ʼತನುಜಾ’, ನಟಭಯಂಕರ’ರ ವಾರ
ಈ ವಾರ ಎರಡು ಚಿತ್ರಗಳು ತೆರೆಗೆ ಬರುತ್ತಿವೆ. ವೈದ್ಯಕೀಯ ಪದವಿ ಪಡೆಯಲು ಪೂರ್ವಪರೀಕ್ಷೆ ?ನೀಟ್’ ಬರೆಯಲು ಪತ್ರಿಕೆ, ಸರ್ಕಾರಗಳ ನೆರವಿನಿಂದ ಸಾಧ್ಯವಾದ ವಿದ್ಯಾರ್ಥಿನಿಯೊಬ್ಬಳ ನಿಜಕಥೆಯನ್ನು ಹೇಳುವ ?ತನುಜಾ’ ಮತ್ತು ಕಿರುತೆರೆಯ ಬಿಗ್‌ಬಾಸ್ ರಿಯಾಲಿಟಿ ಕಾರ್ಯಕ್ರಮದ ಮೂಲಕ ಪರಿಚಯವಾದ ಪ್ರಥಮ್ ಅವರ ʼನಟ ಭುಂಂಕರ’ ಈ ವಾರ ತೆರೆಗೆ ಬರುತ್ತಿರುವ ಎರಡು ಚಿತ್ರಗಳು.
ʼತನುಜಾ’
ಬಿಯಾಂಡ್ ವಿಶನ್ ಸಿನಿಮಾಸ್ ಲಾಂಛನದಲ್ಲಿ ಚಂದ್ರಶೇಖರ ಗೌಡ ಮತ್ತು ಮನೋಜ್ ಬಿಜಿ ನಿರ್ಮಿಸಿರುವ ಚಿತ್ರ ʼತನುಜಾ’ ಹರೀಶ್ ಎಂ.ಡಿ.ಹಳ್ಳಿ ರಚನೆ, ನಿರ್ದೇಶನದ ಈ ಚಿತ್ರದ ಶೀರ್ಷಿಕಾ ಪಾತ್ರಧಾರಿ ಸಪ್ತಾ ಪಾವೂರ್. ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರು ತಾವೇ ಆಗಿ ಕಾಣಿಸಿಕೊಂಡಿರುವ ಈ ಚಿತ್ರದ ತಾರಾಗಣದಲ್ಲಿ ರಾಜೇಶ್ ನಟರಂಗ, ಚಿತ್ಕಲಾ ಬಿರಾದಾರ್, ಸಂಧ್ಯಾ ಅರಕೆರೆ, ಬೇಬಿ ಶ್ರೀ, ಕೈಲಾಸ್ ರಘುನಂದನ್, ಶಾಲಿನಿ ಷಡಕ್ಷರಿ ಮುಂತಾದವರಿದ್ದಾರೆ. ರವೀಂದ್ರನಾಥ್ ಛಾಯಾಗ್ರಹಣ, ಪ್ರದ್ಯೋತ್ತನ್ ಸಂಗೀತ ಸಂಯೋಜನೆ, ಉಮೇಶ್ ಆರ್ ಬಿ ಸಂಕಲನ ಈ ಚಿತ್ರಕ್ಕಿದೆ.
ʼನಟ ಭಯಂಕರ’
ಸ್ವಾರಸ್ಯ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ನಟ ಭಯಂಕರ’. ಇದು ಪ್ರಥಮ್ ಅವರ ಕಲ್ಪನೆತ ಚಿತ್ರ. ರಚನೆ, ನಿರ್ದೇಶನ ಮತ್ತು ಮುಖ್ಯ ಭೂಮಿಕೆ ಅವರದೇ. ಅವರೊಂದಿಗೆ ತಾರಾಗಣದಲ್ಲಿ ಸಾಯಿಕುಮಾರ್, ನೀಹಾರಿಕಾ ಶೆಣೈ, ಸುಶ್ಮಿತಾ ಜೋಶಿ, ಅನುಪಮ ಹೆಗ್ಡೆ, ಶೋಭರಾಜ್, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್, ಬಿರಾದಾರ್ ಮುಂತಾದವರಿದ್ದಾರೆ. ಪ್ರದ್ಯೋತ್ತನ್ ಸಂಗೀತ ಸಂಯೋಜನೆ.
