ಹಾಡು ಪಾಡು

ಕ್ಷೀಣವಾಗುತ್ತಿರುವ ಟ್ರಿಣ್ ಟ್ರಿಣ್ ಸದ್ದು

ಚಂದ್ರಶೇಖರ್ ಮೂರ್ತಿ ಕೆ.ಎಸ್.

ಮೈಸೂರಿಗರಿಗೆ ಬೇಡವಾದರೇ ಈ ಹಸಿರು ಸುಂದರಿಯರು

ಸಾಂಸ್ಕ ತಿಕ ಪರಂಪರೆ ಹೊಂದಿರುವ ಮೈಸೂರಿ ನಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿ ಆಗಲಿ ಎಂಬ ಉದ್ದೇಶದಿಂದ ಹಸಿರು ಶಕ್ತಿ ಯೋಜನೆಯಾಗಿ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಯನ್ನು ಜಾರಿಗೆ ತರಲಾಯಿತು. ಆ ಮೂಲಕ ಮೈಸೂರು ನಗರ ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆ ಮಾಡಿದ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಟ್ರಿಣ್ ಟ್ರಿಣ್ ಸೈಕಲ್ ನೂತನ ಯೋಜನೆ ಮೂಲಕ ಮೈಸೂರು ದೇಶದ ಗಮನ ಸೆಳೆಯಿತು. ನಂತರ ಕೆಲವೇ ವರ್ಷಗಳಲ್ಲಿಯೇ ಜನರಲ್ಲಿ ಅದ್ಯಾಕೋ ಈ ಸೈಕಲ್ ಸಹವಾಸ ಸಾಕು ಅನಿಸಿಬಿಟ್ಟಂತಿದೆ. ಇಂದು ನಗರದ ನಲವತ್ತೆಂಟು ಹಬ್ ಗಳಲ್ಲಿ ಹಸಿರು ಸುಂದರಿ ಬೇಸರದಿಂದ ತನ್ನನ್ನು ಯಾರೂ ಉಪಯೋಗಿಸುತ್ತಿಲ್ಲ ಎಂಬ ಬೇಸರದಿಂದ ನಿಂತಿದ್ದಾಳೆ. ೨೦೧೭ರಲ್ಲಿ PBS (Public cycle service) ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆ ಆರಂಭವಾದಾಗ ಈ ಪರಿಕಲ್ಪನೆಗೆ ಯಾವ ಹೆಸರು ಇಡಬೇಕು ಎಂದು ಸಾರ್ವಜನಿಕರ ವಲಯದಲ್ಲಿ ಪ್ರಸ್ತಾವನೆ ಇಟ್ಟಾಗ ಜನರು ಹೇಳಿದ ಹೆಸರು ಟ್ರಿಣ್ ಟ್ರಿಣ್. ಇಂದು ಟ್ರಿಣ್ ಟ್ರಿಣ್ ಹೆಸರನ್ನು ಹಾಗೇ ಉಳಿಸಿಕೊಂಡು ಇದರ ಮುಂದೆ ಸಂಸ್ಥೆಯ ಮೈ ಬೈಕ್ ಹೆಸರು ಸೇರಿಸಿ ಟ್ರಿಣ್ ಟ್ರಿಣ್ ಮೈ ಬೈಕ್ ಎಂದು ಮುಂದುವರಿಯುತ್ತಿದೆ.

ಪವರ್ ಪೆಡಲ್ ಮೈ ಬೈಕ್ ಬೈಸಿಕಲ್ ಮೊಟ್ಟಮೊದಲ ಬಾರಿಗೆ ಆರಂಭವಾಗಿದ್ದು ಗುಜರಾತ್‌ನ ಅಹಮದಾಬಾದ್ ನಗರದಲ್ಲಿ. ಸದ್ಯಕ್ಕೆ ಮೈ ಬೈಕ್ ಬೈಸಿಕಲ್ ಮೈಸೂರು, ಕೊಚ್ಚಿ, ಎರ್ನಾಕುಲಂ, ಉತ್ತರ ಪ್ರದೇಶ, ಉದಯ್ ಪುರ್, ನಾಗ್ಪುರ್ ಸೇರಿದಂತೆ ಹತ್ತಕ್ಕೂ ಹೆಚ್ಚು ನಗರಗಳಲ್ಲಿ ಸೇವೆ ನೀಡುತ್ತಿದೆ.

