ಡಿ.ಎನ್.ಹರ್ಷ
ನಗರ ಪ್ರದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿದ್ದಾಗಿನಿಂದಲೂ ಕೃಷಿ ಮೇಲಿನ ಪ್ರೀತಿಯಿಂದಾಗಿ ಕಳೆದ ಐದು ದಶಕಗಳಿಂದ ಕೃಷಿಯಲ್ಲಿ ಪ್ರೀತಿಯನ್ನು ಬೆಳೆಸಿಕೊಂಡು ಈಗ ನಿವೃತ್ತಿಯ ಬಳಿಕ ಸಂಪೂರ್ಣವಾಗಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ೭೪ ವರ್ಷ ಪ್ರಾಯದ ಆರ್.ಶೇಷ ಕುಮಾರ್ ಯುವಕರಿಗೆ ಮಾದರಿಯಾಗಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಕೋಟೆಕೆರೆ ಗ್ರಾಮದಲ್ಲಿರುವ ತಮ್ಮ ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ೬೫ಕ್ಕೂ ಹೆಚ್ಚು ವಿದೇಶಿ ತಳಿಗಳ ಹಣ್ಣುಗಳನ್ನು ಬೆಳೆಯುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇವರು ಹಲವು ತಳಿಗಳ ಮಾವಿನ ಹಣ್ಣು, ಹಲಸು, ಸಪೋಟ, ಸೀಬೆ ಸೇರಿದಂತೆ ಅನೇಕ ಬಗೆಯ ಹಣ್ಣುಗಳನ್ನು ನೈಸರ್ಗಿಕ ಕೃಷಿ ಪದ್ಧತಿ ಯನ್ನು ಅಳವಡಿಸಿಕೊಂಡು ಬೆಳೆದಿದ್ದಾರೆ.
ನಾಲ್ಕು ಎಕರೆ ಪೈಕಿ ಮೂರು ಎಕರೆಯಲ್ಲಿ ಹೈಡೆನ್ಸಿಟಿ ಪದ್ಧತಿಯನ್ನು ಅಳವಡಿಸಿಕೊಂಡು ಸುಮಾರು ೧,೯೦೦ಕ್ಕೂ ಅಧಿಕ ಹಣ್ಣಿನ ಗಿಡ-ಮರಗಳನ್ನು ಬೆಳೆಸಿದ್ದಾರೆ. ಉಳಿದ ಒಂದು ಎಕರೆಯಲ್ಲಿ ತಮ್ಮ ಮನೆಗೆ ಬೇಕಾದ ದ್ವಿದಳ ಧಾನ್ಯಗಳು, ರಾಗಿ, ಜೋಳ ಸೇರಿದಂತೆ ಏಕದಳ ಧಾನ್ಯಗಳನ್ನು ಬೆಳೆದುಕೊಳ್ಳುತ್ತಿದ್ದಾರೆ.
ಇನ್ನು ಇವರ ಜಮೀನಿಗೆ ಬೇಕಾದ ಜೀವಾಮೃತವನ್ನೂ ಇವರೇ ತಯಾರಿಸಿಕೊಳ್ಳುತ್ತಾರೆ. ಬೇವು, ಹಿಪ್ಪೆ, ಹೊಂಗೆ ಹಿಂಡಿಗಳನ್ನು ಬಳಸಿಕೊಂಡು ಜೀವಾಮೃತ ರೂಪದಲ್ಲಿ ಗೊಬ್ಬರ ತಯಾರಿಸಿ ಬಳಸುವುದರಿಂದ ಮಣ್ಣಿನಲ್ಲಿ ಅಗತ್ಯ ಸೂಕ್ಷಾ ಣು ಜೀವಿಗಳು ವೃದ್ಧಿಯಾಗಿ ಉತ್ತಮ ಇಳುವರಿ ಪಡೆಯಬಹುದು ಎಂಬುದು ಶೇಷ ಕುಮಾರ್‌ರವರ ಮಾತು.
ಇನ್ನು ಇವರ ತೋಟದಲ್ಲಿ ಬೆಳೆದ ತರಕಾರಿ, ಹಣ್ಣು ಹಾಗೂ ಇತರ ಕೃಷಿ ಉತ್ಪನ್ನಗಳನ್ನು ಇವರೇ ಕಟ್ಟಿಕೊಂಡಿರುವ ಸಮಾನ ಮನಸ್ಕರ ತಂಡದೊಂದಿಗೆ ಹಲವು ವರ್ಷಗಳಿಂದ ಮೈಸೂರಿನ ವಿಜಯನಗರದಲ್ಲಿ ವಾರಕ್ಕೊಮ್ಮೆ ನಡೆಯುವ ‘ಸಕ್ಕತ್ ಸೊಪ್ಪು’ ಎಂಬ ವಿಶೇಷ ಸಂತೆಯಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.
