ದಿವಾಕರ್ ಅವರ ಒಡನಾಟದಿಂದ ನನಗೆ ವಿಶ್ವ ಸಾಹಿತ್ಯದ ಬಾಗಿಲುಗಳು ತೆರೆದವು. ನೊಬೆಲ್ ಪ್ರಶಸ್ತಿ ಪಡೆದ ಐವತ್ತು ಲೇಖಕರ ಒಂದೊಂದು ಕಥೆಯನ್ನು ಆಯ್ದು ಅನುವಾದಿಸಿ ಒಂದು ಸಂಕಲನವಾಗಿ ಪ್ರಕಟಿಸುವುದು ಸರಳವಾದ ಮಾತೇನೂ ಅಲ್ಲ. ಹೀಗೇ ‘ಕಥಾಜಗತ್ತು’ ಎನ್ನುವ ಮಹತ್ವದ ಪುಸ್ತಕವನ್ನು ದಿವಾಕರ್ ರೂಪಿಸಿದ್ದರು. ಅದರ ಜೊತೆಗೆ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ‘ವಿಶ್ವ ಸಾಹಿತ್ಯ ಮಾಲೆ’ಯಲ್ಲಿ ಕೆಲವು ಕಾದಂಬರಿಗಳನ್ನೂ ದಿವಾಕರ್ ಅನುವಾದಿಸಿ ಕೊಟ್ಟಿದ್ದರು. ಸಾಹಿತ್ಯದ ಬಗೆಗಲ್ಲದೇ, ಅನುವಾದದ ಬಗ್ಗೆ ನನ್ನ ಧೋರಣೆ ರೂಪುಗೊಳ್ಳಲೂ ದಿವಾಕರ್ ಅವರೇ ಕಾರಣವೆನ್ನಬಹುದು. ಅವರಿಗೆ ಲೇಖಕರ ಹೆಸರುಗಳು ಎಷ್ಟು ಸರಳವಾಗಿ ನೆನಪಿರುತ್ತಿದ್ದುವೋ, ಅಷ್ಟೇ ಗಟ್ಟಿಯಾಗಿ ಅನುವಾದಕರ ಹೆಸರು- ಶೈಲಿಗಳನ್ನು ನೆನಪು ಮಾಡಿಟ್ಟುಕೊಂಡಿರುತ್ತಿದ್ದರು.
ಎಂಬತ್ತರ ಕ್ಲಬ್ಬಿಗೆ
ವಿಶ್ವ ಸಾಹಿತ್ಯದಲ್ಲಿ ದಿವಾಕರ್ ಅವರಿಗೆ ಪ್ರಿಯವಾದದ್ದು ಲ್ಯಾಟಿನ್ ಅಮೆರಿಕನ್ ಸಾಹಿತ್ಯ. ಲ್ಯಾಟಿನ್ ಅಮೆರಿಕನ್ ಸಾಹಿತ್ಯ ಮತ್ತು ‘ಮ್ಯಾಜಿಕ್ ರಿಯಲಿಸಂ’ ಎಂದರೆ ತಕ್ಷಣಕ್ಕೆ ಮನಸ್ಸಿಗೆ ಬರುತ್ತಿದ್ದ ಹೆಸರು ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸನದ್ದು. ಆದರೆ ದಿವಾಕರ್ ಇನ್ನೂ ವಿಸೃತವಾದ ಸಾಹಿತ್ಯವನ್ನು ಓದಿದ್ದಲ್ಲದೇ, ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು. ದಿವಾಕರ್ ಅವರ ಸ್ನೇಹವಲಯದಲ್ಲಿ ಸೇರಿದ ನಂತರ ಅವರು ತಮ್ಮಲ್ಲಿದ್ದ ಹಲವು ಉತ್ತಮ ಪುಸ್ತಕಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ವಾಕ್ಲಾವ್ ಹವೆಲ್, ಹಾರ್ಹೆ ಲೂಯಿ ಬೊರ್ಹೆಸ್, ಇಸಾಬೆಲ್ ಅಯೆಂಡೆ, ಯಆವೋ ರೋಸಾ,ಇಸಿಡರೋ ಬ್ಲಾಸ್ಟಿನ್ – ಈ ಎಲ್ಲ ಹೆಸರುಗಳನ್ನೂ ನಮಗೆ ಪರಿಚಯಿಸಿದವರೇ ದಿವಾಕರ್, ಅಯೆಂಡೆಯ ‘ಹೌಸ್ ಆಫ್ ದ ಸ್ಪಿರಿಟ್ಸ್’ ಯಾವ ರೀತಿಯಲ್ಲಿ ಮಾರ್ಕೇಸಿಯನ್ ಪರಂಪರೆಗೆ ಸೇರುತ್ತದೆ ಎನ್ನುವುದನ್ನು ಎಷ್ಟು ಪ್ಯಾಷನೇಟ್ ಆಗಿ ಹೇಳುತ್ತಿದ್ದರು ಎನ್ನುವುದನ್ನು ಮರೆಯಲು ಸಾಧ್ಯವೇ ಇಲ್ಲ. ದಿವಾಕರ್‌ಗೆ ಈ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಇದ್ದ ಆಸಕ್ತಿ, ಅವರನ್ನು ಸ್ಪ್ಯಾನಿಷ್ ಭಾಷೆ ಕಲಿಯಲು ಪ್ರೇರೇಪಿಸಿತ್ತು. ಆ ಲೇಖಕರ ಹೆಸರಿನ ಸರಿ ಉಚ್ಚಾರ ಹೇಗಿರಬೇಕೆಂದು ನಮಗೆ ಸರಿಯಾಗಿ ತಿಳಿಹೇಳುತ್ತಿದ್ದರು.
ಈ ಎಲ್ಲ ಲೇಖಕರೂ ಒಂದೆಡೆಗಿದ್ದರೆ, ದಿವಾಕರ್ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದವನು ಅಮೆರಿಕದ ದಕ್ಷಿಣಭಾಗಕ್ಕೆ ಸಂದಿದ್ದ ವಿಲಿಯಂ ಫಾಕ್ನರ್. ಫಾಕ್ನರ್ನ ಕಾದಂಬರಿ ಮತ್ತು ಐಹಿತ್ಯ-ಸಂಗೀತ ಕಥೆಗಳ ಕಟ್ಟುವಿಕೆಯ ಬಗ್ಗೆ ನಮಗೆ ಹೊಸ ಒಳನೋಟಗಳು ವಿಶೇಷ ಆಸಕ್ತಿ ಬಂದದ್ದೇ ದಿವಾಕರ್ ಅವರ ಜೊತೆಗಿನ ಒಡನಾಟದಿಂದ. ಕನ್ನಡ ಸಾರಸ್ವತ ಲೋಕದಲ್ಲಿ ವಿಶ್ವ ಸಾಹಿತ್ಯದ ಓದು, ಮುಖ್ಯವಾಗಿ ಕಮೂ, ಕಾಪ್ಕಾ, ಸಾರ್ತ್ ಮತ್ತು ಅಸ್ತಿತ್ವವಾದದತ್ತ ಕೇಂದ್ರೀಕೃತವಾಗಿದ್ದ ಸಮಯದಲ್ಲಿ ದಿವಾಕರ್ ನಮಗೆ ಮ್ಯಾಜಿಕ್ ರಿಯಲಿಸಂ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು. ಅವರು ನಿಜಕ್ಕೂ ಆ ಬಗ್ಗೆ ಹೆಚ್ಚಿನ ಟಿಪ್ಪಣಿಗಳನ್ನು ಬರೆದು ಮೀಮಾಂಸೆಯ ಮೂಲಕ ಆ ಸಾಹಿತ್ಯವನ್ನು ಪರಿಚಯಿಸಿದವರಲ್ಲ. ಬದಲಿಗೆ ಅನುವಾದಗಳ ಮೂಲಕ ಆ ಕೃತಿಗಳನ್ನು ಒದಗಿಸಿಕೊಟ್ಟು ನೇರವಾಗಿ ಆ ಕೃತಿಗಳನ್ನು ಆಸ್ವಾದಿಸಲು ಕಾರಣೀಭೂತರಾದರು. mssriram@pm.me
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…