ಹಾಡು ಪಾಡು

ಸಿನಿಮಾ ಶೂಟಿಂಗು ಮತ್ತು ತಾಯಿಯ ಮಡಿಲು

ಸೌಮ್ಯ ಜಂಬೆ

ನನಗೆ ಹೀರೋಯಿನ್ ಆಗಬೇಕೆಂಬ ಆಸೆಯಿತ್ತು. ಬಣ್ಣದ ಲೋಕದಲ್ಲಿ ಬೆರೆಯ ಬೇಕೆಂಬ ಬಯಕೆ. ಆ ಅವಕಾಶ ಒಮ್ಮೆ ನನ್ನ ಹುಡುಕಿ ಬಂದಿತ್ತು. ಹೀರೋಯಿನ್ ಎಂದರೆ ಕೇಳಬೇಕೆ? ಐಷಾರಾಮಿ ಕಾರು, ದೊಡ್ಡ ಬಂಗಲೆ, ಭುಜದವರೆಗೂ ಇಳಿಬಿದ್ದ ಕೂದಲು, ಆ ಕಡೆ ಈ ಕಡೆ ಒಂದೆರಡು ಬಾಡಿಗಾರ್ಡ್ಸ್ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿತ್ತು ಜೀವನ.

ಬಿಡುವು ದೊರೆತ ಒಂದು ದಿನ ಸಂಜೆ ಬಿಸಿಲು ಹದವಾಗಿ ಹೂಗಳ ಮೇಲೆ ಬಿದ್ದಿತ್ತು. ಬಹುದಿನಗಳಿಂದ ಓದಲಾಗದ ಪುಸ್ತಕವನ್ನು ಓದುವುದಕ್ಕೆಂದು ಕೂತೆ. ಅಡುಗೆಯವರಿಗೆ ಹೇಳಿ ಒಂದು ಲೋಟ ಸ್ಟ್ರಾಂಗ್ ಕಾಫಿಯನ್ನೂ ಮಾಡಿಸಿಕೊಂಡೆ. ಕಿಟಕಿಯ ಕರ್ಟನ್ ಸರಿಸಿದ ತಕ್ಷಣವೇ ಮಲ್ಲಿಗೆಯ ಪರಿಮಳ ಒಳಗಡಿಯಿಟ್ಟಿತು. ಕಾಫಿ ಹೀರುತ್ತಾ ಪುಸ್ತಕವನ್ನು ಓದತೊಡಗಿದೆ. ಸಮಯ ಕಳೆದದ್ದು ತಿಳಿಯಲಿಲ್ಲ. ಕಿಟಕಿ ಕಡೆ ಕಣ್ಣು ಹಾಯಿಸಿದೆ. ದೂರದ ರಸ್ತೆಯಲ್ಲಿ ಸಂತೆ ನಡೆಯುತ್ತಿರುವುದು ಕಾಣಿಸಿತು. ಕೆದರಿದ ಕೂದಲಿಗೆ ಕೆಂಪು ರಿಬ್ಬನ್ ಸುತ್ತಿದ ಹುಡುಗಿಯೊಬ್ಬಳು ಹರಿದ ಬಟ್ಟೆಯನ್ನು ಮುಚ್ಚುವುದಕ್ಕೆಂದು ಅಲ್ಲಲ್ಲಿ ತೇಪೆ ಹಾಕಿದ ಲಂಗ ಧರಿಸಿ, ಬಣ್ಣ-ಬಣ್ಣದ ಬಲೂನ್ ಮಾರುತ್ತಾ ಅತ್ತಿತ್ತ ಓಡಾಡುತ್ತಿದ್ದಳು. ಅವಳ ಗೊಡವೆ ಯಾರಿಗೂ ಬೇಕಿರಲಿಲ್ಲ! ಹುಡುಗಿಗೆ ಹಸಿದ ಹೊಟ್ಟೆಯ ಚಿಂತೆಯಾಗಿದ್ದರೆ, ಅಲ್ಲಿರುವ ಕೆಲವರು ತಿಂದು ಉಳಿದುದನ್ನು ಎಸೆಯುವ ಗಡಿಬಿಡಿಯಲ್ಲಿದ್ದರು. ಹೆಂಗಸೊಬ್ಬಳು ಬೀದಿ ತಿರುಗುತ್ತಾ ಸೊಪ್ಪು ಮಾರುತ್ತಿದ್ದಳು. ಚಿಕ್ಕ ಹುಡುಗನೊಬ್ಬ ಅಪ್ಪನ ಭುಜದ ಮೇಲೆ ಕುಳಿತು ಐಸ್‌ಕ್ಯಾಂಡಿ ಚೀಪುತ್ತಿದ್ದ. ಕೆಲವು ಹುಡುಗರ ಗುಂಪು ಲಗೋರಿ ಆಡುತ್ತಾ ಕೇಕೆ ಹಾಕುತ್ತಿತ್ತು. ಟೀ ಮಾರುವ ಹುಡುಗನೊಬ್ಬ ಟ್ರಿಣ್ ಟ್ರಿಣ್ ಮಾಡುತ್ತಾ ಸೈಕಲ್‌ನಲ್ಲಿ ಸುಯ್ಯೆಂದು ಹಾದು ಹೋದ. ಅಲ್ಲೊಂದು ಕಡೆ ಅಂಗಡಿಯವನು ಹೊಂಬಣ್ಣದ ಜಿಲೇಬಿ ಮಾರುತ್ತಿದ್ದರೆ, ಇತ್ತ ಆಸೆ ಹೊತ್ತ ಕಂಗಳು, ಹಸಿದ ಹೊಟ್ಟೆ ತಣಿಸುವುದಕ್ಕೆ ಹಣ ಬೇಡುತ್ತಿದ್ದ ದೃಶ್ಯ ಮನ ಕರಗಿಸುವಂತಿತ್ತು.

