ಹಾಡು ಪಾಡು

ನಾವೆಲ್ಲರೂ ಹೊರಗಿನಿಂದ ಬಂದ ಬಾಂಧವರೇ ಆಗಿದ್ದೇವೆ…..

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಂತಾರಾಷ್ಟ್ರಿಯ ಖ್ಯಾತಿಯ ಪ್ರಾಕ್ತನಶಾಸ್ತ್ರಜ್ಞ  ರವಿ ಕೋರಿ ಶೆಟ್ಟರ್ ಮಾತುಗಳು

ನಾವ್ಯಾರೂ ಮೂಲ ನಿವಾಸಿಗಳಲ್ಲ. ಇಪ್ಪತ್ತು ಲಕ್ಷ ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದು ಇಲ್ಲಿ ನೆಲೆ ನಿಂತವರು. ಇಲ್ಲಿ ಮೊದಲೇ ಇದ್ದವರ ಜೊತೆ ಸಹಬಾಳ್ವೆ ಮಾಡಿ ನೆಲೆಸಿರುವವರು. ಆದರೆ ಈಗ ನೋಡಿ, ಹೇಗೆಲ್ಲಾ ಮಾತನಾಡುತ್ತಿದ್ದೇವೆ!

ನನ್ನ ತಾಯಿಯ ತವರೂರಾದ ಹೊಸಪೇಟೆಯಲ್ಲಿ ನಾನು ಹುಟ್ಟಿದ್ದು. ಶಾಲೆಯ ದಿನಗಳ ವಿದ್ಯಾಭ್ಯಾಸ ತಾಯಿಯ ತವರು ಮನೆಯಿಂದಲೇ ಆಯಿತು. ಆ ಸಮಯದಲ್ಲಿ ನನ್ನ ಸೋದರಮಾವ ‘ಸಿಟಿ ಬುಕ್ ಸೆಂಟರ್’ ಎಂಬ ಬುಕ್ ಸ್ಟಾಲ್ ತೆರೆದಿದ್ದರು. ಅಲ್ಲಿ ನಾನು ನನ್ನ ರಜಾ ದಿನಗಳನ್ನು ಕಳೆಯುತ್ತಿದ್ದೆ. ಯಾಕೆಂದರೆ ಪುಸ್ತಕಗಳ ನಡುವೆ ನನಗೆ ಸಂಭ್ರಮವಿತ್ತು. ಹಾಗಾಗಿ ಓದಿರೋ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತಿದ್ದೆ ಮತ್ತು ಅವರ ವ್ಯವಹಾರದಲ್ಲೂ ಸಹಾಯ ಮಾಡುತ್ತಿದ್ದೆ. ಹಂಪಿ ಕೂಡ ನನಗೆ ಹೊಸತಾಗಿರಲಿಲ್ಲ. ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ಹೋಗುತ್ತಿದ್ದೆ. ಆಗ ನನಗೆ ಇತಿಹಾಸದ ಬಗ್ಗೆ ತಿಳಿವಳಿಕೆ ಇರಲಿಲ್ಲ. ವಿಜಯನಗರ ಅರಸರು ಕಟ್ಟಿದ್ದೆಂಬ ಭಾವನೆಯಿಂದ ಅಲ್ಲೆಲ್ಲ ಸುತ್ತಾಡುತ್ತಿದ್ದೆ. ವಿರೂಪಾಕ್ಷ ದೇವರ ಜಾತ್ರೆಯನ್ನು ತಪ್ಪಿಸಿದ್ದೇ ಇಲ್ಲ.