ತಮ್ಮ ಜಮೀನಿನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಬಾರದು ಎಂದು ಶೇಷ ಕುಮಾರ್ ಕಳೆದ ಹತ್ತು ವರ್ಷಗಳಿಂದ ಸೋಲಾರ್ ಮತ್ತು ಪವನ ವಿದ್ಯುಚ್ಚಕ್ತಿಯನ್ನು ಅಳವಡಿಸಿಕೊಂಡಿದ್ದಾರೆ. ತಮ್ಮ ಫಾರ್ಮ್‌ಗೆ ಭೇಟಿ ನೀಡುವ ಇತರೆ ಕೃಷಿಕರಿಗೂ ಉತ್ತಮ ಮಾಹಿತಿಯನ್ನು ನೀಡುತ್ತಾರೆ.
ಸುಮಾರು ೨೦ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿರುವ ಶೇಷ ಕುಮಾರ್, ಅಲ್ಲಿನ ಕೃಷಿ ಪ್ರವಾಸ ತಾಣಗಳನ್ನು ನೋಡಿ, ಸ್ಥಳೀಯವಾಗಿ ಆಗ್ರೋ ಟೂರಿಸಂ ಸೆಂಟರ್ ತೆರೆಯುವ ಕನಸು ಕಂಡಿದ್ದರು. ಆಗ್ರೋ ಟೂರಿಸಂ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಬಳಿಕ ತಮ್ಮ ಕೃಷಿ ಭೂಮಿಯಲ್ಲಿ ಆಗ್ರೋ ಟೂರಿಸಂ ಸ್ಥಾಪಿಸಿ ತಮ್ಮ ಜಮೀನಿಗೆ ಭೇಟಿ ನೀಡುವ ರೈತರಿಗೆ ಊಟ, ವಸತಿ ಜತೆಗೆ ಆಧುನಿಕ ಕೃಷಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಸದ್ಯ ಇವರ ತೋಟದಲ್ಲಿ ೨೦ಕ್ಕೂ ಅಧಿಕ ಜನರು ಉಳಿದುಕೊಳ್ಳಬಹುದಾದ ರೀತಿಯಲ್ಲಿ ಎಂಟು ನೈಸರ್ಗಿಕ ಕಾಟೇಜ್ಗಳು, ಅಡುಗೆ ಮನೆಗಳನ್ನು ನಿರ್ಮಾಣ ಮಾಡಿದ್ದು, ಆಗ್ರೋ ಟೂರಿಸಂ ಆರಂಭಿಸಿದ್ದಾರೆ. ಇವರ ತೋಟಕ್ಕೆ ಬರುವ ಬಹುಪಾಲು ಅತಿಥಿಗಳನ್ನು ಇವರ ಜಮೀನಿನಲ್ಲಿ ಬೆಳೆದಿರುವ ಲಿಪೋಟೋ, ಬ್ಲಾಕ್ ಸಪೋಟ, ರೆಡ್ ಸಪೋಟ, ಮ್ಯಾಂಗೋ ಸ್ಟೀಮ್, ಅಸ್ಟಿನ್ ಸೇರಿದಂತೆ ೬೫ಕ್ಕೂ ಅಧಿಕ ತಳಿಗಳ ವಿದೇಶಿ ಹಣ್ಣುಗಳು ಆಕರ್ಷಿಸುತ್ತಿವೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಕೃಷಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶವಿಟ್ಟುಕೊಂಡಿದ್ದಾರೆ.
ಶೇಷ ಕುಮಾರ್‌ರವರಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರಿನ ಸ್ವಯಂ ಸೇವಾ ಸಂಸ್ಥೆ ವಿಶ್ವೇಶ್ವರಯ್ಯ ಡೆವಲಪ್ಮೆಂಟ್ ಆರ್ಗನೈಜೇಷನ್ ವತಿಯಿಂದ ‘ಕೃಷಿ ಸಮ್ಮಾನ ಪುರಸ್ಕಾರ’ ಸಂದಿದೆ. ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಇವರನ್ನು ಸಂಪರ್ಕಿಸಲು: ೯೯೭೨೯-೬೨೧೧೪
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…