ಅಕ್ಷತಾ
ಸೈಕ್ಲಿಂಗ್‌ನಲ್ಲಿ ‘ಸೂಪರ್ ರಾಂಡೋನಿಯರ್’ ಬಿರುದಾಂಕಿತ ಮೈಸೂರಿನ ಮೊದಲ ಮಹಿಳೆ ಡಾ.ಬೃಂದಾ ಗೋಧಿ. ಡಾ.ಬೃಂದಾ ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿ ದಿನವಿಡೀ ಡಾಕ್ಟರ್ ವೃತ್ತಿ, ಪ್ರಾಧ್ಯಾಪನ ವೃತ್ತಿಯ ಜೊತೆಗೆ ಸೈಕ್ಲಿಂಗ್‌ಅನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಇವರ ಸೈಕ್ಲಿಂಗ್ ಸಾಧನೆ ಬಹಳಷ್ಟು. ಪಿಯುಸಿ ನಂತರ ಸೈಕಲ್ ಸಹವಾಸ ಬಿಟ್ಟಿದ್ದವರನ್ನು ಮತ್ತೆ ಸೈಕ್ಲಿಂಗ್‌ಗೆ ಮುಖ ಮಾಡುವಂತೆ ಮಾಡಿದ್ದೇ ೨೦೧೭ರಲ್ಲಿ ‘ರಾಯಲ್ ರೈಡರ್ಸ್ ಮೈಸೂರು’ ತಂಡ. ತಂಡದ ಸದಸ್ಯರು ಮನಾಲಿ-ಕಾರ್ದೂಂಗ್ಲಾ ಟ್ರಿಪ್‌ಗೆ ಅಭ್ಯಾಸ ಮಾಡುತ್ತಿದ್ದುದನ್ನು ನೋಡಿ ತನಗೂ ಇಂತಹ ರೈಡ್ ಹೋಗಬೇಕೆಂಬ ಆಸೆ ಹುಟ್ಟಿತು. ಹೀಗೆ ಶುರುವಾದ ಬೃಂದಾ ಅವರ ಸೈಕಲ್ ಸವಾರಿ ಇತ್ತೀಚೆಗೆ ‘ಕಾಶ್ಮೀರ್ ಟು ಕನ್ಯಾಕುಮಾರಿ’ ತನಕವೂ ಸಾಗಿದೆ.
ಸಾವಿರಾರು ಕಿಲೋಮೀಟರ್‌ಗಳ ಪ್ರಯಾಣದಲ್ಲಿ ಸೈಕ್ಲಿಂಗ್‌ಅನ್ನು ಕೇವಲ ಹವ್ಯಾಸವಾಗಿ ಅಷ್ಟೇ ನೋಡದೆ ಬೃಂದಾ ತಮ್ಮ ವೃತ್ತಿಪರತೆಯನ್ನೂ ಮೆರೆದಿದ್ದಾರೆ. ಸಾಗುವಷ್ಟು ದೂರವೂ ಹಳ್ಳಿಗಳ ಗುಡ್ಡಗಾಡು ಪ್ರದೇಶಗಳ ಜನರಿಗೆ ಹಲ್ಲಿನ ಆರೋಗ್ಯದ ಕುರಿತು ಪುಟ್ಟ ಪುಟ್ಟ ಕರಪತ್ರಗಳನ್ನು ಹಂಚುವ ಮೂಲಕ, ಶಾಲೆಗಳಿಗೆ ತೆರಳಿ ಮಕ್ಕಳಿಗೆ ತರಗತಿ ತೆಗೆದುಕೊಳ್ಳುವ ಮುಖೇನ ಆರೋಗ್ಯ ಜಾಗೃತಿಯನ್ನು ಮೂಡಿಸಿದ ಹಿರಿಮೆ ಡಾ.ಬೃಂದಾ ಸುಹಾಸ್ ಗೋಧಿಯವರದ್ದು.
