ಮೊನ್ನೆ ‘ಮೈ ಹೀರೋ’ ಹೆಸರಿನ ಕನ್ನಡ ಚಿತ್ರ ಬೆಂಗಳೂರಿನಲ್ಲಿ ಸೆಟ್ಟೇರಿತು. ಸಿನಿಮಾ ಅಧ್ಯಯನ ಮಾಡಿ ಚಿತ್ರರಂಗಕ್ಕೆ ಬರುತ್ತಿರುವವರ ಸಾಲಿಗೆ ಸೇರಿರುವ ಅವಿನಾಶ್‌ವಿಜಯ್ ಕುಮಾರ್ ನಿರ್ದೇಶನದ ಚಿತ್ರವಿದು. ಚಿಕ್ಕಂದಿನಿಂದಲೇ ರಂಗಭೂಮಿಯಲ್ಲಿ ಅನುಭವ ಪಡೆದ ಅವಿನಾಶ್‌ವಿಜಯ್‌ಕುಮಾರ್, ಮುಂಬೈಯಲ್ಲಿ ಅನುಪಂ ಖೇರ್ ಅವರ ಸಂಸ್ಥೆಯಲ್ಲಿಅಭಿನಯ ತರಬೇತಿ ಪಡೆದು, ಸ್ಯಾನ್ ಫ್ರಾನ್ಸಿಸ್ಕೊ ಫಿಲಂ ಸ್ಕೂಲ್‌ನಲ್ಲಿ ನಿರ್ದೇಶನ ಕಲಿತು ಬಂದವರು. ಇದೀಗ ಅವರದೇ ಎ.ವಿ. ಸ್ಟುಡಿಯೋಸ್ ಮೂಲಕ ನಿರ್ಮಿಸಿ, ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ ‘ಮೈ ಹೀರೋ’. ಅವಿನಾಶ್ ಅವರ ‘ಪ್ರಕಾರ’ ಇದು ಬರೀ ಕರ್ನಾಟಕ, ಭಾರತ ಮಾತ್ರವಲ್ಲ. ಇಡೀ ಪ್ರಪಂಚದ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ಕಥೆ. ಅಮೆರಿಕದಿಂದ ಬಂದ ಅಧಿಕಾರಿಯೊಬ್ಬರು (ಹಾಲಿವುಡ್ ನಟಜಿಲಾಲಿ ರೆಜ್‌ಕಲ್ಲಾಹ್) ಭಾರತಕ್ಕೆ ಬಂದಾಗ ಹುಡುಗ (ಬಾಲನಟ ವೇದಿಕ್ ಕೌಶಿಕ್)ನೊಬ್ಬನ ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಹೆಚ್ಚಿನಕಥೆ ಸಾಗುತ್ತದೆ. ಪ್ರಕಾಶ್ ಬೆಳವಾಡಿ ಜಿಲ್ಲಾಧಿಕಾರಿಯಾಗಿ, ದತ್ತಣ್ಣ ಪುರೋಹಿತರ ಪಾತ್ರದಲ್ಲಿಅಭಿನಯಿಸುತ್ತಿದ್ದಾರೆ. ನಿರಂಜನ್ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ನಾಳೆ ಚಿಕ್ಕಮಗಳೂರಿನಲ್ಲಿ ಆರಂಭವಾಗುವ ಚಿತ್ರೀಕರಣ, ಮಧ್ಯಪ್ರದೇಶ ಹಾಗೂ ಯುಎಸ್‌ಎ ನಲ್ಲೂ ಮುಂದುವರಿಯಲಿದ್ದು, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಈ ಚಿತ್ರ ತಯಾರಾಗಲಿದೆಯಂತೆ. ಗಗನ್ ಬಧಾರಿಯಾ ಸಂಗೀತ ಸಂಯೋಜನೆ, ಕುಮಾರಗೌಡ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಇಲ್ಲಿನ ತಂತ್ರಜ್ಞರಷ್ಟೇ ಅಲ್ಲದೆ ಹಾಲಿವುಡ್‌ನ ತಂತ್ರಜ್ಞರು ಕೂಡ ಕೆಲಸ ಮಾಡಲಿದ್ದಾರೆ. ಹಾಲಿವುಡ್ ನಟಜಿಲಾಲಿ ರಂಗಭೂಮಿ ಕಲಾವಿದರೂ ಆಗಿದ್ದು. ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಕೆಲವು ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾಗಿ ಈ ವೇಳೆ ಹೇಳಿದರು.
ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…
ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…
ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…
ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…