ವಿದೇಶಿ ಪ್ರವಾಸಿಗರು ಕೇವಲ ಪ್ರವಾಸಿಗರು ಮಾತ್ರ ಆಗಿರಲಿಲ್ಲ. ಅವರಲ್ಲಿ ಸ್ಕಾಲರ್ಸ್ ಕೂಡಾ ಇರುತ್ತಿದ್ದರು. ಅವರಲ್ಲಿ ಕೆಲವರು ಪುಸ್ತಕದಂಗಡಿಗೆ ಬರುತ್ತಿದ್ದರು. ಇಂಗ್ಲಿಷ್ ಜ್ಞಾನವೇ ಇರದಿದ್ದ ಆ ಕಾಲದಲ್ಲಿ ಅವರೊಡನೆ ಮಾತನಾಡುತ್ತಾ ಇಂಗ್ಲಿಷ್ ಕಲಿಯಲು ಪ್ರಯತ್ನಿಸುತ್ತಿದ್ದೆ. ಆಗ ಅವರು ‘ನಾವು ವಿಜಯನಗರ ಅಧ್ಯಯನಕ್ಕೆ ಬಂದಿದ್ದೇವೆ, ಇಲ್ಲಿಂದ ಐಹೊಳೆ, ಪಟ್ಟದಕಲ್ಲಿಗೆ ಹೋಗುತ್ತೇವೆ’ ಎನ್ನುತ್ತಿದ್ದರು. ಅದೇ ಸಮಯದಲ್ಲಿ ನಮ್ಮ ಸಣ್ಣ ಸೋದರಮಾವ ಷ.ಶೆಟ್ಟರ್ ಕೇಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಪಿಎಚ್.ಡಿ. ಮಾಡುತ್ತಿದ್ದರು. ಅವರು ಕಲೆ, ಇತಿಹಾಸದ ಬಗ್ಗೆ ಸಂಶೋಧನೆ ಮಾಡಿದ್ದರು. ಶ್ರವಣಬೆಳಗೊಳ ಕುರಿತು ಮಹಾಪ್ರಬಂಧ ಬರೆದು ಧಾರವಾಡದ ಕರ್ನಾಟಕ ಯುನಿವರ್ಸಿಟಿಯಲ್ಲಿ ಪಿಎಚ್.ಡಿ. ಪದವಿ ಪಡೆದುಕೊಂಡು, ಕೇಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಹೊಯ್ಸಳ ದೇವಾಲಯಗಳ ಬಗ್ಗೆ ದೀರ್ಘ ಅಧ್ಯಯನ ಮಾಡುತ್ತಿದ್ದರು. ವಿದೇಶಿಗರು ತಾವು ಅಧ್ಯಯನಕ್ಕೆ ಬಂದಿದ್ದೇವೆಯೆಂದು ಹೇಳಿದಾಗ ನಾನು ಅವರನ್ನು ನೆನಪಿಸಿಕೊಳ್ಳುತ್ತಿದ್ದೆ. ಮಾವನ ಬಗ್ಗೆ ವಿದೇಶಿ ಪ್ರವಾಸಿಗರಲ್ಲಿ ಹೇಳುತ್ತಿದ್ದೆ. ಇದು ಆರ್ಕಿಯಾಲಜಿ ಕುರಿತು ನನಗೆ ತಿಳಿದಿರದ ಕಾಲದ ಹೊಸಪೇಟೆಯ ಅನುಭವ. ಪುಸ್ತಕದಂಗಡಿಯಲ್ಲಿದ್ದಾಗ ಟಿ.ಎನ್.ಓಕ್ ಬರೆದ ‘ತಾಜ್ ಮಹಲ್ ಇಸ್ ದಿ ಹಿಂದೂ ಟೆಂಪಲ್’ ಎಂಬ ಪುಸ್ತಕ ನೋಡಿದೆ. ಅದು ಹೇಗೆ ಎಂಬ ಕುತೂಹಲದಿಂದ ಪುಸ್ತಕ ಓದಿದೆ. ಮುಂದೆ ನಾನು ಎಂ.ಎ. ಮಾಡುತ್ತಿದ್ದಾಗ ಪೂನಾಕ್ಕೆ ಹೋದಾಗ ಆ ಪುಸ್ತಕದ ಕುರಿತಾಗಿಯೇ ‘ಹಾಗ್ಯಾಕೆ ಬರೆದಿದ್ದಾರೆ?’ ಎಂದು ಹಲವರ ಬಳಿ ಕೇಳಿದ್ದೆ. ‘ಅದೆಲ್ಲ ಸುಳ್ಳು’ ಎಂಬ ಉತ್ತರ ಬಂದಾಗ ನಾನು ಗಲಿಬಿಲಿಗೊಂಡೆ.