ಮೈಸೂರಲ್ಲಿ ಮೈ ಬೈಕ್ ಬೈಸಿಕಲ್ ಕಂಪೆನಿ ಆರಂಭವಾಗಿ ಎರಡೂವರೆ ವರ್ಷಗಳಾಗಿವೆ. ಮೈಸೂರಿನಲ್ಲಿ ಒಟ್ಟು ೪೮ ಹಬ್‌ಗಳಿದ್ದು, ಐನೂರು ಬೈಸಿಕಲ್‌ಗಳು ಇವೆ. ಮೊದಲು ಸ್ಮಾರ್ಟ್ ಕಾರ್ಡ್ ಮೂಲಕ ಬೈಸಿಕಲ್ ಬಳಕೆ ಮಾಡವಾಗುತ್ತಿತ್ತು. ಆದರೆ ಪ್ರಸ್ತುತ ನೀವು ಮೈ ಬೈಕ್ ಪವರ್ ಪೆಡಲ್ ಬೈಸಿಕಲ್ ಬಳಸಬೇಕು. ಅಂದರೆ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಬಳಸಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಐಒಎಸ್‌ನಲ್ಲಿ MYBYK ಅಪ್ಲಿಕೇಶನ್ ಲಾಂಚ್ ಮಾಡಿದೆ.

ಪ್ರತಿಯೊಂದು ಹಬ್‌ಗೂ ಪ್ರತ್ಯೇಕ ಹೆಸರು ಇಟ್ಟಿದ್ದು, ಒಂದೊಂದು ಹಬ್‌ನಲ್ಲಿ ಐದರಿಂದ ಆರು ಬೈಸಿಕಲ್ ಇರುತ್ತವೆ. ಪ್ರತಿಯೊಂದು ಬೈಸಿಕಲ್‌ಗೂ ಐಡಿ ನಂಬರ್ ಇರುತ್ತದೆ. ಮೈ ಬೈಕ್ ಬೈಸಿಕಲ್ ಎಲೆಕ್ಟ್ರಿಕಲ್ ಸೈಕಲ್, ಪವರ್ ಪೆಡಲ್ ಅಸಿಸ್ಟೆಡ್, ಪೆಡಲ್ ತುಳಿದಾಗ ಸೆನ್ಸಾರ್ ರನ್ ಆಗಿ ಮೋಟಾರ್ ರನ್ ಆಗುತ್ತೆ. ಒಂದು ಬಾರಿ ಗರಿಷ್ಟ ೪ ನಾಲ್ಕು ಗಂಟೆ ಚಾರ್ಜ್ ಮಾಡಿದರೆ ಗರಿಷ್ಟ ೩೦ ಕಿ.ಮೀ. ದೂರ ಕ್ರಮಿಸಬಹುದಾಗಿದೆ.

MYBYK ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಇದರಲ್ಲಿ ನಿಮ್ಮ ಕನಿಷ್ಠ ಮಾಹಿತಿ ಉದಾಹರಣೆಗೆ ನಿಮ್ಮ ಹೆಸರು, ಇ-ಮೇಲ್ ಐಡಿ ಕೊಟ್ಟು ಪಾಸ್‌ವರ್ಡ್ ಸೆಟ್ ಮಾಡಿದರೆ ಅಪ್ಲಿಕೇಶನ್ ರಿಜಿಸ್ಟರ್ ಮಾಡಿಕೊಂಡು ನಿಮಗೆ ಎಲ್ಲೆಲ್ಲಿ ಸೈಕಲ್ ಹಬ್ ಇವೆ? ನಿಮ್ಮ ಸಮೀಪ ಇರುವ ಹಬ್ ಎಲ್ಲಿದೆ? ಎಷ್ಟು ಅಂತರ ಇದೆ? ಆ ಬೈಸಿಕಲ್ ಕಾರ್ಯಕ್ಷಮತೆ ಸ್ಥಿತಿ ಹೇಗಿದೆ? ಎಂಬುದರ ಮಾಹಿತಿ ಜೊತೆಗೆ ಇದರಲ್ಲಿ ಟ್ಯಾರಿಫ್ ಪ್ಲಾನ್ ಕೂಡ ಇರುತ್ತೆ. ಎಷ್ಟು ಗಂಟೆವರೆಗೆ ನಿಮಗೆ ಬೈಸಿಕಲ್ ಬಾಡಿಗೆ ಬೇಕಿದೆ, ಒಂದು ಗಂಟೆಗೆ, ಒಂದು ದಿನಕ್ಕೆ, ವಾರಕ್ಕೆ, ತಿಂಗಳಿಗೆ ಹೀಗೆ ವಿವಿಧ ಪ್ಲಾನ್ ಇರುತ್ತವೆ.