ಸೆಟ್ಟೇರಿದ ಹೊಸ ಚಿತ್ರಗಳು ಆದಿತ್ಯ ನಟನೆಯ ʼಟೆರರ್’
ʼಎ’ ಚಿತ್ರ ಖ್ಯಾತಿಯ ಸಿಲ್ಕ್ ಮಂಜು ನಿರ್ಮಿಸುತ್ತಿರುವ ?ಟೆರರ್’ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಾಯಿತು. ರಂಜನ್ ಶಿವರಾಮ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಆದಿತ್ಯ ಕೇಂದ್ರಪಾತ್ರಧಾರಿ. ಕೆ. ಆರ್. ಜಿ. ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಮೊದಲ ಚಿತ್ರಿಕೆಗೆ ಆರಂಭ ಫಲಕ ತೋರಿಸಿದರೆ, ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಿರ್ದೇಶಕ ಎಸ್. ವಿ .ರಾಜೇಂದ್ರ ಸಿಂಗ್ ಬಾಬು, ಲಹರಿ ವೇಲು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಆದಿತ್ಯ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ, ಕಾರ್ತಿಕ್ ಶರ್ಮ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನ ಇರಲಿದೆ. ಧರ್ಮ, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕಡೂರಿನಲ್ಲಿ ʼಕವಡೆ’
ʼಕವಡೆ’ ಹೆಸರಿನ ಹೊಸ ಚಿತ್ರ ಸೆಟೇರಿದೆ. ?ಜಾಡಘಟ್ಟ’ ನಿರ್ದೇಶಿಸಿ, ನಟಿಸಿದ್ದ ರಘು ಎಸ್. ಅವರ ಚಿತ್ರವಿದು. ಇಲ್ಲೂ ಅವರು ನಿರ್ದೇಶಿಸಿ, ನಟಿಸುತ್ತಿದ್ದಾರೆ. ಶಶಿಮಣಿ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಶ್ರೀಕ್ಷೇತ್ರ ದುರ್ಗಾಸ್ಥಳದಲ್ಲಿ ಆರಂಭವಾಯಿತು. ರಘು ಅವರ ಸಹೋದರ ಬೀರೇಶ್ ಎಂ. ಎಸ್. ಕ್ಯಾಮೆರಾ ಚಾಲನೆ ಮಾಡಿದರು. ತಾಯಿ-ಮಗನ ಬಾಂಧವ್ಯದ ಕಥಾಹಂದರ ಇದೆ ಎನ್ನಲಾಗಿರುವ ಈ ಚಿತ್ರಕ್ಕೆ ರಘು ಆವರದೇ ಕಥೆ, ಚಿತ್ರಕಥೆ ಸಂಭಾಷಣೆ ಇದೆ. ಅಭಿಷೇಕ್ ಜಿ ರಾಯ್ ಸಂಗೀತ ನಿರ್ದೇಶನ ಹಾಗೂ ಪ್ರದೀಪ್ ಜೈನ್ ಛಾಯಾಗ್ರಹಣದ ?ಕವಡೆ’ಯಲ್ಲಿ ರಘು ಅವರೊಂದಿಗೆ ಜೀವಿತಾ, ನಿಖಿತಾ, ಕೃಷ್ಣಮೂರ್ತಿ (ಚಿನ್ನು), ಶಿವರಾಜ್ (ಮೇಷ್ಟ್ರು) ತಾರಾಗಣದಲ್ಲಿದ್ದಾರೆ.
ಮೈಸೂರು ರೈಲು ನಿಲ್ದಾಣದಲ್ಲಿ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ಪ್ರೀಪೇಯ್ಡ್ ಆಟೋ ಕೌಂಟರ್ ಇಲ್ಲದೆ ಬೆಳಗಿನ ಜಾವ ಬೇರೆ ಊರುಗಳಿಂದ…
ಕೇಂದ್ರೀಯ ಪಠ್ಯಕ್ರಮದ (ಎನ್ ಸಿಇಆರ್ ಟಿ) ೮ನೇ ತರಗತಿಯ ಪಠ್ಯ ಪುಸ್ತಕದಲ್ಲಿ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ಇದೆ…
ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಡಾ.ಬಿ .ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಅಂದಿನ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್…
ಸರಗೂರು ತಾಲ್ಲೂಕಿನ ಮುಳ್ಳೂರು, ಚಾಮಲಾಪುರ, ಕುಂದೂರು, ಕಲ್ಲಂಬಾಳು, ನಂಜೀಪುರ, ಕಟ್ಟೆಹುಣಸೂರು ಈ ಗ್ರಾಮಗಳ ಮಾರ್ಗವಾಗಿ ಹೆಚ್ಚಿನ ಸರ್ಕಾರಿ ಬಸ್ಸುಗಳ ಸಂಚಾರವಿಲ್ಲದೆ…
ವಿವಾದಾಸ್ಪದ ‘ದಿ ಕೇರಳ ಸ್ಟೋರಿ-೨ ಗೋಸ್ ಬಿಯಾಂಡ್’ ಚಲನಚಿತ್ರ ಪ್ರದರ್ಶನಕ್ಕೆ ಕೇರಳದ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ಹಸಿರು ನಿಶಾನೆ…
ತಮಿಳುನಾಡಿನಲ್ಲಿ ಬೇಸಿಗೆಯ ಸುಡು ಬಿಸಿಲಿಸಿನ ನಡುವೆ ವಿಧಾನಸಭೆಯ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಚುನಾವಣೆಯು ಏಪ್ರಿಲ್ ಕೊನೆಯ ವಾರದೊಳಗೆ…