ನಾನು ಬಿ.ಎಸ್ಸಿಯಲ್ಲಿ ಕೆಮಿಸ್ಟ್ರಿ ಮತ್ತು ಫಿಸಿಕ್ಸ್ ಓದಿದವನು. ಆರ್ಕಿಯಾಲಜಿಯಲ್ಲಿ ಪೋಸ್ಟ್ ಗ್ರಾಜ್ಯುವೇಷನ್ ಇದೆಯೆನ್ನುವುದೂ ನನಗೆ ತಿಳಿದಿರಲಿಲ್ಲ. ಆದರೆ ನನ್ನ ಸೋದರಮಾವ ಷಡಕ್ಷರಪ್ಪ ಶೆಟ್ಟರ್ ಆ ಹಾದಿಯಲ್ಲಿದ್ದರು. ನಾನು ಏಕೋಪಾಧ್ಯಾಯ ಶಾಲೆಯಲ್ಲಿ ಓದಿದವನು. ಯಾವ ಭಾಷೆಯನ್ನೂ ಸರಿಯಾಗಿ ಓದದೆ ಸಾಧಕರನ್ನು ನೋಡುವುದಷ್ಟೇ ಆಗಿಬಿಡುತ್ತದೆಯೇನೋ ಎಂದು ಯೋಚಿಸುತ್ತಿದ್ದೆ. ಆಗ ಮಾವ ಇಂಗ್ಲೆಂಡಿನಿಂದ ವಾಪಸ್ ಬಂದಿದ್ದರು. ಸೋಶಿಯಾಲಜಿ, ಲೈಬ್ರರಿ ಸೈನ್ಸ್, ಆಂಥ್ರಪಾಲಜಿ ಇತ್ಯಾದಿ ಕುರಿತು ಹೇಳುತ್ತಿದ್ದಾಗ ಪೂನಾದಲ್ಲಿ ಸೈನ್ಸ್ ವಿದ್ಯಾರ್ಥಿಗಳನ್ನೂ ಎಂ.ಎ. ಆರ್ಕಿಯಾಲಜಿಗೆ ತೆಗೆದುಕೊಳ್ಳುತ್ತಾರೆಂಬುದು ಮಾವನಿಗೆ ಗೊತ್ತಿತ್ತು. ‘ಹೋಗ್ತಿಯಾ?’ ಮಾವ ಕೇಳಿದಾಗ ‘ನೀವು ಹೇಳಿದ್ರೆ ಹೋಗ್ತೀನಿ’ ಎಂದೆ. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು.

ಕಲ್ಲು ಕಟುಕರ ಪಾಲಾಗಿದ್ದ ನನ್ನ ಹೆಮ್ಮೆಯ ಬಳ್ಳಾರಿ ಬಳ್ಳಾರಿ ಪಕ್ಕದ ಸಂಗನಕಲ್ಲು ನವ ಶಿಲಾಯುಗದ ನೆಲೆಯೆಂದು ಗುರುತಿಸಲ್ಪಟ್ಟಿತ್ತು. ಕ್ರಿ.ಶ. ೧೮೪೦ರಿಂದ ಇಲ್ಲಿಯವರೆಗೆ ಸಂಗನಕಲ್ಲಿನ ಪ್ರಾಗಿತಿಹಾಸದ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಬಂದಿದೆ. ಮೊಟ್ಟಮೊದಲಿಗೆ ಕ್ಯಾಪ್ಟನ್ ಲಿಬರ್ಡ್ ನೆಲೆಯನ್ನು ಗುರುತಿಸಿದರು. ನಂತರ ಪ್ರಾಕ್ತನಶಾಸ್ತ್ರ ಪಿತಾಮಹರೆನಿಸಿಕೊಂಡ ರಾಬರ್ಟ್ ಬ್ರೂಸ್ ಫೂಟ್ ಅವರು ಅದನ್ನು ನವ ಶಿಲಾಯುಗದ ನೆಲೆಯೆಂದು ಗುರುತಿಸಿದ್ದರು. ಅಲ್ಲೇ ಸಮೀಪದ ತೆಕ್ಕಲಕೋಟೆಯಲ್ಲಿ ೫೦ ಮತ್ತು ೬೦ರ ದಶಕದಲ್ಲಿ ಇನ್ನೂ ಹೆಚ್ಚಿನ ನೆಲೆಗಳು ಪತ್ತೆಯಾದವು. ಆದರೆ ವೈಜ್ಞಾನಿಕವಾಗಿ ಪ್ರಾಕ್ತನ ಅಧ್ಯಯನದ ಚೌಕಟ್ಟಿನೊಳಗೆ ಈ ಅವಶೇಷಗಳ ಕುರುಹುಗಳ ಅಧ್ಯಯನ ಆಗಿರಲಿಲ್ಲ. ನವ ಶಿಲಾಯುಗದ ಜನರು ಕೃಷಿಕರೆಂದು ಹೇಳಿದರೂ ಅಲ್ಲಿಯವರೆಗೆ ಪ್ರಕಟವಾಗಿದ್ದ ಪುಸ್ತಕಗಳಲ್ಲಿ ಅವರು ಏನು ಬಿತ್ತಿ ಬೆಳೆಸಿದ್ದರು! ಯಾವ ಪ್ರಾಣಿಗಳನ್ನು ಸಾಕಿದ್ದರು!  ಎಂಬುದರ ಬಗ್ಗೆ ಉಲ್ಲೇಖವಿರಲಿಲ್ಲ.

