-ಸೌಮ್ಯ ಹೆಗ್ಗಡಹಳ್ಳಿ
ಯಾವ ಕ್ಷೇತ್ರಕ್ಕೆ ಸಹಾಯ, ಸಹಕಾರ ಬೇಕಿದೆಯೋ ಅವುಗಳನ್ನು ಪತ್ತೆ ಮಾಡಿ ಅಗತ್ಯ ನೆರವು ನೀಡುವುದು ಉತ್ತಮ ಸಂಘ, ಸಂಸ್ಥೆಗಳ ಮಾದರಿ ಕಾರ್ಯ. ಅದನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಇನ್ನರ್ ವೀಲ್ ಸಂಸ್ಥೆ ಇದೀಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ.
ಇಂದಿನ ವಿಜ್ಞಾನ-ತಂತ್ರಜ್ಞಾನದ ಪ್ರಯೋಜನ ಗ್ರಾಮೀಣ ಭಾಗದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಸಿಗಬೇಕು. ಇದು ಒಳ್ಳೆಯ ಆಲೋಚನೆ. ಆದರೆ ಇದನ್ನು ತಲುಪಿಸುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಇನ್ನರ್ ವೀಲ್ ಸಂಸ್ಥೆ ಬೆಂಗಳೂರಿನ ವಿದ್ವತ್ ಸೆಲ್ಯೂಷನ್, ಮೇಘಶಾಲಾ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಹುಣಸೂರು ಭಾಗದ ಶಾಲೆಗಳ ಮಕ್ಕಳಿಗೆ ನೆರವಾಗುತ್ತಿದೆ.
ಹುಣಸೂರಿನ ವೀರನಹೊಸಳ್ಳಿ, ಕಟ್ಟೆಮಳವಾಡಿ, ಕೆ.ಆರ್.ನಗರ, ಮೈಸೂರು ಭಾಗದ ೪೦ಕ್ಕೂ ಹೆಚ್ಚು ಗ್ರಾಮೀಣ ಶಾಲೆಗಳಿಗೆ ವಿದ್ವತ್ ಸೆಲ್ಯೂಷನ್, ಮೇಘಶಾಲಾ ಎನ್‌ಜಿಓಗಳ ಸಹಕಾರದಿಂದ ಇನ್ನರ್‌ವೀಲ್ ಪರಿಚಯಿಸಿದೆ. ಎನ್‌ಜಿಓಗಳು ಅಭಿವೃದ್ಧಿಪಡಿಸಿದ ವಿಶೇಷ ಸಾಫ್ಟ್‌ವೇರ್‌ಅನ್ನು ತರಗತಿಗಳಲ್ಲಿ ಅಳವಡಿಸುವುದು, ಅವುಗಳಿಗೆ ಪೂರಕವಾಗಿ ಬೇಕಾದ ಸಲಕರಣೆಗಳನ್ನು ಒದಗಿಸುವ ಮತ್ತು ಸೂಕ್ತ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಇನ್ನರ್‌ವೀಲ್ ಹೊತ್ತಿದೆ.
