ಜಿ.ಕೃಷ್ಣಪ್ರಸಾದ್
ಮೊನ್ನೆ ಪಾಂಡವಪುರ ಸಮೀಪದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದ ರೈತರ ಸಭೆಯೊಂದಕ್ಕೆ ಹೋಗಿದ್ದೆ. ಇದು ರೈತ ನಾಯಕ ಪುಟ್ಟಣ್ಣಯ್ಯನವರ ಹುಟ್ಟೂರು. ಮಂಡ್ಯ, ಮೈಸೂರು ಮತ್ತು ಚಾಮರಾಜನಗರದ ಪರ್ಯಾಯ ಕೃಷಿ ಮಾಡುತ್ತಿರುವ ಜೈವಿಕ ರೈತ ಕುಟುಂಬಗಳನ್ನು ಒಂದೆಡೆ ತರುವ ಪ್ರಯತ್ನದ ಭಾಗವಾಗಿ ಆಯೋಜನೆಗೊಂಡಿದ್ದ ಸಭೆ ಅದು.
ಸಭೆ ನಡೆದ ತೋಟದ ರಸ್ತೆಯಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ನನ್ನ ಗಮನ ಸೆಳೆಯಿತು. ಆ ಬೈಕ್‌ಗೆ ಟ್ರಾಲಿ ಯೊಂದನ್ನು ಜೋಡಿಸಿದ್ದರು; ಟ್ರಾಕ್ಟರ್‌ಗೆ ಟ್ರಾಲಿ ಜೋಡಿಸಿದಂತೆ. ಸೀಮೆ ಹುಲ್ಲುನ್ನು ಕೊಯ್ದು ತಂದು ಟ್ರಾಲಿಯಲ್ಲಿ ತುಂಬುತ್ತಿದ್ದರು.
ಅದು ಕ್ಯಾತನಹಳ್ಳಿ ರಾಮಚಂದ್ರರ ‘ಸ್ಕೂಟರ್ ಟ್ರಾಲಿ’. ಸಣ್ಣಪುಟ್ಟ ಸರಂಜಾಮು, ತೋಟದ ತೆಂಗಿನಕಾಯಿ, ದನಕರುಗಳಿಗೆ ಬೇಕಾದ ಹುಲ್ಲು, ಗೊಬ್ಬರದ ಚೀಲ ಮೊದಲಾದ ಅಗತ್ಯ ಕೃಷಿ ಸರಕುಗಳನ್ನು ಈ ಟ್ರಾಲಿಗೆ ತುಂಬಿ ಬೈಕ್ ಓಡಿಸಿದರೆ, ನಾಯಿಯ ಬಾಲದಂತೆ ಈ ಟ್ರಾಲಿ ಜೊತೆಗೆ ಬರುತ್ತದೆ.
ಕೂಲಿ ಕಾರ್ಮಿಕರು ಸಿಗಲ್ಲ: ಈಗಿನ ಮಕ್ಕಳು ಹೊರೆ ಹೊರಲ್ಲ. ಟ್ರಾಲಿಗೆ ಲಗೇಜ್ ಹಾಕಿದರೆ ಖುಷಿಯಾಗಿ ಬೈಕ್ ಓಡಿಸುತ್ತಾರೆ. ಎಷ್ಟೋ ಸಲ ತರಕಾರಿ, ಎಳನೀರು ತುಂಬಿ ಇದೇ ಟ್ರಾಲಿಯಲ್ಲಿ ಶ್ರೀರಂಗಪಟ್ಟಣಕ್ಕೆ ತಗೊಂಡು ಹೋಗಿದ್ದೇನೆ. ಭತ್ತ ಮಿಲ್ ಮಾಡಿಸೋಕೋ ಇದರಲ್ಲಿ ಹೋಗ್ತೇನೆ ಎಂದು ರಾಮಚಂದ್ರ ಖುಷಿ ಯಿಂದಲೇ ಹೇಳಿದರು. ಸ್ಕೂಟರ್ ಟ್ರಾಲಿ ಅವರ ಕೃಷಿ ಸಂಬಂಧ ಸರಕು ಸಾಗಾಣಿಕೆಯನ್ನು ಸುಲಭಗೊಳಿಸಿದೆ.