ಇದನ್ನು ಓದಿ: ಇದ್ದದ್ದ ಇದ್ದಂತೆ ಬರೆದು, ಬರೆದಂತೆ ಬದುಕಿದ ಪತ್ರಕರ್ತ

೧೯೮೬ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಫೆಲೋಶಿಪ್ ಸಿಕ್ಕು ನಾನು ಮತ್ತೆ ಸಂಗನಕಲ್ಲಿಗೆ ಬರುವ ಪ್ರಸಂಗ ಬಂತು. ಬಂದು ನೋಡಿದಾಗ ನನ್ನ ಊರು ಬಳ್ಳಾರಿಯಲ್ಲಿ ವಿನಾಶಕಾರಿ ಗಣಿಗಾರಿಕೆ ಚಟುವಟಿಕೆ ದೊಡ್ಡಮಟ್ಟದಲ್ಲಿ ನಡೆಯುತ್ತಿತ್ತು. ನಾನು ಹುಟ್ಟಿ ಬೆಳೆದ ಪರಿಸರದ ಸ್ಥಿತಿ ನೋಡಿ ಕಣ್ಣೀರು ಬಂತು. ೧೯೯೭ರಲ್ಲಿ ಆರ್ಕಿಯೋ ಬೋಟನಿ ‘ನವ ಶಿಲಾಯುಗದ ಜನರು ಮೊದಲು ಬಿತ್ತಿ ಬೆಳೆಸಿದ ಧಾನ್ಯ ಯಾವುದು?’, ‘ನವ ಶಿಲಾಯುಗವನ್ನು ಗುರುತಿಸುವ ಕಾಲ’ ಈ ಎರಡು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ನಡುವೆ ಸುಮಾರು ೪೦ ನೆಲೆಗಳನ್ನು ಸಂದರ್ಶಿಸಿ ಬಳ್ಳಾರಿಗೆ ಹೋದಾಗ ಬಹಳ ನೋವಾಯಿತು. ಹೇಗಾದರೂ ಮಾಡಿ ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗಲೇ ನಿರ್ಧರಿಸಿದೆ. ಆ ಸಮಯದಲ್ಲಿ ಜಿಲ್ಲಾಧಿಕಾರಿಗಳಿಗೆ ಸತತ ಎರಡು ವರ್ಷ ಕಾಲ ದುಂಬಾಲು ಬಿದ್ದ ನಂತರ ಅವರು ಒಪ್ಪಿ ಕಟ್ಟಡವನ್ನೂ ಎಂಟು ಹತ್ತು ಲಕ್ಷ ರೂಪಾಯಿಗಳ ಚೆಕ್ಕನ್ನೂ ಕೊಟ್ಟು ಸಂಗ್ರಹಿಸಿದ ಉತ್ಖನನ ಮಾಹಿತಿಗಳ ಮ್ಯೂಸಿಯಂ ಮಾಡಲು ಸೂಚಿಸಿದರು. ಹೀಗೆ ನನ್ನ ಸಮಾಜಮುಖಿ ಪ್ರಾಕ್ತನಶಾಸ್ತ್ರ ಆರಂಭವಾಯಿತು.

