ಎನ್.ಕೇಶವಮೂರ್ತಿ

ಮೈಸೂರಿನ ಸಮೀಪ ದಲ್ಲಿ ವೀರನಗೆರೆ ಎಂಬ ಊರಿದೆ. ಅದು ಈಗ ಮೈಸೂರಿಗೇ ಸೇರಿ ಕೊಂಡಿದೆ. ಈ ಗ್ರಾಮ ದಲ್ಲಿ ಮಹಾರಾಜರ ಕಾಲದಿಂದಲೂ ಬದನೆಕಾಯಿ ಬೆಳೆಯುವ ಕುಟುಂಬವೊಂದಿತ್ತು. ವೀರನಗೆರೆ ಬದನೆ ಎಂದೇ ಖ್ಯಾತಿ ಪಡೆದಿದ್ದ ಜೊಂಪೆ ಜೊಂಪೆ ಯಾಗಿ ಬೆಳೆಯುವ ಅತ್ಯಂತ ರುಚಿಕರ ಬದನೆ ತಳಿಗಳನ್ನು ಈ ಗ್ರಾಮದಲ್ಲಿ ಬೆಳೆಯುತ್ತಿದ್ದರು. ಅಂದರೆ ಜನರ ಬಾಯಿಯಿಂದ ಬಾಯಿಗೆ ಹರಡಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಈರನಗೆರೆ ಬದನೆಯನ್ನು ಇಲ್ಲಿ ಬೆಳೆಯಲಾಗುತ್ತಿತ್ತು.

ಬದನೆ ಬೆಳೆಯುತ್ತಿದ್ದ ಈ ರೈತಾಪಿ ಕುಟುಂ ಬದ ಹಿರೀ ತಲೆಯ ಅಜ್ಜಿಗೆ ಈಗ ಎಂಬತ್ತು ವರ್ಷ ವಯಸ್ಸು. ಸದಾ ಎಲೆ ಅಡಕೆ ಜಗಿಯು ವುದು ಅಜ್ಜಿಯ ಅಭ್ಯಾಸ. ಈ ಅಭ್ಯಾಸ ದೊಂದಿಗೆ ಪ್ರತಿದಿನ ಬೆಳಿಗ್ಗೆ ಮನೆಯ ಹಿಂದಿನ ಬದನೆಕಾಯಿ ತೋಟಕ್ಕೆ ಹೋಗಿ, ಅಲ್ಲಿ ಚೆನ್ನಾ ಗಿರುವ ಬದನೆಕಾಯಿ ಮೇಲೆ ಎಲೆಅಡಕೆ ಉಗುಳುವುದುಂಟು. ಅಜ್ಜಿಯ ಈ ಕೆಲಸ ಮನೆಯ ಮಕ್ಕಳಿಗೆ ಇಷ್ಟವಾಗುತ್ತಿರಲಿಲ್ಲ. ಮೊದಲ ಮೊದಲು ಎಲ್ಲರೂ ಆ ಅಜ್ಜಿಗೆ ಅರಳುಮರಳು ಎಂದು ಸುಮ್ಮನಾದರು. ಆದರೆ ಆ ಅಜ್ಜಿ ಉಗುಳುವ ಚಾಳಿ ಮುಂದುವರಿಸಿ ದಾಗ, ಹಿರಿಯಮಗ ಅಜ್ಜಿಯನ್ನು ಕೇಳಿದ, ‘ಅಮ್ಮ ನೀನು ಏಕೆ ಹೀಗೆ ಮಾಡ್ತೀಯಾ? ನೀನು ಉಗುಳುವ ಬದನೆಕಾಯಿಗಳು ಮೊದಲು ತುಂಬಾ ಚೆನ್ನಾಗಿರುತ್ತವೆ. ಅವುಗಳನ್ನು ಕೊಯ್ದು ಮಾರೋಣ ಎನ್ನುವಷ್ಟರಲ್ಲಿ ನೀನು ತಾಂಬೂಲ ಉಗಿದು ಅಸಹ್ಯ ಮಾಡಿರುತ್ತೀಯ, ಅವುಗಳನ್ನು ನಾವು ಮಾರಲೂ ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೆ ಆದಾಯವು ಸಿಗುತ್ತಿಲ್ಲ. ಏನು ನಿನ್ನ ಸಮಸ್ಯೆ? ’ ಎಂದ.

ಅದಕ್ಕೆ ಅಜ್ಜಿ ದವಡೆಗೆ ಒತ್ತರಿಸಿದ್ದ ತಾಂಬೂಲ ಉಗಿದು, ಮಗನ ಮುಖ ನೋಡಿ ನಿಧಾನವಾಗಿ, ‘ಸುಮ್ಕಿರ್ಲಾ ಕಂಡಿವ್ನಿ. ಮಹಾ ಬೆಳೀ ತಾನೆ ಬದನೆಕಾಯ್ನ, ಅಲ್ಲಾ ಎಕರೆಗಟ್ಲೆ ಬದನೆ ಹಾಕಿದ್ದೀಯಾ. ಎಲ್ಲೋ ಮೂಲೇಲಿ ಒಂದು ಬದನೆಗೆ ನಾನು ಉಗಿದ್ರೆ ದೇಸಾ ಹಾಳಾ ಯ್ತದಾ? ಹೋಗು ಹೋಗು ಕಂಡಿವ್ನಿ. ನೀನು ಏನೇ ಹೇಳಿದ್ರೂ ನಾನು ಹಂಗೆ ಮಾಡೋಳು ಎಂದಳು.

