ಮನರಂಜನೆ

ಹುಡುಗ, ಹುಡುಗಿ ಮತ್ತು ಪರಿಸರ… ‘ಸೋಲ್ ಮೇಟ್ಸ್’ ಚಿತ್ರದ ಹಾಡು ಬಿಡುಗಡೆ

ಹುಡುಗ, ಹುಡುಗಿ ಸುತ್ತ ಹಲವು ಚಿತ್ರಗಳು ಬಂದಿವೆ. ಅವರಿಬ್ಬರ ಕಥೆಯನ್ನು ಪರಿಸರದ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನವನ್ನು ಹೊಸ ಚಿತ್ರವೊಂದರಲ್ಲಿ ಮಾಡಲಾಗಿದೆ. ಅದೇ ‘ಸೋಲ್‍ ಮೇಟ್ಸ್’. ಈ ಚಿತ್ರವನ್ನು ಶಂಕರ್ ಪಿ.ವಿ ನಿರ್ದೇಶಿಸುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.

ಈ ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತವನ್ನು ಸಂಯೋಜಿಸಿದ್ದು, ಈ ಪೈಕಿ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಕಿಲಕಿಲ…’ ಎಂದು ಸಾಗುವ ಈ ಹಾಡಿಗೆ ಅನಿರುದ್ಧ್ ಶಾಸ್ತ್ರಿ, ಅಂಕಿತಾ ಕುಂಡು ಧನಿಯಾಗಿದ್ದಾರೆ. ಚಿತ್ರದಲ್ಲಿ ಶ್ರೀಜಿತ್ ಸೂರ್ಯ, ಪ್ರಸನ್ನ ಶೆಟ್ಟಿ, ಯಶ್ವಿಕಾ ನಿಷ್ಕಲ, ರಜನಿ, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಅರುಣಾ ಬಾಲರಾಜ್, ನವೀನ್ ಡಿ ಪಡೀಲ್ ಮುಂತಾದವರು ನಟಿಸಿದ್ದಾರೆ.

‘ಸೋಲ್‍ ಮೇಟ್ಸ್’ ಕುರಿತು ಮಾತನಾಡುವ ನಿರ್ದೇಶಕ ಶಂಕರ್ ಪಿ.ವಿ, ‘ನನಗೆ ಚಿಕ್ಕ ವಯಸ್ಸಿನಿಂದ ಸಿನಿಮಾ ಹುಚ್ಚು. ನಾನು ಮೊದಲಿಗೆ ನೋಡಿದ ಸಿನಿಮಾ ಅಂದ್ರೆ ಅದು ‘ಪುಟ್ನಂಜ. ಅಲ್ಲಿಂದ ನನ್ನ ಮತ್ತು ಹಂಸಲೇಖ ಅವರ ನಂಟು ಬೆಳೆಯಿತು ಎಂಬುದು ನನ್ನ ನಂಬಿಕೆ.

ನನ್ನ ಮೊದಲ ಸಿನಿಮಾಗೆ ಅವರೇ ಸಂಗೀತ ಸಂಯೋಜಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಈ ಚಿತ್ರಕ್ಕೆ ಅವರು ಐದು ಹಾಡುಗಳನ್ನು ಸಂಯೋಜಿಸಿದ್ದಾರೆ. ಚಿತ್ರದ ಕೆಲಸಗಳು ಮುಗಿಯುತ್ತಾ ಬಂದಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದರು,

ಪರಿಸರದ ಹಿನ್ನೆಲೆಯಲ್ಲಿ ಸಾಗುವ ಕಥೆ ಇದು ಎನ್ನುವ ಶಂಕರ್, ‘ನಾನು ಈ ಹಿಂದೆ ಯಾರ ಜೊತೆಗೆ ಕೆಲಸ ಮಾಡಿಲ್ಲ. ಹುಡುಗ, ಹುಡುಗಿ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಈ ಚಿತ್ರದ ಮೂಲಕ ಹೇಳಿದ್ದೇವೆ. ಪರಿಸರದ ಹಿನ್ನೆಲೆಯಲ್ಲಿ ಒಂದು ಪ್ರೇಮ ಮತ್ತು ಕೌಟುಂಬಿಕ ಕಥೆ ಹೇಳುವುದಕ್ಕೆ ಹೊರಟಿದ್ದೇವೆ.

ಕನ್ನಡದಲ್ಲೇ ಒಂದು ಶೀರ್ಷಿಕೆ ಇಡುವುದಕ್ಕೆ ಬಹಳ ಯೋಚನೆ ಮಾಡಿದೆವು. ಆದರೆ, ಸೂಕ್ತ ಪದಗಳು ಸಿಗಲಿಲ್ಲ. ಇವತ್ತಿನ ತಲೆಮಾರಿನವರಿಗೆ ಆಕರ್ಷಿಸುವಂತಹ ಶೀರ್ಷಿಕೆ ಇಡಬೇಕು ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ’ ಎಂದರು.

ಶ್ರೀಜಿತ್‍ ಶೆಟ್ಟಿ ಈ ಚಿತರದಲ್ಲಿ ಸತ್ಯ ಸತ್ಯ ಎಂಬ ಪಾತ್ರವನ್ನು ಮಾಡಿದ್ದಾರಂತೆ. ‘ಹೆಸರಿಗೆ ತಕ್ಕಂತೆ ಆತ ಸತ್ಯವಂತನೇ ಅಲ್ಲದೆ ಮಹಾ ಪರಿಸರ ಪ್ರೇಮಿ. ಇಲ್ಲಿ ‘ಸೋಲ್ ಮೇಟ್ಸ್’ ಅಂದ್ರೆ ಪರಿಸರ ಮತ್ತು ಅವನ ಹುಡುಗಿ. ಇಬ್ಬರೂ ಅವನ ‘ಸೋಲ್ ಮೇಟ್ಸ್’ಗಳಾಗಿ ಇರುತ್ತಾರೆ. ಹಾಗಾಗಿ, ಈ ಶೀರ್ಷಿಕೆ ಚಿತ್ರಕ್ಕೆ ಸರಿಯಾಗಿ ಹೊಂದುತ್ತದೆ’ ಎಂದರು.

‘ಗನ್ಸ್ ಆ್ಯಂಡ್‍ ರೋಸಸ್’ ಚಿತ್ರದಲ್ಲಿ ನಟಿಸಿದ್ದ ನಿಷ್ಕಲಾ, ಇಲ್ಲಿ ಮೃದು ಮನಸ್ಸಿನ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ಈ ಚಿತ್ರದಲ್ಲಿ ಭೂಮಿ ಎಂಬ ಮೃದು ಮನಸಿನ ಹುಡುಗಿ ಪಾತ್ರವನ್ನು ಮಾಡಿದ್ದೇನೆ. ಈ ಚಿತ್ರದ ಪ್ರತಿಯೊಂದು ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ’ ಎಂದರು.

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

8 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

13 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

17 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

17 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

17 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

20 hours ago