ಅಕ್ಷತಾ
ರಜೆಗೆ ಊರಿಗೆ ಬಂದಿದ್ದೆ. ಒಂದು ಬದಿಯಲ್ಲಿ ಬಂಟಾಜೆ ಕಾಡಿನಲ್ಲಿ ಹುಟ್ಟಿ ಸೀರೆ ನದಿಯನ್ನು ಸೇರುವ ತೊರೆ. ಇನ್ನೊಂದು ಬದಿಯಲ್ಲಿ ತೆಂಗು, ಅಡಕೆ, ಬಾಳೆ ತೋಟ. ಇವೆರಡರ ನಡುವೆ ಅತ್ತ ಕರ್ನಾಟಕವೂ ಅಲ್ಲದ, ಇತ್ತ ಪೂರ್ಣಪ್ರಮಾಣದಲ್ಲಿ ಕೇರಳಕ್ಕೂ ಸೇರದ ಪಕ್ಕಾ ದೇಸೀ ಶೈಲಿಯ ಹೆಂಚಿನ ಮನೆಯಾ ದುದರಿಂದ ಯಾವತ್ತಿಗೂ ಬೋರೆನ್ನಿಸಿದ ನೇಚರ್ ರೆಸಾರ್ಟ್ ನಮ್ಮನೆ! ಇಲ್ಲಿ ನೆರೆಹೊರೆಯವರೆಂದರೆ ಪಟ್ಟಣಗಳಲ್ಲಿ ಇರುವಂತೆ ಮೀಟರ್ ದೂರದವರಲ್ಲ. ಒಂದು ಒಂದೂವರೆ ಕಿಲೋಮೀಟರುಗಳಷ್ಟು ಮನೆಗಳ ನಡುವೆ ಅಂತರವಿದ್ದರೂ ಮನಸ್ಸುಗಳು ಕೂಗಳತೆಗೂ ಹತ್ತಿರದ್ದು.
ಅಂದು ಭಾನುವಾರ. ಬೆಳಿಗ್ಗೆ ಅತ್ತೆ ಮಾಡಿಕೊಟ್ಟ ಬಿಸಿ ಬಿಸಿ ಚಹಾ ಹೀರುತ್ತಾ ಜಗುಲಿಯಲ್ಲಿ ಕುಳಿತಿದ್ದೆ. “ಟಕಟಕಟಕ್……..’ ದೂರದಿಂದ ಸ್ವರ ಕೇಳಿ ಬಂತು. `ನರಸಣ್ಣ ಬರ್ತಿದಾನೆ ಅನ್ಸತ್ತೆ…..ಪಂಚೆ- ಶಲ್ಯ, ಎರಡು ತೆಂಗಿನಕಾಯಿ ಎತ್ತಿಟ್ಟೇಕು’ ಎನ್ನುತ್ತಾ ಅತ್ತೆ ಒಳ ಹೋದರು. ಈ ನರಸಣ್ಣನ ಸುದ್ದಿಯನ್ನು ಕರೆ ಮಾಡಿದಾಗ ಕೆಲವೊಮ್ಮೆ ಅತ್ತೆ ಹೇಳುತ್ತಿದ್ದ ನೆನಪು. ಮುಖತ: ನೋಡಿರಲಿಲ್ಲ. ‘ಅನ್ನಿಗೆ ಯಾಕೆ ಕೊಟ್ಟೇಕು?’ ಕೇಳಿದೆ. ‘ನರಸಣ್ಣ ಮನೆಯ ದೃಷ್ಟಿ ತೆಗೀತಾನೆ, ಅವು ಹೇಳಿದ್ದು ನಿಜ ಆಗುತ್ತೆ. ಅತ್ತಿಗೆ ದಾನ ಮಾಡಿದ್ರೆ ಮನೆಗೆ ಒಳ್ಳೇದು’ ಅತ್ತೆಯ ಆ ಕಾಲದ ನಂಬಿಕೆಗಳು ಈಗಿನ ಕಾಲದ ನಮ್ಮಂತಹವರಿಗೆ ಪಥ್ಯವಾಗುವುದು ಅಷ್ಟರಲ್ಲೇ ಇದೆ ಬಿಡಿ. ಆದರೂ ಅವರನ್ನು ನೋಡಬೇಕೆನ್ನುವುದಕ್ಕಾಗಿ ಜಗುಲಿಯಲ್ಲೇ ಕುಳಿತೆ.
