ತಾಯಿ ಪದ ಹೇಳುವುದಕ್ಕೆಂದು ಹೊರಟಲ್ಲೆಲ್ಲ, ಇವರು ಕದ್ದು ಮುಚ್ಚಿಯಾದರೂ ಹಾಜರಾಗುತ್ತಿದ್ದರು.
ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಹೊನ್ನಮ್ಮ ಅವರ ತವರು ಮನೆಯಷ್ಟೇ ಅಲ್ಲ, ಮದುವೆಯಾಗಿ ಬಂದ ಗಂಡನ ಮನೆ ಕೂಡ. ಸೋದರ ಮಾವನನ್ನೇ ಮದುವೆಯಾದ ಕಾರಣ ಊರ ತೊರೆವ ಪ್ರಸಂಗವೇ ಇವರಿಗೆ ಎದುರಾಗಲಿಲ್ಲ.
ತಂದೆಯನ್ನು ಕಳೆದುಕೊಂಡಾಗ ಹೊನ್ನಮ್ಮ ಐದನೇ ತರಗತಿಯಲ್ಲಿ ಓದುತ್ತಿದ್ದರು. ತಾಯಿಯೊಬ್ಬರೇ ಮನೆಗೆ
ಆಧಾರ. ಓದಿಸೆಂದು ಕೇಳುವುದಾದರೂ ಹೇಗೆ! ಆದರೆ, ತಾಯಿ ಸೋಬಾನೆ ಪದವನ್ನು ಎಷ್ಟು ಇಂಪಾಗಿ
ಹಾಡುತ್ತಿದ್ದರೆಂದರೆ, ಜನಪದ ಹಾಡುಗಳನ್ನು ಕಲಿಯಲು ಹೊನ್ನಮ್ಮ ಅವರಿಗೆ ಆಸಕ್ತಿ ಮೂಡಿದ್ದೇ ಅವರಿಂದ. ಹಾಗೆಂದು ತಾಯಿಗೆ ಮಗಳು ಸೋಬಾನೆ ಪದಗಳನ್ನು ಕಲಿಯುವುದು ಸ್ವಲ್ಪವೂ ಇಷ್ಟವಿರಲಿಲ್ಲ.
‘ನೀ ಬರ್ಬ್ಯಾಡ. ಹೋಗು’ ಎಂದು ಗದರುತ್ತಿದ್ದರಂತೆ. ಹೊನ್ನಮ್ಮ ಅವರಿಗೆ ಪದ ಕಲಿವ ಆಸೆ. ತಾಯಿ ಪದ ಹೇಳುವುದಕ್ಕೆಂದು ಹೊರಟಲ್ಲೆಲ್ಲ, ಇವರು ಕದ್ದು ಮುಚ್ಚಿಯಾದರೂ ಹಾಜರಾಗುತ್ತಿದ್ದರು. ಹೀಗೆ ಮರೆಯಲ್ಲಿ ನಿಂತು ಕೇಳಿದ ಹಾಡುಗಳೆಲ್ಲ ಮನೆಗೆಲಸದ ಸಾಂಗತ್ಯದಲ್ಲಿ ಇವರಿಗೆ ಬಾಯಿಪಾಠವಾಗುತ್ತಿದ್ದವು.
ಸೋಬಾನೆ ಪದವನ್ನೇನೊ ಹೊನ್ನಮ್ಮ ತಾಯಿಯ ಸಂಗದಲ್ಲಿ ಕಲಿತುಬಿಟ್ಟರು. ದೇವರ ಪದಗಳು, ಮಾದೇಶ್ವರ ಹಾಡು, ಮಂಟೇಸ್ವಾಮಿ ಹಾಡು, ಜೋಗುಳ ಪದಗಳನ್ನೆಲ್ಲ ಕಲಿತದ್ದು, ನಾಟಿ ಕೆಲಸಕ್ಕೆಂದು ಗದ್ದೆಗೆ ಹೋಗುತ್ತಿದ್ದಾಗ. ಆಗೆಲ್ಲ ಜನಪದ ಹಾಡನ್ನು ಹೇಳಿದರೆ ಮುಖ್ಯ ಹಾಡುಗಾರರಿಗೆ ಮಾತ್ರವಲ್ಲ
ಸೊಲ್ಲು ಹಾಕಿದವರಿಗೂ ಐದೊ ಹತ್ತೊ ಪೈಸೆಗಳನ್ನು ಕೊಡುತ್ತಿದ್ದರು. ಹಾಗಾಗಿ ಕೆಲಸ, ಪದ್ಯ ಕಲಿಕೆ ಎರಡಕ್ಕೂ ಊರ ಗದ್ದೆಯೇ ವೇದಿಕೆಯಾಯಿತು.
