ಹಾಡು ಪಾಡು

ಜಾತಿಬೇಲಿಯ ಕಳಚಿಬಿಡುವ ಮಾರಿಹಬ್ಬಗಳು

ಅಜಯ್ ಕುಮಾರ್ ಎಂ.ಗುಂಬಳ್ಳಿ

ಮಾರಿಹಬ್ಬವೆಂದರೆ ಎಲ್ಲಾ ಕೋಮಿನ ಜನ ಸೇರಿ ನಡೆಸುತ್ತಾರೆ. ಅವರವರೇ ದೇವರ ಕೈಂಕರ್ಯಗಳನ್ನು ವಿಭಾಗಿಸಿಕೊಂಡು ಹಬ್ಬ ಮಾಡುತ್ತಾರೆ

ಈಗ ಚಾಮರಾಜನಗರದ ಊರುಗಳಲ್ಲಿ ಹಬ್ಬಗಳ ಸುಗ್ಗಿ ಕಾಲ. ಸ್ಥಳೀಯ ದೇವರನ್ನು ಪೂಜಿಸುವ ಅಪಾರಸಾಂಸ್ಕ ತಿಕ ಆಚರಣೆಗಳಿವೆ. ಕೆಲವು ಊರುಗಳಲ್ಲಿ ಕುರುಬನ ಕಟ್ಟೆ ಕಂಡಾಯ ತರಿಸಿ ಹಬ್ಬ ಮಾಡುತ್ತಾರೆ.

ಕೊಂಡೋತ್ಸವ ಸಾಮಾನ್ಯವಾಗಿ ಇದ್ದೇ ಇದೆ. ಕೆಲವರು ಸಿಹಿ ಊಟ, ಮಾಂಸದ ಊಟ, ಕೆಲವು ಕಡೆ ಎರಡನ್ನೂ ಮಾಡಿ ನೆಂಟರಿಷ್ಟರಿಗೆ ಬಡಿಸುತ್ತಾರೆ. ಕುರಿ, ಕೋಳಿ, ಕೋಣ, ಆಡು, ದನದ ಮಾಂಸವೂ ದೇವರಿಗೆ ನೈವೇದ್ಯವಾಗಿ ಸ್ವೀಕರಿಸಲ್ಪಡುತ್ತದೆ. ಮಾರೀರ ಗಂಡ ಎನಿಸಿರುವ ಶ್ರೀ ಮಂಟೇ ಸ್ವಾಮಿಗೆ ಭಕ್ತರು ಇಟ್ಟ ಯಾವುದೇ ಬಗೆಯ ಆಹಾರ ನೈವೇದ್ಯ ಆಗುತ್ತದೆ. ಮೊದಲೆಲ್ಲ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳೇ ಬುತ್ತಿ – ಬಾಡು ಕಟ್ಟಿಕೊಂಡು ಹೋಗುತ್ತಿದ್ದರಂತೆ. ಊಟಕ್ಕೆ ಯಾವುದೇ ಕಟ್ಟಿಲ್ಲ ಎಂದು ಶ್ರೀ ಮಾದಪ್ಪನೆ ಹೇಳಿದ್ದಾನೆ ಎಂದು ಹಿರಿ ತಲೆಗಳು ಹೇಳಿದ್ದನ್ನು ಕೇಳಿದ್ದೇನೆ.

ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಊರುಗಳಲ್ಲಿ ಯಾವುದೇ ಹಬ್ಬಕ್ಕೆ ಮಾಂಸ ದಡುಗೆ ಕಡ್ಡಾಯ. ಜಿಲ್ಲೆಯಲ್ಲಿ ನೀಲಗಾರರು, ಬಿಳಿಗಿರಿರಂಗನ ದಾಸಯ್ಯನವರು, ಮಾದಪ್ಪನ ಗುಡ್ಡರು, ಪಾರ್ವತಿ ಗುಡ್ಡರು ಅಂತ ಇದ್ದಾರೆ. ಮಂಟೇಸ್ವಾಮಿ ಮತ್ತು ಬಿಳಿಗಿರಿರಂಗಯ್ಯನಿಗೆ ಎಡೆಗೆ ಮಾಂಸ ಇಡಲೇಬೇಕು. ಹೆಂಡ ಬಾಡು, ಭಂಗಿಸೊಪ್ಪು ಪ್ರಿಯ ದೇವರೇ ಇಲ್ಲಿರುವ ಜನರ ಒಕ್ಕಲು ಪಡೆದಿರುವುದು. ಶಿವರಾತ್ರಿಗೆ, ಯುಗಾದಿಗೆ ಮಾತ್ರ ಶಾಖಾಹಾರಿ ಎಡೆ ಸಿದ್ಧವಾಗುತ್ತದೆ. ಅದು ಬಿಟ್ಟರೆ ಗೌರಿ ಹಬ್ಬದ ಹಿಂದಿನ ದಿನವೂ ಇಲ್ಲಿ ಮಾಂಸದೂಟವೇ. ಇಷ್ಟೆಲ್ಲ ಇದ್ದರೂ ಜನರು ಎಂದೂ ಶಿಸ್ತು ತಪ್ಪಿಲ್ಲ.

ಜನಪದದ ಬೇರು ಇರುವುದರಿಂದ ಆಚರಣೆಗಳಿಗೆ ಒಂದು ಅರ್ಥ ಇದೆ. ವೈಜ್ಞಾನಿಕಕಾರಣವೂ ಇದೆ. ಕೆಲವು ಮೂಢ ನಂಬಿಕೆಗಳು ಸಹ ಇವೆ. ಹಬ್ಬವೆಂದರೆ ಎಲ್ಲಾ ಕೋಮಿನ ಜನ ಸೇರಿ ನಡೆಸುತ್ತಾರೆ. ಅವರವರೇ ದೇವರ ಕೈಂಕರ್ಯಗಳನ್ನು ವಿಭಾಗಿಸಿ ಕೊಂಡು ಹಬ್ಬ ಮಾಡುತ್ತಾರೆ. ಜಾತ್ರೆಗೆ ಸೌದೆ ತರುವುದರಿಂದ ಹಿಡಿದು ಬರುವ ಭಕ್ತಾದಿಗಳಿಗೆ ಪ್ರಸಾದ ತಯಾರಿಸುವವರೆಗೆ ಕೆಲಸಗಳು ಹಂಚಿಕೆಯಾಗುತ್ತವೆ.