‘ಹಾಲಕ್ಕಿ ನುಡಿತೈತೆ, ಹಾಲಕ್ಕಿ ನುಡಿತೈತೆ…ಒಳ್ಳೆದಾಗೈತೆ ಅಮ್ಮ ಒಳ್ಳೆದಾಗತೈತೆ. ಹಿಂದಿದ್ದ ಕಷ್ಟ ಹೋಯ್ತು ಅಂದಳಿ, ಮುಂದೆ ಆಗದೆಲ್ಲ ಒಳ್ಳೇದೇ ತಿಕ್ಕಳಿ, ಕಷ್ಟ ಬಂತೂಂತ ಕೊರಗೋರಲ್ಲ…ಸುಖಕ್ಕೆ ಅಂಜೇಡಿ…’ ಎಂದು ಕೈಯಲ್ಲಿದ್ದ ಬುಡಬುಡಿಕೆಯನ್ನು “ಟಕಟಕಟಕಾ..’ ಜೋರಾಗಿ ಅಲ್ಲಾಡಿಸುತ್ತಾ ಅಂಗಳದಲ್ಲಿ ಬಂದು ನಿಂತ ತಲೆಗೆ ಕೆಂಪು ಬಣ್ಣದ ಉದ್ದದ ರುಮಾಲಿನ ಮುಂಡಾಸು, ತುಂಬು ತೋಳಿನ ಶರ್ಟು, ಕಚ್ಚೆ ಪಂಚೆ, ಹೆಗಲಿನಲ್ಲಿ ತುಸು ಭಾರವಾಗಿದ್ದ ಜೋಳಿಗೆಯ ಕೋಲು ಮುಖದ 56- 57 ವಯಸ್ಸು ದಾಟಿದ ವ್ಯಕ್ತಿ! ನಕ್ಕೆ, ಅವರು ನಗಲಿಲ್ಲ. ಬಿಗುಮುಖದ ಹಿಂದೆ ಏನೋ ನೋವಿನ ಛಾಯೆ ಕಾಣಿಸಿತು.
“ಅಮ್ಮಾ..ಏನಾರೂ ದಾನ ಕೊಡಿ ಕೇಳಿದರು. ‘ನೀವು ಹೇಳೋ ಶಾಸ್ತ್ರ ನಿಜ್ಜಾಗುತ್ತಂತೆ. ಆದ್ರೆ ಅದೇನೂ ಹೇಳೆ ನೇರವಾಗಿ ದಾನ ಕೇಳೀರಲ್ಲ!’ ಎಂದು ಮಾತಿಗೆಳೆದೆ.
ಇದನ್ನೂ ಓದಿ:-ಬೀದಿಗೆ ಬಿದ್ದವರಿಗೆ ಚಳಿಗಾಲ ಎಷ್ಟೊಂದು ನರಕ…
‘ಅಕ್ಕಾ… ಈಗಿನ ಕಾಲದವು ಇದೆಲ್ಲ ನಂಭೀರಾ! ನೀವು ಶಾಸ್ತ್ರ ಕೇಳಿದ್ರೆ ನನ್ಗ ನೂರೋ…ಇನ್ನೂರೋ ಸಿಗತ್ತೆ, ಆದ್ರೆ ಬೇಡ ಅಂತೀರಲ್ಲ. ಈಗಿನ ಕಾಲದಗೆ ಅದು ಒಗ್ಗಲ್ಲ ಅನ್ನೋದು ಗೊತ್ತವ್ವಾ. ಅದ್ರೆ ಏನೂ ಹೇಳಲ್ಲ ಕಣಾ’ ಎಂದು ಎಲಾ! ನಾನು ಮನಸ್ಸಲ್ಲಿ ಅಂಡ್ಕೊಂಡಿದ್ದು ಹೇಳಿದ್ದಲ್ಲ, ಪರ್ವಾಗಿಲ್ಲ ಎಂದು ನನ್ನಷ್ಟಕ್ಕೇ ಗೊಣಗಿಕೊಂಡು ‘ಹೆಂಗಿದೆ ನಿನ್ನ ಶಾಸ್ತ್ರ ನೋಡೋಣ, ನನ್ನು ಹೇಳಿ. ಬನ್ನಿ ಕೂತುಕೊಳ್ಳಿ ಎಂದಾಗ ಮುಜುಗರದಿಂದ ಜಗುಲಿಯ ಕೊನೆಯಲ್ಲಿ ಕುಳಿತರು. ‘ಶಾಸ್ತಾನ ಪರೀಕ್ಷೆ ಮಾಡೇಡ್ರಿ, ಎರಡು ರೀತಿ ಹೇಳ್ತಿವಿ…ನೋಡಿ ಇದು ಬುಡುಬುಡ್ಡೆ, ಇನ್ನೊಂದು ಚಿಂತಾಮಣಿ ಅಂ… ಹೇಳಿದ್ದೆಲ್ಲ ದಿಟವಾಗತ್ತೆ’ ಎನ್ನುತ್ತಾ ತನ್ನ ಜೋಳಿಗೆಯಿಂದ ತಾಳೆವೋಲೆಯ ಕಟ್ಟನ್ನು ಹೊರತೆಗೆದರು. ಬುಡಬುಡಿಕೆಯನ್ನಾದರೂ ಕೇಳಿ, ನೋಡಿ ಬಲ್ಲೆ.