ಇದರಲ್ಲಿ ಗರಿಷ್ಟ ಎರಡು ತಿಂಗಳವರೆಗೆ ನೀವು ಈ ಬೈಸಿಕಲ್ ಬಾಡಿಗೆ ಪಡೆಯಬಹುದು. ಈ ತಿಂಗಳ ಪ್ಲಾನ್ ಅಲ್ಲಿ ವಿಥ್ ಚಾರ್ಜರ್ ಅಂಡ್ ವಿಥೌಟ್ ಚಾರ್ಜರ್ ಇರುತ್ತದೆ. ಸೈಕಲ್ ಜೊತೆಗೆ ಚಾರ್ಜರ್ ತಗೊಂಡು ಹೋಗಬಹುದು. ಹೀಗೆ ನಿಮ್ಮ ಎಲ್ಲ ಗೊಂದಲ, ಪ್ರಶ್ನೆಗಳಿಗೆ ಉತ್ತರ ಅಪ್ಲಿಕೇಶನ್‌ನಲ್ಲಿಯೇ ಇರುತ್ತದೆ. ಎಲ್ಲ ವಿವರಗಳನ್ನೂ ನೀವು ಮೈ ಬೈಕ್ ಅಪ್ಲಿಕೇಶನ್ ಮೂಲಕವೇ ತಿಳಿದುಕೊಂಡು ಬೈಸಿಕಲ್ ಸವಾರಿ ಮಾಡಬಹುದು.

ಮೈಸೂರಿಗರು ಈ ಮೈ ಬೈಕ್ ಬೈಸಿಕಲ್ ಬಳಸಲು ನಿರಾಸಕ್ತಿ ತೋರುತ್ತಿದ್ದಾರಲ್ಲ. ಹಾಗಾದರೆ ಇದರ ಬಾಡಿಗೆ ವೆಚ್ಚ ಎಷ್ಟು ದುಬಾರಿ ಇರಬಹುದು ಎಂದು ನೋಡೋವುದಾದರೆ ಅದು ಕೂಡ ಅಗ್ಗವೇ ಬಿಡಿ. ಪ್ರವಾಸಿಗರಿಗೆ ಒಂದು ದಿನ ಮೈಸೂರು ಸುತ್ತಾಡಲು ಬೇಕಾದಾಗ ಅವರು ಒಂದು ದಿನದ ಪ್ಲಾನ್‌ಗೆ ಹೋಗಬಹುದು. ಒಂದು ದಿನದ ಪ್ಲಾನ್ ತೆಗೆದುಕೊಂಡರೆ ೧೦೦ ರೂ. ಠೇವಣಿ ಇಡಬೇಕಾಗುತ್ತದೆ. ಈ ಹಣ ನಿಮಗೆ ರೀ ಫಂಡ್ ಆಗುತ್ತದೆ. ಒಂದು ದಿನದ ಬಾಡಿಗೆ ೭೯ ರೂ. ಇರುತ್ತದೆ. ೩೦ ನಿಮಿಷಕ್ಕೆ ೨೦ ರೂ. ಬಾಡಿಗೆ ಇರುತ್ತದೆ. ಎರಡು ತಿಂಗಳ ಪ್ಲಾನ್‌ಗೆ ೨,೫೦೦ ರೂ. ಇದ್ದು, ಇದರಲ್ಲಿ ೧,೦೦೦ ಠೇವಣಿ ಇದ್ದು ಇದು ಕೂಡ ರೀ ಫಂಡ್ ಆಗುತ್ತದೆ. ೫೦೦ ರೂ. ಬ್ಯಾಟರಿ ಚಾರ್ಜರ್ ಮತ್ತು ೫೦೦ ರೂ. ಬೈಸಿಕಲ್ ಠೇವಣಿ ಆಗಿರುತ್ತದೆ. ೧,೫೦೦ ರೂ.ಗಳಲ್ಲಿ ಎರಡು ತಿಂಗಳವರೆಗೆ ಸೈಕಲ್ ಬಳಸಬಹುದು. ಈ ಪ್ಲಾನ್‌ನಲ್ಲಿ ಮೈಸೂರಿನ ಯಾವುದೇ ಹಬ್‌ನಲ್ಲಿ ಸೈಕಲ್ ರಿಟರ್ನ್ ಮಾಡಬಹುದು. ಚಾರ್ಜರ್ ಖಾಲಿಯಾದಾಗ ಸೈಕಲ್ ಬದಲಾವಣೆ ಮಾಡಬಹುದು.

