ಸಿರಿಧಾನ್ಯಗಳು ಮಾನವರಿಗೆ ತಿಳಿದಿರುವ ಅತ್ಯಂತ ಹಳೆಯ ಆಹಾರಗಳಲ್ಲಿ ಒಂದಾಗಿದ್ದು, ಇವು ಒಣ ಭೂಮಿಯಲ್ಲಿ ಬೆಳೆಯುವ ಬರ ನಿರೋಧಕ ಬೆಳೆಗಳಾಗಿವೆ. ಇವು ಹೆಚ್ಚು ಸುಲಭವಾಗಿ ಬೆಳೆಯಲು ಮತ್ತು ಸಂರಕ್ಷಿಸಲು ಸಾಧ್ಯವಾದ ಕಾರಣದಿಂದ ಕೃಷಿಯ ಮುಖ್ಯ ಜೀವನೋದ್ದೇಶವಾಗಿವೆ.
ಇತಿಹಾಸ: ಸಿರಿಧಾನ್ಯಗಳನ್ನು ಪ್ರಪಂಚದಾದ್ಯಂತ ಏಕದಳ ಬೆಳೆಗಳು ಅಥವಾ ಧಾನ್ಯಗಳಾಗಿ ಮಾನವನ ಆಹಾರಕ್ಕಾಗಿ ಮತ್ತು ಮೇವಿಗೆ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಇವುಗಳ ಕೃಷಿಯ ಪುರಾವೆಗಳಿವೆ.
(೩೫೦೦-೨೦೦೦ ಆ.ಇ) ಭಾರತದಲ್ಲಿ ಇವುಗಳನ್ನು ಕೆಲವು ಹಳೆಯ ಯಜುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಸಿರಿಧಾನ್ಯಗಳು ಒಟ್ಟು ಒಂಬತ್ತು. ಅವುಗಳಲ್ಲಿ ರಾಗಿ, ಬಿಳಿ ಜೋಳ, ಸಜ್ಜೆ, ಸಾ , ಕೊರಲೆ, ನವಣೆ, ಊದಲು, ಹಾರಕ, ಹಾಗೂ ಬರಗು. ಇವುಗಳನ್ನು ಸಾಂಪ್ರದಾಯಿಕವಾಗಿ ೫೦೦ ವರ್ಷಗಳಿಂದ ಭಾರತೀಯ ಉಪಖಂಡದಲ್ಲಿ ಬೆಳೆಯುಲಾಗುತ್ತಿದೆ ಮತ್ತು ಸೇವಿಸಲಾಗುತ್ತಿದೆ.
ಉತ್ಪಾದನೆ ಮತ್ತು ವ್ಯಾಪಾರ ಕಾರ್ಯಕ್ಷಮತೆ:
* ಸಿರಿಧಾನ್ಯಗಳ ಒಟ್ಟು ಜಾಗತಿಕ ವಿಸ್ತೀರ್ಣವು ೩,೧೮,೩೫,೦೩೯ ಹೆಕ್ಟೇರ್ ಆಗಿದ್ದು, ೨೦೨೧ರಲ್ಲಿ ೩,೨೭,೯೦,೧೨೩.೬ ಟನ್‌ಗಳಷ್ಟುಉತ್ಪಾದನೆಯಾಗಿದೆ.(FAO ಅಂಕಿ-ಅಂಶ ಪ್ರಕಾರ).
* ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದಿಸುವ ದೇಶವಾಗಿದೆ. ಭಾರತದಲ್ಲಿ ಸಿರಿಧಾನ್ಯಗಳನ್ನು ಸುಮಾರು ೨೧ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಈ ರಾಜ್ಯಗಳು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಶೇ.೬೫ ಪ್ರತಿಶತಕ್ಕಿಂತ ಹೆಚ್ಚು ಆಕ್ರಮಿಸಿಕೊಂಡಿವೆ.
* ಭಾರತವು ಸಿರಿಧಾನ್ಯದಲ್ಲಿ ೧೨.೫ ಮಿಲಿಯನ್ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು ೧೫.೫೩ ಮಿಲಿಯನ್ ಟನ್‌ಗಳಷ್ಟು ಉತ್ಪಾದಿಸುತ್ತದೆ ಮತ್ತು ೧೨೪೭ಕೆಜಿ/ಹೆಕ್ಟೇರ್ ಇಳುವರಿಯನ್ನು ಹೊಂದಿದೆ. ಜೋಳವು ಭಾರತದ ನಾಲ್ಕನೇ ಪ್ರಮುಖ ಆಹಾರ ಧಾನ್ಯವಾಗಿದೆ. ಇದರ ವಿಸ್ತೀರ್ಣ ೩.೮೪ ಮಿಲಿಯನ್ ಹೆಕ್ಟೇರ್ ಆಗಿದ್ದು ೪.೩೧ ಮಿಲಿಯನ್ ಮೆಟ್ರಿಕ್‌ಟನ್‌ಗಳಷ್ಟು ಉತ್ಪಾದನೆಯಾಗಿದೆ.