ಬದುಕು ಎಲ್ಲೆಲ್ಲೋ ಕರೆದೊಯ್ಯುತ್ತೆ ಎಂಬುದಕ್ಕೆ ಸಾಕ್ಷಿಯಾದವರು ಬುಡಬುಡಿಕೆ ರಾಮಣ್ಣ ಅಲಿಯಾಸ್ ರಾಮಚಂದ್ರ. ಸರಿಸುಮಾರು 35 ವರ್ಷಗಳಿಂದ ತಮ್ಮ ಕುಲಕಸುಬನ್ನು ಮಾಡುತ್ತಿರುವ ಇವರು ನಮಗೆಲ್ಲ ವರ್ಷಕ್ಕೊಮ್ಮೆ ಬರುವ ಕರಾವಳಿಯ ಹಳ್ಳಿಗಳ ಮನೆಮನೆಗಳ ನೆಂಟ. ಆದರೆ, ಚಿಂತಾಮಣಿ ಹೊಸತು. ‘ಸರಿ,
ಚಿಂತಾಮಣಿಯಲ್ಲೇ ಹೇಳು’ ಎಂದೆ. ಕೈಗೆ ಐದು ರೂಪಾಯಿ ನಾಣ್ಯ ಕೊಟ್ಟು ತಾಳೆವೋಲೆ ಎದುರು ಹಿಡಿದು ನಿಮಗಿಷ್ಟ ಬಂದ ಹಾಳೆಯ ಮಧ್ಯಕ್ಕೆ ಇಡಕ್ಕಾ ಎಂದ. ಎರಡೂರು ಸಲ ಹೀಗೆ ನಾಣ್ಯ ಇಟ್ಟ ನಂತರ ಸರಸರನೆ ಹೇಳಲಾರಂಭಿಸಿದರು.
‘ಏನಿದೆ ತಾಳೆವೋಲೆಯಲ್ಲಿ?’ ಕೇಳಿದೆ. ‘ತಾಳೆವೋಲೆ ನಿಮ್ಮ ಭಾಷೇಲಿ, ನಾವಿದಕ್ಕೆ ಚಿಂತಾಮಣಿ ಅಂತೀವಿ, ಅರ್ಧ ಬಸವೇಶ್ವರ, ಇನ್ನರ್ಧ ರಾಮ’ ಎಂದು ಶಾಸ್ತ್ರ ಹೇಳಿ ನೂರು ರೂಪಾಯಿ ತೆಗೆದುಕೊಂಡು ಮತ್ತೆ ‘ವಸ್ತ ದಾನ ಮಾಡೀ ಎಂದರು. ಅತ್ತೆ ಎರಡು ಪಂಚೆ, ತೆಂಗಿನಕಾಯಿ ತಂದು ಜೋಳಿಗೆಗೆ ತುಂಬಿಸಿದಾಗ ಹೊರಡಲನುವಾದವನನ್ನು ತಡೆದು ‘ಹೆಸರೇನು, ಯಾವೂರು?’ ಕೇಳಿದೆ. ‘ನಂಜನಗೂಡು ಅಕ್ಕಾ…’ ಎಂದು ಬುಡಬುಡಿಕೆ ಹಾಗೂ ಚಿಂತಾಮಣಿ ಜೋಳಿಗೆಯಲ್ಲಿಟ್ಟು ಮಾತಿಗಿಳಿದರು.