ಸ್ಮಾರ್ಟ್‌ಕ್ಲಾಸ್ ವಿಶೇಷತೆ
ಮಕ್ಕಳ ಅನುಕೂಲಕ್ಕಾಗಿ ರೂಪಿಸಿರುವ ಸಾಫ್ಟ್‌ವೇರ್‌ನಲ್ಲಿ ಗಣಿತ, ಸಮಾಜ ವಿಜ್ಞಾನ, ಪರಿಸರ ವಿಜ್ಞಾನ, ಕನ್ನಡ, ಹಿಂದಿ, ಸ್ಪೋಕನ್ ಇಂಗ್ಲಿಷ್ ಸೇರಿದಂತೆ ಪಠ್ಯಕ್ಕೆ ಪೂರಕವಾಗಿ ವಿವಿಧ ವಿಷಯಗಳನ್ನು ಸೇರಿಸಲಾಗಿದೆ. ಇದು ಶಿಕ್ಷಕರಿಗೂ ಸಹಾಯಕವಾಗಿ ಕೆಲಸ ಮಾಡುತ್ತದೆ. ಪದಗಳ ಬಳಕೆ, ಉಚ್ಚಾರಣೆ, ವಿರುದ್ಧ ಪದಗಳು, ಸಮಾನಾರ್ಥಕ ಪದಗಳು, ವಿಜ್ಞಾನದ ಪ್ರೋಂಗಗಳು, ಗಣಿತದ ಪ್ರಮೇಯಗಳು ಸೇರಿ ಮಕ್ಕಳಿಗೆ ಜಟಿಲ ಎನ್ನಿಸುವ ಅಂಶಗಳನ್ನು ಈ ಸಾಫ್ಟ್‌ವೇರ್‌ನಲ್ಲಿ ಸರಳವಾಗಿ ವಿವರಿಸಲಾಗಿದೆ ಎನ್ನುತ್ತಾರೆ ಇನ್ನರ್‌ವೀಲ್ ಸಂಸ್ಥೆಯ ಪದಾಧಿಕಾರಿಗಳು.
ಬೆಂಗಳೂರಿನಲ್ಲಿ ಪ್ರಾರಂಭ
ಮೊದಲು ವಿದ್ವತ್ ಸೆಲ್ಯೂಷನ್ ಸಂಸ್ಥೆ ಬೆಂಗಳೂರಿನ ಶಾಲೆ ಮಕ್ಕಳಿಗೆ ವಿಶೇಷ ಸಾಫ್ಟ್‌ವೇರ್ ಮೂಲಕ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿತ್ತು. ಇದಕ್ಕೆ ಮೇಘ ಶಾಲಾ ಸಂಸ್ಥೆಯ ಸಹಕಾರವಿತ್ತು. ಇದನ್ನು ತಿಳಿದ ಇನ್ನರ್‌ವೀಲ್ ಮೈಸೂರು ಘಟಕ ತಮ್ಮ ವ್ಯಾಪ್ತಿಯಲ್ಲೂ ಇದನ್ನು ಅನುಷ್ಟಾನಕ್ಕೆ ತರುತ್ತಿದೆ. ಇದಕ್ಕಾಗಿ ಒಂದು ಘಟಕಕ್ಕೆ ಸುಮಾರು ೩೫೦೦ ರೂ. ನಷ್ಟು ಖರ್ಚು ಮಾಡುತ್ತಿದೆ.
ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್ ಸಂಬಂಧಿತ ತರಬೇತಿಯನ್ನು ಹುಣಸೂರಿನ ಬಿಇಒ ಕಚೇರಿಯಲ್ಲಿ ಇನ್ನರ್‌ವೀಲ್ ಸಂಸ್ಥೆಯೇ ನೀಡಿದ್ದು, ಮಕ್ಕಳಿಗೆ ಗರಿಷ್ಟ ಮಟ್ಟದ ಅನುಕೂಲ ಆಗಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಇನ್ನರ್ ವೀಲ್ ಸಂಸ್ಥೆಯೇ ಹೇಳುವಂತೆ ಸ್ಮಾರ್ಟ್ ಕ್ಲಾಸ್ ಯೋಜನೆಯನ್ನು ಹೆಚ್ಚಾಗಿ ಬುಡಕಟ್ಟು ಸಮುದಾಯದ ಮಕ್ಕಳಿರುವ ಶಾಲೆಗಳಿಗೆ ನೀಡಲಾಗುತ್ತಿದೆ. 1 ರಿಂದ 5 ನೇ ತರಗತಿವರೆಗಿನ ಏಕೋಪಾಧ್ಯಾಯ ಶಾಲೆಗಳಿಗೆ ಹೆಚ್ಚು ಹೊತ್ತು ನೀಡಲಾಗುತ್ತಿದೆ.