ಮಗ ತಲೆ ಹಚ್ಚಿಕೊಂಡ. ಎಷ್ಟಾದರೂ ಹೆತ್ತ ತಾಯಿ, ಅಮ್ಮ ಏನಾದ್ರೂ ಮಾಡಲಿ ಎಂದು ಉಳಿದವರಿಗೆ ಹೇಳಿದ, ಅಜ್ಜಿ ಉಗಿದಿರೋ ಕಾಯಿ ಹಂಗೇ ಬಿಡಿ ಉಳಿದದ್ದನ್ನು ಮಾರಿ ಎಂದು ಗೊಣಗಿಕೊಂಡು ಎಲ್ಲರೂ ಸುಮ್ಮನಾದ್ರೂ. ಆದರೆ ಅಜ್ಜಿಯ ಒಬ್ಬ ಮೊಮ್ಮಗ ಸುಮ್ಮ ನಾಗಲಿಲ್ಲ. ಅವನು ಅಜ್ಜಿಯ ಕೆಲಸವನ್ನು ಹತ್ತಿರದಿಂದ ಗಮನಿಸತೊಡಗಿದ. ಅಜ್ಜಿ ಅರಳುಮರಳಿಂದಲ್ಲ ಬೇಕೆಂದೇ ಹೀಗೆ ಮಾಡುತ್ತಿದ್ದಾರೆ ಎಂದು ಅವನಿಗೆ, ಅಜ್ಜಿ ಉಗಿಯೋಕೆ ಆಯ್ದುಕೊಂಡ ಉತ್ತಮ ಬದನೆ ಕಾಯಿ ನೋಡಿದಾಗ ಖಚಿತವಾಯಿತು. ಮೊಮ್ಮಗನಿಗೆ ಅನುಮಾನ ಬಂದು ಅಜ್ಜಿ ಯನ್ನು ಕೇಳಿಯೇ ಬಿಟ್ಟ. ಮೊಮ್ಮಗ ಅಲ್ವಾ ಎಂದು ಪ್ರೀತಿಯಿಂದ ಅವನನ್ನು ಹತ್ತಿರ ಕೂರಿಸಿಕೊಂಡು, ನೋಡು ಮಗಾ, ಈ ಮೂದೇವಿಗಳಿಗೆ ಎಲ್ಲಾ ಕೊಯ್ದು ಮಾರೋ ಆತುರ. ಆದರೆ ಮುಂದಿನ ಹಂಗಾಮಿಗೆ ಬೀಜಕ್ಕೇನು ಮಾಡ್ತಾವೆ? ಅಕ್ಕ ಪಕ್ಕದವರ ಬಳಿ ಗೋಗರೀತಾವೆ. ಅದಕ್ಕೆ ನಾನು ಉಪಾಯ ವಾಗಿ ಚೆನ್ನಾಗಿ ಬಲಿತಿರುವ ಬದನೆ ಕಾಯಿ ಆರಿಸಿ ಉಗೀತೀನಿ. ಅದನ್ನು ಇವರು ಮಾರಲ್ಲ. ನಂತರ ಅದನ್ನು ಖಟಾವು ಮಾಡಿ, ಮಧ್ಯದಲ್ಲಿ ಸೀಳಿ, ಬೆಂಬೂದಿ ಬೆರೆಸಿ ಜೋಪಾನ ಮಾಡಿ, ಇವರಿಗೇ ಅಕ್ಕಪಕ್ಕದಿಂದ ತಂದ ಬೀಜ ಅಂತಾ ಕೊಡ್ತೀನಿ. ಪ್ರತಿ ಬಾರಿನೂ ಬೆಳೆ ಚೆನ್ನಾಗಿ ಬರೋ ದ್ರಿಂದ ನನ್ನನ್ನೇ ಬೀಜ ಕೊಡು ಅಂತಾ ಗೋಗರಿ ತಾವೆ. ಕೆರೆಯ ನೀರನು ಕೆರೆಗೇ ಹಾಕ್ತಾ ಇದ್ದೀನಿ. ಇದನ್ನು ಯಾರಿಗೂ ಹೇಳಬೇಡ’ ಎಂದು ಅಜ್ಜಿ ಮೊಮ್ಮಗ ನಿಗೆ ಹೇಳಿದಳು. ಮೊಮ್ಮಗನಿಗೆ ಅಜ್ಜಿಯಿಂದ ಒಂದು ಕೃಷಿಯ ಪಾಠ ಸಿಕ್ಕಿತು.

ಅಜ್ಜಿಯ ಜಾಣ್ಮೆಗೆ ಮಗ ಬೆರಗಾದ. ಇಂತಹ ಬೀಜ ಮಾತೆಯರು ಇರುವುದ ರಿಂದಲೇ ಇವತ್ತೂ ಹಳ್ಳಿಗಳಲ್ಲಿ ನಾಟಿ ತಳಿಗಳು ಉಳಿದಿವೆ. ಅಂತಹ ಮಾತೆಯರಿಂದ ಕಲಿಯುವುದು ಬಹಳಷ್ಟಿದೆ.

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

2 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

4 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

5 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

5 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

5 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

6 hours ago