ಆಂದೋಲನ ಪುರವಣಿ

ಸಿನಿಮಾಲ್‌ : ಚಿತ್ರದ ಹೆಸರು ಹೇಳುವ ಪ್ರಚಾರದ ಈ ಪರಿ

ನಟ ಬಾಂದಳದಿಂದ ಜಿಗಿದು ಬಂದ ನಟ ಕಿರಣ ರಾಜ್‌ !

ಎರಡು ಚಿತ್ರಗಳ ಹೆಸರುಗಳನ್ನು ವಿಶಿಷ್ಟ ರೀತಿಯಲ್ಲಿ ಲೋಕಾರ್ಪಣೆ ಮಾಡಿದ ಸುದ್ದಿ ಬಂದಿದೆ. ಎರಡೂ ಚಿತ್ರಗಳ ಮೊದಲ ನೋಟದ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಅಲ್ಲ, ಬದಲಿಗೆ ತೀರಾ ವಿಭಿನ್ನ ರೀತಿಯಲ್ಲಿ ಆದವು.
ಹಾರುವ ವಿಮಾನದಿಂದ ಜಿಗಿಯುವ ಉತ್ಸಾಹಿಗಳು ಸಾಕಷ್ಟಿದ್ದಾರೆ. ಪ್ಯಾರಾ ಸೈಲಿಂಗ್, ಸ್ಕೈ  ಡೈವಿಂಗ್‌ಗಳು ಮನರಂಜನೆ ಬಯಸುವ ಸಾಹಸಿ ಪ್ರವಾಸಿಗರಿಗೆ ಲಭ್ಯ. ಇದು ತಮ್ಮ ಚಿತ್ರದ ಪ್ರಚಾರಕ್ಕಾಗಿ ಬಾಂದಳದಿಂದ ನಟ ಕಿರಣರಾಜ್ ಜಿಗಿದರು. ಕಿರಣರಾಜ್, ‘ಕನ್ನಡತಿ’ ಸರಣಿಯ ಮೂಲಕ ಮನೆಮಾತಾದವರು. ‘ಬಡ್ಡೀಸ್’ ಚಿತ್ರದಲ್ಲಿ ನಟಿಸಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನದ ಹೊಸಚಿತ್ರದ ಮುಖ್ಯಪಾತ್ರಧಾರಿ ಅವರು. ಚಿತ್ರದ ಹೆಸರನ್ನು ಪ್ರಕಟಿಸಲು ಅವರು ಹೊಸ ಸಾಹಸ ಮಾಡಿದ್ದನ್ನು ಅವರ ಮಾತಿನಲ್ಲೇ ಕೇಳಬೇಕು: ‘ನನಗೆ  ಸಿನಿಮಾ ಎಂದರೆ ಕನಸು. ಹಾಗಾಗಿ ಚಿತ್ರದ ಆರಂಭದಿಂದಲೂ ಸ್ವಲ್ಪ ವಿಶೇಷ ಇರಬೇಕು ಎಂದು ಬಯಸುತ್ತೇನೆ. ಸಾಮಾನ್ಯವಾಗಿ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣವಾಗುತ್ತದೆ. ಆದರೆ ನಾನು ಸ್ವಲ್ಪ ಭಿನ್ನವಾಗಿರಲಿ ಎಂದು ಯೋಚಿಸಿ, ಸ್ಕ್ತ್ಯೈವ್ ಡೈವ್ ಮೂಲಕ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದೆ. ಈ ಚಿತ್ರದ ಹೆಸರು ‘ರಾನಿ’. ನನ್ನ ಈ ಸಾಹಸಕ್ಕೆ ಮನೆಯವರಿಂದ, ಸ್ನೇಹಿತರಿಂದ ವಿರೋಧ ವ್ಯಕ್ತವಾಯಿತು. ಆದರೂ ನಾನು ಅಲ್ಲಿನ ಪರಿಣಿತರಿಂದ ತರಬೇತಿ ಪಡೆದು ಈ ಸಾಹಸಕ್ಕೆ ಮುಂದಾದೆ’.
ಅವರು ದುಬೈಯಲ್ಲಿ ತರಬೇತಿ ಪಡೆದ ನಂತರ ಸುಮಾರು ಹದಿಮೂರು ಸಾವಿರ ಅಡಿ ಎತ್ತರದಿಂದ ಜಿಗಿದು (ಸ್ಕೈ ಡೈವ್‌ ಮಾಡಿ) ಶೀರ್ಷಿಕೆ ಅನಾವರಣ ಮಾಡುವಾಗ ಚಿತ್ರ ತಂಡದವರು ಅಲ್ಲಿ ಯಾರೂ ಇರಲಿಲ್ಲ. ನಿರ್ದೇಶಕ ಗುರುತೇಜ ಶೆಟ್ಟಿ ಅವರು, ಇಲ್ಲಿ ದೇವರ ಬಳಿ ಪ್ರಾರ್ಥಿಸುತ್ತಿದ್ದರಂತೆ! ‘ಶೀರ್ಷಿಕೆ ಅನಾವರಣ ಸಾಹಸದ ಪೂರ್ತಿ ವಿಡಿಯೋ ನೋಡಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟೆ’ ಎನ್ನುತ್ತಾರೆ ಅವರು. ಈ ಚಿತ್ರವನ್ನು ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ನಿರ್ಮಿಸಿದ್ದಾರೆ.
ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ತಾರೆ ಮೇಘನ ರಾಜ್ ಸರ್ಜಾ ನಟನೆಗೆ ಮರಳಿರುವ ಚಿತ್ರ ‘ತತ್ಸಮತದ್ಭವ’. ನಿರ್ದೇಶಕ ಪನ್ನಗಭರಣ ಹಾಗೂ ಸ್ಛೂರ್ತಿ ಅನಿಲ್ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿಶಾಲ್ ಆತ್ರೇಯ ನಿರ್ದೇಶಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ. ಇದರ ಮೊದಲ ನೋಟದ ಲೋಕಾರ್ಪಣೆ, ಚಿತ್ರ ತಂಡದ ಪ್ರಕಾರ, ನೂರಕ್ಕೂ ಹೆಚ್ಚು ನಟನಟಿಯರಿಂದ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಏಕಕಾಲಕ್ಕೆ ಆಗಿದೆ. ನಟನಟಿಯರು ಮಾತ್ರವಲ್ಲದೆ, ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡ ಹಾಗೂ ಇತರ ಸಂಘಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾಗಿಯೂ ಚಿತ್ರತಂಡ ಹೇಳಿದೆ. ‘ತತ್ಸಮತದ್ಭವ’ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ ಇದೆ.

andolanait

Recent Posts

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

21 mins ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

24 mins ago

ರಾಜ್ಯದಲ್ಲಿ ೧೯೮೩ರ ಇತಿಹಾಸ ಮರುಕಳಿಸುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…

33 mins ago

ಕೆಎಚ್‌ಬಿ ಕಾಲೋನಿ ನಿವಾಸಿಗಳ ಜೀವನ ಹೈರಾಣ

ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…

39 mins ago

ಗಣೇಶೋತ್ಸವಕ್ಕೆ ಡಿಜೆ ನಿಷೇಧ: ಮಿಶ್ರ ಪ್ರತಿಕ್ರಿಯೆ

ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…

48 mins ago

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ  ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…

53 mins ago