ಸ್ಮಾರ್ಟ್‌ಕ್ಲಾಸ್ ಲರ್ನಿಂಗ್ ಕಿಟ್‌ಗಳಿಂದ ಹಳ್ಳಿಯಲ್ಲಿ ಓದುವ ಮಕ್ಕಳಿಗೆ ತುಂಬಾ ಅನುಕೂಲ ಆಗಿದೆ. ನಮ್ಮ ಸಂಸ್ಥೆಯಿಂದ ತರಬೇತಿ ಪಡೆದ ಶಿಕ್ಷಕರಿಂದ ಹೆಚ್ಚಿನ ಮಕ್ಕಳಿಗೆ ಬಹು ಬೇಗ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಆಗಿದೆ. ಹಳ್ಳಿಗಳಲ್ಲಿ ಕಲಿಯುತ್ತಿರುವ ಮಕ್ಕಳ ಜ್ಞಾನಾಭಿವೃದ್ಧಿಯ ಉದ್ದೇಶ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.
-ಜಾಹ್ನವಿ ಪದಕಿ, ಸದಸ್ಯರು, ಇನ್ನರ್‌ವೀಲ್
ನಮ್ಮ ಸಂಸ್ಥೆಯಿಂದ ಹಲವಾರು ಉತ್ತಮ ಕಾರ್ಯಗಳು ಆಗುತ್ತಿವೆ. ಅದರಲ್ಲಿ ಸ್ಮಾರ್ಟ್ ಕ್ಲಾಸ್ ಪರಿಕಲ್ಪನೆಯೂ ಒಂದು. ಇದರಿಂದ ಮಕ್ಕಳು ಮತ್ತು ಶಿಕ್ಷಕರಿಬ್ಬರಿಗೂ ಅನಗತ್ಯ ಹೊರೆ ಕಡಿಮೆ ಆಗಿದೆ. ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಪರದೆ ಮೇಲೆ ತೋರಿಸುವುದರಿಂದ ವಿದ್ಯಾರ್ಥಿಗಳಿಗೆ ಬೇಗ ವಿಷಯ ಅರ್ಥವಾಗುತ್ತದೆ. ಬೋಧನೆಯ ಗುಣಮಟ್ಟವೂ ಹೆಚ್ಚುತ್ತದೆ.
ಪೂರ್ಣಿಮ ವಿಶ್ವನಾಥ್, ಮಾಜಿ ಅಧ್ಯಕ್ಷರು, ಇನ್ನರ್‌ವೀಲ್
ಹಳ್ಳಿಗಳ ಶಾಲೆಯಲ್ಲಿ ಕಲಿತ ಮಕ್ಕಳು ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಬಂದಾಗ ಇಲ್ಲಿನ ಮಕ್ಕಳೊಂದಿಗೆ ಸ್ಪರ್ಧೆ ಮಾಡುವುದು ಕಷ್ಟವಾಗುತ್ತದೆ. ಈ ಹಂತದಲ್ಲಿ ಅವರಲ್ಲಿ ಕೀಳರಿಮೆಯೂ ಉಂಟಾಗಬಹುದು. ಇದನ್ನು ಗ್ರಾಮೀಣ ಭಾಗದ ಮಕ್ಕಳು ಅನುಭವಿಸಬಾರದು ಎನ್ನುವ ಕಾರಣಕ್ಕೆ ಸ್ಮಾರ್ಟ್‌ಕ್ಲಾಸ್ ಯೋಜನೆಗೆ ಸಹಕಾರ ನೀಡುತ್ತಿದ್ದೇವೆ.
– ಪ್ರಿಯಾ ತಂತ್ರಿ ಮಾಜಿ ಅಧ್ಯಕ್ಷರು, ಇನ್ನರ್‌ವೀಲ್
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…