ನಗರದಲ್ಲಿ ಸದ್ಯದ ಮಟ್ಟಿಗೆ ರಾಮಸ್ವಾಮಿ ಸರ್ಕಲ್, ರೈಲ್ವೆ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಮೈಸೂರು ಯೂನಿವರ್ಸಿಟಿ ಹೀಗೆ ಒಂದಿಷ್ಟು ಹಬ್‌ಗಳಲ್ಲಿ ಬೇಡಿಕೆ ಹೆಚ್ಚಿದ್ದು, ಬಹಳ ಜನ ಪ್ರವಾಸಿಗರು ಒಬ್ಬರೇ ಇದ್ದಾಗ ಆಟೋ, ಕಾರು, ಬೈಕ್‌ಗಳಲ್ಲಿ ಸುತ್ತಾಟ ನಡೆಸುವುದಕ್ಕಿಂತ ಹೆಚ್ಚಾಗಿ ಮೈ ಬೈಕ್ ಬೈಸಿಕಲ್ ಬಳಸುತ್ತಾರೆ. ಜೊತೆಗೆ ಸ್ವಿಗ್ಗಿ, ಜೊಮೋಟೋ, ಜೆಪ್ಟೋ ಡೆಲಿವರಿ ಹುಡುಗರು ಕೂಡ ಬಳಸುತ್ತಾರೆ. ಜೊತೆಗೆ ಬೆಳಿಗ್ಗೆ ವಾಕಿಂಗ್ ಮಾಡು ವವರು ಸಂಜೆ ವಿಹಾರ ಮಾಡುವವರು ಬಳಸುತ್ತಾರೆ.

ಸೈಕಲ್‌ನ ಯಾವುದೇ ಸರ್ವೀಸ್ ಇದ್ದರೂ ಮೈ ಬೈಕ್ ಕಂಪೆನಿ ಉಚಿತವಾಗಿ ನೋಡಿಕೊಳ್ಳುತ್ತದೆ. ಬಳಕೆದಾರರು ಕೇವಲ ಬಾಡಿಗೆ ಕೊಟ್ಟು ಸೈಕಲ್ ಬಳಸಬಹುದು. ಸೈಕಲ್‌ನಲ್ಲಿ ದೋಷ ಕಂಡು ಬಂದರೆ ತಕ್ಷಣ ಕಂಪೆನಿಯ ಸಿಬ್ಬಂದಿ ಇರುವ ಜಾಗಕ್ಕೆ ಬಂದು ಸರಿಪಡಿಸಿ ನಿಮಗೆ ಎದುರಾಗುವ ತೊಂದರೆಗೆ ಪರಿಹಾರ ಒದಗಿಸುತ್ತಾರೆ. ವಾರಾಂತ್ಯದಲ್ಲಿ ಯುವ ಸಮೂಹ ಹೆಚ್ಚಾಗಿ ಈ ಬೈಸಿಕಲ್ ಬಳಸುವುದುಂಟು ಹಾಗೂ ಒಂದಷ್ಟು ಮಂದಿ ಬೈಸಿಕಲ್‌ಅನ್ನು ತಿಂಗಳ ಪ್ಲಾನ್‌ನಲ್ಲಿ ತೆಗೆದುಕೊಂಡು ಮನೆಗೆ ಚಾರ್ಜರ್ ತೆಗೆದುಕೊಂಡು ಬಂದು ಬಳಸುತ್ತಾರೆ. ಅಗತ್ಯ ಇರುವ ಬಳಕೆದಾರರು ಹಬ್‌ಗಳಿಗೆ ಬಂದು ದಿನಾ ಸೈಕಲ್ ಬದಲಾವಣೆ ಮಾಡುವುದಿಲ್ಲ. ತಿಂಗಳ ಪೂರಾ ತಮ್ಮ ಮನೆಯಲ್ಲೇ ಇಟ್ಟುಕೊಂಡಿರುತ್ತಾರೆ.