ಟ್ರಾಲಿಗೆ ಆಟೋ ಮಾದರಿಯಲ್ಲಿ ಮೂರು ಚಕ್ರಗಳಿರುವುದರಿಂದ ಪಲ್ಟಿ ಹೊಡೆಯುವ ಸಂಭವ ಇಲ್ಲವೇ ಇಲ್ಲ. ತಿರುವುಗಳಲ್ಲಿ ಸುಲಭವಾಗಿ ತಿರುಗುತ್ತದೆ. ಬೈಕ್ ಓಡಾಡುವ ರಸ್ತೆಯಲ್ಲಿ ಈ ಟ್ರಾಲಿ ಸುಲಭವಾಗಿ ಬರುತ್ತದೆ. ೫೦೦ ಕೆಜಿಯವರೆಗೆ ಸರಕು ತುಂಬಬಹುದು. ಟ್ರಾಲಿಯನ್ನು ಬೈಕ್‌ಗೆ ಜೋಡಿಸಲು ಲೋಹದ ಸರಳು ಇರುತ್ತದೆ.
ಬೇಡ ಎನಿಸಿದಾಗ ಇದನ್ನು ಬಿಚ್ಚಿಡಬಹುದು. ಎರಡು- ಮೂರು ಮನೆಯವರು ಒಂದೇ ಟ್ರಾಲಿ ಬಳಸುತ್ತಾರೆ. ಕ್ಯಾತನಹಳ್ಳಿ ಅಷ್ಟೇ ಅಲ್ಲ ಸುತ್ತಮುತ್ತಲ ಊರುಗಳಲ್ಲೂ ಸ್ಕೂಟರ್ ಟ್ರಾಲಿ ಜನಪ್ರಿಯ. ಇದನ್ನು ಯಾರು ಅಭಿವೃದ್ಧಿಪಡಿಸಿದರು ಎಂಬುದು ಗೊತ್ತಿಲ್ಲವಾದರೂ, ಕಳೆದ ಐದಾರು ವರ್ಷಗಳಿಂದ ಇದರ ಬಳಕೆ ಇದೆ. ಸ್ಥಳೀಯವಾಗಿ ಸಿದ್ಧವಾಗುವ ಸ್ಕೂಟರ್ ಟ್ರಾಲಿ ಮಾಡಿಸಲು ೧೫ ಸಾವಿರ ರೂ. ಖರ್ಚಾಗುತ್ತದೆ.
ಯಾವುದೇ ನಿರ್ವಹಣಾ ವೆಚ್ಚ ಕೇಳದು. ‘ಮೊದಲೆಲ್ಲಾ ಹೊಲಕ್ಕೆ ಬಂಡಿ ಕಟ್ಟಿಕೊಂಡು ಹೋಗ್ತಿದ್ದರು. ಈಗ ದನಗಳೇ ಇಲ್ಲ. ಈಗಿನ ಪೀಳಿಗೆ ಹುಡುಗರಿಗೆ ಈ ಟ್ರಾಲಿ ಇಷ್ಟವಾಗಿದೆ’ ಎನ್ನುತ್ತಾರೆ ರೈತ ಬಸವರಾಜು. ಬದಲಾದ ಕಾಲಕ್ಕೆ ಅನುಗುಣವಾಗಿ ಎತ್ತಿನ ಗಾಡಿ ಬದಲು ಸ್ಕೂಟರ್ ಟ್ರಾಲಿ ಬಂದಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ರಾಮಚಂದ್ರ-ಮೊ.ಸಂ. ೭೩೫೩೨ ೮೫೯೪೩ ಸಂಪರ್ಕಿಸಬಹುದು.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…