ ‘ಅಗ್ದಿ ಖರೆ’ ಕನ್ನಡ

‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ ‘ಹವಣಿ ಇರಲಿ’ ಉಳ್ಳಾಗಡ್ಡಿ ಹೆಚ್ಚುವ…

52 mins ago

ಕುಂದಾಪ್ರ ಕನ್ನಡವೆಂದರೆ ‘ಭಾಷಿ ಅಲ್ಲ; ಬದ್ಕ್

‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು ಆಷಾಢ ಮಾಸದ…

54 mins ago