* ಸಜ್ಜೆ ಮತ್ತು ಜೋಳ ಒಟ್ಟಾಗಿ ವಿಶ್ವ ಉತ್ಪಾದನೆಯಲ್ಲಿ ಸರಿ ಸುಮಾರು ಶೇ.೧೯ರಷ್ಟು ಕೊಡುಗೆ ನೀಡುತ್ತಿವೆ.
* ಸಿರಿಧಾನ್ಯಗಳ ವಿಧಗಳಾದ ಊದಲು (ಶೇ. ೯೯.೯), ರಾಗಿ (ಶೇ. ೫೩.೩), ಹಾರಕ (ಶೇ. ೧೦೦), ಸಾಮೆ (ಶೇ. ೧೦೦) ಮತ್ತು ಸಜ್ಜೆ (ಶೇ. ೪೪.೫), ಒಟ್ಟಾಗಿ ೮.೮೭ ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೧೨.೪೬ ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯಾಗಿದೆ.
* ಭಾರತದಿಂದ ಸಿರಿಧಾನ್ಯಗಳ ರಫ್ತು ೨೦೨೧-೨೨ ರ ಅವಧಿಯಲ್ಲಿ ಏರಿಕೆ ಪ್ರವೃತ್ತಿಯನ್ನು ಮುಂದುವರಿಸಿದೆ ಮತ್ತು ಸಿರಿಧಾನ್ಯಗಳ ರಫ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಅಮೆರಿಕನ್ ಡಾಲರ್ ೬೨.೯೫ ಮಿಲಿಯನ್ ಸಾರ್ವಕಾಲಿಕ ಗರಿಷ್ಟ ಮಟ್ಟವನ್ನು ತಲುಪಿದೆ. ೨೦೨೨-೨೩ ರಲ್ಲಿ ದೇಶದಿಂದ ಸಿರಿಧಾನ್ಯಗಳು ಮತ್ತು ಸಿರಿಧಾನ್ಯ ಸಂಬಂಽತ ಉತ್ಪನ್ನಗಳ ರಫ್ತು ೧,೬೯,೦೪೯.೧೧ ಟನ್‌ಗಳು ಮತ್ತು ಇದರ ಮೌಲ್ಯ ೬೦೮.೧೨ ಕೋಟಿ ರೂ.ಆಗಿದೆ. ೨೦೨೨-೨೩ರಲ್ಲಿ ಸಜ್ಜೆ-೮೧,೭೦೯ ಟನ್, ಜೋಳ-೪೭,೨೪೯ ಟನ್, ರಾಗಿ-೨೧,೪೩೯ ಟನ್‌ಗಳಷ್ಟು ರಫ್ತು ಆಗಿದೆ.
ಔಷಧಿಯ ಪ್ರಾಮುಖ್ಯತೆ:
* ಸಿರಿಧಾನ್ಯಗಳಲ್ಲಿ ನಮ್ಮ ದೇಹಕ್ಕೆ ಬೇಕಿರುವ ಪೌಷ್ಟಿಕ ಸತ್ವಗಳಾದ ತಾಮ್ರ, ಮೆಗ್ನೀಷಿಯಂ, ಪಾಸ್ಪರಸ್,ಮ್ಯಾಂಗನೀಸ್ ಮತ್ತು ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಹೇರಳವಾಗಿದೆ.
* ಸಮತೋಲನವಾದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳು ನಮಗೆ ಆರೋಗ್ಯಕರವಾದ ಜೀವನವನ್ನು ಒದಗಿಸುತ್ತದೆ. ಇದರಿಂದ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ರಕ್ತದ ಒತ್ತಡ, ಮಧುಮೇಹ ಹೀಗೆ ಹಲವು ಬಗೆಯ ದೀರ್ಘಕಾಲ ಕಾಡುವ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು.
* ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಿರಿಧಾನ್ಯಗಳಲ್ಲಿ ಕಂಡುಬರುವ ಕಡಿಮೆ ಗ್ಲಾಯ್ಸಮಿಕ್ ಇಂಡೆಕ್ಸ್ ನಿಮ್ಮನ್ನು ಸಕ್ಕರೆ ಕಾಯಿಲೆಯಿಂದ ತಕ್ಕಮಟ್ಟಿಗೆ ಪಾರು ಮಾಡುತ್ತದೆ.
* ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಲು ಸಿರಿಧಾನ್ಯಗಳು ಅತ್ಯವಶ್ಯ.
ಆರ್ಥಿಕ ಪ್ರಾಮುಖ್ಯತೆ: ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ೫ನೇ ಅತಿದೊಡ್ಡ ದೇಶವಾಗಿದೆ. ಸಿರಿಧಾನ್ಯಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವ ಕಾರಣ ಅದರ ರಫ್ತು ಅತಿಯಾಗಿ ಹೆಚ್ಚುತ್ತಿದೆ. ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಉದ್ಯಮಿಗಳಿಗೆ ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ.
-ಎಸ್.ಎಸ್.ಗುಳೇದಗುಡ್ಡ (ಲೇಖಕರು-ಪ್ರಾಧ್ಯಾಪಕರು, ಕೃಷಿ ವಿವಿ, ಧಾರವಾಡ)
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…