‘ನನ್ನು ನಂಜನಗೂಡು, ನಮ್ಮನ್ನು ಮೈಸೂರು ಕಡೆ ಹಾಲಕ್ಕಿಯವು, ಬುಡಬುಡಿಕೆಯವು ಅಂತಾರೆ, ನೀವೆಲ್ಲ ಈ ಕಡೆ ‘ನರಸಣ್ಣ’ ಅಂತೀರಿ. ನಾವು ಐದು ಜನ ಗಂಡ್ಲಕ್ಕು. ಅಜ್ಜ, ಅಪ್ಪ ಎಲ್ಲೂ ಇದೇ ವೃತ್ತಿ ಮಾಡ್ಕೊಂಡಿದ್ದವು. ಈಗ ನಾನು ಮಾಡ್ಕೊಂಡಿದೀನಿ. ಇಪ್ಪತ್ತು ವರ್ಷಗಳ ಹಿಂದೆ ಪುತ್ತೂರು, ಕಾಸರಗೋಡು ಭಾಗಗಳಿಗೆ ದೂರದ ಸಂಬಂಧಿಕರೊಬ್ಬರ ಜೊತೆ ಬರೋಕೆ ಶುರು ಮಾಡ್ಡೆ. ಅವ್ರು ತೀರೋದ ನಂತ್ರ ನಾ ಬರ್ತೀನಿ ವರ್ಷಕ್ಕೊಂದ್ದಲ. ಅಕ್ಕಾ ನಮ್ಹು ಹೆಣ್ಣು ದೇವು ‘ಮದ್ದೂರಮ್ಮ’. ಅವನ್ನ ನಂಬಿ ಚಿಂತಾಮಣಿ ಹೇಳ್ತಿವಿ. ವರ್ಷಕ್ಕೊಮ್ಮೆ ದಸರಾ ಟೈಮಲ್ಲಿ ಕುಟುಂಬ ದವೆಲ್ಲ ಸೇರಿ ಬಾಡೂಟ ಎಡೆ ಕೊಡ್ತೀವಿ. ಮನೆಮನೆಗೆ ಹೋಗಿ ಚಿಂತಾಮಣಿ ಹೇಳೋದು, ಜಾವ ಕಟ್ಟೋದೇ ನಮ್ ಕಾಯ್ಕ, ಅದು ಬಿಟ್ಟು ಬೇರೇನೂ ಗೊತ್ತಿಲ್ಲ
ಎಂದರು.
ಎಲ್ಲಿಯ ನಂಜನಗೂಡು! ಎಲ್ಲಿಯ ಕಾಸರಗೋಡು! ಬದುಕು ಎಲ್ಲೆಲ್ಲೋ ಕರೆದೊಯ್ಯುತ್ತೆ ಎಂಬು ದಕ್ಕೆ ಸಾಕ್ಷಿಯಾದವನು ಬುಡಬುಡಿಕೆ ರಾಮಣ್ಣ ಅಲಿಯಾಸ್ ರಾಮಚಂದ್ರ, ಸರಿಸುಮಾರು 35 ವರ್ಷಗಳಿಂದ ತನ್ನ ಕುಲಕಸುಬನ್ನು ಮಾಡುತ್ತಿರು ವವರು ಆಕಸ್ಮಿಕವಾಗಿ ಕರಾವಳಿಯ ಭಾಗಕ್ಕೆ ಬಂದರೂ ಈಗ ಇವರು ವರ್ಷಕೊಮ್ಮೆ ಬರುವ ಹಳ್ಳಿಯ ಮನೆ ಮನೆಗಳ ನೆಂಟ. ಕೆಲವು ಮನೆಗಳಲ್ಲಿ ಪ್ರೀತಿ ತೋರಿಸಿ ದರೆ ಇನೂ ಕೆಲವೆಡೆ ಸಂಶಯದಿಂದ ನೋಡುತ್ತಾರೆ. ಈ ಕಡೆ ಜಾವ ಕಟ್ಟೋದ್ರ ಬಗ್ಗೆ ಜನರಿಗೆ ಗೊತ್ತಿಲ್ಲ, ಅದ್ದೆ ಚಿಂತಾಮಣಿ ಮಾತ್ರ ಹೇಳೀನಿ’ ಎನ್ನುತ್ತಾರೆ.
