ಎಡಿಟೋರಿಯಲ್

ವನಿತೆಯರ ಉಳಿತಾಯಕ್ಕೆ ಉತ್ತೇಜನ

ಹಿರಿಯ ನಾಗರಿಕರು ಮಹಿಳೆಯರ ಉಳಿತಾಯಕ್ಕೆ ಸನ್ಮಾನ ಪತ್ರ ಪ್ರಕಟಿಸಿದ ಕೇಂದ್ರ ಬಜೆಟ್

ಮಹಿಳೆಯರಿಗಾಗಿ 2 ವರ್ಷಗಳ ಅವಧಿಯ ವಿಶೇಷ ಉಳಿತಾಯ ಯೋಜನೆ

ಗರಿಷ್ಠ 2 ಲಕ್ಷ ರೂ. ಠೇವಣಿಗೆ ವಾರ್ಷಿಕ ಶೇ.7.5ರ ಆಕರ್ಷಕ ಬಡ್ಡಿ

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಯೋಜನೆ

ಹಿರಿಯ ನಾಗರಿಕರಿಗೆ ಗರಿಷ್ಠ ಠೇವಣಿ ಮಿತಿ ಹೆಚ್ಚಳದ ಕೊಡುಗೆ

ಗರಿಷ್ಠ ಠೇವಣಿ ಮಿತಿ 15 ಲಕ್ಷದಿಂದ 30 ಲಕ್ಷ ರೂ. ಗಳಿಗೆ ಏರಿಕೆ

60ರ ಮೇಲ್ಪಟ್ಟ ನಾಗರಿಕರ ಹಣದ ಹೂಡಿಕೆಗೆ ಸುರಕ್ಷಿತ ಮಾರ್ಗ

ಹಿರಿಯ ನಾಗರಿಕರ ಮಾಸಿಕ ಆದಾಯ ಯೋಜನೆ ಮಿತಿಯೂ ದುಪ್ಟಟ್ಟು

ಗರಿಷ್ಠ ಠೇವಣಿ ಮೊತ್ತ 9 ಲಕ್ಷಕ್ಕೆ ಏರಿಕೆ, ಜಂಟಿ ಖಾತೆ ಮೊತ್ತ 15 ಲಕ್ಷಕ್ಕೆ ಏರಿಕೆ

ಲೋಕೇಶ್ ಕಾಯರ್ಗ

ತಮ್ಮ ನಿವೃತ್ತಿಯ ನಂತರದ ದಿನಗಳಲ್ಲಿ ಯಾರಿಗೂ ಹೊರೆಯಾಗದೆ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿ ಮಾಸಿಕ ಬಡ್ಡಿಯಿಂದ ಜೀವನ ನಿರ್ವಹಣೆ ಮಾಡಿಕೊಂಡು ಬರಬೇಕೆನ್ನುವುದು ನಿವೃತ್ತಿದಾರರ ಕನಸು. ಬರುತ್ತಿರುವ ಆದಾಯದಲ್ಲಿ ಅಲ್ಪಸ್ವಲ್ಪ ಹಣವನ್ನು ಕೂಡಿಡಬೇಕೆನ್ನುವುದು ಗೃಹಿಣಿಯರ ಆಸೆ. ಆದರೆ ಕಳೆದ ಕೆಲವು ವರ್ಷಗಳಿಂದ ಉಳಿತಾಯ ಯೋಜನೆಗಳ ಬಡ್ಡಿ ಇಳಿಯುತ್ತಲೇ ಬಂದಿದೆ. 80-90 ರ ದಶಕದಲ್ಲಿ ಶೇ.12ರಷ್ಟಿದ್ದ ಸಾರ್ವಜನಿಕ ಭವಿಷ್ಯನಿಧಿ ಬಡ್ಡಿದರ ಈಗ 7ರ ಆಸುಪಾಸಿನಲ್ಲಿದೆ. ಹಣದುಬ್ಬರದ ಈ ದಿನಗಳಲ್ಲಿ ಇಷ್ಟು ಕಡಿಮೆ ಬಡ್ಡಿಯಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟ. ಹೆಚ್ಚು ಬಡ್ಡಿ ಸಿಗುವ ಆಸೆಯಿಂದ ಕೆಲವರು ಖಾಸಗಿ ಸಹಕಾರಿ ಸಂಸ್ಥೆಗಳು ಸೇರಿದಂತೆ ವಿಶ್ವಾಸಾರ್ಹವಲ್ಲದ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದೂ ಇದೆ. ಕೇಂದ್ರ ಬಜೆಟ್ ಮಂಡನೆಯ ಸಂದರ್ಭದಲ್ಲಿ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸುತ್ತಿದ್ದ ನಾಗರಿಕರಿಗೆ ಕಳೆದ ಕೆಲವು ವರ್ಷಗಳಿಂದ ನಿರಾಶೆಯೇ ಕಾದಿತ್ತು. ಆದರೆ ಈ ಬಾರಿ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸಾಂತ್ವನ, ಸಮಾಧಾನ ನೀಡಿದೆ.

ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗಾಗಿಯೇ ಪ್ರಕಟಿಸಿರುವ ವಿಶೇಷ ಯೋಜನೆ ಇದು. 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಣೆ ಅಂಗವಾಗಿ ಘೋಷಿಸಿರುವ ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಮಹಿಳೆ ಅಥವಾ ಹೆಣ್ಣು ಮಕ್ಕಳ ಹೆಸರಿನಲ್ಲಿ ಎರಡು ವರ್ಷಗಳ ಅವಧಿಗೆ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದರ ಮೇಲೆ ವಾರ್ಷಿಕ ಶೇ.7.5ರ ಬಡ್ಡಿಯನ್ನು ನೀಡಲಾಗುವುದು. ಈ ಯೋಜನೆ ಮಾರ್ಚ್ 2025 ರವರೆಗೆ ಜಾರಿಯಲ್ಲಿರಲಿದೆ. ಈ ಯೋಜನೆಯಲ್ಲಿ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಸದ್ಯಕ್ಕೆ ಎರಡು ವರ್ಷಗಳ ಅವಧಿಯ ಠೇವಣಿಗೆ ಬ್ಯಾಂಕುಗಳಲ್ಲಿ ಶೇ. 6ರಿಂದ ಶೇ. 6.5 ರಷ್ಟು ಬಡ್ಡಿ ದರವಿದೆ. ಇದಕ್ಕೆ ಹೋಲಿಸಿದರೆ ಇದು ಅತ್ಯಂತ ಆಕರ್ಷಕ ಯೋಜನೆಯಾಗಿದೆ. ತುರ್ತು ಸಮಯದಲ್ಲಿ ಭಾಗಶಃ ವಾಪಸಾತಿ ಸೌಲಭ್ಯ ಸಹ ಇರಲಿದೆ. ಮಹಿಳೆಯರಲ್ಲಿ ಸಣ್ಣ ಉಳಿತಾಯಕ್ಕೆ ಉತ್ತೇಜನ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ.

ಹಿರಿಯ ನಾಗರಿಕರಿಗೆ ಗರಿಷ್ಠ ಠೇವಣಿ ಮಿತಿ ಹೆಚ್ಚಳ
ಹಿರಿಯ ನಾಗರಿಕರಿಗೆ ಈ ತನಕ ಗರಿಷ್ಠ 15 ಲಕ್ಷ ರೂ.ಹಣ ಠೇವಣಿ ಇಡಲು ಅವಕಾಶವಿತ್ತು. 2023ರ ಕೇಂದ್ರ ಬಜೆಟ್‌ನಲ್ಲಿ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷ ರೂ. ಗಳಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದು ಸೇವೆಯಿಂದ ನಿವೃತ್ತರಾದ ನಾಗರಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಸದ್ಯ ಕನಿಷ್ಠ ಸಾವಿರ ರೂ. ಗಳ ಹೂಡಿಕೆ ಇರುವ ಈ ಉಳಿತಾಯ ಯೋಜನೆಗೆ ಶೇ. 7.4ರಷ್ಟು ಬಡ್ಡಿ ನೀಡಲಾಗುತ್ತಿದೆ. ಆಂದರೆ ಗರಿಷ್ಟ 15 ಲಕ್ಷ ರೂ. ಠೇವಣಿ ಇಟ್ಟರೂ ತಿಂಗಳಿಗೆ 9250 ರೂ. ಬಡ್ಡಿ ಆದಾಯ ಸಿಗುತ್ತಿತ್ತು. ಇನ್ನು ಮುಂದೆ 30 ಲಕ್ಷ ರೂ. ತನಕ ಠೇವಣಿ ಇಟ್ಟು ಮಾಸಿಕ ದುಪ್ಟಟ್ಟು ಬಡ್ಡಿ ಆದಾಯ ಪಡೆಯಲು ಅವಕಾಶವಿದೆ. ಬ್ಯಾಂಕ್‌ಗಳಲ್ಲಿ ಅಥವಾ ಅಂಚೆ ಕಚೇರಿಗಳಲ್ಲಿ ಈ ಠೇವಣಿ ತೆರೆಯಲು ಅವಕಾಶವಿದೆ. ಆದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಮಾತ್ರ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. 55ರ ಬಳಿಕ ವಿಆರ್‌ಎಸ್ (ಸ್ವಯಂ ನಿವೃತ್ತಿ ಯೋಜನೆ) ತೆಗೆದುಕೊಂಡವರು ಕೂಡ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು.
ಇದೇ ವೇಳೆ, ಮಾಸಿಕ ಆದಾಯ ಯೋಜನೆಯ ಮಿತಿಯನ್ನೂ ದ್ವಿಗುಣಗೊಳಿಸಲಾಗಿದೆ. ಇದುವರೆಗೆ ಮಾಸಿಕ ಆದಾಯ ಖಾತೆ ಯೋಜನೆಯಡಿ ಒಂದು ಖಾತೆಯಲ್ಲಿ ಗರಿಷ್ಠ 4.5 ರೂ. ಠೇವಣಿ ಇಡಲು ಅವಕಾಶವಿತ್ತು. ಈ ಮೊತ್ತವನ್ನು 9 ಲಕ್ಷ ರೂ. ಗಳಿಗೆ ಏರಿಸಲಾಗಿದೆ. ಪತಿ-ಪತ್ನಿಯರ ಹೆಸರಿನ ಜಂಟಿ ಖಾತೆ ಠೇವಣಿ ಮಿತಿಯನ್ನು 9 ಲಕ್ಷದಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಈ ಠೇವಣಿಗೆ ಶೇ.6ರ ಆಸುಪಾಸಿನಲ್ಲಿ ಬಡ್ಡಿ ನೀಡಲಾಗುತ್ತಿದೆ.

andolanait

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

7 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

8 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

8 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

8 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

9 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

10 hours ago