ಜಿ.ಕೃಷ್ಣಪ್ರಸಾದ್
ಬೇಸಿಗೆ ಕಾಲಿಟ್ಟಿದೆ. ತೋಟಗಳಲ್ಲಿ ಹುಲ್ಲು, ಕಳೆ ಗಿಡಗಳು ಒಣಗಿ ನಿಂತಿವೆ. ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಬೆಂಕಿ ಅವಘಡಗಳ ಪ್ರಮಾಣವೂ ಹೆಚ್ಚಾಗುತ್ತಿದೆ. ಇದರಿಂದಾಗಿ ರೈತರು ಶ್ರಮಪಟ್ಟು ಬೆಳೆಸಿದ ಬೆಳೆ, ಮರ-ಗಿಡಗಳು ಕ್ಷಣಮಾತ್ರದಲ್ಲಿ ಬೆಂಕಿಗೆ ಆಹುತಿಯಾಗಿ ನಷ್ಟ ಅನುಭವಿಸುವಂತಾಗಿದೆ.
ತೋಟದಲ್ಲಿ ಒಣಗಿದ ತರಗೆಲೆಗಳಿಂದ ಬೆಂಕಿ ಹೊತ್ತಿಕೊಳ್ಳುವುದು ಸಾಮಾ ವಿದ್ಯುತ್ ತಂತಿ ಮರಗಳಿಗೆ ತಗುಲಿ ಬೆಂಕಿ ಅವಘಡ ಗಳು ಸಂಭವಿಸುತ್ತಿವೆ. ಎತ್ತರ ಬೆಳೆದ ಕಬ್ಬಿನ ಸೂಲಂಗಿ ವಿದ್ಯುತ್ ತಂತಿಗಳಿಗೆ ತಗುಲಿ ಕಬ್ಬಿನ ಗದ್ದೆಗಳು ಬೆಂಕಿಗಾವುತಿಯಾಗುತ್ತಿವೆ.
ತೋಟದ ಬೇಲಿಯಲ್ಲಿ ಹತ್ತಾರು ಜಾತಿಯ ಮರ ಗಿಡ ಬಳ್ಳಿ ಇರುತ್ತವೆ. ಉದುರಿದ ಎಲೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಆಕಸ್ಮಿಕವಾಗಿ ಇವಕ್ಕೆ ಬೆಂಕಿ ತಗುಲಿದರೆ ತೋಟ ಬೆಂಕಿಗಾವುತಿಯಾಗುತ್ತದೆ. ತೋಟದಲ್ಲಿ ಹುಲ್ಲು, ಕಸ ಕಡ್ಡಿ ಇದ್ದರೆ ಬೆಂಕಿ ತೋಟಕ್ಕೆ ಹರಡಿ ಗಿಡಗಳನ್ನು ಆವುತಿ ಪಡೆಯುತ್ತದೆ.
ಬೆಂಕಿ ಬರಿ ಗಿಡ ಮರಗಳನ್ನಷ್ಟೇ ಆಹುತಿ ಪಡೆಯುವುದಿಲ್ಲ. ಬೇಲಿ ಮತ್ತು ತೋಟದಲ್ಲಿ ನೆಲೆ ಮಾಡಿಕೊಂಡಿರುವ ಪಕ್ಷಿಗಳು, ಸಣ್ಣ ಪುಟ್ಟ ಪ್ರಾಣಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತವೆ.
ಬೆಂಕಿ ಅವಘಡ ನಿಯಂತ್ರಿಸಲು ಮಾರ್ಗೋಪಾಯ:
ತೋಟಗಳಲ್ಲಿ ಕಸ ಕಡ್ಡಿ, ಕಾಚಿ ಹುಲ್ಲು, ಗಿಡಗಂಟಿ, ಯುಪಟೋರಿಯಂ, ಪಾರ್ಥೇನಿಯಂನಂಥ ಕಳೆ ಗಿಡಗಳನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೊನೆ ಮಳೆಗೆ ಒಮ್ಮೆ ನೆಲ ಉತ್ತು ಹದ ಮಾಡಿದರೆ ಬೆಂಕಿಯ ಕಾಟ ಇರುವುದಿಲ್ಲ.
