ಹಾಡು ಪಾಡು

ತಾಯಂದಿರ ದಿನ ವಿಶೇಷ | ನನ್ನ ಕರುಳ ಕುಡಿ ನನ್ನದೇ ಆಯ್ಕೆ

ಸಂಗಾತಿಯ ಹಂಗಿಲ್ಲದೆ ಅಮ್ಮನಾದ ಖ್ಯಾತ ಚಿತ್ರತಾರೆ ಭಾವನಾ ರಾಮಣ್ಣ ಜೊತೆ ಮಾತುಕತೆ

 

  •  ನಿಮ್ಮ ವೃತ್ತಿಪರ ಒತ್ತಡಗಳ ನಡುವೆ ತಾಯ್ತನವನ್ನು ಹೇಗೆ ಸಂಭ್ರಮಿಸಿದ್ರಿ?

ಸಂಭ್ರಮಿಸುವುದು ಅನ್ನೋದಕ್ಕಿಂತ ಮಕ್ಳು ಆರೋಗ್ಯಕರವಾಗಿ ಇರ್ಬೇಕು ಅನ್ನೋ ಕನಸಿತ್ತು. ಇನ್ನೊಂದು ಜೀವವನ್ನು ಹೊತ್ತು ಬದುಕೋದು ಅಂದ್ರೆ ಹೊಂದಿಕೆಯ ಜೀವನಕ್ಕೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು. ಮಗುವನ್ನು ನೋಡಿದ ಮೇಲೆ ನಾನು ಅಮ್ಮನಾದೆ ಅನ್ನೋದನ್ನು ನಂಬಿದೆ. ಗರ್ಭಿಣಿಯಾಗಿದ್ದಾಗ ಮಗುವನ್ನು ಆರೋಗ್ಯ ಪೂರ್ಣವಾಗಿ ಹೆರುವುದಷ್ಟೇ ಮುಖ್ಯವಾಗಿರುತ್ತೆ.

  • ಮಗುವನ್ನು ಮೊದಲು ನೋಡಿದ ಆ ಕ್ಷಣದ ಬಗ್ಗೆ ಏನು ಹೇಳ್ತೀರಿ?

ಎರಡು ಮಕ್ಕಳಲ್ಲಿ ಒಂದು ಮಗುವನ್ನು ಕಳೆದು ಕೊಂಡ ಬೇಜಾರಿತ್ತು. ಒಂದು ಮಗುವನ್ನು ಬಟ್ಟೆ ಯಲ್ಲಿ ಸುತ್ತಿ ತಂದುಕೊಟ್ರು. ಇನ್ನೊಂದು ಮಗು ಐಸಿಯುನಲ್ಲಿತ್ತು. ಹೋಗಿ ಮಗುವನ್ನು ಮುಟ್ಟಿದ ತಕ್ಷಣ ಪ್ರತಿಕ್ರಿಯಿಸಿದಳು ಮಗ್ಳು. ಇಂತಹ ಕ್ಷಣ ತಾಯಿಯಾದವಳಿಗೆ ಮಾತ್ರ ದಕ್ಕುವ ಅನುಭವ. ಮಗುವಿನ ಮೊದಲ ಸ್ಪರ್ಶ ‘ಹೆಣ್ಣಾಗಿ ಹುಟ್ಟಿದ್ದಕ್ಕೆ ಧನ್ಯಳು’ ಎಂಬ ಭಾವವನ್ನು ಹುಟ್ಟಿಸಿತು. ಗಂಡಿಗೂ ಈ ಸುಖ ಏನಾದ್ರೂ ದಕ್ಕಿದ್ರೆ ಆತ ದೇವತಾ ಪುರುಷನಾಗಿರುತ್ತಿದ್ದ.

  • ಪುರುಷ ಸಾಂಗತ್ಯವಿಲ್ಲದೆ ಮಗುವನ್ನು ಪಡೆದುಕೊಂಡರೆ ಸಮಾಜ ಏನನ್ನಬಹುದು ಎಂಬ ಅಂಜಿಕೆ ಇತ್ತೇ?

