ಚಿತ್ರ ಮಂಜರಿ

ನಯನ ತಾರಾಗೆ ಸಿಕ್ತು ಮೂರು ಕೋಟಿ ಬೆಲೆ ಬಾಳುವ ಗಿಫ್ಟ್

ಲೇಡಿ ಸೂಪರ್‌ ಸ್ಟಾರ್‌ ನಯನ ತಾರಾ ಅವರು ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಯನತಾರ ಅವರಿಗೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬಂದಿತ್ತು.

ನಯನ ತಾರಾ ಅವರ ಹುಟ್ಟುಹಬ್ಬಕ್ಕೆ ಅವರ ಪತಿ ವಿಘ್ನೇಶ್‌ ಶಿವನ್‌ ಅವರು ಬರೋಬ್ಬರಿ ಮೂರು ಕೋಟಿ ರೂ. ಬೆಲೆಬಾಳುವ ಐಶಾರಾಮಿ ಮರ್ಸಿಡಿಸ್‌ ಮೇಬ್ಯಾಕ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ವಿಷಯವನ್ನು ತಡವಾಗಿ ಹಂಚಿಕೊಂಡಿರುವ ನಯನತಾರ ಅವರು ಕಾರಿನ ಲೋಗೋದ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದು, ಮನೆಗೆ ಸ್ವಾಗತ ಬ್ಯೂಟಿ. ಸ್ವೀಟೆಸ್ಟ್‌ ಗಿಫ್ಟ್‌ ನೀಡಿದ ಪತಿಗೆ ಧನ್ಯವಾದ. ಲವ್‌ ಯೂ ಎಂದು ಬರೆದುಕೊಂಡಿದ್ದಾರೆ.

ಮರ್ಸೀಡಿಸ್‌ ಕಾರಿನ ಆರಂಭಿಕ ಬೆಲೆ 2.69 ಕೋಟಿ ರೂ. ಇದ್ದು, ಸಾಕಷ್ಟು ಐಶಾರಾಮಿ ಫೀಚರ್‌ ಹೊಂದಿರುವ ಈ ಕಾರಿನ ಬೆಲೆ 3.40 ಕೋಟಿ ವರೆಗೂ ಇದೆ. ಇದೀಗ ಈ ದುಬಾರಿ ಕಾರು ನಯನತಾರ ಅವರಿಗೆ ಉಡುಗೊರೆಯಾಗಿ ಸಿಕ್ಕಿದೆ.

ಇತ್ತೀಚೆಗೆ ನಯನತಾರ ಅವರು ಹಂಚಿಕೊಂಡಿದ್ದ ಫೋಟೊವೊಂದು ಸಿನಿರಂಗದಲ್ಲಿ ಹಲ್‌ ಚಲ್‌ ಎಬ್ಬಿಸಿತ್ತು. ಲೇಡಿ ಸೂಪರ್‌ ಸ್ಟಾರ್‌ ನಟನೆ ಬಿಟ್ಟು ಡೈರೆಕ್ಷನ್‌ ಗೆ ಇಳಿತಾರಾ ಅನ್ನೋ ಅನುಮಾನ ಸೃಷ್ಟಿಸಿತ್ತು.

ನಯನತಾರ ಅವರು ಸೊಶಿಯಲ್‌ ಮೀಡಿಯಾದಲ್ಲಿ ಹಾಕಿದ್ದ ಫೋಟೊದಿಂದ ನಯನ ತಾರಾ ನಿರ್ದೇಶನದತ್ತ ಮುಖ ಮಾಡಲಿದ್ದಾರೆ ಎನ್ನುವ ಮಾತು ಜೋರಾಗಿತ್ತು. ಆ ಫೋಟೋದಲ್ಲಿ ನಯನ ತಾರಾ ಅವರು ಕ್ಯಾಮೆರಾ ಹಿಂದೆ ನಿಂತಿದ್ದರು. ನಟಿ ಹಂಚಿಕೊಂಡಿದ್ದ ಆ ಒಂದು ಫೋಟೊದಿಂದ ಅಭಿಮಾನಿಗಳಲ್ಲಿ ಹಲವಾರು ಪ್ರಶ್ನೆಗಳು ಮೂಡಿದ್ದವು.

ನಯನ ತಾರ ಅವರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ತ್ರಿಶಾ, ಅನುಷ್ಕಾ ಶೆಟ್ಟಿ, ಸಮಂತಾ ಸೇರಿದಂತೆ ಇನ್ನೂ ಹಲವು ಜನ ಪ್ರಿಯ ನಟಿಯರಿಗೂ ಕೂಡ ನಯನ ತಾರ ಅವರು ಪಡೆಯುವ ಸಂಭಾವನೆಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.

lokesh

Recent Posts

ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: “ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿಯೇ ಅವರು ಧೈರ್ಯವಾಗಿ ಮಾತನಾಡುತ್ತಿದ್ದಾರೆ!” ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಮೈಸೂರಿನಲ್ಲಿ ಯತೀಂದ್ರ…

8 hours ago

ನಮ್ಮದು ಸೌಜನ್ಯದ ಭೇಟಿಯಷ್ಟೇ: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು:  ಭೇಟಿ ಮಾಡೋಕೆ ಬರ್ತಾರೆ ಕಣಯ್ಯ… ಅದರಲ್ಲೇನು?” ರಮೇಶ್ ಜಾರಕಿಹೊಳಿ ಹಾಗೂ ನರೇಂದ್ರ ಸ್ವಾಮಿ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ…

8 hours ago

ಸ್ಟೇ ತಗೋಬಾರದಿತ್ತು, ಫೈಟ್ ಮಾಡಬೇಕಿತ್ತು – ಮೈಸೂರಿನಲ್ಲಿ ಸಿದ್ದು ಭೇಟಿಯಾದ ರಮೇಶ್‌ ಜಾರಕಿಹೊಳಿ

ಮೈಸೂರು: “ಸ್ಟೇ ತಗೋಬಾರದಿತ್ತು, ಧೈರ್ಯವಾಗಿ ಫೈಟ್ ಮಾಡಬೇಕಿತ್ತು!” ವಿವಾದಿತ ಸ್ಟಿಂಗ್ ಕಾರ್ಯಾಚರಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಡೆ ಕುರಿತು ಮಾಜಿ…

9 hours ago

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರಲಿದ್ದಾನೆ ಪ್ರಶಾಂತ

ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ…

9 hours ago

ರೇಣುಕಾಸ್ವಾಮಿಗೆ ಕುಟುಕು ಜೀವ; ದರ್ಶನ್ ರೋಷ ಭಾವ

ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್‌ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು  " ನಾನು…

9 hours ago

ರೇಣುಕಾಸ್ವಾಮಿ ಎದೆಯ ಮೇಲೆ ನಿಂತು ಅದುಮುತ್ತಿದ್ದ ದರ್ಶನ್

ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ…

9 hours ago