ಡಿಸೆಂಬರ್‌ನಲ್ಲಿ ತೋಟದ ಸುತ್ತ ೪-೫ ಅಡಿಗಳಷ್ಟು ಪಟ್ಟಿಯನ್ನು ಕಸ- ಕಡ್ಡಿ ಹುಲ್ಲು ಇರದಂತೆ ಸಿದ್ಧಮಾಡಿಟ್ಟುಕೊಳ್ಳಬೇಕು. ತೇಗ, ಹೊಂಗೆ ಮುಂತಾದ ಮರಗಳ ಉದುರಿದ ಎಲೆಗಳು ಈ ಪಟ್ಟಿಯ ಮೇಲೆ ಶೇಖರಣೆಯಾಗದಂತೆ ಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಬೆಂಕಿ, ತೋಟದ ಒಳಗೆ ಬರುವುದು ತಪ್ಪುತ್ತದೆ. ಬೇಸಿಗೆಯಲ್ಲಿ, ತೋಟದ ಅಂಚಿನಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಆಕಸ್ಮಿಕವಾಗಿ ತೋಟಕ್ಕೆ ಬೆಂಕಿ ಬಿದ್ದರೆ ನಂದಿಸಲು ನೀರು ಬೇಕಾಗು ತ್ತದೆ. ಬೇಲಿಯ ಅಂಚಿನಲ್ಲಿ ನೀರಿನ ಪೈಪ್‌ಲೈನ್ ಇದ್ದರೆ ನೀರಿಗಾಗಿ ಹುಡುಕಾಡುವುದು ತಪ್ಪುತ್ತದೆ.
ರಸ್ತೆ ಬದಿಯಲ್ಲಿ ತೋಟ ಇರುವವರು ‘ಬೆಂಕಿ ರೇಖೆ’ ನಿರ್ಮಿಸಿಕೊಳ್ಳಬೇಕು. ರಸ್ತೆ ಅಂಚಿನ ಒಣ ಹುಲ್ಲು, ಕಸಕಡ್ಡಿಗಳಿಗೆ ಬೆಂಕಿ ಹಾಕಿ ಸುಟ್ಟುಹಾಕುವ ಮೂಲಕ ಅಲ್ಲಿ ಬೆಂಕಿ ಹೊತ್ತುಕೊಳ್ಳದಂತೆ ಮಾಡಬೇಕು. ಕಾಡಂಚಿನ ರೈತರು ಸಂಘಟಿತ ರಾಗಿ ಬೆಂಕಿ ರೇಖೆ ನಿರ್ಮಿಸಲು ಅರಣ್ಯಾಧಿಕಾರಿಗಳಿಗೆ ಒತ್ತಾಯ ಮಾಡಬೇಕು ಅಥವಾ ತಾವೇ ಜೊತೆಗೂಡಿ ಬೆಂಕಿ ರೇಖೆಯನ್ನು ನಿರ್ಮಿಸಬೇಕು. ಇದರಿಂದ ತೋಟಗಳು ಬೆಂಕಿಗಾಹುತಿಯಾಗುವುದು ತಪ್ಪುತ್ತದೆ.
ಸಾವಯವ ತೋಟದಲ್ಲಿ ಗಿಡಗಳ ಬುಡಕ್ಕೆ ಮುಚ್ಚಿಗೆ ಮಾಡುವುದರಿಂದ ಬೆಂಕಿಯ ಅಪಾಯ ಇನ್ನೂ ಹೆಚ್ಚು. ಹುರುಳಿ ತರಹದ ಹಸಿರೆಲೆ ಗೊಬ್ಬರಗಳನ್ನು ಗಿಡದ ಪಾತಿಯಲ್ಲಿ ಬೆಳೆಸುವುದರಿಂದ ಬೆಂಕಿಯ ಕಾಟ ತಪ್ಪಿಸಬಹುದು. ‘ತೋಟದ ಬೇಲಿಯ ಅಂಚಿನಲ್ಲಿ ಹೊಂಗೆ,ಬೇವು, ಪುವ್ವರಸಿ, ಮಹಾಗನಿಯಂಥ ಗಿಡಗಳಿರಲಿ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಯೂ ಬದುಕಿ ಉಳಿಯುವ ಶಕ್ತಿ ಇವಕ್ಕಿರುತ್ತದೆ. ಮಾವು, ನೇರಳೆಯಂಥ ಕಸಿ ಗಿಡಗಳಿಗೆ ಬೆಂಕಿಯ ತಾಪ ತಡೆಯುವ ಶಕ್ತಿ ಕಡಿಮೆ. ಇಂಥ ಗಿಡಗಳನ್ನು ತೋಟದ ಒಳಭಾಗದಲ್ಲಿ ಬೆಳೆಸಿ ’ ಎನ್ನುತ್ತಾರೆ ಸಾವಯವ ಕೃಷಿಕ ಸಿದ್ಧಲಿಂಗಯ್ಯ ಹೊಲತಾಳು. ಎರಡು ವರ್ಷಗಳ ಹಿಂದೆ ಬೆಂಕಿಗಾಹುತಿಯಾದ ಇವರ ತೋಟದ ಬಹಳಷ್ಟು ಗಿಡಗಳು ಮತ್ತೆ ಚಿಗುರಿವೆ; ತಲೆ ಎತ್ತಿ ನಿಂತಿವೆ.