‘ಸೈಕ್ಲಿಂಗ್ ಎಂದರೆ ನಿಮ್ಮ ಪ್ರಕಾರ ಏನು?’ ಎಂದು ಕೇಳಿದರೆ ‘ಮೊದಲು ಸೈಕಲ್‌ನ ಬೇರೆ ಬೇರೆ ಮಾದರಿಗಳ ಬಗ್ಗೆ ಅರಿವಿರಬೇಕು’ ಎನ್ನುವ ಡಾ.ಬೃಂದಾ ಸೈಕಲ್ ಕುರಿತಾಗಿ ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಸೈಕಲ್‌ನಲ್ಲಿ ಮೂರು ವಿಧವಿದ್ದು ಮೌಂಟೇನ್ ಬೈಕ್, ಹೈಬ್ರಿಡ್ ಬೈಕ್ ಹಾಗೂ ರೋಡ್ ಬೈಕ್ ಎಂದು ವಿಂಗಡಿಸಲಾಗುತ್ತದೆ. ಮೌಂಟೇನ್ ಬೈಕ್‌ಗಳ ಟಯರ್ ದಪ್ಪನಾಗಿದ್ದು ಒಂದು ಸಲಕ್ಕೆ ೨೦೦ ಕಿಲೋಮೀಟರ್ ದೂರ ಕ್ರಮಿಸಬಹುದು.
ರೋಡ್ ಬೈಕ್‌ಗಳು ಹಗುರವಾಗಿ ತೆಳ್ಳನೆಯ ಟಯರ್ ಹೊಂದಿದ್ದು ೩೦೦-೪೦೦ ಕಿಲೋಮೀಟರ್ ಪ್ರಯಾಣಿಸಬಹುದು. ಸರಿಸುಮಾರು ಒಂದೂವರೆ ಲಕ್ಷದಿಂದ ಮೂರು ಲಕ್ಷದವರೆಗಿನ ಸೈಕಲ್‌ಗಳಿದ್ದು ಬಿಡಿಭಾಗಗಳ ಗುಣಮಟ್ಟಕ್ಕನುಸಾರವಾಗಿ ಸೈಕಲ್ ದರದಲ್ಲಿ ವ್ಯತ್ಯಾಸವಿರುತ್ತದೆ. ನಮ್ಮ ಸೈಕಲ್ ಟಯರ್ ರೇಟ್ ಕಾರ್ ಟಯರ್ ಗಿಂತಲೂ ದುಬಾರಿ. ಒಂದೊಂದು ಟಯರ್ ೯,೦೦೦ ರೂಪಾಯಿಗಳಷ್ಟು ಬೆಲೆಬಾಳುತ್ತದೆ ಎನ್ನುತ್ತಾರೆ ಡಾ.ಬೃಂದಾ.
ಸೈಕ್ಲಿಸ್ಟ್ ಆಗಿರುವ ನಮ್ಮಂತಹವರಿಗೆ ಸೈಕಲ್ ಎಂದರೆ ಕುಟುಂಬದ ಒಬ್ಬ ಸದಸ್ಯನಂತೆ ಎನ್ನುವ ಬೃಂದಾ ‘ಸೈಕಲ್‌ನ ಕಾಳಜಿಯೆಂದರೆ ತಮ್ಮ ವೈಯಕ್ತಿಕ ಆರೋಗ್ಯದಷ್ಟೇ ಮುಖ್ಯವಾಗುತ್ತದೆ. ಪ್ರತೀ ಮೂರು ಸಾವಿರ ಕಿಲೋಮೀಟರ್ ಪ್ರಯಾಣದ ನಂತರ ಸೈಕಲ್ ಸರ್ವಿಸ್ ಮಾಡುವುದು ಮುಖ್ಯವಾಗುತ್ತದೆ. ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸದಿದ್ದರೆ ಸೈಕಲ್ ಸವಾರಿ ದುಬಾರಿಯಾಗುತ್ತದೆ. ದೂರ ಪ್ರಯಾಣ ಮಾಡುವಂತಹ ಸೈಕಲ್‌ಗಳಿಗೆ ಹೆಚ್ಚಾಗಿ ಟ್ಯೂಬ್ ಲೆಸ್ ಟಯರ್‌ಗಳೇ ಇರುವುದರಿಂದ ಅಷ್ಟು ಬೇಗನೇ ಪಂಕ್ಚರ್ ಆಗುವ ಭಯ ಇರುವುದಿಲ್ಲ.
ಲಾಂಗ್ ಡಿಸ್ಟೆನ್ಸ್ ಸೈಕ್ಲಿಂಗ್ ಹೋಗುವುದ ಕ್ಕಾಗಿಯೇ ಪ್ರತ್ಯೇಕ ಸೈಕಲ್ಗಳಿದ್ದು ಮಾಮೂಲಿ ಸೈಕಲ್ ಅಂಗಡಿಗಳಲ್ಲಿ ಇವು ದೊರಕದ ಕಾರಣ ಆರ್ಡರ್ ಮಾಡಿ ತರಿಸಿಕೊಳ್ಳುತ್ತೇವೆ. ಇದು ಸೈಕಲ್‌ನ ಸಂಗತಿಯಾದರೆ ಇನ್ನು ಸೈಕ್ಲಿಸ್ಟ್‌ಗಳು ‘ಬೈಕ್ ಫಿಟ್’ ಮಾಡಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿಯೇ ಬೈಕ್ ಫಿಟ್ ಸೆಂಟರ್‌ಗಳು ಇದ್ದು ಸೈಕ್ಲಿಸ್ಟ್‌ಗಳ ಎತ್ತರ ಮತ್ತು ತೂಕಕ್ಕೆ ಅನುಗುಣವಾಗಿ ಸೈಕಲ್ ಅನ್ನು ವಿನ್ಯಾಸ ಮಾಡಲಾಗುತ್ತದೆ. ಸೈಕ್ಲಿಸ್ಟ್ ಭುಜದಿಂದ ಸೈಕಲ್ ಹ್ಯಾಂಡಲ್ ತನಕದ ಉದ್ದಳತೆ, ಪೆಡಲ್ ತುಳಿಯುವ ವೇಳೆ ಮಂಡಿಯ ಬಾಗುವಿಕೆ ಇತ್ಯಾದಿಗಳಿಗೆ ತಕ್ಕಂತೆ ಪ್ರತಿಯೊಬ್ಬ ಸೈಕ್ಲಿಸ್ಟ್‌ಗೆ ಸೈಕಲ್ ಡಿಸೈನ್ ಮಾಡಲಾಗುತ್ತದೆ. ಒಬ್ಬ ಸೈಕ್ಲಿಸ್ ನ ಸೈಕಲ್ ಇನ್ನೊಬ್ಬ ಸೈಕ್ಲಿಸ್ಟ್‌ಗೆ ಹೊಂದಿಕೆಯಾಗದಿರು ವುದರಿಂದ ಪ್ರತಿಯೊಬ್ಬ ಸೈಕ್ಲಿಸ್ಟ್ ತನಗೆ ಬೇಕಾದಂತೆ ಸೈಕಲ್ ಡಿಸೈನ್ ಮಾಡಿಸುತ್ತಾರೆ. ಬಟ್ಟೆಗಳಲ್ಲಿ ಇರುವಂತೆ ಸೈಕಲ್‌ಗಳಲ್ಲಿಯೂ ಮೀಡಿಯಂ, ಲಾರ್ಜ್, ಎಕ್ಸ್ ಟ್ರಾ ಲಾರ್ಜ್ ಸೈಜ್‌ಗಳಿದ್ದು ಸೈಕ್ಲಿಸ್ಟ್ ತನಗೆ ಬೇಕಾದ ಅಳತೆಯ ಸೈಕಲ್ ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ಎಲ್ಲ ರೀತಿಯಲ್ಲಿ ಸೈಕಲ್ ಸಿದ್ಧಪಡಿಸಿ ರೋಡ್ ಟ್ರಯಲ್ ಮಾಡಿದ ನಂತರವೇ ಸೈಕಲ್ ಸವಾರಿಯ ಪೂರ್ವ ತಯಾರಿ ಮುಗಿಯು ತ್ತದೆ. ಇದಕ್ಕೆ ಏನಿಲ್ಲವೆಂದರೂ ಹದಿನೈದು ಸಾವಿರ ರೂಪಾಯಿಗಳಷ್ಟು ಖರ್ಚು ಇರು ತ್ತದೆ!’ ಎನ್ನುತ್ತಾ ತಮ್ಮ ಸೈಕಲ್ ಬಗ್ಗೆ ಹೇಳುತ್ತಾರೆ. ಡಾ.ಬೃಂದಾ ಪ್ರಕಾರ ಸೈಕ್ಲಿಂಗ್ ಎನ್ನುವುದು ಒಂದು ಧ್ಯಾನ. ‘ಸೈಕಲ್ ಸೀಟಿನಲ್ಲಿ ಒಮ್ಮೆ ಕುಳಿತುಬಿಟ್ಟರೆ ಪ್ರಪಂಚವನ್ನೇ ಮರೆಯುತ್ತೇನೆ.
ನಾನು, ಸೈಕಲ್ ಮತ್ತು ರಸ್ತೆ ಇಷ್ಟೇ ನನ್ನ ಜಗತ್ತಾಗುತ್ತದೆ. ಲಾಂಗ್ ಡಿಸ್ಟೆನ್ಸ್ ರೈಡ್‌ನಲ್ಲಿ ನನ್ನೊಳಗಿನ ನಾನು ಪಕ್ವಗೊಳ್ಳುತ್ತಾ ಸಾಗುತ್ತೇನೆ. ನಾನು ನನ್ನನ್ನು ಕಂಡುಕೊಳ್ಳು ವುದಕ್ಕೆ ಸೈಕ್ಲಿಂಗ್ ಮಾಡುತ್ತೇನೆ. ಫಿಟ್ನೆಸ್ಗಾಗಿ ಆಯ್ಕೆ ಮಾಡಿಕೊಂಡ ಸೈಕ್ಲಿಂಗ್ ನನಗೆ ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ಕಲಿಸಿಕೊಟ್ಟಿದೆ. ಸೈಕ್ಲಿಂಗ್ ಎಂದರೆ ನನಗೆ ಬದುಕು’ ಎಂದು ತಮ್ಮ ಸೈಕಲ್ ಪ್ರೀತಿಯ ಮಧುರ ಸುಖವನ್ನು ಹಂಚಿಕೊಂಡ ಡಾ.ಬೃಂದಾ ಸುಹಾಸ್ ಅವರ ಸೈಕ್ಲಿಂಗ್ ಸಾಧನೆಯ ಪಟ್ಟಿ ದೊಡ್ಡದಿದೆ.
‘ವಯಸ್ಸು ಕೇವಲ ಒಂದು ಸಂಖ್ಯೆ’ ಎಂಬ ಮಾತನ್ನು ಮತ್ತೆ ಮತ್ತೆ ಹೇಳುವ ಡಾ.ಬೃಂದಾ ೨೦೨೫ರಲ್ಲಿ ಸೈಕ್ಲಿಂಗ್‌ನಲ್ಲಿ ಲಾಲ್ ಚೌಕ್ ಶ್ರೀನಗರದಿಂದ ಕನ್ಯಾಕುಮಾರಿಯವರೆಗಿನ ೩,೬೫೮ ಕಿ.ಮೀ. ದೂರವನ್ನು ೨೨ ದಿನಗಳಲ್ಲಿ ಮೂಲಕ ಕ್ರಮಿಸಿ ತಮ್ಮ ಗುರಿ ಮುಟ್ಟಿದ್ದಾರೆ.
” ಸೈಕಲ್ ಎಂದರೆ ಇಷ್ಟೇನಾ ಎಂದು ಮೂಗು ಮುರಿಯುವವರಿಗೆ ಡಾ.ಬೃಂದಾ ಸುಹಾಸ್ ಗೋಽಯವರು ಸೈಕಲ್ ಎಂದರೆ ಚಕ್ರಗಳೊಳಗೆ ದೊರಕುವ ಬದುಕಿನ ಪಾಠ ಎನ್ನುತ್ತಾರೆ”
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹಲವು ದಿನಗಳ ನಂತರ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸಫಾರಿಯಲ್ಲಿ…
ಟೆಹರಾನ್: ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗೆ ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಛಿದ್ರಗೊಂಡ ಆಕಾಶದೆತ್ತರದ ಕಟ್ಟಡಗಳು..! ಟೆಹರಾನ್‌ನಲ್ಲಿನ ಬೃಹತ್ ಕಟ್ಟಡಗಳು…
ಶಿವಮೊಗ್ಗ: ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ…
ಜಮ್ಮು-ಕಾಶ್ಮೀರ: ಇಸ್ರೇಲ್ ಮತ್ತು ಅಮೇರಿಕಾ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ರಾಷ್ಟ್ರದ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ.…
ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಂಡುಬಂದಿದೆ. ತೈಲ ಕಂಪನಿಗಳು ವಾಣಿಜ್ಯ…
ನಾಗ್ಪುರ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ ಮಹಿಳೆಯರು ಸೇರಿದಂತೆ 15 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪರ ಜಿಲ್ಲೆಯಲ್ಲಿ…