ನಮ್ಮ ಪೂರ್ವೇತಿಹಾಸದ ಮಾಹಿತಿ ಪ್ರಾಕ್ತನಶಾಸ್ತ್ರಜ್ಞರಿಗಷ್ಟೇ ಸೀಮಿತವಾಗಿರದೆ ಜನಸಾಮಾನ್ಯರಿಗೆ ತಿಳಿದಾಗ ಮಾತ್ರ ಸಂರಕ್ಷಣೆ ಸಾಧ್ಯವೆಂದು ನಿರ್ಧರಿಸಿದೆ. ಅಮೆರಿಕಾದಲ್ಲಿದ್ದ ಸ್ನೇಹಿತರೊಬ್ಬರು ಸಮಾಜಮುಖಿ ಪ್ರಾಕ್ತನಶಾಸ್ತ್ರದ ಮಾದರಿತಯಾರಿಸಿದ್ದರು. ಅದನ್ನು ಅಳವಡಿಸಿಕೊಂಡು ಕಾರ್ಯ ಆರಂಭಿಸಿದೆ. ನಿವೃತ್ತಿ ನಂತರವೂ ಮುಂದುವರಿಸಿಕೊಂಡು ಬಂದಿದ್ದೇನೆ. ಒಂದು ಕಾಲದಲ್ಲಿ ಇಲ್ಲಿ ನೀರಿನ ಝರಿಗಳು ಹರಿಯುತ್ತಿದ್ದವು

ಕಡಿಮೆ ಮಳೆಯ ಪ್ರಮಾಣ, ಹುಲ್ಲುಗಾವಲು, ನದಿಗಳ ಕೊರತೆ ಇತ್ಯಾದಿಗಳಿದ್ದರೂ ಪ್ರಾರಂಭಿಕ ಕೃಷಿ ಸಂಸ್ಕ ತಿ ಹೇಗೆ ಇಲ್ಲಿ ನೆಲೆ ನಿಂತಿತು ಎಂಬುದನ್ನು ತಿಳಿದುಕೊಳ್ಳಲು ಹೊರಟಾಗ ತಿಳಿದ ಅಂಶ, ಇಲ್ಲಿದ್ದ ನೀರಿನ ಚಿಲುಮೆ. ಇವು ಉತ್ತರದಿಂದ ವಲಸೆ ಬಂದಂತಹ ದನಗಾಹಿ ಜನಾಂಗಗಳು ನೆಲೆ ನಿಲ್ಲುವಂತಹ ಸಂದರ್ಭದಲ್ಲಿ ಬೆಟ್ಟಗಳು, ಅಲ್ಲಿದ್ದ ಹಸಿರು, ತಪ್ಪಲಿನಲ್ಲಿ ಹರಿದು ಬರುತ್ತಿದ್ದ ನೀರಿನ ಚಿಲುಮೆ ಅನುಕೂಲ ಮಾಡಿಕೊಟ್ಟಿತು. ದನಗಾಹಿ ಜನಾಂಗಗಳು ಮೇಕೆ ಮತ್ತು ಕುರಿಗಳನ್ನು ಬಲೂಚಿಸ್ತಾನದಿಂದ ಪರಿಚಯ ಮಾಡಿಸಿದವು. ಅವು ಭಾರತದ ಪ್ರಾಣಿಗಳಲ್ಲ. ಇರಾನ್ ಹಾಗೂ ಇರಾಕಿನಿಂದ ಬಲೂಚಿಸ್ತಾನಕ್ಕೆ ಬಂದು ಅಲ್ಲಿಂದ ಭಾರತಕ್ಕೆ ಪರಿಚಯವಾಯಿತು. ಮಳೆಗಾಲದ ನಂತರ ಈ ಪ್ರದೇಶ ಸಣ್ಣ ಮಟ್ಟಿನ ಮರುಭೂಮಿಯಂತೆ ಇದ್ದರೂ ಜನ ಯಾಕೆ ಇಲ್ಲಿ ವಾಸಿಸುತ್ತಿದ್ದರೆಂದರೆ ಇಲ್ಲಿ ನೀರು ಹರಿಯುತ್ತಿತ್ತು. ಪ್ರಾಗೈತಿ ಹಾಸಕಾರರಿಗೆ ನೀರಿನ ಚಿಲುಮೆಗಳೇ ಜೀವನಾಡಿಗಳು.