‘ಮಾರಿಹಬ್ಬ’ ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿಯೂ ನಡೆಯುತ್ತದೆ. ಊರನ್ನು ಕಾಯಲು ಇರುವ ದೇವಿಯೇ ಮಾರಮ್ಮ. ಮಂಟೇಸ್ವಾಮಿ ಕತೆಯಲ್ಲಿ ಮಾರೀ ದೇವತೆಗಳ ಬಗ್ಗೆ ಸಾಕಷ್ಟು ಉಲ್ಲೇಖದ ಜೊತೆಗೆ ಆ ದೇವತೆಗಳಿಗೆ ಮಂಟೇಸ್ವಾಮಿ ‘ಹಬ್ಬವನ್ನು ಮಾಡಿಸಿಕೊ ಡುತ್ತೇನೆ’ ಎಂದು ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ಮಂಟೇಸ್ವಾಮಿಗೆ ‘ಮಾರೀರ ಗಂಡನಾದೆ, ಮನೆಮನೆಗು ದೇವರಾದೆ’ ಎಂದು ಕರೆಯುವರು. ಜಾನ ಪದದ ಒಂದು ಸಾಲಿನಲ್ಲಿ ಮಂಟೇಸ್ವಾಮಿ ‘ನಮಗೆ ಜಾತಿಭೇದ ಇಲ್ಲಾ ಕಾಣೋ, ಆದಿಯೊಳಗಲ ಜ್ಯೋತಿ, ಬೀದಿಯೊಳಗಲ ಜ್ಯೋತಿ, ಹೊನ್ನಯ್ಯನ ಮನೆಯೊಳಗು ಜ್ಯೋತಿ, ಚೆನ್ನಯ್ಯನ ಮನೆಯೊಳಗು ಜ್ಯೋತಿ’ ಎಂದು ನುಡಿಯುತ್ತಾರೆ. ಜಿಲ್ಲೆಯಲ್ಲಿ ಎಲ್ಲಾ ಜಾತಿಗಳ ಜನರು ಮಂಟೇಸ್ವಾಮಿ, ಮಾದೇಶ್ವರ, ಬಿಳಿಗಿರಿರಂಗಯ್ಯ, ನಂಜುಂಡೇ ಶ್ವರ ದೇವರುಗಳನ್ನು ಪೂಜಿಸುವುದಲ್ಲದೇ ಸಾಂಸ್ಕ ತಿಕ ಆಚರಣೆಯಲ್ಲಿ ಸಾಮ್ಯತೆ ಹೊಂದಿದ್ದಾರೆ. ಹಬ್ಬಗಳನ್ನು ಒಟ್ಟಿಗೆ ಮಾಡುತ್ತಾರೆ. ಕುರುಬನ ಕಟ್ಟೆ ಕಂಡಾಯ ಎಲ್ಲ ಜನರ ಮನೆಗಳಿಗೂ ಧಾರಾಳವಾಗಿ ನುಗ್ಗಿ ಬರುತ್ತದೆ. ಆಗ ಯಾರೊಬ್ಬರೂ ಯಾರನ್ನೂ ಜಾತಿಗೀತಿ ಕೇಳುವುದಿಲ್ಲ. ಉಳಿದಂತೆ ಮಾಮೂಲಿ ದಿನಗಳಲ್ಲಿ ಜಾತಿ ಬೇಲಿ ಜೀವಂತವಿರುತ್ತದೆ. ಮಂಟೇಸ್ವಾಮಿ ಹೇಳಿದಂತೆ ಜಾತಿಭೇದ ಅಳಿದರೆ ಇನ್ನೂ ಸೊಗಸು. ಏನೇ ಆಗಲಿ ಇಲ್ಲಿನ ಹಬ್ಬಗಳೇ ಒಂದು ಬಗೆಯ ವಿಶೇಷತೆ ಹೊಂದಿವೆ ಎಂದರೆ ತಪ್ಪಾಗುವುದಿಲ್ಲ.

ಆಂದೋಲನ ಡೆಸ್ಕ್

Recent Posts

ಉಪಸಭಾಪತಿಗೆ ಚಿತ್ರಹಿಂಸೆ ಆರೋಪ : ಐಪಿಎಸ್‌ ಅಧಿಕಾರಿ ಬಂಧನ

ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…

5 hours ago

ಮಾರ್ಚ್‌ 11ರಿಂದ ವೈದ್ಯಾಧಿಕಾರಿಗಳ ಮುಷ್ಕರ : ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…

5 hours ago

ಟ್ರಂಪ್‌ ಜಾಗತಿಕ ಸುಂಕ ರದ್ದು : ವರದಿ

ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…

6 hours ago

ಸಫಾರಿ ಆದಾಯದ ಶೇ.35 ಭಾಗ ಕಾಡಿನಂಚಿನ ಜನಕಲ್ಯಾಣಕ್ಕೆ ಬಳಕೆ : ಖಂಡ್ರೆ

ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…

6 hours ago

ವನ್ಯಜೀವಿ ಸಂಚಾರ | ಕಾಡಂಚಿನ ಗ್ರಾಮದ ಮುಖಂಡರಿಗೆ ಮಾಹಿತಿ ರವಾನಿಸಲು ಖಂಡ್ರೆ ಸೂಚನೆ

ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…

6 hours ago

ಮನರೇಗಾ ನಾಶ | ಜನರ ಅನ್ನ ಕಿತ್ತುಕೊಳ್ಳುತ್ತಿರುವ ಕೇಂದ್ರ ; ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…

7 hours ago