ಎಲ್ಲವಿದ್ದೂ ಇಲ್ಲದಂತಿರುವ ನಾವು ಇಲ್ಲದಿರುವವರ ಬಗ್ಗೆ ಯೋಚಿಸುವುದಿಲ್ಲ. ಮತ್ತೂ ಗಳಿಸುವ ಬಗ್ಗೆಯೇ ಯೋಚಿಸುತ್ತೇವೆ. ಮನೆಯ ಮೇಲೊಂದು ಮನೆ, ಹೊರಗೊಂದು ಕಾರು, ಕಂತೆ ಕಂತೆ ಹಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಮ್ಮೆ ಊರಿಗೆ ಹೋಗಿದ್ದೆ. ಮನೆಯ ಬಣ್ಣ ಬದಲಾಗಿತ್ತು. ಕಳೆದ ಬೇಸಿಗೆಯಲ್ಲಿ ಹೊಡೆಸಿದ ಬಣ್ಣ ಮಾಸಲಾಗಿತ್ತು. ಮಲೆನಾಡಾದ್ದರಿಂದ ಮಳೆ ಹೆಚ್ಚು. ಸೂರಿನ ಮಸಿಯೆಲ್ಲಾ ಮಳೆಯ ನೀರಿನೊಂದಿಗೆ ಸೇರಿ, ಗೋಡೆಯ ಮೇಲೆ ಇಳಿದು ಬಣ್ಣ ಹಾಳು ಮಾಡಿತ್ತು. ಬಣ್ಣಗೆಟ್ಟ ಬದುಕಾಗಲೀ ಮನೆಯಾಗಲೀ ಯಾರಿಗೆ ಸಮಾಧಾನ ತಂದೀತು? ಬಣ್ಣವಿದ್ದಾಗ ಎಲ್ಲವೂ ಚಂದ. ಬಣ್ಣ ತೆಗೆದ ಮೇಲೆ ಎಲ್ಲರೂ ಒಂದೆ. ಎಲ್ಲರ ಸಮಸ್ಯೆಗಳೂ ಒಂದೆ. ಸಮಸ್ಯೆಗಳ ರೂಪ ಮತ್ತು ಪ್ರಮಾಣದಲ್ಲಿ ಭಿನ್ನತೆಯಿರಬಹುದಷ್ಟೆ. ಅವಕಾಶ ಇರುವಷ್ಟು ದಿನ ನಾವಾಡುವ ಆಟವಷ್ಟೆ. ಸಮಯ ಸರಿಗಟ್ಟುವವರು ಯಾರು? ಸಮಯವಷ್ಟೇ ಎಲ್ಲದಕ್ಕೂ ಉತ್ತರ ಕೊಟ್ಟಿತು. ಆಷಾಢದ ಮೇಘಗಳ ಮೇಲೂ ಆತಂಕದ ನೆರಳು ಬಿದ್ದಿರುತ್ತದೆ. ಮಾಗಿ ಮಲ್ಲಿಗೆಯ ಘಮದ ಬದಲಾಗಿ ವಸಂತದ ಚಿಗುರಿನ ನಿರೀಕ್ಷೆಯಲ್ಲಿರುತ್ತೇವೆ. ಸದಾ ಹೊಸತಿನ ನಿರೀಕ್ಷೆಯಲ್ಲೇ ನಿಂತಿರುವ ಜೀವನ ನಮ್ಮದಷ್ಟೆ.

ಅಮ್ಮನಿಗೆ ಫೋನಾಯಿಸಿದೆ. ಸುಲಭಕ್ಕೆ ಎಂದೂ ಕರೆ ಸಿಕ್ಕಿದ್ದೇ ಇಲ್ಲ. ಹಳ್ಳಿಯ ಜೀವನವೇ ಹಾಗೆ. ಯಾಕೋ ಹಳ್ಳಿಯಲ್ಲೇ ನನ್ನವರೊಂದಿಗೆ ನನ್ನತನದಿಂದ ಬದುಕಬೇಕೆನಿಸಿತು. ಆಸ್ತಿಯನ್ನೆಲ್ಲಾ ಮಾರಿ ಬಂದ ದುಡ್ಡನ್ನೆಲ್ಲ ತುಂಬಿಕೊಂಡು ಹಳ್ಳಿ ದಾರಿ ಹಿಡಿದೆ. ನನ್ನ ನಿರ್ಧಾರದ ಬಗ್ಗೆ ಹೆಮ್ಮೆಯಿತ್ತು. ನನ್ನ ಜನರೊಂದಿಗೆ ಬದುಕುವ ಆಸೆಯದು.

ಅಟ್ಟವಿರುವ ಅಂಗಳ, ನಮ್ಮದು ಮಲೆನಾಡ ಮನೆ. ಅಂತೆಯೇ ಮಣ್ಣ ವಾಸನೆ, ಹಿತ್ತಲಲ್ಲಿ ಸೊಕ್ಕಿ ಬೆಳೆದ ಸೇವಂತಿಗೆ, ಆಲೆಮನೆಯ ಬೆಲ್ಲದ ಘಮ. ನನ್ನೂರನ್ನು ನೆನೆದ ತಕ್ಷಣ ಊರ ದೇವರ ಜಾತ್ರೆ, ನಾಗರ ಪಂಚಮಿಯ ಜೋಕಾಲಿ ಎಲ್ಲವೂ ನೆನಪಾಗುವುದು. ಬಿಕ್ಕಿ- ಬಿಕ್ಕಿ ಅಳತೊಡಗಿದೆ. ಅಮ್ಮ ಬಂದು ಎಬ್ಬಿಸಿದಾಗಲೇ ವಾಸ್ತವ ಅರಿವಾಗಿದ್ದು. ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡೆ. . .

ಆಂದೋಲನ ಡೆಸ್ಕ್

Recent Posts

ಕುರಟ್ಟಿ ಹೊಸೂರಲ್ಲಿ ಪ್ರಕೃತಿ ವಿಸ್ಮಯ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ ಕಂಡು ಜನರು ಅಚ್ಚರಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು  ಹನೂರು: ಕಡು ಕಹಿ ಎಲೆ, ಕಾಂಡ, ಕಾಯಿ ನೀಡುವ ಬೇವಿನ ಮರದಲ್ಲಿ…

10 hours ago

ಕನ್ನಡದಲ್ಲಿ ರೈಲ್ವೆ ಪರೀಕ್ಷೆ ನಡೆಸದಿದ್ದರೆ ಉಗ್ರ ಹೋರಾಟ: ನಾರಾಯಣಗೌಡ ಎಚ್ಚರಿಕೆ

ಬೆಂಗಳೂರು: ರೈಲ್ವೆಯ ಯಾವುದೇ ಪರೀಕ್ಷೆಯಿರಲಿ, ಅದನ್ನು ಕನ್ನಡದಲ್ಲೇ ಕಡ್ಡಾಯವಾಗಿ ನಡೆಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ…

10 hours ago

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ: ಪರೀಕ್ಷಾ ಕೇಂದ್ರಗಳಿಗೆ ಸಿಇಓ ಭೇಟಿ

ಮಂಡ್ಯ: ಜನವರಿ.27ರಿಂದ ಪ್ರಾರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಹಿನ್ನೆಲೆಯಲ್ಲಿ ಇಂದು ತಾಲ್ಲೂಕಿನ ಸೂನಗನಹಳ್ಳಿ ಮತ್ತು ತಗ್ಗಹಳ್ಳಿ ಗ್ರಾಮದ ಸರ್ಕಾರಿ…

11 hours ago

ಲೋಕಸಭೆಯಲ್ಲಿ ಸ್ಪೀಕರ್‌ ಮೇಲೆ ಪೇಪರ್‌ ತೂರಿದ್ದ 8 ಮಂದಿ ಸಂಸದರು ಅಮಾನತು

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಉಂಟಾದ ಭಾರೀ ಗದ್ದಲ ಮತ್ತು ಸ್ಪೀಕರ್‌ ಪೀಠದ ಕಡೆಗೆ ಪೇಪರ್‌ ಹರಿದು…

11 hours ago

ನರೇಗಾ ಮರುಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಪಟ್ಟು: ವಿಧಾನಸಭೆಯಲ್ಲಿ ಕೇಂದ್ರದ ವಿರುದ್ಧ ನಿರ್ಣಯ ಮಂಡನೆ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಉದ್ಯೋಗ ಯೋಜನೆಯನ್ನು ವಿರೋಧಿಸಿ ಹಾಗೂ ಹಳೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ…

11 hours ago

ಹನೂರು| ಆಂದೋಲನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ಗ್ರಾಮಗಳಿಗೆ ಭೇಟಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರ್ಟಳ್ಳಿ ಹಾಗೂ ಸುಳ್ವಾಡಿ…

11 hours ago