ಒಂದರ ಹಿಂದೊಂದು ಸಿನಿಮಾ ಫ್ಲಾಪ್ ಆಗುತ್ತಿದ್ದರೂ ಪ್ರಭಾಸ್ ಹವಾ ಮಾತ್ರ ಕಮ್ಮಿಯಾಗಿಲ್ಲ. ನನ್ನ ಹಾದಿ ನನ್ನದು ಎನ್ನುತ್ತಾ ನುಗ್ಗುತ್ತಿದ್ದಾರೆ. ಇದೀಗ ಸಲಾರ್ ಬಿಡುಗಡೆಗೆ ಸಿದ್ಧವಾಗಿದ್ದು, ದಿನಾಂಕ ಕೂಡ ನಿಗದಿಯಾಗಿದೆ. ಆದರೆ ಇಂಗ್ಲಿಷ್ ವರ್ಶನ್ ಸಲಾರ್ ಯಾವಾಗ ಬರಲಿದೆ? ಅದಕ್ಕೆ ಬೇರೊಂದು ದಿನ ಯಾಕೆ ಫಿಕ್ಸ್ ಮಾಡಿದರು? ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ.
ಸಾಹೋ, ರಾಧೇಶ್ಯಾಮ್ ಹಾಗೂ ಆದಿಪುರುಷ್. ಮೂರೂ ಸಿನಿಮಾಗಳು ಫ್ಲಾಪ್ ಆಗಿದ್ದರಿಂದ ಪ್ರಭಾಸ್ ಕತೆ ಮುಗಿಯಿತೆಂದು ಕಾದಿದ್ದವರಿಗೆ ಸಲಾರ್ ಹಾಗೂ ಕಲ್ಕಿ ಕೊಟ್ಟ ಕಿಕ್ ಹೇಗಿತ್ತೆಂದು ಎಲ್ಲರಿಗೂ ಗೊತ್ತಿದೆ. ಈ ಎರಡು ಸಿನಿಮಾಗಳ ಟೀಸರ್ ಹಬ್ಬ ಮಾಡಿದ್ದು ಇಡೀ ವಿಶ್ವವನ್ನೇ ಸೆಳೆದಿದ್ದವು. ಪ್ರಭಾಸ್ ಫ್ಯಾನ್ಸ್ ಮತ್ತೆ ಮೈ ಕೊಡವಿ ಎದ್ದು ನಿಂತರು. ಪ್ರಭಾಸ್ ಕೂಡ ಹೊಸ ಹುರುಪಿನಿಂದ ಅಖಾಡಕ್ಕೆ ಇಳಿದರು. ಸದ್ಯಕ್ಕೆ ಸಲಾರ್, ಕಲ್ಕಿ ಹಾಗೂ ರಾಜಾ ಡಿಲಕ್ಸ್ ಬಾಕಿ ಕೆಲಸ ಮುಗಿಸುತ್ತಿದ್ದಾರೆ. ಈಗಲೇ ಮತ್ತೊಂದು ಹಬ್ಬಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ.
ಮೂರು ಸಿನಿಮಾ ಸೋತದ್ದನ್ನು ಫ್ಯಾನ್ಸ್ ಮರೆತಿದ್ದಾರೆ. ಸಲಾರ್ ಇನ್ನೆರಡು ತಿಂಗಳಿಗೆ ಮೆರವಣಿಗೆ ಹೊರಡಲಿದೆ. ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಅದರ ಇಂಗ್ಲಿಷ್ ವರ್ಶನ್ ಕೂಡ ನಿರ್ಮಾಣವಾಗುತ್ತಿದೆ. ಅದು ಯಾವಾಗ ಬರಲಿದೆ ಎನ್ನುವ ಪ್ರಶ್ನೆಗೆ ಪಕ್ಕಾ ದಿನಾಂಕ ಸಿಗದಿದ್ದರೂ. ಅಕ್ಟೋಬರ್ ಎರಡನೇ ವಾರದಲ್ಲಿ ಹಾಲಿವುಡ್‌ನಲ್ಲಿ ಪ್ರಭಾಸ್ ಅಬ್ಬರಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…