ಆಹಾರವೇ ಆರೋಗ್ಯದ ಗುಟ್ಟು. ಎಲ್ಲ ಜೀವಸತ್ವಗಳನ್ನು ಒಳಗೊಂಡ ಆಹಾರ ಸೇವನೆಯಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಕೆಲವು ಬಾರಿ ದೇಹದಲ್ಲಿ ಕೆಲವು ವಿಟಮಿನ್‌ಗಳ ಕೊರತೆಯಾದಾಗ ಅದು ಬೇರೆ ಬೇರೆ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಎ,ಬಿ,ಸಿ,ಡಿ ಹೀಗೆ ದೇಹಕ್ಕೆ ಬೇಕಾದ ಜೀವಸತ್ವಗಳನ್ನು ವಿಂಗಡಣೆ ಮಾಡಲಾಗಿದೆ. ಇವುಗಳನ್ನು ಒಂದೊಂದರ ಕೊರತೆಯೂ, ಹೆಚ್ಚು ಆಗುವುದೂ ಸಮಸ್ಯೆಗಳಿಗೆ ಎಡೆಮಾಡಕೊಡುತ್ತದೆ.
ಈಗ ನಮ್ಮ ದೇಹಕ್ಕೆ ವಿಟಮಿನ್ ಎ ಎಷ್ಟು ಮುಖ್ಯ, ಅದರ ಕೊರತೆಯಿಂದ ಏನೇನು ಸಮಸ್ಯೆ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.
ವಿಟಮಿನ್ ಎ ಕೊರತೆಯು ಕಣ್ಣುಗಳು, ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
* ಕಣ್ಣಿನ ಸಮಸ್ಯೆಗಳು: ದೃಷ್ಟಿ ಮಂಜಾಗುವುದು, ಕಣ್ಣುಗಳು ಒಣಗಿದಂತಾಗುವುದು, ಕುರುಡುತನ , ಕಾರ್ನಿಯಾಗೆ ಇದು ದಾರಿಯಾಗಬಹುದು. ದೀರ್ಘಕಾಲದವರೆಗೆ ದೇಹದಲ್ಲಿ ವಿಟಮಿನ್ ಎ ಕೊರತೆಯುಂಟಾದರೆ ಅದರಿಂದ ಇರುಳುಗಣ್ಣು ಸಮಸ್ಯೆ ಉಂಟಾಗುತ್ತದೆ.
*ಚರ್ಮದ ಸಮಸ್ಯೆಗಳು: ಚರ್ಮದ ಕೋಶಗಳಿಗೆ ವಿಟಮಿನ್ ಎ ಅತ್ಯವಶ್ಯಕ. ಇದರ ಕೊರತೆಯಿಂದ ಎಸ್ಜಿಮಾ ಅಥವಾ ಒಣ ಚರ್ಮದಂತಹ ಕಾಯಿಲೆ ಉಂಟಾಗಬಹುದು.
ಕೊರತೆ ನಿವಾರಣೆ ಹೇಗೆ?
ಕೆಲವು ಹಣ್ಣು, ತರಕಾರಿ, ಆಹಾರ ಪದಾರ್ಥಗಳಲ್ಲಿ ವಿಟಮಿನ್ ಎ ಹೇರಳವಾಗಿ ಇದ್ದು, ಇವುಗಳ ಸೇವನೆಯಿಂದ ಈ ಜೀವಸತ್ವವನ್ನು ಪಡೆದುಕೊಳ್ಳಬಹುದು.
ಕ್ಯಾರೆಟ್, ಸಿಹಿ ಗೆಣಸು, ಸೊಪ್ಪು, ಹಸಿರು ತರಕಾರಿಗಳು, ಮೊಟ್ಟೆ, ಬೆಣ್ಣೆ ಹಣ್ಣು, ಪಪ್ಪಾಯಿ, ಸೀಬೆಹಣ್ಣು, ಮೀನು, ಮಾಂಸಗಳಲ್ಲಿ ವಿಟಮಿನ್ ಎ ಪ್ರಮಾಣ ಇದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…