“ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಇಲ್ಲದೆ ಹೋದರೆ ಭೂಮಿಯ ಮೇಲಿನ ಜೀವ ನಿಂತು ಹೋದ ಹಾಗೆ”

ಡಿ.ಎನ್.ಹರ್ಷ

ನೊಬೆಲ್ ಪ್ರಶಸ್ತಿ ವಿಜೇತ ವಾಕ್ಸ್‌ಮಾನ್ ಎಸ್.ಎ.ರವರು ೧೯೩೮ರಲ್ಲಿಯೇ, ಮಣ್ಣು ಮತ್ತು ಸೂಕ್ಷ್ಮಾಣು ಜೀವಿಗಳ ಮಹತ್ವವನ್ನು ವಿವರಿಸಿದ್ದಾರೆ. ಭೂಮಿಯ ಮೇಲಿನ ಜನರಿಗಿಂತ, ಮಣ್ಣಿನಲ್ಲಿ ಹೆಚ್ಚು ಜೀವಿಗಳಿವೆ ಎಂಬ ವಾಸ್ತವಾಂಶ ಹೆಚ್ಚು ಜನರಿಗೆ ತಿಳಿದಿಲ್ಲ.

ಮಣ್ಣಿನಲ್ಲಿ ಖನಿಜಗಳು(ಶೇ.೪೫), ಸಾವಯವ ವಸ್ತುಗಳು(ಶೇ.೫), ನೀರು(ಶೇ.೨೫) ಮತ್ತು ಗಾಳಿ  (ಶೇ.೨೫), ಎಂಬ ನಾಲ್ಕು ಮುಖ್ಯ ಅಂಶಗಳಿಂದ ಕೂಡಿದ್ದು, ಕೋಟ್ಯಂತರ ಜೀವಿಗಳ ವಾಸಸ್ಥಾನ ವಾಗಿವೆ. ಇದು ಸಸ್ಯಗಳ ಬೆಳವಣಿಗೆಯ ಮೂಲಕ ಮಾನವರು ಮತ್ತು ಪ್ರಾಣಿಗಳಿಗೆ ಆಹಾರವನ್ನು ಒದಗಿಸುತ್ತಾ ಬಂದಿದೆ.

ಮಣ್ಣು ಮತ್ತು ಸುಸ್ಥಿರ ಕೃಷಿ: ಯಾವುದೇ ಕೃಷಿ ವ್ಯವಸ್ಥೆಯು ಸುಸ್ಥಿರವಾಗಿರಬೇಕೆಂದರೆ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯವನ್ನು ನಿರಂತರವಾಗಿ ನಿರ್ವಹಣೆ ಮಾಡುವುದು ಅವಶ್ಯ. ಪ್ರಕೃತಿ ತನ್ನಲ್ಲಿ ಇರುವ ಎಲ್ಲಾ ರೀತಿಯ ಜೀವ ರಾಶಿಗಳಿಗೆ, ಅಗತ್ಯ ಆಹಾರವನ್ನು ಕೊಡುವಷ್ಟು ಶಕ್ತವಾಗಿದೆ.

ಸ್ವಾಭಾವಿಕವಾಗಿ ಸಿಗುವ ಗಾಳಿ, ನೀರು, ಬೆಳಕು, ಭೂಮಿ, ಆಕಾಶ ಪಂಚಭೂತಗಳನ್ನು ಬಳಸಿಕೊಂಡು, ಅತಿವೃಷ್ಟಿ ಅಥವಾ ಅನಾವೃಷ್ಟಿ ಸಮಯದಲ್ಲಿ  ಕೂಡ ಕಾಡುಗಳಲ್ಲಿ ಮರ ಗಿಡಗಳು, ಸದೃಢವಾಗಿ ಬೆಳೆಯುತ್ತವೆ. ಆದರೆ ದುಬಾರಿ ಬೆಲೆಯ ಕೃಷಿ ಪದ್ಧತಿಗಳನ್ನು ಅನುಸರಿ ಸುತ್ತಾ ಇದ್ದರು. ಇದರಿಂದ ಮಣ್ಣು ಅನುತ್ಪಾದಕವಾಗಿ, ಅವನತಿಯತ್ತ ಸಾಗುತ್ತಾ ಇರುವುದು ಎಲ್ಲರೂ ಆಲೋಚಿಸಬೇಕಾದ ಪ್ರಮುಖ ವಿಷಯವಾಗಿದೆ.

ಮಣ್ಣಿನ ಅವನತಿ ಅಥವಾ ಅನುತ್ಪಾದಕತೆ ಎಂದರೇನು?