ಅವರು ಹೇಳಿದ್ದರಲ್ಲಿ ಜಾವ ಕಟ್ಟೋದು ಸರಿಯಾಗಿ ಅರ್ಥವಾಗದೆ ಅದೇನೆಂದು ಕೇಳಿದೆ. ಪ್ರತೀ ತಿಂಗಳು ಅಮಾವಾಸ್ಯೆಯ ಹಿಂದಿನ ಮೂರು ರಾತ್ರಿ ಸ್ಮಶಾನಕ್ಕೆ ಹೋಗಿ ಹಾಲಕ್ಕಿಯೆಂಬ ಹಕ್ಕಿ ಹೇಳುವ ಶಕುನ ಆಲಿಸಿ, ಮಂತ್ರ ಸಿದ್ಧಿಸಿಕೊಂಡು ಬಂದು ಮನೆಗಳ ದೃಷ್ಟಿ ತೆಗೆಯುವುದನ್ನು ‘ಜಾವ ಕಟ್ಟುವುದು’ ಎನ್ನುತ್ತಾರೆಂದು ಬಿಡಿಸಿ ಹೇಳಿದರು. ಅಮಾವಾಸ್ಯೆಯ ಹಿಂದಿನ ಮೂರು ರಾತ್ರಿ ಜಾವ ಕಟ್ಟುವ ಕಾರ್ಯ ಮಾಡಿದರೆ, ಅಮಾವಾಸ್ಯೆ ನಂತರ ಹಗಲಿನಲ್ಲಿ ಮನೆಮನೆಗೆ ತೆರಳಿ ಬುಡುಬುಡಿಕೆ, ಚಿಂತಾಮಣಿ ಶಾಸ ಹೇಳುವುದು ಸಂಪ್ರದಾಯ. ಹೀಗೆ ಮನೆಮನೆಗೆ ತೆರಳಿ ಶಾಸ್ತ್ರ ಹೇಳುವುದು ಬುಡಬುಡಿಕೆ ಜನಾಂಗದ ಕುಲಕಸುಬು. ‘ಈಗ ಕುಲಕಸುಬು ಮಾಡುವವರು ನಿಮ್ಮಲ್ಲಿ ಉಳ್ಕೊಂಡಿದ್ದಾರ?’ ಕೇಳಿದೆ.
‘ಅವ್ರವ್ರ ಸುದ್ದಿ ಯಾಕೆ? ನನ್ನ ನಮ್ಮ ವೃತ್ತಿ ಮಾಡ್ತಿಲ್ಲ. ಊರಲ್ಲಿ ಕೃಷಿ ಇದೆ, ಸಣ್ಣಪುಟ್ಟ ಕೆಲ್ಸ ಮಾಡ್ಕೊಂಡಿದ್ದಾರೆ. ನನ್ನ ನಂತ್ರಕ್ಕೆ ಈ ವೃತ್ತಿ ಮಾಡೋರೂ ಇಲ್ಲ. ನನ್ನ ಮನೆಮಾತು ‘ಮರಾಠಿ ಭಾಷೆ ಉಳ್ಳೂರೂ ಇಲ್ಲ ನೋವಿನಿಂದ ನುಡಿದು ಜೋಳಿಗೆಯೇರಿಸಿ ಹೊರಟರು.
‘ಯಾವಾದ್ರೂ ಒಂದು ಪದ ಹೇಳಣ್ಣಾ’ ಎಂದೆ. ತಿರುಗಿ ನೋಡಿ, ಅವರು ಹೊರಟೇ ಹೋಗಿದ್ದರು. ಅವರ ಬುಡುಬುಡಿಕೆ ಸದ್ದಿನಂತಹ ‘ಕುಲಕಸುಬು ಉಳಿಸೋರಿಲ್ಲ ಎಂಬ ಮಾತು ಇನ್ನೂ ಮನಸ್ಸಿನಲ್ಲಿ ಈಗಲೂ ಗುಂಯ್ ಗುಡುತ್ತಿದೆ.
akshathagraj@gmail.com
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…