ಖಂಡಿತಾ ಇತ್ತು. ಯೋಚನೆ ಮಾಡ್ತಾ ಆರೇಳು ವರ್ಷ ಕಳೆದಿದ್ದೀನಿ. ಸಿಂಗಲ್ ಪೇರೆಂಟಿಂಗ್ ಕಷ್ಟವನ್ನು ಹತ್ತಿರದಿಂದ ನೋಡಿದ್ದೆ. ಹಾಗಾಗಿ ಮಕ್ಳ ಮೇಲೆ ಪರಿಣಾಮ ಬೀರಬಾರದೆಂಬ ಕಾಳಜಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಅಂತಹ ಸಂದರ್ಭ ನಂಗೆ ಬರಲಿಲ್ಲ. ಸಮಾಜದ ಎಲ್ಲಾ ವರ್ಗದವರು ತಾಯ್ತನಕ್ಕೆ ಒತ್ತು ಕೊಡುವುದನ್ನು ನೋಡಿದೆ.

  • ಮಗಳು ರುಕ್ಮಿಣಿ ಜೊತೆ ಒಡನಾಟ ಹೇಗಿದೆ? ಮಗಳಿಗೆ ರುಕ್ಮಿಣಿ ಎಂದು ಹೆಸರು ಇಡಲು ಕಾರಣ?

ಅವಳೊಡನೆ ಇರುವ ಪ್ರತೀ ಕ್ಷಣವನ್ನೂ ಸಂಭ್ರಮಿಸುತ್ತಿದ್ದೇನೆ. ನನ್ನಮ್ಮನ ಹೆಸರು ಶಕುಂತಳಾ, ಅವ್ರ ಅಮ್ಮ ಅಂದ್ರೆ ಅಜ್ಜಿಯ ಹೆಸ್ರು ರುಕ್ಮಿಣಿ. ಅವ್ರು ಭೌತಿಕವಾಗಿ ಅಗಲಿ ವರ್ಷಗಳಾದ್ರೂ ಮಾನಸಿಕ ವಾಗಿ ಬಿಟ್ಟು ಹೋಗಿಲ್ಲ.

 

  • ಬದುಕಿನಲ್ಲಿ ಬ್ಯುಸಿ ಇರುವ ನೀವು ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ?

ವೃತ್ತಿಜೀವನದಲ್ಲಿ ಅವಕಾಶಗಳಿಗಾಗಿ ಅರಸುವ ಸ್ಪರ್ಧಾತ್ಮಕ ಮನೋಭಾವನೆ ನನ್ನಲ್ಲಿ ಇಲ್ಲ. ನನ್ನ ವಯಸ್ಸೂ ಅದಲ್ಲ. ನನ್ನ ನಿರ್ಧಾರಗಳ ಬಗ್ಗೆ ನಂಗೆ ಗಟ್ಟಿಯಾದ ನಂಬಿಕೆಯಿದೆ. ಅಭದ್ರತೆಯ ಭಯ ಇಲ್ಲ. ಸಣ್ಣ ವಯಸ್ಸಿನಲ್ಲಿ ಮಗು ಮಾಡ್ಕೊಂಡಿದ್ರೆ ಆ ಭಯ ಇರ್ತಿತ್ತು.

 

  • ಸಾಮಾನ್ಯವಾಗಿ ತಾಯಂದಿರಿಗೆ ಬಾಲ್ಯದಲ್ಲಿ ತಮಗೆ ಸಿಗದಿರುವುದು ತಮ್ಮ ಮಕ್ಳಿಗೆ ಸಿಗಬೇಕು ಅನ್ನೋ ಹಠ ಇರುತ್ತೆ. ನಿಮ್ಗೆ ಆ ತರಹದ್ದು ಏನಿದೆ?

ಅಂತಹದ್ದೇನಿಲ್ಲ. ರಸ್ತೆಯಲ್ಲಿ ಹೋಗುವವರೂ ‘ಮಗು ಹೇಗಿದೆ? ’ ಎಂದು ಕೇಳ್ತಾರಲ್ಲ ಅದುವೇ ಆಶೀರ್ವಾದ ಎಂದು ಭಾವಿಸುತ್ತೇನೆ. ಇದಕ್ಕೆ ನಾನು ದೇವರಿಗೆ ಋಣಿಯಾಗಿರಬೇಕು.

ಆಂದೋಲನ ಡೆಸ್ಕ್

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

4 mins ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

6 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

6 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

7 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

8 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

14 hours ago