ಹಾಡುವುದಕ್ಕೆ ತಾಯಿ ಮೊದಲ ಗುರು. ಜೋಗುಳ ಹಾಡು, ಧಾರೆಯೆರೆವ ಹಾಡುಗಳನ್ನೆಲ್ಲ ಇವರಿಗೆ ಕಲಿಸಿಕೊಟ್ಟವರು, ಸಂಬಂಧಿಕರೇ ಆಗಿದ್ದ ಹನುಮಮ್ಮ ಅವರು. ತಾಯಿ ಪ್ರೀತಿಯ ಪಡಿಯಚ್ಚಾಗಿದ್ದ ಹನುಮಮ್ಮ ಅವರು ಹೊನ್ನಮ್ಮ ಅವರ ಎರಡನೇ ಗುರು.
‘ಹಾಡು ನನ್ ತಾಯಿ. ಪದ ಕಲ್ಕ್ತಂಡು ನನ್ ಹೆಸ್ರು ಉಳ್ಸೇ ನನ್ನವ್ವ’ ಎಂದು ಸೊಲ್ಲು ಹಾಕುವುದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತಾನು ಪಡೆದ ಜನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆಲ್ಲ ಇವರೇ ಕಾರಣ ಎಂದು ಹೊನ್ನಮ್ಮ ಅವರಿಬ್ಬರನ್ನೂ ನೆನಪಿಸಿಕೊಳ್ಳುತ್ತಾರೆ.
ಕೆಲಸಕ್ಕೆ ಬರುವ ಹೆಂಗಸರ ಗುಂಪೊಂದನ್ನು ಕಟ್ಟಿಕೊಂಡು, ಹಾಡು ಹೇಳುವುದಕ್ಕೆ ತಯಾರಾಗೇಬಿಟ್ಟರು. ಏನಾದರೂ ಕೂಲಿ ಕೆಲಸ ಮಾಡಲೇಬೇಕಿತ್ತು. ನಡುವೆ, ಕೆಲ ಕಾರ್ಯಕ್ರಮಗಳು ದೊರೆಯಿತು. ಅರಮನೆಯನ್ನು ಕಟ್ಟಿಕೊಳ್ಳುವಷ್ಟು ದುಡ್ಡಾಗದಿದ್ದರೂ ತಕ್ಕ ಮಟ್ಟಿಗೆ ಬದುಕಿಗೆ ನೆರವಾಯಿತು. ಹೊಟ್ಟೆ – ಬಟ್ಟೆಗೆ ಪರವಾಗಿಲ್ಲ ಎನ್ನುವ ಹೊತ್ತಿಗೆ ಗಂಡ ಮತ್ತು ತಾಯಿಯನ್ನು ಕಳೆದುಕೊಂಡರು. ಜೀವನ ಕಂಗೆಟ್ಟ ಆ ಸಂದರ್ಭವನ್ನು ನೆನೆದಾಗ ಇಂದಿಗೂ ಹೊನ್ನಮ್ಮ ಅವರ ಕಣ್ಣಾಲಿಗಳು ನೀರ ಹರಿಸುತ್ತವೆ!
ಮೈಸೂರು : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…
ಸರಗೂರು : ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಹುಲಿ ದಾಳಿ ಆತಂಕ ಮುಂದುವರಿದಿದ್ದು, ಹುಲಿ ಸೆರೆಹಿಡಿಯಲು ತೆರಳಿದ್ದ ಎಸ್‌ಟಿಎಫ್ ಸಿಬ್ಬಂದಿಯ ಮೇಲೆಯೇ…
ಬೆಂಗಳೂರು : ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮವು ಮಂಗಳವಾರ (ಜೂ.30)…
ಕೊಳ್ಳೇಗಾಲ : ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ವಾಪಸ್ ಬರುವಾಗ ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿ, 10…
ಮೈಸೂರು : ಇಲ್ಲಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಕೊಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ…
ಬೆಂಗಳೂರು : ಬಿಜೆಪಿ ಪಕ್ಷದ ರಾಷ್ಟೀಯ ಮತ್ತು ರಾಜ್ಯ ಮಟ್ಟದ ನಾಯಕರ ವಿರುದ್ಧ ಅವಹೇಳನಕಾರಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿ…