ಇವರು ಮಂಡ್ಯ ಜಿಲ್ಲೆ ದುದ್ದ ಹೋಬಳಿ ಮಲ್ಲಾಯನಕಟ್ಟೆಯ ಹಾಡುಗಾರ್ತಿ ನಾಟಿ ಸಾಕಮ್ಮ. ನಾಟಿ ಸಾಕಮ್ಮ ಅಂತ ಇವರ ಹೆಸರು ಯಾಕೆ ಅಂದರೆ ಇವರ ಊರಿನಲ್ಲಿ ಬಹಳ ಮಂದಿ ಸಾಕಮ್ಮಂದಿರು ಇದ್ದಾರೆ. ಆದರೆ ನಾಟಿ ಹಾಕುವಾಗ ಹಾಡು ಹೇಳುವ ಸಾಕಮ್ಮ ಇವರೊಬ್ಬರೇ. ಹಾಗಾಗಿ. ಇವರಿಗೆ ಈಗ ಆಸುಪಾಸು ಅರವತ್ತರ ವಯಸ್ಸು. ಇವರ ತವರು ಮನೆ ಚನ್ನಪಟ್ಟಣದ ಬಳಿಯ ಸಿದ್ದನಹಳ್ಳಿ. ಸಣ್ಣ ವಯಸ್ಸಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದ ಸಾಕಮ್ಮ ಆಗಿನಿಂದ ತೊಡಗಿದ ಕೂಲಿ ಕೆಲಸ ಈಗಲೂ ಮುಂದುವರಿದಿದೆ. ನಾಟಿ ಸಾಕಮ್ಮ ಪ್ರಸಿದ್ಧರಾಗಿರುವುದು ಹಾಡುಗಾರ್ತಿಯಾಗಿ. ನಾಟಿ ಹಾಕುವಾಗ, ಕಳೆ ಕೀಳುವಾಗ, ಯಾರಾದರೂ ತೀರಿ ಹೋದಾಗ, ಮೈ ನೆರೆದಾಗ, ಮದುವೆಯಾಗುವಾಗ ಅಲ್ಲಿ ಸಾಕಮ್ಮ ಮತ್ತು ಸಂಗಡಿಗರ ಜಾನಪದ ಹಾಡುಗಳು ಇರಲೇಬೇಕು. ಹಾಗಾಗಿ ಹಾಡುಗಳು ಅಂದರೆ ಸಾಕಮ್ಮನಿಗೆ ಬದುಕಲು ಇರುವ ದಾರಿ ಮತ್ತು ಬಡತನವ ಮರೆಯಲು ಇರುವ ಸಂಗಾತಿ. ನಾಟಿ ಸಾಕಮ್ಮನಿಗೆ ಇರಲು ಮನೆಯಿಲ್ಲ, ಬೆಳೆಯಲು ಭೂಮಿಯಿಲ್ಲ. ಹೊಟ್ಟೆ ತುಂಬ ಅನ್ನ ಸಿಗುವಷ್ಟು ಕೂಲಿ ಕೆಲಸವೂ ಸಿಗುವುದಿಲ್ಲ. ಆದರೆ ಈ ಯಾವುದರ ಕುರಿತೂ ಈಕೆಗೆ ಸಿಟ್ಟೂ ಇಲ್ಲ ಬೇಸರವೂ ಇಲ್ಲ. ತನ್ನ ಮನೆದೇವರು ಮಂಚಮ್ಮ ತನ್ನನ್ನು ಎಲ್ಲದರಿಂದ ಕಾಪಾಡುತ್ತಾಳೆ ಎನ್ನುವ ಮುಗ್ಧ ನಂಬಿಕೆ ಆಕೆಯದ್ದು. ಆದರೆ ಇಂತಹ ಸಾವಿರ ಸಾವಿರ ಸಾಕಮ್ಮಂದಿರ ಮುಗ್ದತೆಯನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಅಧಿಕಾರಸ್ಥರಿಗೆ ಇಂತಹ ತಾಯಂದಿರ ನಿಟ್ಟುಸಿರುಗಳು ಕೇಳಿಸುವುದೂ ಇಲ್ಲ (mysoorininda@gmail.com)
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…