ಮಣ್ಣಿನ ಅವನತಿಯು ಒಂದು ಪ್ರಮುಖ ಜಾಗತಿಕ ಸಮಸ್ಯೆಯಾಗಿದ್ದು, ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳ ಕ್ಷೀಣಿಸುವಿಕೆಯಿಂದ, ಕೃಷಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುತ್ತಿಲ್ಲ. ಮಣ್ಣಿನ ಆಹಾರ ಸರಪಳಿಯಲ್ಲಿ, ಮಣ್ಣಿನ ಉಪಕಾರಿ ಜೀವಿಗಳುನಶಿಸಿ ಹೋಗುವ ಕ್ರಿಯೆಯನ್ನು ಮಣ್ಣಿನ ಅವನತಿ ಅಥವಾ ಅನುತ್ಪಾದಕತೆ ಎಂದು ಕರೆಯಬಹುದು.

ಮಣ್ಣಿನ ಅನುತ್ಪಾದಕತೆಗೆ ಕಾರಣಗಳು

* ಕೃಷಿಯಲ್ಲಿ ಏಕ ಬೆಳೆ ಬೇಸಾಯ ಪದ್ಧತಿ ಅಗತ್ಯಕ್ಕಿಂತ ಹೆಚ್ಚು ನೀರಿನ ಬಳಕೆ
* ಅತಿಯಾದ ರಾಸಾಯನಿಕ ಗೊಬ್ಬರ ಮತ್ತುಕೀಟನಾಶಕಗಳ ಬಳಕೆ
* ಭಾರೀ ಯಂತ್ರೋಪಕರಣಗಳ ಬಳಕೆ ಮತ್ತು ಆಳವಾದ ಉಳುಮೆ ಅನುತ್ಪಾದಕ ಮಣ್ಣಿನ ದುಷ್ಪರಿಣಾಮಗಳು
* ಮಣ್ಣಿನ ಕಣಗಳು ಒಂದಕ್ಕೊಂದು ಅಂಟಿಕೊಂಡು, ಮಣ್ಣು ಬಿಗಿಯಾಗಿರುತ್ತದೆ.
* ಮಣ್ಣಿನ ಒಳಗಡೆ ಗಾಳಿಯ ಸಂಚಾರ ಕಡಿಮೆಯಾಗಿರುತ್ತದೆ
* ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ
* ತಾಜ್ಯಗಳ ಕಳಿಯುವಿಕೆಯ ಪ್ರಮಾಣ ಕಡಿಮೆಯಾಗಿ, ಮಣ್ಣಿನ ರಸಸಾರ( PH) ಬದಲಾವಣೆ ಆಗಿರುತ್ತದೆ

ಮಣ್ಣಿನ ಅನುತ್ಪಾದಕತೆಯಿಂದ ಕೃಷಿಕನ ಮೇಲಾಗುವ ದುಷ್ಪರಿಣಾಮಗಳು: 

* ಬೆಳೆಗಳ ಬೆಳವಣಿಗೆಯಲ್ಲಿ ಕುಂಠಿತ
* ರೋಗ ಮತ್ತು ಕೀಟ ಬಾಧೆ ಹೆಚ್ಚಾಗುತ್ತದೆ
* ಕೃಷಿ ಉತ್ಪನ್ನಗಳ ಗುಣಮಟ್ಟ ಕಡಿಮೆ ಯಾಗುತ್ತದೆ
* ಕೃಷಿ ಉತ್ಪನ್ನಗಳ ಇಳುವರಿ ಕಡಿಮೆಯಾಗುವುದು
* ಕೃಷಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ.

ಪ್ರಸ್ತುತ ಕೃಷಿಕರು ಎದುರಿಸುತ್ತಾ ಇರುವ ಹಲವು ಸಮಸ್ಯೆಗಳಿಗೆ ಮಣ್ಣು ಅವನತಿಯತ್ತಾಸಾಗಿ ಅನುತ್ಪಾದಕ ಮಣ್ಣಾಗಿ ಬದಲಾವಣೆ ಆಗಿರುವುದೇ ಮುಖ್ಯ ಕಾರಣವಾಗಿದೆ. ಅನುತ್ಪಾದಕವಾಗಿರುವ ಮಣ್ಣನ್ನು ಮತ್ತೆ ಉತ್ಪಾದಕ ಮಣ್ಣಾಗಿ ಪರಿವರ್ತಿಸುವ ಪುನರುತ್ಪಾದನೆ ಪ್ರಕ್ರಿಯೆ ಎಲ್ಲದಕ್ಕೂ ಪರಿಹಾರವಾಗಿದೆ.

