ಹಾಡು ಪಾಡು

ನನಗೆ ಆಮೇಲೆ ಬೇರೆ ದಾರಿಯೇ ಇರಲಿಲ್ಲ…

ಚಾಂದಿನಿ ಗಗನ  

ನಾನು ಪ್ರತಿ ಸಾರಿ ಊರಿಗೆ ಬರುವಾಗ ನನ್ನ ಚೆಂದದ ಮೈಸೂರನ್ನು ದಾಟಿಯೇ ಹೋಗುತ್ತೇನೆ. ಆ ಅರಮನೆ, ದಸರಾ, ಬೆಟ್ಟ, ವುಡ್‌ಲ್ಯಾಂಡ್ ಸಿನಿಮಾ ಥಿಯೇಟರ್ ಮುಂದಿನ ಪಾರ್ಕ್ ನನಗೂ ಈ ಜಾಗಕ್ಕೂ ಸಂಬಂಧ ಬೆಸೆದುಕೊಂಡಿದೆ.

ನಾನು ಒಮ್ಮೆ ಮಾತ್ರ ಮೈಸೂರು ದಸರಾವನ್ನು ನೇರವಾಗಿ ನೋಡಿ ಕಣ್ಣು ತುಂಬಿಕೊಂಡಿದ್ದೇನೆ. ಆ ಸಮಯದಲ್ಲಿ ನಾನು ಕಣ್ಣು ಹಾಯಿಸಿದ್ದು ಬಣ್ಣ ಬಣ್ಣದ ಸೀರೆ ತೊಟ್ಟಿದ್ದ ಹೆಂಗಸರನ್ನು. ಲಂಗ- ದಾವಣಿಯ ಹೆಣ್ಣುಮಕ್ಕಳನ್ನು ಹಾಗೂ ಮುಖ್ಯವಾಗಿ ನನಗೆ ಆಕರ್ಷಿತರಾಗುತ್ತಿದ್ದ ಯುವಕರನ್ನು. ಒಂದು ಕಡೆ ಹೆಂಗಸರನ್ನು ನೋಡುವಾಗ ಅವರಂತೆ ನಾ ಯಾವಾಗ ಆಗುವುದು ಎಂದು ಭಾವನೆಯ ಲೋಕದಲ್ಲಿಯೇ ಮುಳುಗಿಹೋಗುತ್ತಿದ್ದೆ. ಮತ್ತೆ ಮತ್ತೆ ಭ್ರಮೆಯಲ್ಲಿ ಆ ಬಣ್ಣದ ಸೀರೆಯಲ್ಲಿ ನಾನೇ ನಾನಾಗುತ್ತಿದ್ದೆ. ಹುಡುಗರನ್ನು ಕಂಡಾಗ ನನ್ನನ್ಯಾಕೆ ಯಾರೂ ಗಮನಿಸುತ್ತಿಲ್ಲ ಎಂದು ಕೋಪಿಷ್ಟಳಾಗಿದ್ದೆ. ಅವರನ್ನು ನನ್ನೆಡೆಗೆ ಹೇಗೆ ಸೆಳೆಯುವುದು ಎಂದು ಐದು ರೂಪಾಯಿಗೆ ಸಿಕ್ಕ ಮಿಂಚಿನ ಮಣಿಸರವನ್ನು ಹಾಕಿಕೊಂಡು ಅತ್ತಿತ್ತ ಓಡಾಡುತ್ತಿದ್ದೆ.