ದಿನದ ೨೪ ಗಂಟೆಗಳೂ ಮೈ ಬೈಕ್ ಸೈಕಲ್ ಸೌಲಭ್ಯ ಇರುತ್ತದೆ. ಈ ಸಂಸ್ಥೆಯ ಸಿಬ್ಬಂದಿ ಬೆಳಿಗ್ಗೆ ೬ರಿಂದ ರಾತ್ರಿ ೧೧ರವರೆಗೆ ಸ್ಥಳೀಯವಾಗಿ ಲಭ್ಯ ಇರುತ್ತಾರೆ. ಸೈಕಲ್‌ನಲ್ಲಿ ಏನೇ ತಾಂತ್ರಿಕ ಸಮಸ್ಯೆ ಎದುರಾದರೂ ಕಸ್ಟಮರ್ ಕೇರ್‌ನಲ್ಲಿ ಮಾಹಿತಿ ಪಡೆದು ಗ್ರಾಹಕರಿಗೆ ನೇರವಾಗಿ ನೆರವು ನೀಡುತ್ತಾರೆ. ಸೈಕಲ್‌ನಲ್ಲಿ ಜಿಪಿಎಸ್ ಇರುವುದರಿಂದ ಗ್ರಾಹಕರು ಎಲ್ಲೇ ಇದ್ದರೂ ಸಿಬ್ಬಂದಿ ಆ ಸ್ಥಳಕ್ಕೆ ಬಂದು ಸಹಾಯ ಮಾಡಬಹುದಾಗಿದೆ.

ಆದರೆ ಸಮಸ್ಯೆ ಆಗೋದು ಎಲ್ಲಿ ಅಂದರೆ ಗ್ರಾಹಕರು ಮೊದಲ ಬಾರಿ ಬಳಕೆ ಮಾಡುವಾಗ ಅಪ್ಲಿಕೇಶನ್‌ನಲ್ಲಿ ಸೈಕಲ್ ನೋಡಿ ಅನ್‌ಲಾಕ್ ಮಾಡಿ ತೆಗೆದುಕೊಳ್ಳುತ್ತಾರೆ. ಆದರೆ ಅದಕ್ಕೂ ಮೊದಲು ಬಳಕೆದಾರರು ಸೈಕಲ್ ರೇಂಜ್ ನೋಡಬೇಕು. ಯಾವ ಟೈಮಿಗೆ ರೀಚಾರ್ಜ್ ಆಗಿದೆ? ಎಷ್ಟು ಕಿಮೀ ದೂರ ಕ್ರಮಿಸಬಹುದು? ಮುಂತಾದ ಕಾರ್ಯಕ್ಷಮತೆ ಅಪ್ಲಿಕೇಶನ್ ನಲ್ಲಿಯೇ ಇದ್ದು, ಆ ಸೈಕಲ್ ಬಗ್ಗೆ ಮಾಹಿತಿ ಅಪ್‌ಡೇಟ್ ಆಗಿರುತ್ತದೆ. ಈ ಬಗ್ಗೆ ಬಳಕೆದಾರರು ಗಮನಿಸದೇ ಜಾರ್ಜ್ ಕಡಿಮೆ ಇರುವ ಸೈಕಲ್ ತೆಗೆದುಕೊಂಡು ಹೋಗಿ ದೂರ ಹೋಗಿ ದೂರು ಹೇಳುತ್ತಾರೆ. ಪವರ್ ಬಿಟ್ಟು ತಾವೇ ಒಂದಷ್ಟು ಬಾರಿ ಪೆಡಲ್ ಮಾಡಿದರೆ ನಿರ್ದಿಷ್ಟ ಕಿ.ಮೀ.ಗಿಂತ ಹೆಚ್ಚು ಮೂರ್ನಾಲ್ಕು ಕಿ.ಮೀ. ದೂರ ಕ್ರಮಿಸಬಹುದಾಗಿರುತ್ತದೆ. ಸೈಕಲ್ ಸವಾರರಿಗೆ ಅಂತಾನೆ ಪ್ರತ್ಯೇಕವಾಗಿ ಸೈಕಲ್ ಟ್ರ್ಯಾಕ್ ಯೋಜನೆ ಕೈಗೊಂಡರೂ ಕೆಲವು ಸಮಸ್ಯೆ ಉಂಟಾಗಿ ಈ ಸೈಕಲ್ ಟ್ರ್ಯಾಕ್ ವ್ಯವಸ್ಥೆ ಇಂದು ಅಪೂರ್ಣಗೊಂಡಿದೆ. ಆದರೆ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಕುವೆಂಪು ನಗರ ವೃತ್ತದಿಂದ ಕೆ.ಇ.ಬಿ. ವೃತ್ತದವರೆಗೆ ಈ ಸೈಕಲ್ ಟ್ರ್ಯಾಕ್ ಕಾಣಬಹುದು. ಆದರೆ ಆ ಸೈಕಲ್ ಟ್ರ್ಯಾಕ್‌ನಲ್ಲಿ ಸೈಕಲ್ ಸವಾರರು ಹೋಗುವುದಕ್ಕಿಂತ ವಾಕಿಂಗ್ ಮಾಡುವುದಕ್ಕೆ ಸಾರ್ವಜನಿಕರು ಬಳಸಿಕೊಳ್ಳುತ್ತಿದ್ದಾರೆ.

ಮೊದಲ ಅವಧಿಯಲ್ಲಿ ಈ ಟ್ರಿಣ್ ಟ್ರಿಣ್ ಸೈಕಲ್ ನಿರ್ವಹಣೆ ಒಳಗೊಂಡಂತೆ ಸಂಪೂರ್ಣ ಸರ್ಕಾರದ ಯೋಜನೆ ಆಗಿತ್ತು. ೨೦೧೭ರಿಂದ ೨೦೨೩ರವರೆಗೆ ೬ ವರ್ಷಗಳ ಅವಽಯವರೆಗೆ ಈ ಗ್ರೀನ್ ವ್ಹೀಲ್ ರೈಡ್ ಸಂಸ್ಥೆ ಗುತ್ತಿಗೆ ಪಡೆದುಕೊಂಡಿತ್ತು. ಇದೀಗ ೨೦೨೩ರಿಂದ ಗುಜರಾತ್ ಅಹಮದಾಬಾದ್‌ನ ಗ್ರೀನ್ ಪೀಡಿಯಾ ಬೈಕ್ ಶೇರ್ ಲಿಮಿಟೆಡ್ ಕಂಪೆನಿ ಟ್ರಿಣ್ ಟ್ರಿಣ್ ಮೈ ಬೈಕ್ ಬೈಸಿಕಲ್ ಹೆಸರಿನಲ್ಲಿ ಪ್ರಸ್ತುತ ಗುತ್ತಿಗೆ ಪಡೆದು ಕಾರ್ಯನಿರ್ವಹಿಸುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಸೈಕಲ್ ಹಬ್ಗಳಿಗೆ ಜಾಗ ನೀಡುತ್ತಿದೆ. ಸದ್ಯಕ್ಕೆ ಮೈಸೂರು ನಗರ ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದ್ದು, ಜನಸಂಖ್ಯೆ ಹೆಚ್ಚಾಗುವುದರ ಜೊತೆಗೆ ವಾಹನಗಳ ಸಂಖ್ಯೆ ಕೂಡ ಜಾಸ್ತಿಯಾಗಿ ಬೆಂಗಳೂರಿನಂತೆ ಮೈಸೂರಿನಲ್ಲಿಯೂ ಸಂಚಾರ ದಟ್ಟಣೆ ಸಾಮಾನ್ಯವಾಗಿ ಬಿಟ್ಟಿದೆ. ಇಂದು ನಾವು ವಾಕಿಂಗ್ ಮಾಡುವುದಕ್ಕೂ ಬೈಕ್ ಬಳಸುವ ಬದಲು ಸೈಕಲ್ ಬಳಸಿ ಪರಿಸರ ಸ್ನೇಹಿ ವಾತಾವರಣದಲ್ಲಿ ಬದುಕಲು ಅನುವು ಮಾಡಿಕೊಳ್ಳಬೇಕಾಗಿದೆ.