ಬೆಂಕಿ ಬಿದ್ದ ತೋಟದ ಭಾಗಕ್ಕೆ ನಿರಂತರವಾಗಿ ನೀರು ಉಣಿಸಿ, ತಂಪಾಗಿಡಿ. ಸುಟ್ಟು ಹೋದ ಗಿಡಗಳ ಟೊಂಗೆಯನ್ನು ಕತ್ತರಿಸಿ ಅದರ ತುದಿಗೆ ‘ಟ್ರೀ ಪೇಸ್ಟ್’ ಹಚ್ಚಿ. ಒಂದು ಭಾಗ ಸಗಣಿ, ಒಂದು ಭಾಗ ಹುತ್ತದ ಮಣ್ಣು ಮತ್ತು ಸ್ವಲ್ಪ ಸುಣ್ಣ ಸೇರಿಸಿ, ನೀರು ಚಿಮುಕಿಸಿಕೊಳ್ಳುತ್ತಾ ಚೆನ್ನಾಗಿ ಕಲಸಿದರೆ ‘ಟ್ರೀ ಪೇಸ್ಟ್’ ಸಿದ್ಧವಾಗುತ್ತದೆ. ಟ್ರೀ ಪೇಸ್ಟನ್ನು ಗಿಡಗಳ ಕಾಂಡಕ್ಕೂ ಸವರಿದರೆ ಗಿಡ ನಂಜಾಗುವುದು ತಪ್ಪುತ್ತದೆ. ಬಿಸಿಲಿನ ಝಳವನ್ನು ತಡೆದುಕೊಳ್ಳುತ್ತದೆ’ ಎನ್ನುತ್ತಾರೆ
ಮೈಸೂರಿನ ಯುವ ರೈತ ಕೇಶವ್. ಇವರು ಇದೇ ವಿಧಾನ ಬಳಸಿ ಗಿಡಗಳಿಗೆ ಮರುಜೀವ ನೀಡಿದ್ದಾರೆ. ಗಿಡ ಮತ್ತೆ ಚಿಗುರಿದ ನಂತರ, ಸುಟ್ಟ ಮತ್ತು ಒಣಗಿದ ಎಲೆಗಳಿದ್ದರೆ ತೆಗೆದು ಹಾಕಿ. ಜೀವಾ ಮೃತ ಮೊದಲಾದ ದ್ರವರೂಪಿ ಗೊಬ್ಬರಗಳನ್ನು ಕೊಟ್ಟು ಗಿಡಕ್ಕೆ ಚೈತನ್ಯ ತುಂಬಿ. ಬೇಸಿಗೆ ಬೆಂಕಿಯ ಬಗ್ಗೆ ಅಸಡ್ಡೆ ತೋರದೆ , ಮುಂಜಾಗ್ರತೆ ವಹಿಸಿದರೆ ತೋಟವನ್ನು ರಕ್ಷಿಸಿಕೊಳ್ಳಬಹುದು. ಶ್ರಮಪಟ್ಟು ಕಟ್ಟಿದ ತೋಟ ಬೆಂಕಿಯ ಕೆನ್ನಾಲಿಗೆಗೆ ಸಿಲುಕದಿರಲಿ.
” ಎಲ್ಲ ಮುನ್ನೆಚ್ಚರಿಕೆಯ ನಂತರವೂ, ತೋಟ ಬೆಂಕಿಗೆ ಆಹುತಿಯಾದರೆ ಸಂಯಮದಿಂದ ಗಿಡಗಳ ಉಪಚಾರ ಮಾಡಿ. ಬಹಳಷ್ಟು ಗಿಡಗಳು ಬೆಂಕಿಯ ಆಘಾತದಿಂದ ಚೇತರಿಸಿಕೊಂಡು ಮತ್ತೆ ಚಿಗುರುತ್ತವೆ. ಎಳೆಯ ಮತ್ತು ಸೂಕ್ಷ್ಮ ಗಿಡಗಳು ಮಾತ್ರ ಮತ್ತೆ ಚಿಗುರಲಾರವು.”
ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…
ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…
ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…
ಬೆಳಗಾವಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ…
ಬೆಳಗಾವಿ : ಡಿನ್ನರ್ ಬ್ರೇಕ್‌ಫಾಸ್ಟ್ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೆ ದೆಹಲಿ…