ವ್ಯಾಪಾರ ಜಾಲ ಹೆಚ್ಚಾದಂತೆ ನಾಗರಿಕ ಸಮಾಜ ಹುಟ್ಟಿಕೊಂಡಿತು. ನವ ಶಿಲಾಯುಗದವರು ಬೇಸಿಗೆಯ ಬೆಳೆಗಳನ್ನು ಮಾತ್ರ ಬೆಳೆಸುತ್ತಿದ್ದರು. ಆದರೆ, ಚಿಲುಮೆಗಳ ಉಪಯೋಗ ತಿಳಿದ ನಂತರ ವಲಸಿಗರು ಚಳಿಗಾಲದಲ್ಲೂ ಗೋಧಿ ಬೆಳೆಸಿದರು. ಆಹಾರ ಭದ್ರತೆ ಮೂಡಿದ ನಂತರ ವ್ಯಾಪಾರದತ್ತ ಹೊರಳಿದರು. ಕಬ್ಬಿಣ, ತಾಮ್ರ, ಚಿನ್ನ, ಬೆಲೆಬಾಳುವ ರತ್ನಗಳಿವೆ ಎಂಬುದು ತಿಳಿದ ನಂತರ ವ್ಯಾಪಾರ ಜಾಲ ಆರಂಭವಾಯಿತು. ನಗರಗಳ ಪ್ರಾಚೀನತೆಯೂ ನವ ಶಿಲಾಯುಗದ ಎರಡನೇ ಹಂತದಲ್ಲಿ ಆರಂಭವಾಯಿತು. ಸಾರಿಗೆಯೂ ಆವಾಗಲೇ ಆರಂಭವಾಯಿತು. ಹೀಗೆ ನಾಗರಿಕತೆ ಹುಟ್ಟಿಕೊಂಡಿತು.

ನಾವ್ಯಾರೂ ಮೂಲ ನಿವಾಸಿಗಳಲ್ಲ…

ಸುಮಾರು ೧೨,೦೦೦ ವರ್ಷಗಳ ಹಿಂದೆ ಇರಾನಿನಿಂದ ನಮ್ಮ ಪ್ರದೇಶಕ್ಕೆ ಪ್ಯಾಸ್ಟ್ರಲ್ ಮೂವ್‌ಮೆಂಟ್ಸ್ ಇತ್ತು. ಗೋಧಿ ಮತ್ತು ಬಾರ್ಲಿ ಬೆಳೆಯುತ್ತಿದ್ದರು. ಅವರು ಹೊಸ ಹೊಸ ಭೂ ಪ್ರದೇಶಗಳಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ವಲಸೆ ಹೋಗಲಾರಂಭಿಸಿದಾಗ ನಾಗರಿಕತೆಯ ಕ್ರಾಂತಿ ಆರಂಭವಾಗುತ್ತದೆ. ನಮ್ಮೆಲ್ಲರದ್ದೂ ಆಫ್ರಿಕಾ ಮೂಲ. ಡಿ.ಎನ್.ಎ. ಅಧ್ಯಯನದ ಪ್ರಕಾರ ಎಲ್ಲರೂ ಒಂದೇ ಕುಟುಂಬದವರೆಂದು ಸಾಬೀತಾಗಿದೆ. ನಾವೆಲ್ಲರೂ ಹಂತಹಂತವಾಗಿ ಹೊರಗಿನಿಂದ ಬಂದವರೇ. ಪ್ರಾರಂಭಿಕಸಮಾಜಗಳು ವಲಸೆ  ಹೋಗಿ ತಳ ಊರಿದ್ದಾರೆ. ಒಂದು ಸಲ ನೆಲೆ ನಿಂತ ನಂತರ ಮರಳಿದ ಸಂಖ್ಯೆ ತೀರಾ ಕಡಿಮೆ. ಸಿಂಧೂ ನಾಗರಿಕತೆಗೆ ಬುನಾದಿ ಹಾಕಿದವರು ದ್ರಾವಿಡರಾಗಿರಬಹುದು ಅಥವಾ ಇಂಡೋ ಆರ್ಯನ್ ಭಾಷಿಕರೂ ಆಗಿರಬ ಹುದು. ಆದರೆ ವಲಸೆ ಬಂದವರೆಲ್ಲರೂ ಸಾಮಾನ್ಯವಾಗಿ ದ್ರಾವಿಡ ಭಾಷಿಕರೇ ಆಗಿದ್ದರು. ಅಲೆಮಾರಿ ಜೀವನ ಮಾಡುತ್ತಿದ್ದ ಸಮುದಾಯವಿತ್ತು. ಪಶು ಸಂಗೋಪನಾ ಸಮಾಜ ವಲಸೆ ಬಂದಾಗ ಅವರೊಡನೆ ಸಂಪರ್ಕವೂ ಇತ್ತು. ಆದರೆ ಅವರ ನಡುವೆ ಆ ಸಮಯದಲ್ಲಿ ಸಂಘರ್ಷಗಳಿರಲಿಲ್ಲ. ಮಧ್ಯ ಶಿಲಾಯುಗದಲ್ಲಿ ಆಕ್ರಮಣಕಾರಿ ಜನರಿದ್ದರು. ಆದರೆ ಬಯಲು ಸೀಮೆಯಲ್ಲಿ ಅವರ ನೆಲೆಗಳ ಸಾಂದ್ರತೆ ಬಹಳ ಕಡಿಮೆಯಿತ್ತು. ಹಾಗಾಗಿ ಇಲ್ಲಿ ಪ್ರಾಥಮಿಕ ನವ ಶಿಲಾಯುಗದ ನೆಲೆಗಳು ಕಂಡುಬರುತ್ತವೆ. ನಮ್ಮ ಪೂರ್ವಜರು ಬಹಳ ಬುದ್ಧಿವಂತರು ಹಾಗೂ ಕಳಕಳಿ ಇದ್ದವರು.  ಪ್ರಕೃತಿಯ ಸಂಪನ್ಮೂಲಗಳನ್ನು ನಾಶಪಡಿಸದೆ ಬೇಕಾದಷ್ಟೇ ಉಪಯೋಗಿಸಿದರು.