ನನ್ನ ಮೊದಲ ದಿನದ ಸೀರೆ ಅನುಭವವಂತೂ ಅಬ್ಬಾ ಅನ್ನುವಂಥದ್ದು. ಅಶೋಕಪುರಂನಲ್ಲಿ ನಮ್ಮ ಸಂಬಂಧಿಕರ ಮನೆ ಇದೆ. ಅಂದೇ ನಾನು ಮೊದಲ ದಸರಾ ಹಬ್ಬಕ್ಕೆ ಅಲ್ಲಿಗೆ ಹೋಗಿದ್ದು. ನನ್ನೂರು ತಿ. ನರಸೀಪುರದ ಹತ್ತಿರದಲ್ಲಿಯೇ ಇರುವ ಹಳೇ ಸೋಸಲೆ ಗ್ರಾಮ. ಓದುವಾಗ ಸಿನಿಮಾ ನೋಡಲು ಅನೇಕ ಬಾರಿ ಮೈಸೂರಿಗೆ ಹೋಗಿದ್ದೆ. ಆದರೆ ನನ್ನ ಭಾವನೆಯವರನ್ನು ನಾನು ಎಂದೂ ಕಂಡಿರಲಿಲ್ಲ. ರಣಜಿತ್, ಲಿಡೋ, ಚಾಮುಂಡೇಶ್ವರಿ, ಸಂಗಮ್ ನನ್ನ ಅಚ್ಚುಮೆಚ್ಚಿನ ಥಿಯೇಟರ್‌ಗಳು. ಬೆಟ್ಟಯ್ಯ ಎಂಬ ನನ್ನ ಸಮುದಾಯದವರನ್ನು ಅಲ್ಲಿ ಭೇಟಿಯಾಗಿ, ಮೊದಲು ನಾನು ಬಿಳಿಬಣ್ಣದ ಕೆಂಪು ಅಂಚಿನ ಚಿಮುಕಿ ಸೀರೆಯನ್ನುಟ್ಟು ವಸ್ತು ಪ್ರದರ್ಶನ ನೋಡಲು ಹೋಗಿದ್ದೆ. ಅಂದು ಕೆನ್ನೆಗೆ ಕೆಂಪಿನ ಬಣ್ಣ ಹಚ್ಚಿ. ತುಟಿಗೆ ಬಣ್ಣ ಹಾಗೂ ಕಣ್ಣಿಗೆ ಕಾಡಿಗೆ ಮತ್ತು ಕೈಗೆ ಕೆಂಪು ಧರಿಸಿಕೊಂಡು ಸೇರವನ್ನು ತಲೆಯ ಮೇಲೆ ಹಾಕಿಕೊಂಡು ತಲೆ ಬಗ್ಗಿಸಿ ವಯ್ಯಾರದಲ್ಲಿ ನಡೆದುಕೊಂಡು ಸುತ್ತಿದ್ದೆ. ಆಗ ತಲೆಯಲ್ಲಿ ಕೂದಲು ಚಿಕ್ಕದಾಗಿತ್ತು. ಇರುವುದನ್ನೇ ಹೆಣ್ಣೆಂದು ಭ್ರಮಿಸಿ ಸಂಭ್ರಮಿಸಿದ್ದೆ. ತಡರಾತ್ರಿ ಮನೆಗೆ ಬಂದಾಗ ಸೀರೆ ಬಿಚ್ಚಲು ಮನಸ್ಸಾಗಲಿಲ್ಲ. ನನಗೆ ಆಮೇಲೆ ಬೇರೆ ದಾರಿಯೇ ಇರಲಿಲ್ಲ. ಅವಳಿಂದ ಅವನಾಗಿ ರೂಪಾಂತರವಾಗಲೇಬೇಕಿತ್ತು.

 

 

 

andolana

Recent Posts

ಇಂದು ಮುನಿರತ್ನ ಜಾಮೀನು ಅರ್ಜಿ ಆದೇಶ

ಬೆಂಗಳೂರು: ಪರಿಶಿಷ್ಟ ಜಾತಿ ನಿಂದನೆ ಹಾಗೂ ಮಹಿಳೆಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ನ್ಯಾಯಾಂಗ ಬಂಧನಲ್ಲಿರುವ ಬಿಜೆಪಿ ಶಾಸಕ ಮುನಿರತ್ನ…

4 mins ago

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

7 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

7 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

8 hours ago

ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…

8 hours ago

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…

8 hours ago