ಆಂದೋಲನ ಡೆಸ್ಕ್

Recent Posts

ಹನೂರು| ಶಿರಗೋಡು ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ಲಕ್ಷ್ಮೀ ವೆಂಕಟೇಶ್ವರ ರಥೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಶಿರಗೋಡು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ರಥೋತ್ಸವ ಭಾನುವಾರ ಬೆಳಿಗ್ಗೆ…

19 mins ago

ಇರಾನ್ ಇಸ್ರೇಲ್ ಸಂಘರ್ಷ ತೈಲ ಬೆಲೆ ಚಿನ್ನದ ಬೆಲೆ ಏರಿಕೆ ..?

ಟೆಹರಾನ್‌: ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಪರಿಣಾಮ ಇದೀಗ ಇರಾನ್ ಕೂಡ ಪ್ರತೀಕಾರವಾಗಿ ಇಸ್ರೇಲ್ ಅಮೆರಿಕಾ…

54 mins ago

ಕೊಡಗು| ಬೆಟ್ಟತ್ತೂರು ಬಳಿ ಆನೆ ದಾಳಿಗೆ ವಿದ್ಯಾರ್ಥಿನಿ ಬಲಿ

ಕೊಡಗು: ಆನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮದೆ ಬೆಟ್ಟತ್ತೂರು ಗ್ರಾಮದ ಗಿರೀಶ್‌ ಎಂಬುವವರ ಪುತ್ರಿ ಪೂಜಾ…

1 hour ago

ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ಇಲ್ಲ: ಡಿಎಂಕೆ ಸ್ಪಷ್ಟ ಸಂದೇಶ

ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಜಾತ್ಯಾತೀತ ಪ್ರಗತಿಪರ ಮೈತ್ರಿಕೂಟದ ಪಕ್ಷಗಳಿಗೆ ಸೀಟು ಹಂಚಿಕೆ…

1 hour ago

ಚನ್ನಪಟ್ಟಣದಲ್ಲಿ ಕಾಡಾನೆ ಸೆರೆಗೆ ಸಾಕಾನೆಗಳ ಮೂಲಕ ಕಾರ್ಯಾಚರಣೆ

ರಾಮನಗರ: ಚನ್ನಪಟ್ಟಣ-ರಾಮನಗರ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎರಡು ಕಾಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿದೆ. ಚನ್ನಪಟ್ಟಣದ ಬಿ.ವಿ.ಹಳ್ಳಿ…

2 hours ago

ಚಿಕ್ಕಬಳ್ಳಾಪುರಕ್ಕೂ ಅಲಿ ಖಮೇನಿಗೂ ಇದೆ ನಂಟು

ಚಿಕ್ಕಬಳ್ಳಾಪುರ: ಇಸ್ರೇಲ್‌ ಹಾಗೂ ಅಮೇರಿಕಾ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಖನೇನಿಯ ಮಗಳು,…

2 hours ago