ಮಣ್ಣಿನ ಪುನರುತ್ಪಾದನೆ: ಅನುತ್ಪಾದಕ ಮಣ್ಣಿನ ಗುಣಮಟ್ಟ ಹಾಗೂ ಆರೋಗ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಮಣ್ಣಿನ ಪುನರುತ್ಪಾದನೆ ಎನ್ನಬಹುದು

ಮಣ್ಣಿನ ಪುನರುತ್ಪಾದನೆಯಿಂದ ಕೃಷಿಕರಿಗೆ  ಆಗುವ ಲಾಭಗಳು:

* ರಾಸಾಯನಿಕಗಳ ಬಳಕೆಯನ್ನ ಕಡಿಮೆ ಮಾಡಬಹುದು
* ರೋಗ ಮತ್ತು ಕೀಟ ಬಾಧೆ ಇಳಿಮುಖವಾಗುತ್ತದೆ
* ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ
* ಬೆಳೆಗಳ ಇಳುವರಿ ಹೆಚ್ಚಾಗುತ್ತದೆ
* ಕೃಷಿ ಉತ್ಪನ್ನಗಳ ಗುಣಮಟ್ಟ ಹೆಚ್ಚಾಗುತ್ತದೆ

ಕೃಷಿಕರಿಗೆ ಸಲಹೆಗಳು? ಹವಾಮಾನ ಮುನ್ಸೂಚನೆಗೆಅನುಗುಣವಾಗಿ ಕೃಷಿಚಟುವಟಿಕೆಯನ್ನು ಕೈಗೊಳ್ಳುವುದು? ಸರಿಯಾದ ಸಮಯದಲ್ಲಿ ಬಿತ್ತನೆ ಮತ್ತುನಾಟಿ ಮಾಡುವುದು? ದೀರ್ಘಾವಽಯ ತಳಿಗಳನ್ನುಬೆಳೆಯುವುದರಿಂದ ಹೆಚ್ಚಿನತಾಪಮಾನದ ಬಾಧೆಯನ್ನು ಕಡಿಮೆ ಮಾಡಬಹುದು? ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ರಸಗೊಬ್ಬರವನ್ನು ಕೊಟ್ಟು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬೆಳೆಗಳಿಗೆ ಒದಗಿಸಬೇಕು? ಶಾಶ್ವತವಾಗಿ ಬೆಳೆಗಳ ಮೇಲಾಗುವ ಹಾನಿ ಯನ್ನು ನಿವಾರಿಸಲು ಬರ ನಿರೋಧಕ ತಳಿಗಳನ್ನು ಪಯೋಗಿಸಬೇಕು

ಆಂದೋಲನ ಡೆಸ್ಕ್

Recent Posts

ಸಿಎಂ ರಾಜಕೀಯ ಕಾರ್ಯದರ್ಶಿ ವಜಾ : ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದೇನು?

ಬೆಳಗಾವಿ : ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಜೀರ್‌ ಅಹಮ್ಮದ್‌ ಬಿಡುಗಡೆಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ…

8 mins ago

ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌, ಸ್ಟವ್‌ ಪತ್ತೆ

ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿರುವ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ…

2 hours ago

ತಮಿಳುನಾಡು ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ

ಚನ್ನೈ: ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ, ಬಿಜೆಪಿ ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ವಾರ್ಷಿಕವಾಗಿ ಮೂರು ಉಚಿತ ಎಲ್‍ಪಿಜಿ…

2 hours ago

ಮೈಸೂರು: ವಿನೂತನ ರೀತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬಾಬಾ ಸಾಹೇಬ್‌ ಡಾ.ಬಿ.ಆರ್.‌ಅಂಬೇಡ್ಕರ್‌ ಅವರು 135ನೇ ಜಯಂತಿಯನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡಲಾಯಿತು.…

3 hours ago

ನಾಳೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮಂಡ್ಯ: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ 100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರ ನಾಳೆ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ…

4 hours ago

ದೇಶದ ಹಲವು ರಾಜ್ಯಗಳಲ್ಲಿ ಒಂದು ವಾರ ಹೆಚ್ಚಲಿದೆ ತಾಪಮಾನ

ನವದೆಹಲಿ: ದೇಶಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ವಾರಗಳ ಕಾಲ ತಾಪಮಾನ ಹೆಚ್ಚಾಗಲಿದೆ…

4 hours ago