ತಾಂತ್ರಿಕತೆಯ ಬೆಳವಣಿಗೆಯಾದಂತೆ ವಿನಿಮಯ ಆರಂಭವಾಗಿ ನಗರೀಕರಣ ಆರಂಭವಾಯಿತು. ಆದರೆ ಸ್ತರೀಕರಣವಿರದೆ ಸರಳ ಸಮಾಜ ಇತ್ತು. ಮನುಷ್ಯನಲ್ಲಿ ಯಾವಾಗ ಲಾಭದ ಮನೋಭಾವ ಬೆಳೆಯಿತೋ, ಅಂದು ವಿನಾಶಕಾರಿ ಬುದ್ಧಿಯೂ ಆರಂಭವಾಯಿತು. ನವ ಶಿಲಾಯುಗದಲ್ಲಿ ಮೇಲು ಕೀಳು ಕಲ್ಪನೆಯೇಇರಲಿಲ್ಲ. ಕಬ್ಬಿಣ ಯುಗದಲ್ಲಿ ಆಳುವ ನೀತಿ ಆರಂಭವಾಯಿತು. ನಂತರ ಮನುಷ್ಯನ ಕೆಟ್ಟ ಬುದ್ಧಿ ಬೆಳೆಯುತ್ತಾ ಬಂತು. ನಾವ್ಯಾರೂ ಮೂಲ ನಿವಾಸಿಗಳಲ್ಲ. ಇಪ್ಪತ್ತು ಲಕ್ಷ ವರ್ಷಗಳ ಅವಽಯಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದು ನೆಲೆ ನಿಂತವರು. ಇಲ್ಲಿ ಮೊದಲೇ ಇದ್ದವರ ಜೊತೆ ಸಹಬಾಳ್ವೆ ಮಾಡಿ ಇಲ್ಲಿ ನೆಲೆ ನಿಂತಿರುವವರು.ಆದರೆ ಈಗ ನೋಡಿ.ಹೇಗೆಲ್ಲಾ ಮಾತನಾಡುತ್ತಿದ್ದೇವೆ!

korisettar@gmail.com
(ಮಾತುಕತೆ: ರಶೀದ್)

(ಬರಹಕ್ಕೆ: ಅಕ್ಷತಾ)

ಆಂದೋಲನ ಡೆಸ್ಕ್

Recent Posts

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

44 mins ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

1 hour ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

2 hours ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

2 hours ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

3 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

3 hours ago